Monday, March 03, 2014

Daily Crime Reported on 03/03/2014 At 17:00 Hrsಅಸ್ವಾಭಾವಿಕ ಮರಣ ಪ್ರಕರಣ 


  • ಉಡುಪಿ ನಗರ: ದಿನಾಂಕ 03/03/2014 ರಂದು ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್ ಸ್ಥಳದ ಶ್ರೀನಿಲಯ ಎಂಬ ಮನೆಯ ಕಾಂಪೌಂಡ್ ಹೊರಗಡೆ ಅಪರಿಚಿತ ವ್ಯಕ್ತಿ ಮಲಗಿದ್ದಲ್ಲಿಯೇ ಮೃತಪಟ್ಟಿರುವುದನ್ನು ಬೆಳಗ್ಗೆ ಸುಮಾರು 09:00 ಗಂಟೆಗೆ ಪ್ರಶಾಂತ್ ಮಿನಜಗಿ, ತಂದೆ: ಭದ್ರಪ್ಪ ಮಿನಜಗಿ ವಾಸ: ಸೂಳಿಬಾವಿ ರೇಷ್ಮೆ ಇಲಾಖೆ ಹಿಂದೆ ಮನೆ, ಹನುಗುಂದ ತಾಲೂಕು, ಬಾಗಲಕೋಟೆ ಇವರು ನೋಡಿದ್ದು, ಆತ ಭಿಕ್ಷುಕನಂತೆ ಕಂಡು ಬರುತ್ತಿದ್ದು 2-3 ದಿನದಿಂದ ಮಲಗಿದಲ್ಲಿಯೇ ಇದ್ದಿದ್ದು. ಅಪರಿಚಿತ ವ್ಯಕ್ತಿ ಕಪ್ಪು ಮೈಬಣ್ಣ, ಸಾಧಾರಣ ಶರೀರ,ಕಪ್ಪು ತಲೆಕೂದಲು ಮತ್ತು ಕಪ್ಪುಮೀಸೆ ಹಾಗೂ ಕಾಫಿ ಬಣ್ಣದ  ಟೀ  ಶರ್ಟ್ ಮತ್ತು ಖಾಕಿ ಬಣ್ಣದ ಪ್ಯಾಂಟು ಧರಿಸಿರುತ್ತಾರೆ. ಈ ಬಗ್ಗೆ ಪ್ರಶಾಂತ್ ಮಿನಜಗಿ ಇವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಪ್ರಕರಣ ಕ್ರಮಾಂಕ:13/14 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
ಬೆದರಿಕೆ ಪ್ರಕರಣ 
  • ಕುಂದಾಪುರ: ಪಿರ್ಯಾದಿ ಸುರೇಂದ್ರ ಪೂಜಾರಿ ತಂದೆ: ಬಾಬು ಪೂಜಾರಿ ಚರ್ಚ ರೋಡ್ ಕಸಬಾ ಕುಂದಾಪುರ ತಾಲ್ಲೂಕು ಇವರು  ದಿನಾಂಕ 01/03/2014 ರಂದು ರಾತ್ರಿ 10:00 ಸುಮಾರಿಗೆ ಅಂಗಡಿ ಮುಚ್ಚುವ ಸಮಯದಲ್ಲಿ ರಮೇಶ ಮೊಗವೀರ,  ತಂದೆ ಮುತ್ತ ಮೊಗವೀರ ಮತ್ತು ಚೇತನ್‌ ಎಂಬವರಿಬ್ಬರು ಏಕಾ ಏಕಿ ಅಂಗಡಿಗೆ ಬಂದು ಪಿರ್ಯಾದಿದಾರರನ್ನು  ಕೊಂದು ಹಾಕುತ್ತೇನೆಂದು ಹೇಳಿ ಮೊಬೈಲ್ ಅಂಗಡಿ ತಂಪು ಪಾನಿಯ ಬಾಟ್ಲಿಯನ್ನು ರಸ್ತೆಗೆ ಎಸೆದು ಫಿರ್ಯಾದಿದಾರರನ್ನು ದೂಡಿ ಹಾಕಿರುತ್ತಾರೆ. ಈ ಬಗ್ಗೆ ಸುರೇಂದ್ರ ಪೂಜಾರಿ ಇವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 135/14 ಕಲಂ: 427, 506 ಜೊತೆಗೆ 34 ಐಪಿಸಿ ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಅಪಘಾತ ಪ್ರಕರಣ  
  • ಅಜೆಕಾರು: ದಿನಾಂಕ 02/03/14 ರಂದು ಬೆಳಿಗ್ಗೆ 10-45 ಗಂಟೆಗೆ ಮರ್ಣೆ ಗ್ರಾಮದ ಅಜೆಕಾರು ಜಂಕ್ಷನ್‌ ಬಳಿ ಆರೋಪಿ ಸುನಿಲ್‌ ಎಂಬವರು ತನ್ನ ಬಾಬ್ತು  ಕೆಎ 14 ಎ 9708 ನೇ ಇನ್ನೋವಾ ಕಾರನ್ನು ,ಹೆಬ್ರಿ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಬಂದು ಎದುರು ಬದಿಯಿಂದ ಸುದರ್ಶನ ಕುಲಾಲ್‌ ಎಂಬರು ಚಲಾಯಿಸಿ ಬರುತ್ತಿದ್ದ ಕೆಎ  20 ಆರ್‌ 6569 ನೇ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರ ಎಡಕೈ ಮೂಳೆ ಮುರಿತವಾಗಿರುವುದಲ್ಲದೆ ಬಲಬದಿಯ ಸೊಂಟಕ್ಕೆ ಜಖಂ ಉಂಟಾಗಿರುವುದಾಗಿದೆ.  ಈ ಬಗ್ಗೆ ಉದಯ ನಾಯ್ಕ್, ತಂದೆ: ನರಸಿಂಹ ನಾಯ್ಕ್, ವಾಸ: ರೆಂಜದ ಹತ್ತಿರ, ಹೆರ್ಮುಂಡೆ ಗ್ರಾಮ, ಇವರು ನೀಡಿದ ದೂರಿನಂತೆ ಅಜೆಕಾರು  ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 16/14, ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: