Friday, September 12, 2014

Daily Crime Reports as on 12/09/2014 at 07:00 Hrs

ಕೊಲೆ ಪ್ರಕರಣ
  • ಕಾಪು: ದಿನಾಂಕ 11.09.2014 ರಂದು ರಾತ್ರಿ 8:20 ಗಂಟೆಗೆ ಪಿರ್ಯಾದುದಾರರಾದ ಜಿತೇಂದ್ರ ಶೆಟ್ಟಿ (35) ತಂದೆ ರತ್ನಾಕರ ಶೆಟ್ಟಿ ಬೋಳಾರಗುಡ್ಡೆ ಉದ್ಯಾವರ ಉಡುಪಿ ತಾಲೂಕು ರವರು ಉದ್ಯಾವರ ಗ್ರಾಮದ ಹಾಲಿಮಾ ಸಾಬ್ಜಿ ಹಾಲ್ ಬಳಿ ಗಂಡಸಿನ ಕೊಲೆ ನಡೆದಿರುವ ವಿಚಾರ ತಿಳಿದು ಸ್ಥಳಕ್ಕೆ ಹೋಗಿ ನೋಡಲಾಗಿ ಅಪರಿಚಿತ ಸುಮಾರು 40-45 ವರ್ಷ ವಯಸ್ಸಿನ ಗಂಡಸಿನ ಮೃತ ದೇಹ ರಕ್ತದ ಮಡುವಿನಲ್ಲಿ ರಾ.ಹೆ 66ರ ಪಶ್ಚಿಮ ಬದಿಯಲ್ಲಿ ಬಿದ್ದಿದ್ದು ಅವನ ಮುಖ ಹಾಗೂ ದೇಹದಲ್ಲಿ ಹರಿತವಾದ ಆಯುದದಿಂದ ಕಡಿದಿರುವುದು ಕಂಡು ಬಂದಿದ್ದು ಅವನನ್ನು ಯಾರೋ ಕೆಲವರು ಯಾವುದೋ ಉದ್ದೇಶದಿಂದ ಕೊಲೆ ಮಾಡುವ ಉದ್ದೇಶದಿಂದಲೇ ಹರಿತವಾದ ಆಯುಧದಿಂದ ರಾತ್ರಿ 7:30 ಗಂಟೆಗೆ ಕಡಿದು ಕೊಲೆ ಮಾಡಿರುವುದಾಗಿದೆ ಎಂಬುದಾಗಿ ಜಿತೇಂದ್ರ ಶೆಟ್ಟಿ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 181/14  ಕಲಂ 302 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  

ಹಲ್ಲೆ ನಡೆಸಿ ಜೀವ ಬೆದರಿಕೆ ನೀಡಿದ ಪ್ರಕರಣ
  • ಬ್ರಹ್ಮಾವರ: ದಿನಾಂಕ 08/09/2014 ರಂದು ಮದ್ಯಾಹ್ನ 12:30 ಗಂಟೆಗೆ ಉಡುಪಿ ತಾಲೂಕು ಕಚ್ಚೂರು ಗ್ರಾಮದ ಬಾರ್ಕೂರು ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಮಹಾಪೂಜೆ ನಡೆದು ಪಿರ್ಯಾದಿದಾರರಾದ ಶ್ರೀಧರ ಆಚಾರ್ಯ (63) ತಂದೆ: ದಿ ರಾಮಯ್ಯ ಆಚಾರ್ಯ ವಾಸ: ಸಂತೆಗುಡ್ಡೆ ಬಾರ್ಕೂರು ಕಚ್ಚೂರು ಗ್ರಾಮ ಎಂಬವರು ಹೊರಗೆ ಬಂದಾಗ ಏಕಾದಶಿಯ ಊಟದ ವಿಷಯದಲ್ಲಿ ಶ್ರೀನಿವಾಸ ಪುರೋಹಿತರಿಗೂ ಲಕ್ಷ್ಮೀಕಾಂತ ಶರ್ಮಾರವರಿಗೂ ಗಲಾಟೆಯಾಗಿ ಲಕ್ಷ್ಮೀಕಾಂತ ಶರ್ಮಾರವರು ಶ್ರೀನಿವಾಸ ಪುರೋಹಿತರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದದಕ್ಕೆ ಪಿರ್ಯಾದಿದಾರರು, ಅರ್ಚಕರಾದ ನೀವೇ ಹೀಗೆ ಬೈದುಕೊಂಡರೆ ಭಕ್ತಾದಿಗಳಿಗೆ ಶಾಂತಿಭಂಗ ಆಗುವುದಿಲ್ಲವೇ ಎಂದು ಕೇಳಿದ್ದಕ್ಕೆ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ತಲೆಗೆ ಬೆನ್ನಿಗೆ ಹೊಡೆದು ಹಲ್ಲೆ ನಡೆಸಿರುತ್ತಾರೆ. ನಂತರ ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಸರಕಾರಿ ಆಸ್ಪತ್ರೆಯಲ್ಲಿ ಕುಳಿತಿರುವಾಗ ಒಂದು ಕಾರಿನಲ್ಲಿ ಪ್ರವೀಣ ಆಚಾರ್ಯ ಮತ್ತು ಗಂಗಾಧರ ಆಚಾರ್ಯ ರವರು ಬಲತ್ಕಾರವಾಗಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಹಲ್ಲೆ ನಡೆಸಿರುತ್ತಾರೆ ಎಂಬುದಾಗಿ ಶ್ರೀಧರ ಆಚಾರ್ಯ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 170/14  ಕಲಂ 323 504 506 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  

No comments: