Thursday, February 27, 2014

Daily Crimes Reported as On 27/02/2014 at 07:00 Hrs



ಕಳವು ಪ್ರಕರಣ

  • ಕುಂದಾಪುರ: ದಿನಾಂಕ 26.02.14 ರಂದು ಬೆಳಿಗ್ಗೆ 10:00  ಘಂಟೆಗೆ  ಶ್ರೀಮತಿ ವನಿತಾ ಗಂಡ: ರತ್ನಕಾರ ಹವಲ್ತಾರ್ ವಾಸ: ಸಿದ್ದನಾಯಕನ ರಸ್ತೆ ಲಕ್ಷ್ಮಿ ನಿಲಯ ಕುಂದಾಪುರ ತಾಲೂಕು ಕಸಬಾ ಗ್ರಾಮ ಇವರು ಕುಂದಾಪುರ ತಾಲೂಕಿನ ಕಸಬಾ ಗ್ರಾಮದ ಸಿದ್ದನಾಯ್ಕನ ರಸ್ತೆಯಲ್ಲಿರುವ ಮನೆಗೆ  ಬೀಗ ಹಾಕಿ ಮಾಬುಕಳಕ್ಕೆ ಹೋಗಿದ್ದು ವಾಪಾಸು 13:00  ಘಂಟೆಗೆ  ಬಂದು ನೋಡುವಾಗ  ಯಾರೋ ಕಳ್ಳರು ಮನೆಯ  ಬಾಗಿಲಿನ  ಬೀಗವನ್ನು ಮುರಿದು ಒಳ ಪ್ರವೇಶಿಸಿ 10,000/- ರೂ ನಗದು ಹಣ  ಹಾಗೂ  1,00,000/-  ರೂ  ಮೌಲ್ಯದ  ಚಿನ್ನಾದ ಅಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಶ್ರೀಮತಿ ವನಿತಾ ಇವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 66/2014 ಕಲಂ: 454, 380  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ
  • ಬ್ರಹ್ಮಾವರ: ದಿನಾಂಕ: 24/02/2014 ರಂದು 16.00 ಗಂಟೆಗೆ ಉಡುಪಿ ತಾಲೂಕು ಕಾಡೂರು ಗ್ರಾಮದ ತಂತ್ರಾಡಿ ಬಾಯಾರ್ ಬೆಟ್ಟು ಎಂಬಲ್ಲಿ  ಆರೋಪಿತ ಕೃಷ್ಣ, ಕೆಎ-20-ಡಬ್ಲೂ-3458 ಮೋಟಾರು ಸೈಕಲ್ ಸವಾರ ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ-20-ಡಬ್ಲೂ-3458 ಅನ್ನು ಬಾರ್ಕೂರು ಕಡೆಯಿಂದ ಕಾಡೂರು ಕಡೆಗೆ ವೇಗವಾಗಿ ನಿರ್ಲಕ್ಷ್ಯತನದಿಂದ ಚಲಾಯಿಸಿ ನಾಯಿ ಅಡ್ಡ ಬಂದು ಒಮ್ಮೇಲೆ ಬ್ರೇಕ್  ಹಾಕಿದ ಪರಿಣಾಮವಾಗಿ ಮೋಟಾರು ಸೈಕಲ್ ಸಹಸವಾರರಾದ  ಗಂಗಾ ತಂದೆ: ಗೋವಿಂದ ನಾಯ್ಕ ವಾಸ: ಶ್ರೀ ರಾಮ ನಿಲಯ ತಂತ್ರಾಡಿ ಬಾಯಾರ್ ಬೆಟ್ಟು ಕಾಡೂರು ಗ್ರಾಮ ಉಡುಪಿ ತಾಲೂಕು  ಇವರು ಮೋಟಾರು ಸೈಕಲಿನಿಂದ ರಸ್ತೆಗೆ ಬಿದ್ದು ಬಲ ಭುಜಕ್ಕೆ ಮೂಳೆ ಮುರಿತದ ಗಾಯವಾಗಿರುವುದಾಗಿದೆ. ಈ ಬಗ್ಗೆ ಗಂಗಾ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 48/14 ಕಲಂ: 279,338 ಐಪಿಸಿ ಮತ್ತು ಕಲಂ; 134(ಬಿ) ಐ,ಎಂ.ವಿ.ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ: 26/02/2014 ರಂದು ಸಮಯ ಸುಮಾರು ಮದ್ಯಾಹ್ನ 04:00 ಗಂಟೆಗೆ ಕುಂದಾಪುರ  ತಾಲೂಕಿನ ಕಸಬಾ ಗ್ರಾಮದ ವಿನಾಯಕ  ಟಾಕೀಸಿನ ಬಳಿ ರಾ.ಹೆ 66 ರಲ್ಲಿ  ಆಪಾದಿತ KA-20-EB-6765 ನೇಯ ಮೋಟರ್ ಸೈಕಲ್ ಸವಾರ ಬೈಕನ್ನು ಕುಂದಾಪುರ ದಿಂದ ತೆಕ್ಕಟ್ಟೆ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕುಂದಾಪುರ ದಿಂದ ಕೋಡಿ ಕಡೆಗೆ ಪಿರ್ಯಾದಿ ಜಗನ್ನಾಥ ಪ್ರಾಯ; 5೦   ವರ್ಷ ತಂದೆ: ದಿ:ವೆಂಕಪ್ಪ ವಾಸ: ಹಾವಳಿ ಮನೆ,ಚರ್ಚ್ ರೋಡ್, ಕಸಬಾ, ಕುಂದಾಪುರ ಇವರು ಸೂಚನೆ ನೀಡಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA20-Q-1411 ನೇ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಲೆಗೆ ರಕ್ತಗಾಯವಾಗಿ ಕುಂದಾಪುರದ  ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಜಗನ್ನಾಥ ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 36/14 ಕಲಂ: 279,337 ಐಪಿಸಿ ಮತ್ತು ಕಲಂ; 134 (ಎ) (ಬಿ) ಐ,ಎಂ.ವಿ.ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.
ಮಟ್ಕಾ ಪ್ರಕರಣ
  • ಕುಂದಾಪುರ: ಪ್ರಸಾದ ಡಿ ಕವರಿ ಪಿಎಸ್ಐ, ಕುಂದಾಪುರ ಪೊಲಿಸ್ ಠಾಣೆ ಇವರು ದಿನಾಂಕ 26/02/14 ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಿಂಧೂರ ಬಾರ್ ಬಳಿ ಒಬ್ಬ ವ್ಯಕ್ತಿ ಮಟ್ಕಾ ಜುಗಾರಿ ಆಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದಂತೆ ಸಿಬ್ಬಂದಿಯವರೊಂದಿಗೆ ದಾಳಿನಡೆಸಿ ಆಪಾದಿತ ಶಾಂತರಾಮ ಶೆಟ್ಟಿ ಈತನನ್ನು  ದಸ್ತಗಿರಿ ಮಾಡಿ ಆತನು ಮಟ್ಕಾ  ಜುಗಾರಿ ಆಟಕ್ಕೆ ಉಪಯೋಗಿಸಿದ ಮಟ್ಕಾ ಚೀಟಿ, ಬಾಲ್ ಪೆನ್ ಹಾಗೂ ನಗದು ರೂಪಾಯಿ 490/- ಮತ್ತು ಮೊಬೈಲ್ ಪೋನ್ ಅನ್ನು ಸ್ವಾಧೀನಪಡಿಸಿಕೊಂಡು ಠಾಣಾ ಅಪರಾಧ ಕ್ರಮಾಂಕ 67 /2014 ಕಲಂ: 78 (1)(111) ಕೆಪಿ ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಪಡುಬಿದ್ರಿ: ನಾರಾಯಣ ತಂದೆ: ಶಿವ ಪೂಜಾರಿ ವಾಸ: ಕೆರೆಕಾಡು ಬೆಳ್ಳಿಯಾರು  ಗ್ರಾಮ, ಮುಲ್ಕಿ, ಮಂಗಳೂರ ಇವರ ಹೆಂಡತಿಯಾದ ಶಕುಂತಳು, 38 ವರ್ಷ ಎಂಬವರು ಸುಮಾರು 15 ದಿನಗಳ ಹಿಂದೆ ಮನೆಯ ಬಳಿ ಬಟ್ಟೆ ಒಗೆಯಲು ಹೋಗಿದ್ದ ವೇಳೆ ಬಿದ್ದು ತಲೆಗೆ ಗಾಯವಾಗಿದ್ದು, ಅವರಿಗೆ ಕುಡಿತದ ಚಟವಿದ್ದು, ಅವರು ನಂದಿಕೂರು ಹೇಮಂತ ಭಂಡಾರಿಯವರ ಮನೆ ಕೆಲಸಕ್ಕೆ ಹೋಗುತ್ತಿದ್ದು, ದಿನಾಂಕ. 26.02.2014 ರಂದು ನಂದಿಕೂರು ಹೇಮಂತ ಭಂಡಾರಿರವರ ಮನೆಯಲ್ಲಿ ಕೆಲಸಕ್ಕೆ ಇದ್ದ ಸಮಯದಲ್ಲಿ ಸಂಜೆ 6:00 ಗಂಟೆಗೆ ಅವರಿಗೆ ಅಸೌಖ್ಯ ಹೆಚ್ಚಾಗಿ ನಡೆದಾಡಲು ಆಗದ ಕಾರಣ ವೈಧ್ಯಾಧಕಾರಿಯವರನ್ನು ಮನೆಗೆ ಕರೆಸಿ ಪರೀಕ್ಷಿಸಿದಲ್ಲಿ ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿ, ಅವರು ಹೃದಯಘಾತ ಇಲ್ಲವೇ ತಲೆಗೆ ಆದ ಗಾಯದಿಂದ ಔಷಧಿ ತೆಗೆದು ಕೊಳ್ಳದೇ ಶರಬು ಕುಡಿಯುತ್ತಿದ್ದ ಕಾರಣದಿಂದ ತಲೆಯ ಗಾಯ ಹೆಚ್ಚಾಗಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ನಾರಾಯಣ  ಇವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 05/14 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: