Wednesday, February 26, 2014

Daily Crimes Reported as On 26/02/2014 at 19:30 Hrs



ಇತರೇ ಪ್ರಕರಣ

  • ಹಿರಿಯಡ್ಕ: ದಿನಾಂಕ 26/02/2014 ರಂದು ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಶೇಖರ  ರವರು ಸಿಬ್ಬಂದಿಯವರೊಂದಿಗೆ ಅರಣ್ಯ ತಕ್ಷೀರು ಪತ್ತೆಯ ಬಗ್ಗೆ ಗಸ್ತು ಕರ್ತವ್ಯದಲ್ಲಿ ಇರುವಾಗ ದೊರೆತ ಖಚಿತ ವರ್ತಮಾನದಂತೆ ಬೆಳ್ಳಂಪಳ್ಳಿ ಗ್ರಾಮದ ಕುಕ್ಕಿಕಟ್ಟೆ ದರ್ಖಾಸು ಮನೆ ವಾಸಿ ಶ್ರೀ ಲಕ್ಷ್ಮಣ ನಾಯ್ಕ ಪ್ರಾಯ: 46 ವರ್ಷ ತಂದೆ: ದಿ: ಸೋಮಯ್ಯ ನಾಯ್ಕ ವಾಸ: ಕುಕ್ಕಿಕಟ್ಟೆ ದರ್ಕಾಸು ಮನೆ ಬೆಳ್ಳಂಪಳ್ಳಿ ಗ್ರಾಮ ಎಂಬವರು ಅಕ್ರಮವಾಗಿ ಯಾವುದೇ ದಾಖಲೆ ಇಲ್ಲದೇ ವಯರ್ ನೆಟ್ ಪಂಜರದಲ್ಲಿ ಹಾಗೂ ಸಿಮೆಂಟು ಇಟ್ಟಿಗೆಯಿಂದ ನಿರ್ಮಿಸಿದ ಶೆಡ್ಡಿನಲ್ಲಿ ಒಂದು ಮುಳ್ಳು ಹಂದಿ ಮತ್ತು ಎರಡು ಕಾಡುಬೆಕ್ಕುಗಳನ್ನು ಬಂಧಿಸಿಟ್ಟ ಸ್ಥಳಕ್ಕೆ ದಾಳಿ ನಡೆಸಿ ಸದ್ರಿ ಮುಳ್ಳುಹಂದಿ ಮತ್ತು ಎರಡು ಕಾಡುಬೆಕ್ಕುಗಳನ್ನು ಕಾನೂನು ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿದ್ದು, ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 22/2014 U/s 39.40,50, ಜೊತೆಗೆ 51 ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ಯಂತೆ ಪ್ರಕರಣ ದಾಖಲಾಗಿರುತ್ತದೆ.


ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಮಂಜುನಾಥ  ತಂದೆ:  ಶೇಖರ ಭಂಡಾರಿ  ವಾಸ:   ಜನತಾ ಕಾಲೋನಿ, ಕುತ್ಪಾಡಿ, ಉಡುಪಿ ಇವರ ಚಿಕ್ಕಮ್ಮನ ಮಗನಾದ ಪ್ರವೀಣ್‌ ರವರು ಪೋನ್ ಮಾಡಿ ಮಧ್ಯಾಹ್ನ ತನ್ನ ಬೈಕು ನಂಬ್ರ. ಕೆಎ-20-ಎಕ್ಸ್- 5950 ರಲ್ಲಿ ಮಣಿಪಾಲದಿಂದ ಉಡುಪಿಗೆ ಬರುವಾಗ ಸಮಯ ಸುಮಾರು 2:30 ಗಂಟೆಗೆ ಕುಂಜಿಬೆಟ್ಟುವಿನ ಶಾರದಾ ಕಲ್ಯಾಣ ಮಂಟಪದ ಜಂಕ್ಷನ್ ತಲುಪಿದಾಗ ಉಡುಪಿ ಕಡೆಯಿಂದ ಕಾರು ನಂಬ್ರ. ಕೆಎ-04-ಎಂಇ 7764 ನೇದರ ಚಾಲಕ ಮಹೇಶ್‌ ಹೆಬ್ಬಾರ್ ರವರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜಂಕ್ಷನ್ ನಲ್ಲಿ ಒಮ್ಮೇಲೆ ಬೀಡಿನ ಗುಡ್ಡೆ ಕಡೆಗೆ ತಿರುಗಿಸಿ ಡಿಕ್ಕಿ ಹೊಡೆದಿರುವುದಾಗಿಯೂ, ಕಾರಿನ ಚಾಲಕ ಹಾಗೂ ಇತರರು ಸೇರಿ ಒಂದು ಆಟೋ ರಿಕ್ಷಾದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿಯೂ ತಿಳಿಸಿದ ಮೇರೆಗೆ ಕೂಡಲೇ ಪಿರ್ಯಾದಿದಾರರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹೋಗಿ ನೋಡಲಾಗಿ ಪ್ರವೀಣ್ ರವರ ಬಲಕಾಲಿಗೆ ಪೆಟ್ಟಾಗಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದು,  ಈ ಅಪಘಾತಕ್ಕೆ ಕಾರು ನಂಬ್ರ. ಕೆಎ-04-ಎಂಇ 7764 ನೇದರ ಚಾಲಕನಾದ ಮಹೇಶ್‌ ಹೆಬ್ಬಾರ್ ರವರ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೆ ಕಾರಣವಾಗಿರುತ್ತದೆ ಎಂಬುದಾಗಿ ಮಂಜುನಾಥ ಇವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 20/2014 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 25/02/2014 ರಂದು ಪಿರ್ಯಾದಿ ಪ್ರಸಾದ ಜಿ ರಾವ್ ತಂದೆ: ದಿ. ಜನಾರ್ಧನ್ ರಾವ್ ವಾಸ:ಮನೆ ನಂಬ್ರ 3-415 ರಾಮ್ ದೇವ್ ಹೋಟೆಲ್  ಬಡಾ ಎರ್ಮಾಲ್ ಉಡುಪಿ ಇವರು ತಮ್ಮ ಬಾಬ್ತು ಕಾರು ನಂ‌ಬ್ರ ಎಮ್‌.ಎಚ್‌.43-ವಿ -7368ನೇದನ್ನು ಚಲಾಯಿಸಿಕೊಂಡು  ಸುಮಾರು ರಾತ್ರಿ 10-15 ಗಂಟೆಗೆ ರಾ.ಹೆ.66 ರಲ್ಲಿ ಮೂಳೂರು ನಾರಾಯಣ ಗುರು ಮಂದಿರ ತಲುಪುತಿದಂತೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆಕೆ.ಎ.19 ಝಡ್‌.5061 ನೇ ಕಾರನ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಒಮ್ಮೇಲೆ ಬಲ ಬದಿಗೆ ಬಂದು ಪಿರ್ಯಾದಿದಾರರ ಕಾರಿನ ಬಲ ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಲೆಗೆ ರಕ್ತಗಾಯವಾಗಿರುತ್ತದೆ ಹಾಗೂ ಎಡ ಕೈಗೆ ಒಳಗುದ್ದಿದ ನೋವು ಉಂಟಾಗಿರುತ್ತದೆ.ಮತ್ತು ಕಾರಿನಲ್ಲಿದ ಇತರ ಪ್ರಯಾಣಿಕರಿಗೆ ಗಾಯವಾಗಿರುತ್ತದೆ. ಈ ಬಗ್ಗೆ ಪ್ರಸಾದ ಜಿ ರಾವ್ ಇವರು ನೀಡಿದ ದೂರಿನಂತೆ ಕಾಪು  ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 67/2014 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
     

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಫಿರ್ಯಾದಿ ಸುಧಾಕರ ಶೆಟ್ಟಿ ತಂದೆ:ದಿ.ರಾಘವ ಶೆಟ್ಟಿ ವಾಸ:ತೆಂಕುಬೆಟ್ಟುಕಾಡುಹೊಳೆ ಮುನಿಯಾಲು ವರಂಗ ಗ್ರಾಮ ಇವರ ಮಗ ಸುಜಯ ಶೆಟ್ಟಿಯವರು ವಿಪರೀತ ಮದ್ಯ ಸೇವನೆ ಮಾಡುವ ಚಟವನ್ನು ಹೊಂದಿದ್ದು ಸರಿಯಾಗಿ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇರುತ್ತಿದ್ದುದಲ್ಲದೇ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು ಇದೇ ಕಾರಣದಿಂದ ಮೃತರು ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 25/02/2014 ರಂದು ರಾತ್ರಿ 09:00 ಗಂಟೆಯಿಂದ ದಿನಾಂಕ 26/02/14 ರಂದು ಬೆಳಿಗ್ಗೆ 07:00 ಗಂಟೆಯ ಮಧ್ಯಾವಧಿ ಯಲ್ಲಿ ತನ್ನ ಮನೆಯಾದ ವರಂಗ ಗ್ರಾಮದ ಕಾಡುಹೊಳೆ ತೆಂಕುಬೆಟ್ಟು ಎಂಬಲ್ಲಿ ಮನೆಯ ಹಿಂದುಗಡೆ ಇರುವ ಮರದ ಗೆಲ್ಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಸುಧಾಕರ ಶೆಟ್ಟಿ ಇವರು ನೀಡಿದ ದೂರಿನಂತೆ ಹೆಬ್ರಿ  ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 02/14 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಮಲ್ಪೆ : ದಿನಾಂಕ 26/02/2014 ಪಿರ್ಯಾದಿ ಸಂದೀಪ್ ತಂದೆ ದಿ ಮಾಧವ ಸಾಲಿಯಾನ್ ದೇವಿಕೃಪಾ ಹನುಮಾನ್ ನಗರ ಕೊಳ ಮಲ್ಪೆ ಕೊಡವೂರು ಗ್ರಾಮ ಇವರ ಅಣ್ಣ ಸಂತೋಷ ಕುಂದರ್ ಪ್ರಾಯ 32 ವರ್ಷ ಎಂಬುವವರು ಕಾಮಧೇನು ಬೋಟಿನಲ್ಲಿ ಮೀನುಗಾರಿಕೆಗೆ ಮಲ್ಪೆ ಸಮುದ್ರದಲ್ಲಿ ಬೆಳಿಗ್ಗೆ 05:00 ಗಂಟೆಗೆ ಹೋದವರು ಸಮುದ್ರದಲ್ಲಿ ಮೀನುಗಾರಿಕೆ ಮಾಡಿಕೊಂಡಿರುವಾಗ  ಮಧ್ಯಾಹ್ನ 12:30 ಗಂಟೆ ಸಮಯಕ್ಕೆ ಆಯತಪ್ಪಿ ಬೋಟಿನಿಂದ ಕೆಳಗೆ ಬಿದ್ದು ಕಾಣೆಯಾಗಿದ್ದವರು ಸಂಜೆ 04:30 ಗಂಟೆಗೆ ಮಲ್ಪೆ ಬೀಚ್ ನ ಮುಂದೆ ಸಮುದ್ರದಲ್ಲಿ ಮೃತ ದೇಹವು  ದೊರೆತಿರುವುದಾಗಿದೆ. ಸಂತೋಷ ಕುಂದರ್ ಇವರು ಮೀನುಗಾರಿಕೆಗೆ ಹೋದವರು ಮೀನುಗಾರಿಕೆ ಮಾಡಿಕೊಂಡಿರುವಾಗ ಆಕಸ್ಮಿಕವಾಗಿ ಆಯ ತಪ್ಪಿ ಸಮುದ್ರದ ನೀರಿಗೆ ಬಿದ್ದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಸಂದೀಪ್ ಇವರು ನೀಡಿದ ದೂರಿನಂತೆ ಮಲ್ಪೆ  ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 10/14 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
     

No comments: