Thursday, February 20, 2014

Daily Crime Reports As On 20/02/2014 At 19:30 Hrsಕಳವು ಪ್ರಕರಣ

  • ಮಲ್ಪೆ: ಪಿರ್ಯಾದಿ ಯಾಸಿನ್ ತಂದೆ: ಖೆ.ಆರ್ ಜಫರಿ ವಾಸ: ಜನತಾನಗರ, ಸಾಗರ, ಶಿವಮೊಗ್ಗ ಜಿಲ್ಲೆ ಇವರು ದಿನಾಂಕ 19/02/2014 ರಂದು ತನ್ನ ಮಾವನ ಮನೆಯಾದ ಪಡುತೋನ್ಸೆ ಗ್ರಾಮದ ಹೂಡೆಯ  ಮತ್ತಜಾ ಮಂಜಿಲ್ ಗೆ ಬಂದಿದ್ದು ರಾತ್ರಿ 10:00 ಗಂಟೆಗೆ ಊಟ ಮಾಡಿ  ಎಲ್ಲರೂ ಮಲಗಿದ್ದು ರಾತ್ರಿ 12:30 ಗಂಟೆಗೆ ಪಿರ್ಯಾದಿದಾರರ ಹೆಂಡತಿ ಪಿರ್ಯಾದಿದಾರರನ್ನು ಎಬ್ಬಿಸಿದ್ದು, ಅವರ  ಹೆಂಡತಿಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಕಳವಾಗಿರುತ್ತದೆ. ಯಾರೋ ಕಳ್ಳರು ಕಿಟಕಿಯಿಂದ ಕೈ ಹಾಕಿ ಸರ ಎಳೆದಿದ್ದು, ಹಾಗೂ ಬ್ಯಾಗನ್ನು ಎಳೆದು ಅದರಲ್ಲಿದ್ದ ವಸ್ತಗಳನ್ನು ಚೆಲ್ಲಾಪಿಲ್ಲಿ ಮಾಡಿರುತ್ತಾರೆ. ಸದ್ರಿ ಬ್ಯಾಗನ್ನು ಎಳೆಯಲು ಒಂದು ಹುಕ್ ಆಕಾರದ ರಾಡ್ ನ್ನು ಬಳಸಿರುವುದಾಗಿದೆ. ಕಳವಾದ ಚಿನ್ನದ ಕರಿಮಣಿಸರವು 3.5 ಪವನಿದ್ದಾಗಿದೆ. ಅಂದಾಜು ಮೌಲ್ಯ 35000/- ರೂಪಾಯಿ ಆಗಬಹುದು. ಈ ಬಗ್ಗೆ ಯಾಸಿನ್ ಇವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 32/2014 ಕಲಂ: 457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 ಇತರೇ ಪ್ರಕರಣ 
  • ಉಡುಪಿ: ದಿನಾಂಕ:  15/02/2014 ರಂದು ರಾತ್ರಿ ವೇಳೆಯಲ್ಲಿ ಪಿರ್ಯಾದಿ ಡಿಸೋಜಾ ವಿಲ್ಬ್ರಿಯಾಸ್  ಇವನ್ ಗ್ಲೀಟ್ ,ವಾಸ : ವಿಲಿಲ್ ವಿಲ್ಲಾ, ಎನ್ ಹೆಚ್ 66 , ಬಲೈಪಾದೇ . 76 ಬಡಗುಬೆಟ್ಟು ,ಉಡುಪಿ  ಇವರ ನೆರೆಮನೆಯ ಜೇಮ್ಸ್ ಡಿಸಿಲ್ವಾ ರವರ ಮನೆಯಲ್ಲಿ ಯಾವುದೋ ಸಮಾರಂಭ ಇದ್ದು, ಸದ್ರಿ ಸಮಾರಂಭದಲ್ಲಿ ಪಿರ್ಯಾದಿದಾರರಿಗೆ ಹಾಗೂ ಸ್ವತ್ತಿಗೆ ಹಾನಿ ಮಾಡಬೇಕೆಂಬ ಉದ್ದೇಶದಿಂದ ನಿರ್ಲಕ್ಷ್ಯದಿಂದ ಪಿರ್ಯಾದಿದಾರರ ತೋಟಕ್ಕೆ ಪಟಾಕಿಗಳನ್ನು ಸಿಡಿಸಿ ಎರಡು ತೆಂಗಿನ ಸೋಗೆಗಳಿಗೆ ಬೆಂಕಿ ತಗಲಿದ್ದು, ಪಿರ್ಯಾದಿದಾರರಿಗೆ ನಷ್ಟ ಉಂಟಾಗಿರುತ್ತದೆ ಎಂಬಿತ್ಯಾದಿಯಾಗಿ. ಈ ಬಗ್ಗೆ ಉಡುಪಿ ನಗರ  ಠಾಣಾ ಅಪರಾಧ ಕ್ರಮಾಂಕ 47/14 ಕಲಂ: 426 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. No comments: