Thursday, September 11, 2014

Daily Crime Reports As On 11/09/2014 At 17:00 Hrs

ಆತ್ಮಹತ್ಯೆ ಪ್ರಕರಣ

  • ಮಣಿಪಾಲ: ನಿರಂಜನ್‌, ತಂದೆ: ಎಸ್‌‌.ಕೆ ಸುಂದರ್‌‌, ವಾಸ: ಕಲ್ಯಾಣಿ ನಿಲಯ, ಉಜ್ಜೊಡಿ, ಗೋಡಿಗುಡ್ಡೆ, ಕಂಕನಾಡಿ ಅಂಚೆ, ಮಂಗಳೂರು ರವರು ಮಣಿಪಾಲದ ಲಾಡ್ಜ್‌ ನಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಸದ್ರಿ ಲಾಡ್ಜ್‌ ಗೆ ಹೈದರಾಬಾದ್‌ನ ನಿರಂಜನ್‌ ರೆಡ್ಡಿ (23) ಎಂಬವರು ತನ್ನ ಕಲಿಕೆಯ ಸರ್ಟಿಫಿಕೆಟ್‌‌ಗಳನ್ನು ಪಡೆದುಕೊಂಡು ಹೋಗಲು ಬಂದಿರುವುದಾಗಿ ತಿಳಿಸಿ ರೂಮ್‌ ನಂ: 302ನ್ನು ಬಾಡಿಗೆಗೆ ಪಡೆದುಕೊಂಡಿದ್ದು, ದಿನಾಂಕ 10/09/14 ರಂದು ಮದ್ಯಾಹ್ನ 2-30 ಗಂಟೆಯಿಂದ 11/09/14 ರಂದು 00:10 ಗಂಟೆಯ ಮಧ್ಯ ಅವಧಿಯಲ್ಲಿ ಸದ್ರಿಯವರು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ತಾನು ಉಳಕೊಂಡಿದ್ದ ರೂಮ್‌ನ ಪ್ಯಾನಿಗೆ ಬೆಡ್‌ಶೀಟ್‌ನ ಬಟ್ಟೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ನಿರಂಜನ್‌ ರವರು ನೀಡಿದ ಮಣಿಪಾಲ 27/14 ಕಲಂ 174 ಸಿಆರ್‌ಪಿಸಿಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಹಲ್ಲೆ ನಡೆಸಿ  ಜೀವ ಬೆದರಿಕೆ ಹಾಕಿದ ಪ್ರಕರಣ

  • ಕುಂದಾಪುರ: ದಿನಾಂಕ 10/09/2014 ರಂದು ಸಂಜೆ 05.30 ಗಂಟೆಗೆ ಆರೋಪಿ ಹರೀಶ ಶೆಟ್ಟಿ ಮತ್ತು ಇನ್ನೋಬ್ಬನು ಸಮಾನ ಉದ್ದೇಶದಿಂದ ಒಟ್ಟು ಸೇರಿ ಕೊಂಡು ಪಿರ್ಯಾದಿ ರಾಮ ಪೂಜಾರಿಯವರನ್ನು ಚಿತ್ತೂರು ರಿಕ್ಷಾ ನಿಲ್ದಾಣದ ಬಳಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನೀನು ನನ್ನ ಬಗ್ಗೆ ಪೊಲೀಸರಿಗೆ ಮಾಹಿತಿ ಕೋಡುತ್ತೀಯಾ ಎಂದು ಹೇಳಿ ಕೈಯಿಂದ ಎದೆಗೆ ಗುದ್ದಿದ್ದು ನಂತರ  ಸಂಜೆ 06.30 ಗಂಟೆಗೆ  ಕರ್ಕುಂಜೆ ಗ್ರಾಮದ ಗುಡ್ರಿ ಬಸ್ ನಿಲ್ದಾಣದ ಬಳಿ ವಾಪಾಸ್ಸು ತಡೆದು ನಿಲ್ಲಿಸಿ ದೊಣ್ಣೆಯಿಂದ ಎದೆಗೆ ಬಲಕೈ ಮುಂಗೈಗೆ ಹೊಡೆದಿದ್ದು ಒಳ ನೋವು ಉಂಟಾಗಿರುತ್ತದೆ ಅಲ್ಲದೆ ಬೈಕಿನ ಬಲಭಾಗದ ಇಂಡಿಕೇಟರ್ ಜಖಂಗೊಂಡಿರುತ್ತದೆ.ಅಲ್ಲದೆ  ರಾಮ ಪೂಜಾರಿರವರ ಕುತ್ತಿಗೆಯಲ್ಲಿದ್ದ ಎರಡೂವರೆ ಪವನ್ ತೂಕದ ಚಿನ್ನದ ಸರವನ್ನು ಕಿತ್ತುಕೊಂಡಿರುತ್ತಾನೆ. ಮತ್ತು ಮನೆಗೆ ನುಗ್ಗಿ ಕೊಲೆ ಮಾಡಿರುವುದಾಗಿ ಬೆದರಿಕೆ ಹಾಕಿರುತ್ತಾನೆ ಜೊತೆಯಲ್ಲಿದ್ದ ಇನ್ನೋಬ್ಬನು ಕೈಯಿಂದ ಹಲ್ಲೆ ನೆಡೆಸಿರುತ್ತಾನೆ ಹಳೇ ದ್ವೇಷ ಹಾಗೂ ಆರೋಪಿ ಹರೀಶನ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಾರೆ ಎಂದು ಭಾವಿಸಿ ಈ ಕೃತ್ಯ  ನೆಡೆಸಿರುವುದಾಗಿದೆ ಎಂಬುದಾಗಿ ರಾಮ ಪೂಜಾರಿರವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ 317/2014  ಕಲಂ 341, 504, 323, 324, 392, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಅಪಘಾತ ಪ್ರಕರಣ

  • ದಿನಾಂಕ 10.09.14ರಂದು ರಾತ್ರಿ ಸುಮಾರು 23:35ಗಂಟೆಗೆ ಆರೋಪಿ ಅಜಯ್‌ ಕ್ರಿಸ್ಟೋಫರ್‌ ಎಂಬವರು ಪರ್ಕಳ ಕಡೆಯಿಂದ ಆತ್ರಾಡಿ ಕಡೆಗೆ ತಾನು ಚಲಾಯಿಸಿಕೊಂಡು ಬರುತ್ತಿದ್ದ ಕೆಎ20 ಜಡ್‌‌ 9547ನೇ ಸ್ವಿಫ್ಟ್‌ ಕಾರನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ದೇವಿನಗರ 2ನೇ ಕ್ರಾಸ್‌ ಬಳಿ ಇದ್ದ ಇಲಾಖೆಗೆ ಸಂಬಂಧಿಸಿದ ಹೆಚ್‌.ಟಿ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಕಂಬಕ್ಕೆ ಹಾನಿಯಾಗಿರುತ್ತದೆ ಎಂಬುದಾಗಿ ನವೀನ್‌ ಹೆಚ್‌, ಶಾಖಾಧಿಕಾರಿ, ಕಾರ್ಯ ಮತ್ತು ಪಾಲನಾ ಶಾಖೆ, ಮೆಸ್ಕಾಂ, ಹಿರಿಯಡ್ಕ, ಉಡುಪಿರವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 156/14 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

ಹುಡುಗಿ ಕಾಣೆ ಪ್ರಕರಣ 


  • ಕಾರ್ಕಳ: ದಿನಾಂಕ: 09/09/2014 ರಂದು ಬೆಳಿಗ್ಗೆ 6:00 ಗಂಟೆಗೆ ಶ್ರೀಮತಿ ವಸಂತಿ ತಂದೆ: ಸದಾನಂದ ಪೂಜಾರಿ, ವಾಸ: ಶಾಂತಿ ಬಾಕ್ಯಾರು ಜಾರ್ಕಳ ಕುಕ್ಕುಂದೂರು ಕಾರ್ಕಳ ರವರ  ಮಗಳು 22 ವರ್ಷ ಪ್ರಾಯದ ಕು| ಸೌಮ್ಯ ಎಂಬವರು ತನ್ನ ಮನೆಯಾದ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಜಾರ್ಕಳ ಶಾಂತಿ ಬಾಕ್ಯಾರು  ಎಂಬಲ್ಲಿಂದ ಬಜಗೋಳಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಈವರೆಗೆ ಮನೆಗೂ ಬಾರದೇ ಸಂಬಂಧಿಕರ ಯಾ ಸ್ನೇಹಿತರ ಮನೆಗೂ ಹೋಗದೇ ಎಲ್ಲಿಯೋ ಕಾಣೆಯಾಗಿರುತ್ತಾಳೆ ಎಂಬುದಾಗಿ ಶ್ರೀಮತಿ ವಸಂತಿರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 171/14 ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

No comments: