Friday, September 12, 2014

Press Note

ಅತ್ಯಾಚಾರ ಮತ್ತು ಮಾನಭಂಗಕ್ಕೆ ಪ್ರಯತ್ನಿಸಿದ ಆರೋಪಿ ಪ್ರದೀಪ ಪೂಜಾರಿ (28) ತಂದೆ: ಕೃಷ್ಣಪ್ಪ ಪೂಜಾರಿ ವಾಸ: ಪ್ರವಿತಾ ನಿವಾಸ, ಕಲ್ಯಾ ಕೈರಬೆಟ್ಟು, ಕಲ್ಯಾ ಗ್ರಾಮ, ಕಾರ್ಕಳ ತಾಲೂಕು. ಎಂಬಾತನ ಬಂಧನ 
ಕಾರ್ಕಳ: ದಿನಾಂಕ: 10.09.2014 ರಂದು ರಾತ್ರಿ 11:30 ಗಂಟೆಗೆ ಕೈರಬೆಟ್ಟು, ಕಲ್ಯಾ ಗ್ರಾಮದ ಅತ್ಯಾಚಾರಕ್ಕೊಳಗಾದ ನೊಂದ ಯುವತಿ  ಠಾಣೆಗೆ ಬಂದು  ಲಿಖಿತ ಪಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ ತಾನು ನಂದಳಿಕೆ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಬಿಟ್ಟು ಕೈರಬೆಟ್ಟು ಎಂಬಲ್ಲಿರುವ  ತನ್ನ ಮನೆಗೆ ಬಸ್ಸಿನಿಂದ ಇಳಿದು ಮನೆಯ ಕಡೆಗೆ ನಡೆದುಕೊಂಡು  ಹೋಗುತ್ತಿರುವಾಗ ನೋಡಿ ಪರಿಚಯವಿರುವ ಆರೋಪಿ ಪ್ರದೀಪ ಎಂಬುವನು ಹಿಂದಿನಿಂದ ಕಪ್ಪು - ನೀಲಿ ಬಣ್ಣದ  ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದು ತನ್ನನ್ನು   ಎಳೆದುಕೊಂಡು ಪೊದೆಯ ಹಿಂದೆ ಹೋಗಿ ಬಲತ್ಕಾರ ಮಾಡಿ ವಿಷಯವನ್ನು ಯಾರಿಗಾದರೂ ತಿಳಿಸಿದಲ್ಲಿ ಸುಮ್ಮನೆ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಒಡ್ಡಿರುವುದರ ಬಗ್ಗೆ ಸದ್ರಿ ದೂರಿನಂತೆ ಆರೋಪಿಯ ವಿರುದ್ದ ಅಪರಾಧ ಕ್ರಮಾಂಕ 100/2014ರಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣದ ತನಿಖೆಯನ್ನು ಕಾರ್ಕಳ ಉಪ-ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರು ನಡೆಸುತ್ತಿದ್ದಾರೆ. ಅಲ್ಲದೇ ಆರೋಪಿತನು ದಿನಾಂಕ  10/09/2014 ರಂದು ಅಪ್ರಾಪ್ತ ಬಾಲೆಯು ಸಂಜೆ ಸುಮಾರು 5-00 ಗಂಟೆ ಹೊತ್ತಿಗೆ ಕಲ್ಕಾರು ಎಂಬಲ್ಲಿ ಬಸ್ಸಿನಿಂದ ಇಳಿದು ತನ್ನ ಮನೆಯ ಕಡೆಗೆ ನೆಡೆದುಕೊಂಡು ಹೋಗುತ್ತಿದ್ದಾಗ ಮಣ್ಣು ರಸ್ತೆಯಲ್ಲಿ ದಾರಿ ಮಧ್ಯೆ ಹಿಂದಿನಿಂದ ಬಂದು ಕೈಯನ್ನು ಹಿಡಿದು ಎಳೆದು  ಕೆನ್ನೆಗೆ ಕೈಯಿಂದ ಹೊಡೆದು ಹಲ್ಲೆ ಮಾಡಿದ್ದು, ಅಪ್ರಾಪ್ತ ವಯಸ್ಕಳ ಮೇಲೆ ಮಾನ ಭಂಗಕ್ಕೆ ಪ್ರಯತ್ನಿಸಿರುತ್ತಾನೆ. ಈ ಬಗ್ಗೆಯೂ ಆತನ ವಿರುದ್ಧ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಆರೋಪಿಯನ್ನು ದಿನಾಂಕ: 11/09/2014 ರಂದು ಪೊಲೀಸ್ ಉಪ-ವಿಭಾಗಾಧಿಕಾರಿಯವರು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದ್ದು, ಆರೋಪಿಯನ್ನು ಉಡುಪಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಯದ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಆರೋಪಿಯು ನ್ಯಾಯಾಂಗ ಬಂಧನದಲ್ಲಿರುತ್ತಾನೆ.

No comments: