Saturday, July 26, 2014



      ಪತ್ರಿಕಾ  ಪ್ರಕಟಣೆ  


        ಉಡುಪಿ  ಜಿಲ್ಲೆಯಲ್ಲಿ  ಇತ್ತೀಚೆಗೆ  ವರದಿಯಾದ  ಸರಣಿ  ಕನ್ನ  ಕಳವು, ದನ ಕಳವು  ಇತ್ಯಾದಿ  ಬಗ್ಗೆ  ಮುಂಜಾಗೃತಾ  ಕ್ರಮವಾಗಿ  ಕಾಪು ವೃತ್ತದ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಗಳು ಇವರು ಡಾ/ ಬೋರಲಿಂಗಯ್ಯ ಐಪಿಎಸ್‌, ಮಾನ್ಯ  ಪೊಲೀಸ್‌  ಅಧೀಕ್ಷಕರು, ಉಡುಪಿ ಜಿಲ್ಲೆರವರ ನಿರ್ದೇಶನದಲ್ಲಿ ಶ್ರೀ ಅಣ್ಣಾ  ಮಲೈ, ಐಪಿಎಸ್‌ ಸಹಾಯಕ ಪೊಲೀಸ್‌  ಅಧೀಕ್ಷಕರು ಕಾರ್ಕಳ ಉಪ ವಿಭಾಗರದವರ ಮಾರ್ಗದರ್ಶನದಲ್ಲಿ ಶ್ರೀ  ಸುನೀಲ್‌  ವೈ  ನಾಯ್ಕ್‌, ಪೊಲೀಸ್‌  ವೃತ್ತ  ನಿರೀಕ್ಷಕರು  ಕಾಪು ವೃತ್ತರವರ  ನೇತೃತ್ವದಲ್ಲಿ ದಿನಾಂಕ 26/07/2014 ರಂದು ಮುಂಜಾನೆ ಕಳವು  ನಡೆಸಲು ಸನ್ನದ್ದರಾಗಿ  ಮೋಟಾರ್‌  ಸೈಕಲ್‌ನಲ್ಲಿ  ಹೋಗುತ್ತಿ ದ್ದ ಕುಖ್ಯಾತ  ಕಳ್ಳರ  ತಂಡದ  ಆರೋಪಿತರುಗಳಾದ 1) ಮಹಮ್ಮದ್ ನಿಸ್ಸಾರ್ (22), ತಂದೆ ಆದಂ ಕುಂಞಿ, ವಾಸ  ವಾಡಿ  ಕೇಂದ್ರದ  ಬಳಿ, ವಿನಯ ನಗರ ಬೆಳಪು,  ಬೆಳಪು ಗ್ರಾಮ,  ಉಡುಪಿ ತಾಲೂಕು, 2) ಸೌಹಾಜ್‌ (22), ತಂದೆ ಬಶೀರ್‌  ಅಹಮ್ಮದ್‌  ವಾಸ ಪಕೀರ್ನಕಟ್ಟೆ ಜಂಕ್ಷನ್‌, ಮಲ್ಲಾರು ಗ್ರಾಮ, ಉಡುಪಿ ತಾಲೂಕು. ಎಂಬವರನ್ನು ಪಾದೂರು  ಗ್ರಾಮದ  ಚಂದ್ರನಗರ ಎಂಬಲ್ಲಿ  ಸೆರೆ  ಹಿಡಿದು ಆರೋಪಿಗಳ ವಶದಲ್ಲಿ ಕೃತ್ಯ  ನಡೆಸಲು  ಇಟ್ಟುಕೊಂಡಿದ್ದ ಪಿಕ್ಕಾಸು, ಎಕ್ಷೋ ಬ್ಲೇಡ್‌, ಸ್ಕೂಡ್ರೈವರ್‌, ಸ್ಪಾನರ್‌ಗಳನ್ನು  ಹಾಗೂ ಆರೋಪಿಗಳು ಮತ್ತು ಅವರ  ತಂಡದವರು  ಸೇರಿ  ಕಳವು  ಮಾಡಿದ ಮೂರು  ಮೋಟಾರ್‌  ಸೈಕಲ್‌   ಇತ್ಯಾದಿ ಸುಮಾರು  ರೂಪಾಯಿ 1,40,000/-  ಸೊತ್ತುಗಳನ್ನು  ಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ   ಶಿರ್ವ  ಠಾಣಾ  ಪಿಎಸ್‌ಐ, ಅಶೋಕ್‌  ಪಿ, ಪಡುಬಿದ್ರೆ  ಠಾಣಾ ಪಿಎಸ್‌ಐ, ಅಜಮತ್‌ ಆಲಿ,  ಕಾಪು ಠಾಣಾ  ಪಿಎಸ್‌ಐ( ಕ್ರೈಂ), ಲಕ್ಷ್ಮಣ್‌,  ವೃತ್ತ ಕಚೇರಿಯ  ಅಪರಾಧ  ಪತ್ತೆ ದಳದ  ಸಿಬ್ಬಂದಿಗಳಾದ  ಸುರೇಶ, ಸುಧಾಕರ, ರಾಜ ಕುಮಾರ ಧರ್ಮಪ್ಪ, ವಿಶ್ವಜೀತ್‌, ಜಗದೀಶ, ಶಿರ್ವ ಠಾಣಾ  ಕ್ರೈಂ ಸಿಬ್ಬಂದಿಗಳಾದ ಅಣ್ಣಪ್ಪ, ಭಾಸ್ಕರ,  ಶಿವರಾಮ, ದಾಮೋದರ್, ಎಎಸ್‌ಐ  ಬಾಬು,   ಶಿರ್ವ  ಠಾಣಾ  ಪ್ರಕಾಶ್‌, ನವೀನ, ಇವರು ಸಹಕರಿಸಿರುತ್ತಾರೆ.

No comments: