Wednesday, February 26, 2014

Daily Crimes Reported as On 26/02/2014 at 17:00 Hrsಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ: 25/02/2014 ರಂದು ಸಂಜೆ 5:00 ಗಂಟೆಗೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರ ಎಂಬಲ್ಲಿ ಕಾರ್ಕಳ ಉಡುಪಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಕಾರ್ಕಳ ಕಡೆಯಿಂದ  ಉಡುಪಿ ಕಡೆಗೆ ಮಧು ಚಲವಾದಿ ಓಮ್ನಿ ಕಾರು ನಂಬ್ರ ಕೆ ಎ 31 ಎಂ 6963 ನೇಯದರ ಚಾಲಕ ತನ್ನ ಬಾಬ್ತು ಮಾರುತಿ ಓಮ್ನಿ ಕಾರು ನಂಬ್ರ ಕೆ ಎ 31 ಎಂ 6963 ನೇಯದನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಜಾರ್ಕಳ ಕಡೆಯಿಂದ ಜೋಡುರಸ್ತೆ ಕಡೆಗೆ ರಸ್ತೆಯ ಎಡಬದಿಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂಬ್ರ ಕೆ ಎ 20 ಡಬ್ಲ್ಯು 9089 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ  ಗಂಗಾಧರ ಆಚಾರ್ಯ ಎಂಬವರು ಮೋಟಾರ್ ಸೈಕಲ್ ಸಮೇತ  ಬಿದ್ದು ತಲೆಗೆ ಗಂಭೀರ ಗಾಯವಾಗೊಂಡಿರುತ್ತಾರೆ. ನಂತರ ಗಾಯಾಳು ಗಂಗಾಧರ ಆಚಾರ್ಯ ಎಂಬವರನ್ನು ಚಿಕಿತ್ಸೆ ಬಗ್ಗೆ  ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು. ಚಿಕಿತ್ಸೆಯಲ್ಲಿದ್ದ ಗಂಗಾಧರ ಆಚಾರ್ಯ ಇವರು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ: 26/02/2014 ರಂದು ಬೆಳಿಗ್ಗೆ 9:45 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ರಾಘವೇಂದ್ರ ಆಚಾರ್ಯ (42), ತಂದೆ: ದಿ ಅಣ್ಣಯ್ಯ ಆಚಾರ್ಯ, ವಾಸ: ಇಂದಿರಾನಗರ ಮಾಳ ಮಲ್ಲಾರು ಗ್ರಾಮ, ಮಾಳ ಕಾರ್ಕಳ ತಾಲೂಕು ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 29/2014 ಕಲಂ:279, 304(ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


ಕಳವು ಪ್ರಕರಣ

  • ಕಾರ್ಕಳ: ದಿನಾಂಕ: 26/02/2014 ರಂದು 01:15 ಗಂಟೆಗೆ ಕಾರ್ಕಳ ತಾಲೂಕು ನೀರೆ ಗ್ರಾಮದ ಬೈಲೂರು ನೀರೆ ಜಡ್ಡು  ಮನೆ ಎಂಬಲ್ಲಿರುವ ಸುಕೇಶ್ ಶೆಟ್ಟಿ, ತಂದೆ: ದಿ ಸುಂದರ ಶೆಟ್ಟಿ ವಾಸ: ನೀರೆ ಜಡ್ಡುಮನೆ ನೀರೆ ಗ್ರಾಮ, ಬೈಲೂರು, ಕಾರ್ಕಳ ತಾಲೂಕು ಇವರ ಮನೆಯ ಬಳಿ ಇರುವ ದನದ ಹಟ್ಟಿಯಿಂದ ಯಾರೋ ಕಳ್ಳರು ಅವರಿಗೆ ಸಂಬಂಧಿಸಿದ 16,000 ರೂಪಾಯಿ ಮೌಲ್ಯದ  ಒಂದು ಕಂದು ಬಣ್ಣದ ದನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಸುಕೇಶ್ ಶೆಟ್ಟಿ ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 30/2014 ಕಲಂ: 380   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: ಗಣೇಶ ಆಚಾರಿ ತಂದೆ: ಹಿರಿಯಣ್ಣ ಆಚಾರಿ ವಾಸ: ಕೋಟೆ ಬಾಗಿಲು ತಲ್ಲೂರು ಇವರು ದಿನಾಂಕ 22/02/2014 ರಂದು ಬೆಳಿಗ್ಗೆ 9:00 ಗಂಟೆಗೆ ಕೆಲಸಕ್ಕೆಂದು ಶ್ರೀದೇವಿ ನರ್ಸಿಂಗ್ ಹೋಮ್ ಹತ್ತಿ ಅವರ ಬಾಬ್ತು KA20-Y-1303 ನೇ ಮೋಟಾರು ಸೈಕಲ್ ಅನ್ನು ನಿಲ್ಲಿಸಿ ಕೆಲಸಕ್ಕೆಂದು ತೆರಳಿದ್ದು ನಂತರ 10:00 ಗಂಟೆಗೆ ಕೆಲಸ ಮುಗಿಸಿ ಬಂದು ನೋಡಿದಾಗ ಮೋಟಾರು ಸೈಕಲ್ ಕಳವಾಗಿರುತ್ತದೆ. ಮೋಟಾರು ಸೈಕಲ್ ಮೌಲ್ಯ ಸುಮಾರು ರೂಪಾಯಿ 25.000/ಆಗಬಹುದು.  ಈ ಬಗ್ಗೆ ಗಣೇಶ ಆಚಾರಿ ಇವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 65/2014 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


No comments: