Sunday, September 14, 2014



ಪ್ರತಿಕಾ ಪ್ರಕಟಣೆ
        ಬ್ರಹ್ಮಾವರ ಪೊಲೀಸ್ ಠಾಣಾ ಸರಹದ್ದಿನ ಕೆಂಜೂರು ಗ್ರಾಮದ ಬೈದಬೆಟ್ಟು ಎಂಬಲ್ಲಿ ದಿನಾಂಕ 11-09-2014 ರಂದು ರಾತ್ರಿ 8:00 ಗಂಟೆ ಸಮಯಕ್ಕೆ 3 ಜನ ಅಪರಿಚಿತ ವ್ಯಕ್ತಿಗಳು ಶ್ರೀಮತಿ ಶೆಡ್ತಿ(63 ವರ್ಷ) ಗಂಡ , ದಿ. ವೆಂಕಪ್ಪ ಶೆಟ್ಟಿ ಎಂಬವರ ಮನೆಗೆ ನುಗ್ಗಿ ಶ್ರೀಮತಿ ಶೆಡ್ತಿರವರ ಕೈಗಳನ್ನು ಹಿಡಿದು ಕಾಲುಗಳನ್ನು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿಸಿ ಮೈಮೇಲಿದ್ದ  7.5 ಪವನ್ ಚಿನ್ನಾಭರಣ ಮತ್ತು ನಗದು ರೂ 3,000 ವನ್ನು ದೋಚಿಕೊಂಡು ಹೋಗಿದ್ದು , ದೋಚಿಕೊಂಡು ಹೋದ ಸೊತ್ತಿನ ಒಟ್ಟು ಮೌಲ್ಯ ಸುಮಾರು 1.50,000 ಆಗಿರುತ್ತದೆ.
          ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ  ರಾಜೇಂದ್ರ ಪ್ರಸಾದ್ ಐ.ಪಿ.ಎಸ್, ಹಾಗೂ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಾನ್ಯ ಶ್ರೀ ಸಂತೋಷ ಕುಮಾರ್ ಇವರ ಮಾರ್ಗದರ್ಶನದಲ್ಲಿ  ಉಡುಪಿ ಉಪ - ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಡಾ. ಪ್ರಭುದೇವ ಬಿ. ಮಾನೆ ರವರು ನೇರ ಉಸ್ತುವಾರಿಯಲ್ಲಿ ಹಾಗೂ ಸಿ.ಪಿ.ಐ ಬ್ರಹ್ಮಾವರ ಶ್ರೀ ಅರುಣ ಬಿ ನಾಯಕ ಇವರ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಚರಣೆ ನಡೆಸಿದ ಬ್ರಹ್ಮಾವರ ವೃತ್ತ ಮತ್ತು ಬ್ರಹ್ಮಾವರ ಠಾಣೆಯ ಸಿಬ್ಬಂದಿರವರು ಮೂರು ಜನ ಆರೋಪಿಗಳಲ್ಲಿ 1. ರಾಧಕೃಷ್ಣ ಪ್ರಾಯ:24 ವರ್ಷ ತಂದೆ ದಿ. ಮಂಜುನಾಥ ನಾಯ್ಕ  ವಾಸ. ಪೇತ್ರಿ, ಚೆರ್ಕಾಡಿ ಗ್ರಾಮ ಈತನ ಮಹೆಂದ್ರ ಪಿಕ್ ಆಪ್ ವಾಹನ ಚಾಲಕನಾಗಿದ್ದು, ಇನ್ನೊಬ್ಬ ಆರೋಪಿ 2. ಪ್ರವೀರ ಪ್ರಾಯ 22 ವರ್ಷ ತಂದೆ, ರವಿ ವಾಸ, ಮೈರ್ ಕೊಮೆ ಮಂದರ್ತಿ, (ಈತನು ಬಸ್ ನಿರ್ವಾಹಕ ನಾಗಿದ್ದು) ಎಂಬ ಇಬ್ಬರು ಅರೋಪಿಗಳನ್ನು ದಿನಾಂಕ 13-09-2014 ರಂದು ದಸ್ತಗಿರಿ ಮಾಡಿ ಸದ್ರಿ ಆರೋಪಿತರಿಂದ 36 ಗ್ರಾಂ ಚಿನ್ನಾಭರಣ ಮೌಲ್ಯ ರೂ 90,000=00, ನಗದು 1000=00, ಮತ್ತು ಕೃತ್ಯಕ್ಕೆ ಬಳಸಿದ ಬುಲೆರೋ  ವಾಹನ ಮೌಲ್ಯ ರೂ 2,00,000 ಆರೋಪಗಳಿಂದ ಒಟ್ಟು 2,91,000=00 ಮೌಲ್ಯದ ಸೊತ್ತುಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿರುತ್ತದೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿರುತ್ತಾರೆ. ಇನ್ನೋರ್ವ ಆರೋಪಿ ಅರವಿಂದ ಶೆಟ್ಟಿ ಎಂಬಾತನ ಪತ್ತೆಯ ಬಗ್ಗೆ ಪ್ರಯತ್ನ ಮುಂದುವರಿದಿದೆ.
      ಸದ್ರಿ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀ ಅರುಣ ಬಿ ನಾಯಕ, ಬ್ರಹ್ಮಾವರ ಠಾಣಾ ಪಿ.ಎಸ್.ಐ ಶ್ರೀ ಗಿರೀಶ್ ಕುಮಾರ್ ಎಸ್. ಮತ್ತು ಸಿಬ್ಬಂದಿರವರಾದ ಸುದೇಶ ಶೆಟ್ಟಿ, ರಮೇಶ, ಪ್ರಸಾದ್, ಜೀವನ, ನವೀನ ನಾಯ್ಕ, ಜಯಕರ, ಲೋಕೇಶ ನಾಯ್ಕ, ಅರುಣ, ನಾಗರಾಜ, ರವರು ಭಾಗವಹಿಸಿರುತ್ತಾರೆ.

No comments: