Tuesday, March 04, 2014

Daily Crime Reported on 04/03/2014 At 07:00 Hrsಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ದಿನಾಂಕ 03/03/2014 ರಂದು ರಾತ್ರಿ 3:00 ಗಂಟೆಗೆ ಶೀನ ಕುಂದರ್ ತಂದೆ: ಐತ ಅಮೀನ್ ವಾಸ: ಹಂಗಾರಕಟ್ಟೆ ಬಾಳಕುದ್ರು ಗ್ರಾಮ ಉಡುಪಿ ತಾಲೂಕು ಇವರು  ಉಡುಪಿ ತಾಲೂಕು ಬಾಳಕುದ್ರು ಗ್ರಾಮದ ಹಂಗಾರಕಟ್ಟೆ ಹೊಳೆಯಲ್ಲಿ ಅಣ್ಣಪ್ಪ ಮರಕಲ ಹಾಗೂ ಇತರರೊಂದಿಗೆ ಮೀನುಗಾರಿಕಾ ದೋಣಿಯಲ್ಲಿ ಮೀನುಗಾರಿಕೆಗೆ ಹೋಗಿದ್ದು ಸಮಯ ಸುಮಾರು 3:45 ಗಂಟೆಗೆ ಮೀನುಗಾರಿಕೆಯಲ್ಲಿ ತೋಡಗಿರುವಾಗ ಅಣ್ಣಪ್ಪ ಮರಕಲ 54 ವರ್ಷ ಎಂಬವರು ಮೂರ್ಚೆ ತಪ್ಪಿ ಬಿದ್ದವರನ್ನು ಕೂಡಲೇ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಬೆಳಗಿನ ಜಾವ 4:45 ಗಂಟೆಗೆ ದಾಖಲಿಸಿದ್ದು ಪರೀಕ್ಷಿಸಿದ ವೈಧ್ಯಾಧಿಕಾರಿಗಳು ಅಣ್ಣಪ್ಪ ಮರಕಲರವರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಶೀನ ಕುಂದರ್ ಇವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಪ್ರಕರಣ ಕ್ರಮಾಂಕ:07/14 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
ವರದಕ್ಷಣೆ ಕಿರುಕುಳ ಪ್ರಕರಣ 
  • ಕೋಟ: ಪಿರ್ಯಾದಿ ಶ್ರೀಮತಿ ವಿ ಜ್ಯೋತಿ ಶೆಡ್ತಿ ದಿ.ಶ್ರೀ ವೆಂಕಪ್ಪ ಶೆಟ್ಟಿಯವರ ಮಗಳು .ಚಂದ್ರಶೇಖರ ಶೆಟ್ಟಿಯವರ ಪತ್ನಿ, ಉಳ್ತೂರು -ಹೊಸಮನೆ , ಉಳ್ತೂರು ಅಂಚೆ, ಕುಂದಾಪುರ ತಾಲೂಕು ಇವರು ದಿನಾಂಕ 25/05/2009 ರಂದು ಆಪಾದಿತ 1 ನೇ ಚಂದ್ರಶೇಖರ ಶೆಟ್ಟಿ, ಮಹಾಬಲ ಶೆಟ್ಟಿಯವರ ಮಗ ಇವರನ್ನು ಹಿಂದೂ ಸಂಪ್ರದಾಯದಂತೆ ಗುರುಹಿರಿಯರ ಸಮಕ್ಷಮ ವಿವಾಹವಾಗಿದ್ದು, ವಿವಾಹ ಪೂರ್ವದಲ್ಲಿ ಆಪಾದಿತರಾದ 1) ಚಂದ್ರಶೇಖರ ಶೆಟ್ಟಿ  ಮಹಾಬಲ ಶೆಟ್ಟಿಯವರ ಮಗ, 2)ಹಾಬಲ ಶೆಟ್ಟಿ, 3)ಶ್ರೀಮತಿ  ಲಕ್ಷ್ಮೀ ಶೆಡ್ತಿ ಮಹಾಶೆಟ್ಟಿಯವರ ಹೆಂಡತಿ 4) ಬಾಬು ಶೆಟ್ಟಿ, ಮಹಾಬಲ ಶೆಟ್ಟಿಯವರ ಮಗ 5) ಪ್ರಭಾಕರ ಶೆಟ್ಟಿ ,ಮಹಾಬಲ ಶೆಟ್ಟಿಯವರ ಮಗ 6) ಕುಮಾರಿ ಶಿಲ್ಪಾ  ಇವರುಗಳು ಕುಂದಾಪುರ ತಾಲೂಕು ಉಳ್ತೂರು ಗ್ರಾಮದ ಹೊಸಮನೆ ಎಂಬಲ್ಲಿರುವ ಪಿರ್ಯಾದಿದಾರರ ಮನೆಗೆ ಬಂದು 8 ಲಕ್ಷ ರೂಪಾಯಿ ವರದಕ್ಷಿಣೆ ನೀಡಬೇಕಾಗಿ ಪಿರ್ಯಾದಿದಾರರ ಅಣ್ಣ ಸುಧಾಕರ ಶೆಟ್ಟಿಯವರ ಬಳಿ ಕೇಳಿದ್ದು ಅವರು ಕೊಡಲು ನಿರಾಕರಿಸಿದಾಗ ಮದುವೆ ಪ್ರಸ್ತಾಪವನ್ನು ಮುರಿಯುವುದಾಗಿ ಬೆದರಿಕೆ ಹಾಕಿದಾಗ ನಿರುಪಾಯರಾಗಿ 5 ಲಕ್ಷ ರೂಪಾಯಿ ವರದಕ್ಷಿಣೆ ನೀಡಿರುತ್ತಾರೆ. ಮದುವೆಯಾದ ಎರಡು ತಿಂಗಳ ನಂತರ ಆರೋಪಿಗಳು ತಂದ ವರದಕ್ಷಿಣೆ ಕಡಿಮೆಯಾಯಿತೆಂದು ಪಿರ್ಯಾದಿದಾರರಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು ಹೆಚ್ಚಿನ ವರದಕ್ಷಿಣೆ ತಾರದೇ ಮನೆಯೊಳಗೆ ಕಾಲಿಟ್ಟರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಶ್ರೀಮತಿ ವಿ ಜ್ಯೋತಿ ಶೆಡ್ತಿ ಇವರು ನೀಡಿದ ದೂರಿನಂತೆ ಕೋಟ  ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 76/2014 ಕಲಂ: 498(ಎ) 504 323 506 ಜೊತೆಗೆ 149 ಐ.ಪಿ.ಸಿ. ಮತ್ತು ಕಲಂ 3, 4 ಡಿ.ಪಿ.ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

  • ಕೋಟ: ದಿನಾಂಕ 03/03/2014 ರಂದು ಪಿರ್ಯಾದಿ ಚಂದ್ರಕಾಂತ ಮೊಗವೀರ 29 ವರ್ಷ ತಂದೆ: ನಾರಾಯಣ ಮರಕಲ ವಾಸ: ಸಣ್ಣಮ್ಮಜ್ಜಿ ಮನೆ, ಕೊರವಾಡಿ ಕುಂಭಾಶಿ ಗ್ರಾಮ ಕುಂದಾಪುರ ತಾಲೂಕು ಇವರು  ತನ್ನ ಅತ್ತಿಗೆ ಸವಿತ, ಮೈದುನಿ ಶೈಲಜರವರೊಂದಿಗೆ ಕುಂದಾಪುರದಿಂದ ಬಸ್ಸಿನಲ್ಲಿ ಬಂದು ಸಂಜೆ 5-15 ಗಂಟೆಗೆ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಕಣ್ಣುಕೆರೆ ಆಭರಣ ಮೋಟಾರ್ಸ್ ಎದುರು ರಾ.ಹೆ.66 ರಲ್ಲಿ ನಿಂತುಕೊಂಡಿರುವಾಗ ಆರೋಪಿಯು ಕೆ.ಎ.20 ಸಿ-4277 ನೇ ಟಿಪ್ಪರ್ ಲಾರಿಯನ್ನು ಕುಂದಾಪುರ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರಾ ಎಡ ಭಾಗಕ್ಕೆ ಚಲಾಯಿಸಿಕೊಂಡು ಬಂದು ಮಣ್ಣು ರಸ್ತೆಯಲ್ಲಿ ನಿಂತಿದ್ದ ಪಿರ್ಯಾದಿದಾರರ ಮೈದುನಿ ಶೈಲಜ (22) ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಶೈಲಜರವರಿಗೆ ಸಾದಾ ಸ್ವರೂಪದ ರಕ್ತಗಾಯವಾಗಿದ್ದಾಗಿದೆ.  ಈ ಬಗ್ಗೆ ಚಂದ್ರಕಾಂತ ಇವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 77/2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: