Sunday, July 27, 2014

Daily Crime Reported As On 27/07/2014 At 07:00 Hrs



ಅಪಘಾತ ಪ್ರಕರಣಗಳು 

  • ಕಾಪು: ದಿನಾಂಕ 26/07/2014ರಂದು ಪಿರ್ಯಾದುದಾರರಾದ ಕೆ ಮಾಧವ ಉಪಾಧ್ಯಾಯ (57) ತಂದೆ ದಿ. ಶ್ರೀನಿವಾಸ ಉಪಾದ್ಯಾಯ, ವಾಸ 7/28 ಬಿ ಅನಂತ ಪದ್ಮಾನಾಭ ನಗರ ಕೊಡಂಕೂರು ನಿಟ್ಟೂರು ಉಡುಪಿ ಇವರು ತನ್ನ ಬಾಬ್ತು ಕಾರು ನಂಬ್ರ ಕೆಎ 20ಎನ್ 7476ನೇದನ್ನು ಮದ್ಯಾಹ್ನ ಸುಮಾರು 2:45 ಗಂಟೆಗೆ ಉದ್ಯಾವರದಿಂದ ಗ್ಯಾಸ್ ತುಂಬಿಸಿಕೊಂಡು ರಾ.ಹೆ 66 ರಲ್ಲಿ ಏಕ  ಮುಖ ರಸ್ತೆಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿರುವಾಗ ರೇಶ್ಮಾ ಬಾರ್‌ ಬಳಿ ತುಲುಪಿ ಉಡುಪಿ ಕಡೆಗೆ ಹೋಗುವಾಗ ತನ್ನ ಕಾರನ್ನು ತಿರುಗಿಸುವ  ವೇಳೆಗೆ ಉಡುಪಿ ಕಡೆಯಿಂದ  ಮಂಗಳೂರು ಕಡೆಗೆ  ಜಿ ಜೆ 12ಎಕ್ಸ್ 0093ನೇ ನಂಬ್ರದ ಟ್ಯಾಂಕರ್‌ ಚಾಲಕ ಅನಿಲ್ ಕುಮಾರ ಬಿಂದ್ ತನ್ನ ಬಾಬ್ತು ವಾಹನವನ್ನು ಅಜಾಗರುಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿ ಕೆ ಮಾಧವ ಉಪಾಧ್ಯಾಯ ಇವರ ಕಾರಿನ ಹಿಂಬಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೆ ಮಾಧವ ಉಪಾಧ್ಯಾಯರವರ ಕಾರು  ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ರಿಕ್ಷಾ ನಂಬ್ರ ಕೆಎ 20ಸಿ 9230ನೇದಕ್ಕೆ ತಾಗಿ ಜಖಂಗೊಂಡಿದ್ದಾಗಿರುತ್ತದೆ. ಈ ಅಪಘಾತಕ್ಕೆ ಟ್ಯಾಂಕರು ಚಾಲಕನು ಅತೀವೇಗ ಅಡ್ಡಾದಿಡ್ಡಿಯಾಗಿ ಅಜಾಗರುಕತೆಯಿಂದ ಚಲಾಯಿಸಿದ್ದೆ ಕಾರಣವಾಗಿರುತ್ತದೆ. ಎಂಬುದಾಗಿ ಕೆ ಮಾಧವ ಉಪಾಧ್ಯಾಯ ಇವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 153/14 ಕಲಂ 279 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

  • ಕಾಪು: ದಿನಾಂಕ 26/07/2014ರಂದು ಪಿರ್ಯಾದುದಾರರಾದ ಶಂಕರ ಪೂಜಾರಿ (42), ತಂದೆ ದಿ ಗೋಪಾಲ್ ಪೂಜಾರಿ, ವಾಸ ಮೂಡ ಪೆರಂಪಳ್ಳಿ ರೈಲ್ವೇ ಬ್ರಿಡ್ಜ್ ಬಳಿ ಶಿವಳ್ಳಿ ಗ್ರಾಮ ಉಡುಪಿ ಇವರು ಕೆಎ 20ಸಿ 2415ರಲ್ಲಿ ತನ್ನ ಹೆಂಡತಿ ಹಾಗೂ ಅತ್ತೆ ಮತ್ತು ಮಗನೊಂದಿಗೆ ಕಟಪಾಡಿ ಯಲ್ಲಿರು ತನ್ನ ಭಾವನ ಮನೆಯಲ್ಲಿ ಕಾರ್ಯಕ್ರಮವನ್ನು ಮುಗಿಸಿ ಪೆರಂಪಳ್ಳಿಗೆ ಕಟಪಾಡಿಯಿಂದ ಉಡುಪಿ ಕಡೆಗೆ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಮದ್ಯಾಹ್ನ 3:25 ಗಂಟೆಗೆ ತೇಕಲತೋಟ ರಾ.ಹೆ 66 ರಲ್ಲಿ ತಲುಪಿದಾಗ ಉಡುಪಿ ಕಡೆಯಿಂದ ಕಟಪಾಡಿ ಕಡೆಗೆ ರಶೀದ್ ಎಂಬವರು ಕೆಎ 20ಬಿ 551ನೇ ಬಸ್ಸ್ ಚಾಲಕ ಬಸ್ಸನ್ನು ಅಡ್ಡಾದಿಡ್ಡಿಯಾಗಿ ನಿರ್ಲಕ್ಷತನದಿಂದ ರಸ್ತೆಯ ತೀರ ಪಶ್ಚಿಮ ಬದಿಗೆ ಚಲಾಯಿಸಿ ಡಿಕ್ಕಿ ಹೊಡೆದ ಪರಿಣಾಮ ಶಂಕರ ಪೂಜಾರಿರವರಿಗೆ ಮತ್ತು ಶಂಕರ ಪೂಜಾರಿರವರ ಹೆಂಡತಿ ಮತ್ತು  ಮಗನಿಗೆ ತಾಗಿ ತರಚಿದ ಗಾಯವಾಗಿದ್ದು ರಿಕ್ಷಾ ಜಖಂ ಗೊಂಡದ್ದಾಗಿರುತ್ತದೆ. ಎಂಬುದಾಗಿ ಶಂಕರ ಪೂಜಾರಿ ಇವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 154/14 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಜೀವ ಬೆದರಿಕೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಯು ಯಶೋಧ, ಗಂಡ ದಿ. ಹೆಚ್ ಆನಂದ ನಾಯ್ಕ್, ವಾಸ 9-3-104 76 ಬಡಗುಬೆಟ್ಟು 28 ನೇ ತೆಂಕಪೇಟೆ ಉಡುಪಿ ಇವರು 76 ಬಡಗಬೆಟ್ಟು ಗ್ರಾಮದ 28 ನೇ ತೆಂಕಪೇಟೆ ವಾರ್ಡ್‌ನಲ್ಲಿ ಪಿತ್ರಾರ್ಜಿತವಾಗಿ ಬಂದ ಆಸ್ತಿ ಸರ್ವೆ  ನಂಬ್ರ 102/07 ರಲ್ಲಿ ನಿವೇಶನವಿದ್ದು ಈ ನಿವೇಶನದ ಸ್ವಾಧೀನತೆಯ ಬಗ್ಗೆ ಆರೋಪಿ ವಿಜಯ ನಾಯ್ಕ್ ಎಂಬವರ ಮೇಲೆ ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಇದ್ದು ವಿಚಾರಣೆ ಇರುತ್ತದೆ. ದಿನಾಂಕ 27/07/2014ರಂದು ಸುಮಾರು 01:15 ಗಂಟೆಗೆ ಸದ್ರಿ ನಿವೇಶನದ ಗೋಡೆಯ ಮೇಲೆ ನೀರು ಬಿಳುತ್ತಿರುವುದರಿಂದ ಗೋಡೆಯು ಕುಸಿಯುವುದು ಎಂಬ ಭಯದಿಂದ ನೋಡಲು ಹೋಗಿದ್ದು ಯು ಯಶೋಧರವರ ನಿವೇಶನದ ಅಂಗಡಿಯ ಡೋರ್ ನಂ 9-3-105 ದರ ಮುಂಭಾಗದಲ್ಲಿ ಕಾರನ್ನು ನಿಲ್ಲಿಸಿ ಪರಿಶೀಲನೆ ಮಾಡುವಾಗ ಆರೋಪಿತರುಗಳಾದ ವಿಜಯ ನಾಯ್ಕ್ ರೊಂದಿಗೆ ಓಡಾಡುತ್ತಿರುವ ದೇವಿಚರಣ್, ಮಹೇಶ್ ಠಾಕೂರ್ ಹಾಗೂ ಮತ್ತಿಬ್ಬರೂ ಯು ಯಶೋಧರವರಲ್ಲಿ ಅಕ್ರಮವಾಗಿ ಬಂದು ನೀವು ಏನು ಮಾಡುತ್ತಾ ಇದ್ದಿರಿ ಎಂದು ಅವಾಚ್ಯ  ಶಬ್ದಗಳಿಂದ ಬೈದು ಮಹೇಶ ಠಾಕೂರುರ ಜೊತೆಯಲ್ಲಿದ್ದ ಮತ್ತೊಬ್ಬ ವ್ಯಕ್ತಿಯು ಯು ಯಶೋಧರವರ ಕಾರಿನ ಹಿಂಬದಿಯ ಗ್ಲಾಸ್ ಒಡೆದು ಸುಮಾರು ರೂಪಾಯಿ 20,000 ಮೌಲ್ಯದಷ್ಟು ನಷ್ಟ ಉಂಟು ಮಾಡಿರುತ್ತಾರೆ. ನಂತರ ಇದು ನಾವು ತೋರಿಸಿದ ಸ್ಯಾಂಪಲ್ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂಬುದಾಗಿ ಯು ಯಶೋಧರವರಲ್ಲಿ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 249/14 ಕಲಂ 143, 147, 447, 504, 506, 109 ಜೊತೆಗೆ  149 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: