Friday, September 12, 2014

Daily Crime Reports as on 12/09/2014 at 17:00 Hrs



ಕೊಲೆ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಶ್ರೀಮತಿ ಗೌರಿ (32) ಗಂಡ ಪ್ರಕಾಶ ವಾಸ: ಪೋರ್ಟ ಬಂಗ್ಲೋ ಹತ್ತಿರ ಜನತಾ ಕಾಲೋನಿ ಮೇಲ್ ಗಂಗೊಳ್ಳಿ, ಗಂಗೊಳ್ಳಿ ಗ್ರಾಮ ಎಂಬವರ ತಮ್ಮ ಶೇಖರ (35) ಎಂಬವರು ಅವರ ತಾಯಿಯೊಂದಿಗೆ ಪಿರ್ಯಾದಿದಾರರ ಮನೆಯ ಎದುರಿನಲ್ಲಿಯೇ ವಾಸವಾಗಿದ್ದು, ಆತನು ಗಂಗೊಳ್ಳಿ ಬಂದರಿನಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ಶೇಖರನಿಗೆ ಮದುವೆಯಾಗಿ ಮೂರು ಮಕ್ಕಳಿದ್ದು, ಈಗ ಆರು ವರ್ಷದಿಂದ ಹೆಂಡತಿಯನ್ನು ಬಿಟ್ಟು,  ಅವಳು ಅವಳ ತಾಯಿ ಮನೆಯಲ್ಲಿ ಇದ್ದು,  ಶೇಖರನು ಹೆಂಡತಿ ಮನೆಗೆ ಹೋಗುವುದಿಲ್ಲ. ಈಗ ಆರು ವರ್ಷಗಳಿಂದ ಶೇಖರನ ಮನೆಯ ಹತ್ತಿರದ ಅವರದೆ ಜಾತಿಯ ಕಲ್ಪನಾ ಎಂಬವಳೊಂದಿಗೆ ಒಟ್ಟಿಗೆ ಇದ್ದು, ಕಲ್ಪನಾಳಿಗೆ ಈಗಾಗಲೇ ಮದುವೆಯಾಗಿ 3 ಮಕ್ಕಳಿದ್ದು, ಕಲ್ಪನಾಳ ದೊಡ್ಡ ಮಗ ಜಯಸೂರ್ಯ (18 ವರ್ಷ) ನಿಗೆ ಆವನ ತಾಯಿಯೊಂದಿಗೆ ಶೇಖರನು ಒಟ್ಟಿಗೆ ಇರುವ ಹಾಗೂ ಮನೆಗೆ ಬಂದು ಹೋಗುವ ವಿಷಯದಲ್ಲಿ  ಹದಿನೈದು ದಿನಗಳ ಹಿಂದೆ ಅವರಲ್ಲಿ ಮಾತುಕತೆಯಾಗಿದ್ದು ಜಯಸೂರ್ಯನು ಮನೆಯಲ್ಲಿ ತಾನು ಇರಬೇಕೋ ಅಥವಾ ಶೇಖರ ಇರಬೇಕೋ, ಶೇಖರನನ್ನು ತೆಗೆಯದೇ ಬಿಡುವುದಿಲ್ಲ ಎಂಬದಾಗಿ ಹೇಳಿರುವ ವಿಷಯ ಪಿರ್ಯಾದಿದಾರಳೂ ಕೇಳೀರುತ್ತಾರೆ.  ದಿನಾಂಕ 11.09.2014  ರಂದು ಮಧ್ಯಾಹ್ನ 12:00  ಗಂಟೆ ಸಮಯಕ್ಕೆ ಪಿರ್ಯಾದಿದಾರರ ತಮ್ಮ ಶೇಖರ ಅಟೊ ರಿಕ್ಷಾದಲ್ಲಿ ಬಂದು ಇಳಿದು ಆತನು ಯಾವಾಗಲೂ ಹೋಗುತ್ತಿದ್ದ ಕಲ್ಪನಾಳ ಮನೆಗೆ ಹೋದನು. ಬಳಿಕ ಪಿರ್ಯಾದಿದಾರಳು ನೋಡುವಾಗ ಕಲ್ಪನಾಳ ಮನೆಯ ಮೆಟ್ಟಿಲಿನಲ್ಲಿ ಕುಳಿತು ಇದ್ದನು. ಕಲ್ಪನಾಳ ತಾಯಿ ಗುಲಾಬಿ ಮನೆಯಲ್ಲಿ ಇದ್ದರು ಮಧ್ಯಾಹ್ನ 3 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಮಗಳು ಅನಿತಾ ಶಾಲೆಯಿಂದ ಬಂದವಳು ಕಲ್ಪನಾಳ ಮನೆಗೆ ಹೋಗಿ ಬಂದಿದ್ದು ಶೇಖರನು ಆ ಸಮಯ ಕಲ್ಪನಾಳ ಮನೆಯ ದಕ್ಷಿಣ ಬದಿಯಕೋಣೆಯಲ್ಲಿ ಮಲಗಿರುವುದನ್ನು ಪಿರ್ಯಾದಿದಾರರಿಗೆ ತಿಳಿಸಿರುತ್ತಾಳೆ. ಪಿರ್ಯಾದಿದಾರರು ಸಂಜೆ ಬಂದರಿಗೆ ಕೆಲಸಕ್ಕೆ ಹೋಗಿದ್ದು ಆ ಸಮಯ ಕಲ್ಪನಾ ಸಹ ಬಂದರಿನಲ್ಲಿ ಕೆಲಸ ಮಾಡುತ್ತಿದ್ದರೂ, ರಾತ್ರಿ 9:45 ಗಂಟೆಗೆ ಮನೆಗೆ ಬಂದಾಗ ಕಲ್ಪನಾಳು ಪಿರ್ಯದಿದಾರ ಮಗಳು ಅನಿತಾಳನ್ನು ಕರೆದು ಶೇಖರನಿಗೆ ತೊಂದರೆಯಾಗಿದೆ ಮೈಎಲ್ಲಾ ತಣ್ಣಾಗಾಗಿದೆ ಎಂದು ತಿಳಿಸಿದ್ದು ಪಿರ್ಯಾಧಿದಾರರ ಮಗಳು ಅವರ ಮನೆಗೆ ಹೋಗಿ ನೋಡಿದಾಗ ತಲೆಯಿಂದ ರಕ್ತ ಬರುತ್ತಿದ್ದು ಮೂಗು ಮತ್ತು ಬಾಯಿಯಿಂದ ಲೋಳೆ ಬರುತ್ತಿರುವ ವಿಷಯ ನೋಡಿ ಬಂದವಳು ಪಿರ್ಯಾಧಿದಾರಿಗೆ ತಿಳಿಸಿದ್ದು ಪಿರ್ಯಾದಿದಾರರೂ ಅಲ್ಲಿಗೆ ಹೋಗಿ ನೋಡಿರುವುದಿಲ್ಲ. ಕಲ್ಪನಾಳ ಮಗ ಜಯಸೂರ್ಯ ನಿನ್ನೆ ಕಾಲೇಜು ಬಿಟ್ಟ ಬಳಿಕ ಅವನ ಮನೆಗೆ ಬಂದ ವಿಚಾರ ಪಿರ್ಯಾದಿದಾರರಿಗೆ ತಿಳಿದಿರುತ್ತದೆ. ನಿನ್ನೆ ರಾತ್ರಿ 10 ಗಂಟೆಗೆ ಶೇಖರನು ಮೃತಪಟ್ಟಿರುವುದು ತಿಳಿದು ಪಿರ್ಯಾದಿದಾರರು ಹೋಗಿ ನೋಡಿರುತ್ತಾರೆ. ಆ ಸಮಯ ಮೃತ ಶರೀರವನ್ನು ಪಡಸಾಲೆಯ ಪಕ್ಕದ ಕೋಣೆಯಿಂದ ಮನೆಯ ಪಡಸಾಲೆಗೆ ತಂದು ಮಲಗಿಸಿರುತ್ತಾರೆ. ಮೊದಲು ಮಲಗಿದ್ದ ಕೊಣೆಯಲ್ಲಿ ಮೃತ ನಿಂದ ಸುರಿದ ರಕ್ತವನ್ನೆಲ್ಲಾ ಒರಿಸಿಟ್ಟಿರುತ್ತಾರೆ. ಪಿರ್ಯಾದಿದಾರರ  ತಮ್ಮ ಶೇಖರನ ಮರಣದ ಬಗ್ಗೆ ಕಲ್ಪನರ ಮನೆಯರು ಸರಿಯಾಗಿ ತಿಳಿಸಿರುವುದಿಲ್ಲ. ಆತನ ತಲೆಯಿಂದ ರಕ್ತ ಬಂದಿರುವುದರಿಂದ ಈ ಹಿಂದೆ ನಡೆದ ಘಟನೆಯ ಹಿನ್ನಲೆಯಲ್ಲಿ ಆತನನ್ನು ಕೊಲೆ ಮಾಡಿರುವುದಾಗಿ ಶಂಕೆ ಇರುತ್ತದೆ ಎಂಬುದಾಗಿ ಶ್ರೀಮತಿ ಗೌರಿ ರವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಅಪರಾಧ ಕ್ರಮಾಂಕ 166/2014 ಕಲಂ 302, 201  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಸುಲಿಗೆ ಪ್ರಕರಣ
  • ಬ್ರಹ್ಮಾವರ: ದಿನಾಂಕ 11/09/2014 ರಂದು 20:00 ಗಂಟೆಗೆ ಉಡುಪಿ ತಾಲೂಕು ಕೆಂಜೂರು ಗ್ರಾಮದ ಬೈದಬೆಟ್ಟು ಎಂಬಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಶೆಡ್ತಿ (63) ಗಂಡ: ದಿ: ವೆಂಕಪ್ಪ ಶೆಟ್ಟಿ ವಾಸ: ಹೊಸಮನೆ, ಬೈದಬೆಟ್ಟು, ಕೆಂಜೂರು ಗ್ರಾಮ, ಉಡುಪಿ ತಾಲೂಕು ರವರು ಮನೆಯಲ್ಲಿರುವಾಗ 3 ಜನ ಅಪರಿಚಿತ ಆರೋಪಿಗಳು ಪಿರ್ಯಾದಿದಾರರ ಕೈಗಳನ್ನು ಹಿಡಿದು ಕಾಲುಗಳನ್ನು ಬಟ್ಟೆಯಿಂದ ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿಸಿ ಬಲವಂತವಾಗಿ ಮೈಮೇಲಿದ್ದ ಸುಮಾರು 2 1/2 ಪವನ್ ತೂಕದ ಚಿನ್ನಾಭರಣ ಹಾಗೂ ಕಪಾಟಿನಲ್ಲಿ ಇಟ್ಟಿದ್ದ 3,000/- ರೂಪಾಯಿ ನಗದನ್ನು ತೆಗೆದುಕೊಂಡು ಹೋಗಿದ್ದು ಚಿನ್ನ ಹಾಗೂ ಸೊತ್ತಿನ ಒಟ್ಟು ಮೌಲ್ಯ ರೂಪಾಯಿ 1.50.000/- ಆಗಿರುತ್ತದೆ ಎಂಬುದಾಗಿ ಶ್ರೀಮತಿ ಶೆಡ್ತಿ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 171/2014 ಕಲಂ 392 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳ್ಳತನಕ್ಕೆ ಪ್ರಯತ್ನಿಸಿದ ಆರೋಪಿಯ ಬಂಧನ


  • ಪಡುಬಿದ್ರಿ: ದಿನಾಂಕ 11.09.2014 ರಂದು ಪಿರ್ಯಾದುದಾರರಾದ ದಯಾನಂದ (23), ತಂದೆ: ರಾಮ ಮುಖಾರಿ, ವಾಸ: ವಿಶ್ವನಾಥ ರವರ ಬಾಡಿಗೆ ಮೆನೆ, ಎರ್ಮಾಳ್‌ ತೆಂಕ, ಉಡುಪಿ ತಾಲೂಕು ಎಂಬವರು ಮನೆಯಿಂದ ಮೂತ್ರಶಂಕೆಗೆಂದು ಹೊರಗೆ ಬಂದಾಗ ಏನೋ ಶಬ್ದವಾಗುತ್ತಿದ್ದು ನೋಡಲಾಗಿ ಪಕ್ಕದಲ್ಲಿಯೆ ಇರುವ ವಿನಯ ಶೆಟ್ಟಿಯವರ ಅಂಗಡಿಯ ಬಾಗಿಲಿನ ಬೀಗವನ್ನು ಯಾರೋ ಮುರಿಯುತ್ತಿರುವುದನ್ನು ನೋಡಿ ಅಕ್ಕಪಕ್ಕದವರನ್ನು ಎಬ್ಬಿಸಲು ಹೋಗುವ ವೇಳೆ ರಸ್ತೆಯಲ್ಲಿ ರಾತ್ರಿ ಕರ್ತವ್ಯದ ಪೊಲೀಸರು ಬರುವುದನ್ನು ನೋಡಿ ಅವರಲ್ಲಿ ವಿಚಾರ ತಿಳಿಸಿ ಅವರ ಜೊತೆ ವಿನಯ ಶೆಟ್ಟಿಯವರ ಅಂಗಡಿಯ ಬಳಿ ಬಂದಾಗ ಅಂಗಡಿಯ ಬೀಗ ಮುರಿಯುತ್ತಿದ್ದವನು ಓಡಿ ಹೋಗಲು ಪ್ರಯತ್ನಿಸಿದ್ದು ಈತನನ್ನು ಪೊಲೀಸರ ಜೊತೆಯಲ್ಲಿ ಹಿಡಿದು ಜೊತೆಯಲ್ಲಿ ಠಾಣೆಗೆ ಬಂದು ವಿನಯ ಶೆಟ್ಟಿಯವರ ಅಂಗಡಿಯ ಬಾಗಿಲಿನ ಬೀಗವನ್ನು ಮುರಿದು ಕಳ್ಳತನಕ್ಕೆ ಪ್ರಯತ್ನಿಸಿದ ಕುಂಞಿಮೋನು @ ಜಾಫರ್‌ ಅಮೀದ್‌ (38), ತಂದೆ: ಹೈದ್ರೋಸ್‌ ಬ್ಯಾರಿ, ವಾಸ: ಅಜೀರ್‌ಮಾರ್‌ ಹೌಸ್‌, ಮಹಾಲಿಂಗೇಶ್ವರ ದೇವಸ್ಥಾನದ ಬಳಿ, ಪದಂಗಡಿ ಗ್ರಾಮ, ಬೆಳ್ತಂಗಡಿ ಎಂಬಾತನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 95/2014 ಕಲಂ 457, 380, 511 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಇತರ ಪ್ರಕರಣ
  • ಕಾಪು: ಪಿರ್ಯಾದಿದಾರರಾದ ಹರೀಶ್ (32) ತಂದೆ: ಶಿವಪ್ಪ ವಾಸ: ಚಿಕ್ಕಪುರ ಗ್ರಾಮ ಶಿಕಾರಿಪುರ ತಾಲೂಕು ಶಿವಮೋಗ್ಗ ಜಿಲ್ಲೆ ಮತ್ತು ಹನುಮಂತಪ್ಪ ರವರು ಮಣಿಪುರ ಗ್ರಾಮದ ಕೆನರಾಡಿ ಯಲ್ಲಿರುವ  ಸೈಮನ್ ಮೆಂಡೊನ್ಸಾ ರವರ ಹಳೆ ಮಿಲ್ಲಿನ ಕಟ್ಟಡದ ಗೋಡೆ ಕೆಡೆವುವರೇ ಬಂದಿದ್ದು, ದಿನಾಂಕ 12.09.2014 ರಂದು ಬೆಳಿಗ್ಗೆ 8:30 ಗಂಟೆಗೆ ಗೋಡೆ ಕೆಡೆವುತ್ತಿದ್ದಾಗ ಗೋಡೆಯ ಮಣ್ಣು ಮತ್ತು ಕಲ್ಲು ಪಿರ್ಯಾದುದಾರರ ಮತ್ತು ಹನುಮಂತಪ್ಪರವರ ಮೇಲೆ ಬಿದ್ದ ಪರಿಣಾಮ ಪಿರ್ಯಾದುದಾರರಿಗೆ ಬಲಕೈಯ ಮೂರನೇ ಮತ್ತು ನಾಲ್ಕನೇ ಬೆರಳಿಗೆ ರಕ್ತಗಾಯವಾಗಿದ್ದು ಹಾಗೂ ಹನುಮಂತಪ್ಪರವರಿಗೆ ಕಿವಿಯ ಬಳಿ ರಕ್ತ ಬರುತ್ತಿದ್ದು ಅವರು ಮಾತನಾಡುವುತ್ತಿರಲಿಲ್ಲ  ಆತನನ್ನು ಉಡುಪಿಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಸುಮಾರು 9:30 ಗಂಟೆಗೆ ಹನುಮಂತಪ್ಪ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಕೃತ್ಯಕ್ಕೆ ಸೈಮನ್ ಮೆಂಡೊನ್ಸಾ ರವರು ಗೋಡೆ ಕೆಡೆವಲು ಯಾವುದೇ ಮುಂಜಾಗ್ರತೆ ಕ್ರಮಕೈಗೊಳ್ಳದೇ ಶಿರಸ್ತ್ರಾಣ ನೀಡದೇ ನಿರ್ಲಕ್ಷತನವಹಿಸಿರುವುದೇ ಕಾರಣವಾಗಿರುತ್ತದೆ ಎಂಬುದಾಗಿ ಹರೀಶ್ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 182/2014 ಕಲಂ 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

No comments: