Tuesday, March 04, 2014

Daily Crime Reported on 04/03/2014 at 17:00 Hrs.ಹಲ್ಲೆ ನಡೆಸಿ, ಜೀವ ಬೆದರಿಕೆ ನೀಡಿದ ಪ್ರಕರಣ

  • ಶಿರ್ವಾ: ದಿನಾಂಕ 02/03/2014 ರಂದು ಸಂಜೆ 19:15 ಗಂಟೆಗೆ ಉಡುಪಿ ತಾಲೂಕು ಪಿಲಾರು ಗ್ರಾಮದ ಮುದರಂಗಡಿಯ ಗ್ರುಟ್ಟೋ ಎಂಬಲ್ಲಿ ತನಗೆ ಮಕ್ಕಳಿಲ್ಲ ಎಂದು ಅಪ ಪ್ರಚಾರ ಮಾಡುತ್ತಿಯಾ ಎಂದು ಆರೋಪಿ ಜೋಸೇಫ್‌  ಡಿಸೋಜ ಎಂಬವರು ಪಿರ್ಯಾದಿದಾರರಾದ ಸಂತಾನ ಮಥಾಯಸ್‌‌ (83) ತಂದೆ ದಿವಂಗತ ರುಜಾರಿಯೋ ಮಥಾಯಸ್‌  ವಾಸ ಮೋತಿ ನಿವಾಸ, ಪಿಲಾರು ಅಂಚೆ, ಪಿಲಾರು ಗ್ರಾಮ ಉಡುಪಿ ತಾಲೂಕು ಎಂಬವರಿಗೆ ಕೈಗಳಿಂದ ಹೊಡೆದು, ನಿನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಸಂತಾನ ಮಥಾಯಸ್‌‌ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/2014 ಕಲಂ 323,506 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು  

  • ಕಾಪು: ಪಿರ್ಯಾದಿದಾರರಾದ ಮಲ್ಲಾಪ್ಪ (35) ತಂದೆ ಹನುಮಂತ ವಾಸ ಮಣ್ಣೆಗೆರಿ ಗ್ರಾಮ, ಬೆಳಗಿ ತಾಲೂಕು ಬಾಗಲಕೋಟೆ ಜಿಲ್ಲೆ ಎಂಬವರ ಅಣ್ಣನಾದ ಯಲ್ಲಪ್ಪ ಪ್ರಾಯ 57 ವರ್ಷ ಎಂಬವರು ಬಾಗಲಕೋಟೆ ಜಿಲ್ಲೆಯವರಾಗಿದ್ದು, ದಿನಾಂಕ 04.03.2014 ರಂದು ಬೆಳಿಗ್ಗೆ 7:00 ಗಂಟೆಗೆ ಕಟಪಾಡಿಯ ಯೆಣಗುಡ್ಡೆ ಗ್ರಾಮದ ನಾಗಬನ ರಸ್ತೆಯಲ್ಲಿರುವ ವಿಜಯ್ ಭಟ್ ಎಂಬುವವರ ಮನೆಯ ಗೇಟಿಗೆ ಹುರಿ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಮೃತರು ವಿಪರೀತ ಶರಾಬು ಸೇವನೆ ಮಾಡುವ  ಚಟದವರಾಗಿದ್ದು, ಯಾವುದೋ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಮಲ್ಲಾಪ್ಪರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 05/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

  • ಬ್ರಹ್ಮಾವರ: ಉಡುಪಿ ತಾಲೂಕು ಕೆಂಜೂರು ಗ್ರಾಮದ ಅಮುಜೆ ಎಂಬಲ್ಲಿ ಪಿರ್ಯಾದಿದಾರರಾದ ಕೆ ನಾಗಪ್ಪ ನಾಯ್ಕ (55) ತಂದೆ ಕೊರಗ ನಾಯ್ಕ ವಾಸ ಮನೆ ನಂಬ್ರ 4/196 ಎ ದಶರಥನಗರ ಮಣಿಪಾಲ ಎಂಬವರ ಅಣ್ಣನ ಮಗ ಪ್ರದೀಪ (22) ತಂದೆ ಸೋಮ ನಾಯ್ಕ ವಾಸ ಅಮುಜೆ ಕೆಂಜೂರು ಗ್ರಾಮ ಎಂಬವರು ದಿನಾಂಕ 03/03/2014 ರಾತ್ರಿ 10:00 ಗಂಟೆಯಿಂದ ದಿನಾಂಕ 04/03/2014 ಬೆಳಿಗ್ಗೆ 06:00 ಮದ್ಯದ ಅವಧಿಯಲ್ಲಿ ಖರ್ಚಿಗೆ ಹಣದ ಅಡಚಣೆಯಿಂದ ಅಥವಾ ಬೇರೆ ಯಾವುದೋ ವೈಯುಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಸಮೀಪದ ಗದ್ದುಗೆ ದೇವಸ್ಥಾನದ ಕಿಟಕಿಗೆ ಪಂಚೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಕೆ ನಾಗಪ್ಪ ನಾಯ್ಕ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 11/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

2 comments:

Anonymous said...

Any further proceedings in this case?

Anonymous said...

Sir please comment back