Saturday, July 26, 2014

Daily Crime Reported As On 26/07/2014 At 19:30 hrs



ಅಪಘಾತ ಪ್ರಕರಣಗಳು  

  • ಮಣಿಪಾಲ: ಪಿರ್ಯಾದಿದಾರರಾದ ಶ್ರೀಧರ ಆಚಾರ್ಯ(69), ತಂದೆ ದಿ. ಲಕ್ಷ್ಮಣ ಆಚಾರ್ಯ, ವಾಸ ಮನೆ ನಂ 6-104, ಮಂಚಿ ಶಿವಳ್ಳಿ ಗ್ರಾಮ, ಉಡುಪಿ ಇವರು ದಿನಾಂಕ 26/07/14ರಂದು ಮಣಿಪಾಲಕ್ಕೆ ಬರುವಾಗ ಶ್ರೀಧರ ಆಚಾರ್ಯ (69), ತಂದೆ ದಿ. ಲಕ್ಷ್ಮಣ ಆಚಾರ್ಯ, ವಾಸ ಮನೆ ನಂ 6-104, ಮಂಚಿ ಶಿವಳ್ಳಿ ಗ್ರಾಮ, ಉಡುಪಿ ಇವರು ಇಂದ್ರಾಳಿ ಬಸ್ಸು ನಿಲ್ದಾಣದ ಬಳಿ 11:00 ಗಂಟೆಗೆ ರಸ್ತೆಯ ಡಿವೈಡರ್‌ ಮಧ್ಯೆ ನಿಂತಿರುವಾಗ ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಹೋಗುತ್ತಿದ್ದ ಕೆಎ 14ಬಿ 1940 ನೇ ಶಿವಶಂಕರ ಬಸ್ಸಿನ ಚಾಲಕ ತಾನು ಚಲಾಯಿಸಿಕೊಂಡು ಬರುತ್ತಿದ್ದ ಬಸ್ಸನ್ನು ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿವೈಡರ್‌ ಮಧ್ಯೆ ನಿಂತಿದ್ದ ಶ್ರೀಧರ ಆಚಾರ್ಯ ಢಿಕ್ಕಿ ಹೊಡೆದು ಬಸ್ಸನ್ನು ನಿಲ್ಲಿಸದೇ ಮುಂದಕ್ಕೆ ಚಲಾಯಿಸಿಕೊಂಡು ಹೋಗಿರುತ್ತಾನೆ. ಶ್ರೀಧರ ಆಚಾರ್ಯ ಇವರಿಗೆ ಬಸ್ಸು ಢಿಕ್ಕಿ ಹೊಡೆದ ಪರಿಣಾಮ ಎಡಬದಿ ಭುಜಕ್ಕೆ ಹಾಗೂ ಸೊಂಟಕ್ಕೆ ಜಖಂ ಉಂಟಾಗಿ, ಎಡಬದಿ ತಲೆಗೆ ಗಾಯವುಂಟಾಗಿರುತ್ತದೆ. ಅಲ್ಲಿ ಸೇರಿದವರು ಒಂದು ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿದ್ದಾಗಿದೆ ಎಂಬುದಾಗಿ ಶ್ರೀಧರ ಆಚಾರ್ಯ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 125/14 ಕಲಂ 279, 337 ಐಪಿಸಿ & 134(ಎ)&(ಬಿ) ಐ.ಎಮ್‌.ವಿ ಕಾಯಿದೆ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
  • ಕೋಟ: ದಿನಾಂಕ 26/07/2014ರಂದು ಬೆಳಿಗ್ಗೆ 07:00 ಗಂಟೆಗೆ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಪಿರ್ಯಾದಿದಾರರಾದ ಶೇಖರ ಕಾಂಚನ್ (47), ತಂದೆ ಕುಷ್ಟ ಮೊಗವೀರ, ವಾಸ ತೆಕ್ಕಟ್ಟೆ ಕೊಮೆ, ತೆಕ್ಕಟ್ಟೆ ಗ್ರಾಮ ಕುಂದಾಪುರ ತಾಲೂಕು ಇವರ ಮನೆಯ ಎದುರುಗಡೆ ಕೊಮೆ ಜಂಕ್ಷನ್‌ನಲ್ಲಿ, ತೆಕ್ಕಟ್ಟೆ ಕಡೆಯಿಂದ ಕೊಮೆ ಜಂಕ್ಷನ್ ಕಡೆಗೆ ಗೋಪಾಲ ಪೂಜಾರಿ (41) ಎನ್ನುವವರು ಇನ್ನೂ ನೋಂದಣೆಯಾಗದೆ ಇರುವ ಹೊಸ ಸುಜುಕಿ ಆಕ್ಷೀಸ್, ಸ್ಕೂಟರ್‌ನಲ್ಲಿ ಹೋಗುತ್ತಿರುವಾಗ ಎದುರಿನಿಂದ ಅಂದರೆ ಮಣೂರು  ಕಡೆಯಿಂದ ಕೊಮೆ ಜಂಕ್ಷನ್ ಕಡೆಗೆ ಆಪಾದಿತ ಕೆಎ 20ಸಿ 6910ನೇ ಬೋಲೇರೋ ಪಿಕಅಪ್ ವಾಹನವನ್ನು ಅದರ ಚಾಲಕ ಚಂದ್ರ ಪೂಜಾರಿ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕೊಮೆ ಜಂಕ್ಷನ್ ನಿಂದ ತೆಕ್ಕಟ್ಟೆ ಕಡೆಗೆ ಒಮ್ಮೆಲೆ ಚಲಾಯಿಸಿದ ಪರಿಣಾಮ ಸವಾರ ಗೋಪಾಲ ಪೂಜಾರಿರವರ ವಾಹನಕ್ಕೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ  ಗೋಪಾಲ ಪೂಜಾರಿ ರವರು ಸ್ಕೂಟರ್ ಸಮೇತ ಟಾರು ರಸ್ತೆ ಮೇಲೆ ಬಿದ್ದು ಎಡಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಹಾಗೂ ಜಜ್ಜಿದ ರಕ್ತ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಮಣೆಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದಾಗಿದೆ ಎಂಬುದಾಗಿ ಶೇಖರ ಕಾಂಚನ್ ಇವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 170/2014 ಕಲಂ 279, 338 ಐ.ಪಿ.ಸಿ ಕಾಯಿದೆ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

  • ಕುಂದಾಪುರ: ದಿನಾಂಕ 26/07/2014ರಂದು ಸಮಯ ಬೆಳಿಗ್ಗೆ 8:45 ಗಂಟೆಗೆ  ಕುಂದಾಪುರ ತಾಲೂಕು ಗೋಪಾಡಿ ಗ್ರಾಮದ ಮಹಾಲಕ್ಷ್ಮೀ  ಹೀರೋ  ಷೋರೂಮ್‌ ಎದುರುಗಡೆ ರಾ.ಹೆ 66 ರಸ್ತೆಯಲ್ಲಿ, ಆಪಾದಿತ ಫೆಲಿಕ್ಸ್ ಡಿಸೋಜಾ ಎಂಬವರು KA 20Z 3901ನೇ ಕಾರನ್ನು ಕುಂದಾಪುರ  ಕಡೆಯಿಂದ ಕುಂಭಾಶಿಗೆ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಆನಂದ ಪೈ (45), ತಂದೆ ದಿ. ಕೃಷ್ಣರಾಜ್ ಪೈ, ವಾಸ ಮೂಡುಗೋಪಾಡಿ, ಗೋಪಾಡಿ ಗ್ರಾಮ ಕುಂದಾಪುರ ತಾಲೂಕು ಇವರು ಕುಂಭಾಶಿ ಕಡೆಗೆ ಸವಾರಿ ಮಾಡಿಕೊಂಡು  ಹೋಗುತ್ತಿದ್ದ  ಸೈಕಲ್‌ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಆನಂದ ಪೈ ರವರು ಸೈಕಲ್‌ ಸಮೇತ ರಸ್ತೆಯಲ್ಲಿ ಬಿದ್ದು ಗಾಯಗೊಂಡು ಕೊಟೇಶ್ವರ ಎನ್‌.ಆರ್‌ ಆಚಾರ್ಯ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಎಂಬುದಾಗಿ ಆನಂದ ಪೈ ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 96/2014 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: