Sunday, September 14, 2014

Daily Crime Reports as on 14/09/2014 at 19:30 Hrs



ಅಪಘಾತ ಪ್ರಕರಣಗಳು

  • ಕಾಪು: ದಿನಾಂಕ 13.09.2014 ರಂದು ಪಿರ್ಯಾದುದಾರರಾದ ಸಂತೋಷ (30) ತಂದೆ: ಅನಂತ ಕುಲಾಲ್ ವಾಸ: ಮೂಡುಬೆಟ್ಟು ಅಡ್ಜಿಲ್ ಕುಂಜಾಲು ಗ್ರಾಮ ಎಂಬವರು ತನ್ನ ಕೆಎ 20 ಬಿ 1820 ಇಂಡಿಕಾ ಕಾರನ್ನು ರಾಹೆ 66ರಲ್ಲಿ ಉಡುಪಿ ಕಡೆಯಿಂದ  ಮಂಗಳೂರು ಕಡೆಗೆ ಚಲಾಯಿಸಿಕೊಂಡು  ಬರುತ್ತಾ ಸಂಜೆ 6: 00 ಗಂಟೆಗೆ ಉದ್ಯಾವರ ರೇಶ್ಮಾ ಬಾರ್ ಎದುರು ಜಯಲಕ್ಷ್ಮೀ ಬಟ್ಟೆಯಂಗಡಿಗೆ ಕಡೆಗೆ ಪಿರ್ಯಾದುದಾರರು ತನ್ನ ಕಾರನ್ನು ತಿರುಗಿಸುವ ಸಂದರ್ಭದಲ್ಲಿ  ಹಿಂಬದಿಯಿಂದ ಬಂದ ಕೆಎ 05 ಎಸಿ 7540 ನೇ ಇಚರ್ ಕ್ಯಾಂಟರ್‌ ಚಾಲಕ ಗಿರೀಶ್ ಎಂಬಾತನು ತನ್ನ ವಾಹನವನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿ ಪಿರ್ಯಾದುದಾರರ ಕಾರಿನ ಹಿಂಬಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರಿಗೆ ತಲೆಯ ಹಿಂಬಾಗಕ್ಕೆ ಹಾಗೂ ಕಾರಿನಲ್ಲಿದ್ದ ಪಿರ್ಯಾದುದಾರರ ಪತ್ನಿ ರೇಣುಕಾ ರವರಿಗೆ ತಲೆಯ ಬಲ ಭಾಗಕ್ಕೆ, ಬಲಕಾಲಿನ ಮೊಣಗಂಟಿಗೆ ಒಳ ಗುದ್ದಿದ ನೋವುಂಟಾಗಿದ್ದು ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೇಕ್‌ ಆಸ್ತತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಸಂತೋಷ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 184/2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

  • ಕೋಟ: ಪಿರ್ಯಾಧಿದಾರರಾದ ಕೆ.ಪ್ರಕಾಶ ಮೊಗವೀರ (46) ತಂದೆ: ದಿವಂಗತ ಬಾಬು ಮೊಗವೀರ, ವಾಸ: ವಿನಾಯಕ ನಗರ ಕುಂಭಾಶಿ, ಕುಂಭಾಶಿ ಗ್ರಾಮ, ಕುಂದಾಪುರ ತಾಲೂಕು ಎಂಬವರು ದಿನಾಂಕ 13/09/2014 ರಂದು ರಾತ್ರಿ 8:15 ಗಂಟೆಗೆ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಹರಿಶ್ರೀ ಮೇಡಿಕಲ್ಸ್ ಎದುರು ರಾಷ್ಟ್ರೀಯ ಹೆದ್ದಾರಿ 66 ರ ಡಿವೈಡರ್ ದಾಟಿ ಹೋಗುತ್ತಿರುವಾಗ ಉಡುಪಿ-ಕುಂದಾಫುರ ಎಕಮುಖ ರಸ್ತೆಯಲ್ಲಿರುವಾಗ ಕುಂದಾಪುರ ಕಡೆಯಿಂದ ಆರೋಪಿಯು ಕೆ.ಎ:20 ವಿ:9825 ನೇ ನಂಬ್ರದ ಮೋಟಾರ್‌ ಸೈಕಲ್‌ನ್ನು ರಾಂಗ್‌ ಸೈಡಿನಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ಪಿರ್ಯಾಧಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರು ರಸ್ತೆ ಮೇಲೆ ಬಿದ್ದು ,ರಕ್ತ ಗಾಯಗೊಂಡು  ಚಿಕಿತ್ಸೆ ಬಗ್ಗೆ ಕೋಟೇಶ್ವರ ಎನ್.ಆರ್.ಆಚಾರ್ಯ ಆಸ್ಪತ್ರೆಗೆ ದಾಖಲುಗೊಂಡಿರುವುದಾಗಿದೆ ಎಂಬುದಾಗಿ ಕೆ.ಪ್ರಕಾಶ ಮೊಗವೀರ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 193/2014 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಹಲ್ಲೆ ಪ್ರಕರಣ
  • ಶಿರ್ವಾ: ದಿನಾಂಕ 13.09.2014 ರಂದು ರಾತ್ರಿ 0930 ಗಂಟೆಗೆ ಪಿಲಾರು ಗ್ರಾಮದ ಮುದರಂಗಡಿಯ ಅಮ್ಮ ಫ್ಯಾನ್ಸಿ ಸ್ಟೋರ್‌ ಎದುರುಗಡೆ ರಸ್ತೆಯಲ್ಲಿ ಪಿರ್ಯಾದಿದಾರರಾದ ಮಧುಕರ (27) ತಂದೆ: ಸಾಧು ಪೂಜಾರಿ  ವಾಸ: ಭಟ್ರು ಮನೆ,ಪಿಲಾರು ಗ್ರಾಮ ಉಡುಪಿ ತಾಲೂಕು ರವರು ರೋಶನ್‌ ಎಂಬವರೊಂದಿಗೆ ಮಾತನಾಡುತ್ತಿದ್ದಾಗ ಆರೋಪಿಗಳಾದ 1) ಪ್ರಶಾಂತ, 2) ಪುನೀತ, 3)ಸಂತೋಷ, 4)ಸುಧಾಕರ ಎಂಬವರು ಹೊಂ ಪ್ಯಾಲೇಸ್‌ ಬಾರ್‌ ಕಡೆಯಿಂದ ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಭ್ದಗಳಿಂದ ಬೈದು ಆರೋಪಿ ಪುನೀತ ಕೈಯಿಂದ ಹಲ್ಲೆ ಮಾಡಲು ಪ್ರಯತ್ನಿಸಿದಾಗ ಪಿರ್ಯಾದಿದಾರರು ದೂಡಿದ್ದು ಆ ಸಮಯ ಆರೋಪಿ ಪ್ರಶಾಂತ ಪಿರ್ಯಾದಿದಾರರಿಗೆ ಹೊಡೆಯಲು ಬಂದಿದ್ದು ಉರುಡಾಟ ಆಗುವಾಗ ಪಿರ್ಯಾದಿದಾರರ ಎಡಕೈಯಲ್ಲಿದ್ದ ವಾಚು ಜಾರಿ ಹೋಗಿ ಆರೋಪಿ ಪ್ರಶಾಂತನಿಗೆ ಸಿಕ್ಕಿದ್ದು ಅದೇ ವಾಚ್‌ನಲ್ಲಿ ಪಿರ್ಯಾದಿದಾರರ ಎಡ ಕಣ್ಣಿಗೆ, ಎಡ ಎದೆಗೆ, ತುಟಿಗೆ ಹಲ್ಲೆ ನಡೆಸಿ ಗಾಯಗೊಳಿಸಿದ್ದು ಆರೋಪಿ ಸಂತೋಷ, ಸುಧಾಕರ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಇನ್ನು ಹೊಡಿ ಎಂದು ಹೇಳಿರುವುದಾಗಿದೆ  ಎಂಬುದಾಗಿ ಮಧುಕರ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 143/2014 ಕಲಂ 324, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಅಸ್ವಾಭಾವಿಕ ಮರಣ ಪ್ರಕರಣ
  • ಅಜೆಕಾರು: ಪಿರ್ಯಾದಿದಾರರಾದ ರವೀಂದ್ರ ಶೆಟ್ಟಿ (50) ತಂದೆ: ದಿ: ಮಾಹಾಬಲ ಶೆಟ್ಟಿ ವಾಸ ಪಮ್ಮೊಬೆಟ್ಟು ಮನೆ ಮರ್ಣೆ ಗ್ರಾಮ ಎಂಬವರ ಮಗಳು ಕು, ರಚನಾ ಪ್ರಾಯ 17 ವರ್ಷ ಎಂಬವಳು ತನ್ನ ತಾಯಿಯ ಅನಾರೋಗ್ಯದ ಕಾರಣದಿಂದ ಮನನೊಂದು ದಿನಾಂಕ 14-09-2014 ರಂದು ಬೆಳಿಗ್ಗೆ 08-30  ಗಂಟೆಯಿಂದ 09-೦೦ ಗಂಟೆಯ ಮದ್ಯೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಪಮ್ಮೊಬೆಟ್ಟು ಎಂಬಲ್ಲಿ ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ರವೀಂದ್ರ ಶೆಟ್ಟಿ ರವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 12/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: