Thursday, February 27, 2014

Daily Crimes Reported as On 27/02/2014 at 17:00 Hrs


ಅಪಘಾತ ಪ್ರಕರಣ
  • ಬೈಂದೂರು:ದಿನಾಂಕ 25/02/2014 ರಂದು ಪಿರ್ಯಾದಿದಾರರಾದ ಶರತ್ ಪೂಜಾರಿ (23) ತಂದೆ:ದಿವಂಗತ ಬಾಬು ಪೂಜಾರಿ ವಾಸ: ಸಾಲಿಯಾರ ಬೆಟ್ಟು, ಕಾರ್ಕಡ ಗ್ರಾಮ ಉಡುಪಿ ತಾಲೂಕುರವರು ತನ್ನ ಸ್ನೇಹಿತ ಆರೋಪಿ ಶಂಕರ ಎಂಬವನು ಸವಾರಿ ಮಾಡಿಕೊಂಡಿದ್ದ ಮೋಟಾರ್ ಸೈಕಲ್ ನಂಬ್ರ ಕೆಎ 20 ಎಕ್ಸ್‌ 2607 ನೇದರಲ್ಲಿ ಸಹಸವಾರರಾಗಿ ಕುಳಿತುಕೊಂಡು ಹೆಮ್ಮಾಡಿಯಿಂದ ರಾಷ್ಟ್ರೀಯ ಹೆದ್ದಾರಿ 66 ನೇದರಲ್ಲಿ ಹೊರಟು ಆರೋಪಿ ಶಂಕರ ತನ್ನ ಮೋಟಾರ್ ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ರಾತ್ರಿ 08:00 ಗಂಟೆಗೆ ಉಪ್ಪುಂದ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಖಮಂಟಪದ ಬಳಿ ತಲುಪುವಾಗ್ಗೆ ನಾಯಿ ಅಡ್ಡ ಬಂದುದರಿಂದ ಒಮ್ಮೆಲೇ ಬ್ರೇಕ್ ಹಾಕಿ ಆಯ ತಪ್ಪಿ ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಶರತ್ ಪೂಜಾರಿರವರು ಗಾಯಗೊಂಡಿರುತ್ತಾರೆ. ಈ ಬಗ್ಗೆ ಶರತ್ ಪೂಜಾರಿರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 42/2014 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ
  • ಹೆಬ್ರಿ:ಪಿರ್ಯಾದಿದಾರರಾದ ಶ್ರೀಮತಿ ರತ್ನ (48) ಗಂಡ:ಮಂಜುನಾಥ ಕುಲಾಲ್‌, ವಾಸ:ರತ್ನ ನಿಲಯ, ಹೊಯಿಗೆ ಬೇಳಾರ್‌, ಸಂತೆಕಟ್ಟೆ, ಕಳ್ತೂರು ಗ್ರಾಮ, ಉಡುಪಿ ತಾಲೂಕುರವರ ಗಂಡ ಮಂಜುನಾಥ ಕುಲಾಲ್‌ (60) ರವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ:24/02/14 ರಂದು ಬೆಳಿಗ್ಗೆ 07:45 ಗಂಟೆಗೆ ಉಡುಪಿ ತಾಲೂಕು ಕಳ್ತೂರು ಗ್ರಾಮದ ಸಂತೆಕಟ್ಟೆ, ಹೊಯಿಗೆ ಬೇಳಾರ್‌ನ ತನ್ನ ಮನೆಯಿಂದ ಬ್ರಹ್ಮಾವರದ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಈವರೆಗೆ ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಹಾಗೂ ಇತರ ನೆಂಟರಿಷ್ಟರ ಮನೆಗಳಲ್ಲಿ ಹುಡಕಾಡಿದಲ್ಲಿ ಪತ್ತೆಯಾಗದೇ ಇದ್ದು, ಸದ್ರಿಯವರನ್ನು ಪತ್ತೆ ಮಾಡಿ ಕೊಡಬೇಕಾಗಿ ಎಂಬುದಾಗಿ ಶ್ರೀಮತಿ ರತ್ನರವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 17/2014, ಕಲಂ:ಮನುಷ್ಯ ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: