Friday, February 21, 2014

Daily Crimes Reported as On 21/02/2014 at 07:00 Hrs


ಅಪಘಾತ ಪ್ರಕರಣಗಳು
  • ಕುಂದಾಪುರ ಸಂಚಾರ:ದಿನಾಂಕ 20/02/2014 ರಂದು ಸಂಜೆ ಸುಮಾರು 4:45 ಗಂಟೆಗೆ ಕುಂದಾಪುರ ತಾಲೂಕು ತಲ್ಲೂರು ಗ್ರಾಮದ ತಲ್ಲೂರು  ಜಂಕ್ಷನ್  ಹತ್ತಿರದ  ದಿನಕರ  ಪ್ರಭು ಎಂಬವರ  ಹಿಟ್ಟಿನ  ಗಿರಣಿಯ ಹತ್ತಿರ  ರಾ.ಹೆ  66ಲ್ಲಿ ಆಪಾದಿತ ಕೆ. ಅಭಿಶೇಖರನ್‌  ಎಂಬವರು  KL 21-H-5697 ನೇ ಕಾರನ್ನು ಹೆಮ್ಮಾಡಿ ಕಡೆಯಿಂದ ತಲ್ಲೂರು ಕಡೆಗೆ ಅತೀವೇಗದಿಂದ  ಚಲಾಯಿಸಿಕೊಂಡು  ಬಂದು  ಆತನ  ಮುಂಭಾಗದಲ್ಲಿ ಹೋಗುತ್ತಿದ್ದ ವಾಹನವನ್ನು ಓವರ್‌‌ಟೇಕ್‌ ಮಾಡುವ ಭರದಲ್ಲಿ, ನಿರ್ಲಕ್ಷತನದಿಂದ ರಾ.ಹೆ 66 ರ ತೀರ ಬಲಬದಿಗೆ  ಚಲಾಯಿಸಿ, ತಲ್ಲೂರು ಕಡೆಯಿಂದ ಹೆಮ್ಮಾಡಿ  ಕಡೆಗೆ  ಹೋಗುತ್ತಿದ್ದ KA 20-J-7519  ನೇ ಎಂ-80  ದ್ವಿಚಕ್ರ  ವಾಹನಕ್ಕೆ ಎದುರುಗಡೆಯಿಂದ  ಡಿಕ್ಕಿ  ಹೊಡೆದು,  ಬಳಿಕ ಎಂ-80  ದ್ವಿಚಕ್ರ ವಾಹನದ ಹಿಂದಿದ್ದ  MH-09-BC- 6300 ಲಾರಿಗೆ ಡಿಕ್ಕಿ ಹೊಡೆದ  ಪರಿಣಾಮ, ಎಂ-80  ದ್ವಿಚಕ್ರ ವಾಹನದ ಸವಾರ ರಮೇಶ ರಸ್ತೆಗೆ ಎಸೆದು ತಲೆಗೆ ಹಾಗೂ ದೇಹದ ಇತರೆ ಅಂಗಾಂಗಗಳಿಗೆ ಗಂಭೀರ ಗಾಯವಾಗಿ, ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಹೋದಾಗ ಆಸ್ಪತ್ರೆಯ ವೈದ್ಯರು ರಮೇಶ ಮೃತಪಟ್ಟಿರುತ್ತಾರೆ ಎಂದು ತಿಳಿಸಿದ್ದು, ಡಿಕ್ಕಿ ಹೊಡೆದ  ಕಾರಿನ ಚಾಲಕ  ಕೆ. ಅಭಿಶೇಖರನ್‌  ಹಾಗೂ ಕಾರಿನಲ್ಲಿದ್ದ ಗೌತಮ್ ರಾಜ್ ಎಂಬವರು ಸಹ ಗಾಯಗೊಂಡು  ಚಿಕಿತ್ಸೆ ಬಗ್ಗೆ  ಕುಂದಾಪುರ  ಚಿನ್ಮಯಿ ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ. ಈ ಬಗ್ಗೆ ನವೀನ್ ಕುಮಾರ್ ಎಸ್‌ (34) ತಂದೆ:ಎಸ್‌ ಗಂಗಾಧರ ನಾಯಕ್ ವಾಸ: ರಥಭೀದಿ ತಲ್ಲೂರು ಗ್ರಾಮ, ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 32/2014 ಕಲಂ 279, 337, 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಉಡುಪಿ ಸಂಚಾರ:ಪಿರ್ಯಾದಿದಾರರಾದ ನಾಗರಾಜ (24) ತಂದೆ:ಮಂಜುನಾಥ ಆಚಾರ್ಯ ವಾಸ:ಜಯಲಕ್ಷ್ಮೀ ನಿಲಯ, ಪೆರ್ಡೂರು ಪಕ್ಕಲು ಮನೆ, ಪೆರ್ಡೂರು ಪೋಸ್ಟ್, ಉಡುಪಿ ರವರು ಉಡುಪಿ ಸೂಪರ್ ಬಜಾರ್ ನಲ್ಲಿ ಭೂಪೇಶ್‌ ಪಾಲನ್‌ರವರ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 19/02/2014 ರಂದು ಅಂಗಡಿಯಲ್ಲಿ ಕೆಲಸ ಮುಗಿಸಿ ಮಣಿಪಾಲ ಕಡೆಗೆ ತನ್ನ ಕಾರಿನಲ್ಲಿ ಹೋಗುತ್ತಿರುವಾಗ ನಾಗರಾಜರವರ ಮಾಲಕರ ಗೆಳೆಯರಾದ ಅಭಿಜಿತ್‌ರವರು ಫೋನ್ ಮಾಡಿ ಮಾಲಕರಾದ ಭೂಪೇಶ್‌ ಪಾಲನ್‌ರವರು ಇಂದ್ರಾಳಿ ರೈಲ್ವೆ ಸ್ಟೇಷನ್ ಹೋಗುವ ರಸ್ತೆ ಬಳಿ ಸಂಜೆ ಸುಮಾರು 5:30 ಗಂಟೆಗೆ ರಸ್ತೆ  ದಾಟಲು ನಿಂತಿರುವಾಗ, ದ್ಚಿಚಕ್ರ ವಾಹನ ನಂಬ್ರ. ಕೆಎ-20-ವೈ-3681 ನೇದನ್ನು ಅದರ ಸವಾರ ಅತುಲ್‌ರವರು ಸಹಸವಾರನೊಂದಿಗೆ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ರಸ್ತೆ ದಾಟಲು ನಿಂತಿದ್ದ ಪಾದಚಾರಿ ಭೂಪೇಶ್‌ ಪಾಲನ್‌‌ರವರಿಗೆ ಡಿಕ್ಕಿ ಹೊಡೆದಿದ್ದು, ಗಾಯಾಳುವನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದ ಮೇರೆಗೆ ನಾಗರಾಜರವರು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಹೋಗಿ ನೋಡಲಾಗಿ ಭೂಪೇಶ್‌ ಪಾಲನ್‌ರವರ ತಲೆಗೆ ತೀವೃ ಪೆಟ್ಟಾಗಿದ್ದು, ದ್ಚಿಚಕ್ರ  ಸವಾರ ಅತುಲ್‌ರವರಿಗೆ ಗಾಯವಾಗಿದ್ದು, ಸಹಸವಾರನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಅಪಘಾತಕ್ಕೆ ದ್ಚಿಚಕ್ರ  ವಾಹನ ನಂಬ್ರ. ಕೆಎ-20-ವೈ-3681 ನೇದರ ಸವಾರ ಅತುಲ್‌ರವರ ಅತೀವೇಗ ಹಾಗೂ ಅಜಾಗರೂಕತೆಯ ಸವಾರಿಯೆ ಕಾರಣವಾಗಿರುತ್ತದೆ ಎಂಬುದಾಗಿ ನಾಗರಾಜರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 18/2014  ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಹಲ್ಲೆ ಪ್ರಕರಣಗಳು
  • ಶಂಕರನಾರಾಯಣ:ದಿನಾಂಕ 20/02/2014 ರಂದು ಸಂಜೆ 07:45 ಗಂಟೆಗೆ ಪಿರ್ಯಾದಿದಾರರಾದ ರಾಜೇಂದ್ರ (28), ತಂದೆ:ಮುದ್ದಣ್ಣ ಶೆಟ್ಟಿ, ವಾಸ:ಮಲ್ಲಿಕಾ ನಿಲಯ, ಕಂಚಾರು, ಅಂಪಾರು ಗ್ರಾಮ, ಕುಂದಾಪುರ ತಾಲೂಕುರವರು ಕುಂದಾಪುರ ತಾಲೂಕು ಅಂಪಾರು ಗ್ರಾಮದ ಅಂಪಾರು ಪೇಟೆಯ ಬಳಿ ಇರಿಸಿದ್ದ ತನ್ನ ಬೈಕ್‌ನ್ನು ತೆಗೆದುಕೊಂಡು ಬರಲು ಹೋದಾಗ ವಸಂತ ಶೆಟ್ಟಿ ಎಂಬವರು ಹಿಂದಿನ ದ್ವೇಷದಿಂದ ರಾಜೇಂದ್ರರವರನ್ನು ಅಡ್ಡಗಟ್ಟಿ ತೆಡೆದು ನಿಲ್ಲಿಸಿ, ಏಕಾಏಕಿಯಾಗಿ ಹಲ್ಲೆ ನಡೆಸಿದ್ದು, ಅದೇ ಸಮಯ ಅಲ್ಲಿಗೆ ಬಂದ ಸಂದೀಪ ಮತ್ತು ಇನ್ನಿಬ್ಬರು ಕೂಡ ವಸಂತ ಶೆಟ್ಟಿಯೊಂದಿಗೆ ಸೇರಿ ರಾಜೇಂದ್ರರವರಿಗೆ ಕೈಯಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ರಾಜೇಂದ್ರರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 23/2014 ಕಲಂ 341, 504, 323, 506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ:ಪಿರ್ಯಾದಿದಾರರಾದ ಹಬೀಬ್ ತಂದೆ:ಇಸ್ಮಾಯಿಲ್ ವಾಸ:ಮೂಡುಗೋಪಾಡಿ ಗ್ರಾಮ, ಕುಂದಾಪುರರವರು ದಿನಾಂಕ 19/02/2014 ರಂದು ಸಂಜೆ 06:30 ಗಂಟೆಗೆ ಅವರ ಪರಿಚಯದ ಇಸಾಕ್ ಎಂಬುವರಿಗೆ ಪೋನ್ ಮಾಡಿ ತಾನು ಸಾಲವಾಗಿ ನೀಡಿದ್ದ 1000/- ರೂಪಾಯಿಯನ್ನು ವಾಪಾಸ್ಸು ನೀಡುವಂತೆ ಕೇಳಿದಾಗ, ಆಪಾದಿತ ಇಸಾಕ್ ಎಂಬವನು ಹಣ ವಾಪಾಸ್ಸು ಕೊಡುತ್ತೇನೆಂದು ಹಬೀಬ್‌ರವರ ಮನೆಯ ಹತ್ತಿರದ ಮೈದಾನದ ಬಳಿ ಬರಲು ಹೇಳಿದ್ದು, ಹಬೀಬ್‌ರವರು ಅಲ್ಲಿಗೆ ಹೋದಾಗ, ಅವರನ್ನು ನಿಲ್ಲಿಸಿ “ಯಾಕೆ ನೀನು ಹಣ ಕೇಳುತ್ತೀಯಾ” ಎಂದು ಹೇಳಿದಾಗ ಹಬೀಬ್‌ರವರು ಮಾತನಾಡದೇ ಅಲ್ಲಿಂದ ಹೋಗಿದ್ದು, ನಂತರ ಆಪಾದಿತನು ಹಬೀಬ್‌ರವರ ಮನೆಯ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ಬೈದು, “ನಾನು ನನ್ನ ಹೆಂಡತಿಯ ಬಳಿ ಇರುವಾಗ ಹಣ ಕೇಳುತ್ತೀಯಾ” ಎಂದು ಸಿಟ್ಟುಗೊಂಡು, ಹಬೀಬ್‌ರವರ ಎಡಕೆನ್ನೆಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ನೋವುಂಟು ಮಾಡಿದ್ದಾಗಿದೆ.ಈ ಬಗ್ಗೆ ಹಬೀಬ್‌ರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 54/2014 ಕಲಂ 323,504 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

     

No comments: