Thursday, September 11, 2014

Daily Crime Reports As On 11/09/2014 At 07:00 Hrs



ಹಲ್ಲೆ ಪ್ರಕರಣ
  • ಬ್ರಹ್ಮಾವರ : ದಿನಾಂಕ 08/09/2014 ರಂದು ಮದ್ಯಾಹ್ನ 12:45 ಗಂಟೆಗೆ ಪಿರ್ಯಾದಿ ಲಕ್ಷ್ಮಿಕಾಂತ ಶರ್ಮಾ (45) ತಂದೆ ರಾಮಾ ಆಚಾರ್ಯ ವಾಸ: ಚೇಂಪಿ ಸಾಲಿಗ್ರಾಮ ಇವರು  ಉಡುಪಿ ತಾಲೂಕು ಕಚ್ಚೂರು ಗ್ರಾಮದ ಬಾರ್ಕೂರು ಶ್ರೀ ಕಾಳಿಕಾಂಬ ದೇವಸ್ಥಾನದ ಪೂಜೆಯನ್ನು ಮುಗಿಸಿ ಹೊರಗೆ ಬಂದು ಮಾತನಾಡುತ್ತಿರುವಾಗ ಸಂತೆಗುಡ್ಡೆ ಶ್ರೀಧರ  ಆಚಾರ್ಯ ಎಂಬವರು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಅವರ ರುದ್ರಾಕ್ಷಿ ಸರ ಚೈನ್ ಮುಂತಾದುಗಳನ್ನು ತುಂಡು ಮಾಡಿ ಹೊಡೆಯಲು ಬಂದಿದ್ದು, ನಿನ್ನನ್ನು ಬಿಡುವುದಿಲ್ಲ ಎಂಬು ಜೀವಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 168/2014 ಕಲಂ 323 504 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಪಘಾತ ಪ್ರಕರಣ
  • ಬ್ರಹ್ಮಾವರ : ದಿನಾಂಕ: 10/09/2014 ರಂದು 13:15  ಗಂಟೆಗೆ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಭರಣಿ ಪೆಟ್ರೋಲ್ ಬಂಕ್ ಬಳಿ ರಾ-ಹೆ-66 ರಲ್ಲಿ  ಆರೋಪಿ ತನ್ನ ಬಾಬ್ತು ಕಾರು ನಂಬ್ರ ಕೆಎ-20ಸಿ-6625 ನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ  ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಪಿರ್ಯಾದಿ ಅಣ್ಣಪಯ್ಯ ಕಾರಂತ (48) ತಂದೆ ನಾರಾಯಣ ಕಾರಂತ ವಾಸ: ಶಂಕರ ಕಲಾ ಮಂದಿರ ಉಪ್ಪುಂದ ಗ್ರಾಮ ಕುಂದಾಪುರ ತಾಲೂಕು ಇವರು ಚಲಾಯಿಸಿಕೊಂಡು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರು ಸೈಕಲ್ ನಂಬ್ರ ಕೆಎ-20ಇಇ-8042  ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಪರಿಣಾಮವಾಗಿ ಪಿರ್ಯಾದಿದಾರರಿಗೆ ಸಾದಾ ಸ್ವರೂಪದ ಹಾಗೂ ಮೋಟಾರು ಸೈಕಲ್ ಸಹ ಸವಾರ ರಾಧಾಕೃಷ್ಣ ಭಟ್  ರವರಿಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 169/2014 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಕ್ರಮ ಗೋ ಸಾಗಾಟ ಪ್ರಕರಣ
  • ಕಾರ್ಕಳ: ಕಾರ್ಕಳ ನಗರ ಠಾಣಾ ಪಿ.ಎಸ್.ಐ ಕಬ್ಬಾಳ್‌ ರಾಜ್‌ ಇವರಿಗೆ ಅಕ್ರಮವಾಗಿ  ಎಲ್ಲಿಂದಲೋ ಖರೀದಿ ಮಾಡಿ ಎಲ್ಲಿಗೋ ಕಸಾಯಿಕಾನೆಗೆ ವಧೆಗಾಗಿ ,ರಂಗನಪಲ್ಕೆ ಕಡೆಯಿಂದ ನಕ್ರೆ ಕಡೆಗೆ ಕೆ.ಎ.20.ಎ.2558 ನೇ ಟೆಂಪೋ ಟ್ರಾಕ್ಸ್ ವಾಹನದಲ್ಲಿ   ಹಿಂಸಾತ್ಮಕ ರೀತಿಯಲ್ಲಿ 2 ದನ ಹಾಗೂ 2 ಗಂಡು ಕರುಗಳನ್ನು ತುಂಬಿಸಿ  ಸಾಗಿಸುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿಯ ಆದಾರದ ಮೇರೆಗೆ ದಿನಾಂಕ: 10.09.2014 ರಂದು ಮದ್ಯಾಹ್ನ 2:30 ಗಂಟೆಗೆ ತಮ್ಮ ಸಿಬ್ಬಂದಿಗಳೊಂದಿಗೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ವರ್ಣಬೆಟ್ಟು ಎಂಬಲ್ಲಿ ಸದ್ರಿ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದಾಗ ಆರೋಪಿ ಚಾಲಕನು ವಾಹನವನ್ನು ನಿಲ್ಲಿಸಿ ವಾಹನದಿಂದ ಕೆಳಗೆ ಹಾರಿ ಓಡಿ ತಪ್ಪಿಸಿಕೊಂಡಿದ್ದು, ನಂತರ  ಸದ್ರಿ ವಾಹನವನ್ನು ಅದರಲ್ಲಿ ಇದ್ದ 4 ಜಾನುವಾರುಗಳ ಸಮೇತ  ಮಹಜರು ಮುಖೇನ  ಸ್ವಾದೀನಪಡಿಸಿ ಠಾಣಾ ಅಪರಾಧ ಕ್ರಮಾಂಕ 170/2014 U/s 8, 9, 11, KARNTAKA PREVENTION OF COW SLANGHTER & CATTLE PREVENTION ACT-1964, 11 (1)(d) PREVENTION OF CRUELTY TO ANIMALS ACT, 1960 ರಂತೆ ಪ್ರಕರಣ ದಾಖಲಿಸಿರುವುದಾಗಿದೆ.

No comments: