Monday, September 15, 2014

Daily Crime Reports as on 15/09/2014 at 07:00 Hrs



ಮನುಷ್ಯ ಕಾಣೆ ಪ್ರಕರಣಗಳು  
  • ಬ್ರಹ್ಮಾವರ: ವೆಂಕಟೇಶ್ ಎಸ್.ಕೆ (55) ತಂದೆ ಕೃಷ್ಣಪ್ಪ ಗೌಡ ವಾಸ: ಮಹಿಷಿ ಪೋಸ್ಟ್ ತೀರ್ಥಹಳ್ಳಿ ತಾಲೂಕು ಶಿವಮೊಗ್ಗ  ಇವರ ತಮ್ಮ ಗೋಪಾಲ ಎಸ್.ಕೆ (50)ರವರು ತನ್ನೊಂದಿಗೆ ದಿನಾಂಕ 12/09/2014 ರಂದು ತೀರ್ಥಹಳ್ಳಿಯಿಂದ ಹೊರಟು ಮಂದರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬಂದು ಮಧ್ಯಾಹ್ನ ಊಟ ಮಾಡಿದ ಬಳಿಕ  ಹೇಳದೇ ಹೊರಟು ಹೋಗಿದ್ದು ವಾಪಾಸ್ಸು ಬಾರದೇ ಇದ್ದು ಇಲ್ಲಿಯವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಗೋಪಾಲ ಎಸ್.ಕೆ ಎಂಬವರು ಮಾನಸಿಕ ಒತ್ತಡ ಹೊಂದಿದ್ದು ಈ ಬಗ್ಗೆ ವೆಂಕಟೇಶ್ ಎಸ್.ಕೆರವರ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 173/2014 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 
  • ಬೈಂದೂರು: ಫಿರ್ಯಾದಿ ಖಾದಿರ್‌ ಬಾಷಾ (70) ತಂದೆ: ಗೌಸ್‌ ಸಾಹೇಬ್‌ ವಾಸ: ಜನತಾ ಕಾಲೂನಿ ಉಪ್ಪುಂದ ಗ್ರಾಮ ಕುಂದಾಪುರ ತಾಲೂಕು ಎಂಬವರ ಮಗ ಮುರಾದ್‌ಆಲಿ(40)ರವರು ದಿನಾಂಕ 13/09/2014 ರಂದು ಸಂಜೆ 04:00 ಗಂಟೆಯ ವೇಳೆಗೆ ಕುಂದಾಪುರ ತಾಲೂಕು ಉಪ್ಪುಂದ ಗ್ರಾಮದ ಜನತಾ ಕಾಲೂನಿಯಲ್ಲಿರುವ ಮನೆಯಿಂದ ಹೋದವರು ಮನೆಗೆ ಬಾರದೇ ಇದ್ದು ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 190/2014 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 
ಹಲ್ಲೆ ಪ್ರಕರಣ 
  • ಶಿರ್ವಾ: ದಿನಾಂಕ: 13.09.2014 ರಂದು  ರಾತ್ರಿ 9:30 ಗಂಟೆ ಸಮಯಕ್ಕೆ ಪಿಲಾರು ಗ್ರಾಮದ   ಮುದರಂಗಡಿಯ ಅಮ್ಮ ಫ್ಯಾನ್ಸಿ ಸ್ಟೋರ್‌ ಎದುರುಗಡೆ ರಸ್ತೆಯಲ್ಲಿ ಪಿರ್ಯಾದಿ ಮಧುಕರ(27)ತಂದೆ: ಸಾಧು ಪೂಜಾರಿ  ವಾಸ: ಭಟ್ರು ಮನೆ,ಪಿಲಾರು ಗ್ರಾಮ ಉಡುಪಿ ತಾಲೂಕು ರವರು ರೋಶನ್‌ ಎಂಬವರೊಂದಿಗೆ ಮಾತನಾಡುತ್ತಿದ್ದಾಗ ಆರೋಪಿರತುಗಳಾದ 1)ಪ್ರಶಾಂತ 2) ಪುನೀತ 3)ಸಂತೋಷ 4)ಸುಧಾಕರ ರವರುಗಳು ಹೊಂ ಪ್ಯಾಲೇಸ್‌ ಬಾರ್‌ ಕಡೆಯಿಂದ ಬಂದು ಅವಾಚ್ಯ ಶಬ್ದಗಳಿಂದ ಬೈದು ಎಡ ಕಣ್ಣಿಗೆ, ಎದೆಗೆ, ತುಟಿಗೆ ಹಲ್ಲೆ ನಡೆಸಿ ಗಾಯಗೊಳಿಸಿರುವುದಾಗಿದೆ.ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 143/2014 ಕಲಂ 324, 504, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 
  • ಕುಂದಾಪುರ: ಪಿರ್ಯಾಧಿದಾರರಾದ ಗಣಪಯ್ಯ ಶೆಟ್ಟಿಗಾರ ರವರು ನಿವೃತ್ತ ಎಎಸ್‌ಐ ಆಗಿದ್ದು, ಕುಂದಾಪುರ ತಾಲೂಕು ಕಾಳಾವರ ಗ್ರಾಮದ  ಶ್ರೀ ವನದುರ್ಗಾ ದೇವಿ  ದೇವಸ್ಥಾನದ ಹತ್ತಿರ  ವಾಸಮಾಡಿಕೊಂಡಿದ್ದು, ಅವರ 5 ಸೆಂಟ್ಸ್ ಸ್ಥಳವಿದ್ದು, ಇದರಲ್ಲಿ ಸುಮಾರು 60 ವರ್ಷಗಳಿಂದಲೂ ಅನುಭವಿಸಿಕೊಂಡು ಬಂದಿದ್ದು ಈ ದಿನ ದಿನಾಂಕ: 14/09/2014 ರಂದು ಮಧ್ಯಾಹ್ನ 1 ಗಂಟೆಗೆ ಆರೋಪಿತರುಗಳಾದ 1) ರಘು ಶೆಟ್ಟಿ 2) ಬೀಚಮ್ಮ ಶೆಡ್ತಿ 3) ಬಾಬಿ 4) ಮುತ್ತು ಶೆಡ್ತಿ ರವರುಗಳು ಅವರ ಮನೆಯ ಅಂಗಳಕ್ಕೆ ಅತಿಕ್ರಮವಾಗಿ ಪ್ರವೇಶಮಾಡಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಮರದ ದೊಣ್ಣೆಯಿಂದ ಹಲ್ಲೆನಡೆಸಿ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೋಗಿರುವುದಾಗಿದೆ.  ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 320/2014 ಕಲಂ 323, 504, 506 114 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 
ಜುಗಾರಿ ಆಟ ಪ್ರಕರಣಗಳು    
  • ಶಿರ್ವಾ: ದಿನಾಂಕ 14/09/14 ರಂದು 16:30 ಗಂಟೆಗೆ ಕುರ್ಕಾಲು  ಗ್ರಾಮದ  ಸುಭಾಸ್‌ನಗರ ಹಾಡಿಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳು ಹಣವನ್ನು ಪಣವಾಗಿಟ್ಟು ಕೊಂಡು ಜುಗಾರಿ ಆಟ ಆಡುತ್ತಿದ್ದಾಗ ಖಚಿತ ವರ್ತಮಾನದ ಮೇರೆಗೆ ಶ್ರೀ ಸುನೀಲ್‌ ವೈ ನಾಯ್ಕ್‌‌ ಪೊಲೀಸ್‌ ವೃತ್ತ ನಿರೀಕ್ಷಕರು, ಕಾಪು ವೃತ್ತ, ಕಾಪುರವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ  ಆರೋಪಿಗಳನ್ನು  ದಸ್ತಗಿರಿ ಮಾಡಿ ಜೂಜಾಟಕ್ಕೆ ಬಳಸಿದ ನಗದು ರೂ:7480/- ಹಾಗೂ ಇತರ ಪರಿಕರಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡು ಠಾಣಾ ಅಪರಾಧ ಕ್ರಮಾಂಕ 144/2014 ಕಲಂ 87 ಕೆ.ಪಿ. ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.ಬಂಧಿತರನ್ನು 1) ಪ್ರಭಾಕರ ಶೆಟ್ಟಿ (36) ತಂದೆ: ದಿ ಸುಂದರ ಶೆಟ್ಟಿ, ವಾಸ: ನಾಡಗೋಲಿ ಕುರ್ಕಾಲು ಗ್ರಾಮ ಉಡುಪಿ ತಾಲೂಕು.2) ಸೆಬಾಸ್ಟಿಯನ್‌ ಸೋನ್ಸ್‌ (41) ತಂದೆ: ಅನಿಲ್‌ ಸೋನ್ಸ್‌, ವಾಸ: ಸೋನ್ಸ್‌ ವಿಲ್ಲಾ, ಸುಭಾಷ್‌ನಗರ ಕುರ್ಕಾಲು ಗ್ರಾಮ, 3) ಬಸವರಾಜ್‌ (38) ತಂದೆ: ತಾಯಬ್ಬ, ವಾಸ: ಸವಡಿ ಪೋಸ್ಟ್‌, ಸವಡಿ ಗ್ರಾಮ, ರೋಣ ತಾಲೂಕು ಗದಗ ಜಿಲ್ಲೆ, ಪ್ರಸ್ತುತ ಮಮತರವರ ಬಾಡಿಗೆ ಮನೆ, ಪೊಸಾರ್‌, ಮೂಡಬೆಟ್ಟು ಗ್ರಾಮ, 4) ಮಾಂತೇಶ್‌, (30) ತಂದೆ: ಪಕೀರಪ್ಪ, ವಾಸ: ಮಾಸನಕಟ್ಟೆ ಹಾನಗಲ್‌ ತಾಲೂಕು, ಹಾವೇರಿ ಜಿಲ್ಲೆ, ಪ್ರಸ್ತುತ: ಕುಂಜಾರುಗಿರಿ  ಕ್ರಾಸ್ ಬಳಿ, ಸುಭಾಷ್‌ನಗರ ಕುರ್ಕಾಲು ಗ್ರಾಮ  5) ಜಿತೇಂದ್ರ ಕುಂದರ್‌, (30) ತಂದೆ: ಲೋಕು ಮರಕಾಲ, ವಾಸ: ಕುರ್ಕಾಲು ತೋಟ, ಸುಭಾಷ್‌ನಗರ, ಕುರ್ಕಾಲು ಗ್ರಾಮ ಉಡುಪಿ ತಾಲೂಕು. 6) ನಾಗರಾಜ್‌, (32) ತಂದೆ: ಎಲ್ಲಪ್ಪ, ವಾಸ: ಸೋಮಸಾಗರ,  ಹಿರೇಬಾಸೂರು, ಹಾನಗಲ್‌ ತಾಲೂಕು.  ಹಾವೇರಿ ಜಿಲ್ಲೆ, ಪ್ರಸ್ತುತ ಸುಭಾಷ್‌ನಗರದ ಸಜ್ಜಬಾಯಿಯವರ ಬಾಡಿಗೆ ಮನೆ ಎಂದು ಗುರುತಿಸಲಾಗಿದೆ. 
  • ಶಂಕರನಾರಾಯಣ: ದಿನಾಂಕ 14-09-2014 ರಂದು  ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ ಸಿದ್ದಾಪುರ ಗ್ರಾಮದ ಜನ್ಸಾಲೆ ಜಿಗಿನಗುಂಡಿ ನಾಗಾರಾಜ ಪೂಜಾರಿಯವರ ನಿರ್ಮಾಣ ಹಂತದ ಮನೆಯ ಎದುರಿನಲ್ಲಿರುವ ಮನೆ ನಿರ್ಮಾಣದ ಸಾಮಗ್ರಿಗಳನ್ನು ಇರಿಸಿದ್ದ ತರೆದ ಶೆಡ್‌ನಲ್ಲಿ ಅಂದರ್‌ ಬಾಹರ್‌ ಇಸ್ಪಿಟ್‌ ಜುಗಾರಿ ಆಟ ಆಡುತ್ತಿದ್ದ ಆರೋಪಿತರನ್ನು  ಶಂಕರನಾರಾಯಣ ಪೊಲೀಸ್ ಠಾಣಾ ಪಿಎಸ್‌ಐ  ದೇಜಪ್ಪರವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ  ಆರೋಪಿಗಳನ್ನು  ದಸ್ತಗಿರಿ ಮಾಡಿ  ಮಾಡಿ ಜೂಜಾಟಕ್ಕೆ ಬಳಸಿದ ನಗದು ರೂ 4375/- ಹಾಗೂ ಇತರ ಪರಿಕರಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡು ಠಾಣಾ ಅಪರಾಧ ಕ್ರಮಾಂಕ 135/2014 ಕಲಂ 87 ಕೆ.ಪಿ. ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.  ಬಂಧಿತರನ್ನು1)ಸುರೇಶ 2) ಸೀತಾರಾಮ ಶೆಟ್ಟಿ 3) ಅಬ್ದುಲ್ ಖಾದರ್ 4)ಪ್ರಕಾಶ ಆಚಾರಿ 5)ಅದ್ರ ಮೋನು 6)ವಿವೇಕ ಶೆಟ್ಟಿ 7) ಬಸವ ಎಂದು ಗುರುತಿಸಲಾಗಿದೆ. 
  • ಕೋಟ: ದಿನಾಂಕ 14/09/2014 ರಂದು ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಬಸ್‌ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ  ಹಣವನ್ನು ಪಣವನ್ನಾಗಿರಿಸಿ ಮಟ್ಕಾ ಜುಗಾರಿ  ಆಟ ನಡೆಸುತ್ತಿದ್ದ ಆರೋಪಿ ನರಸಿಂಹ ಮೊಗವೀರ(36)ತಂದೆ:ಬಚ್ಚು ಮೊಗವೀರ,ವಾಸ:ಬನ್ಸಾಲೆ ರೈಸ್ ಮಿಲ್ ಹತ್ತಿರ ,ದೇವಸ್ಥಾನ ಬೆಟ್ಟು ಬೇಳೂರು ಗ್ರಾಮ ಕುಂದಾಪುರ ತಾಲೂಕು ಎಂಬವರನ್ನು ಕಮಲಾಕರ್ ಆರ್ ನಾಯಕ್ ಪಿ.ಎಸ್.ಐ ಕೋಟ ಠಾಣೆರವರು ದಸ್ತಗಿರಿ ಮಾಡಿ ಆತನಿಂದ ನಗದು ರೂ-633/-ನ್ನು ಹಾಗೂ ಸ್ವಾಧೀನಪಡಿಸಿಕೊಂಡು ಠಾಣಾ ಅಪರಾಧ ಕ್ರಮಾಂಕ 194/2014 ಕಲಂ 78(1)(3)  ಕೆ.ಪಿ. ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: