Friday, February 21, 2014

Daily Crime Reports As On 21/02/2014 At 17:00 Hrs

ಹಲ್ಲೆ ಪ್ರಕರಣ
  • ಬೈಂದೂರು:ದಿನಾಂಕ 14-02-2014 ರಂದು ಮಧ್ಯಾಹ್ನ ಸಮಯ 02-30 ಗಂಟೆಗೆ ಫಿರ್ಯಾದಿ ಹರೀಶ್ ದೇವಾಡಿಗ,  ತಂದೆ: ರಾಮ ದೇವಾಡಿಗ  ವಾಸ-ಹಿತ್ಲು ಮನೆ ಕೆರ್ಗಾಲ್ ಗ್ರಾಮ, ಕಂಬದಕೋಣೆಯಲ್ಲಿರುವ ತನ್ನ ಸ್ಟುಡಿಯೋದಲ್ಲಿರುವಾಗ ಆಪಾದಿತ ರಾಘು ಅಲ್ಲಿಗೆ ಬಂದು ಇವರನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಅಲ್ಲಿಂದ ಹೊರಟು ಹೋಗಿದ್ದು ನಂತರ ಫಿರ್ಯಾದಿದಾರರು ಸದ್ರಿ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲು ತನ್ನ ಸ್ನೇಹಿತ ಚಂದ್ರಕಾಂತ ಎಂಬುವವರನ್ನು ಕರೆದುಕೊಂಡು ಬರಲು ತನ್ನ ಸ್ಕೂಟಿಯಲ್ಲಿ ಕಂಬದಕೋಣೆ ಗ್ರಾಮದ ಜಟ್ಟಿಗೇಶ್ವರ ದೇವಸ್ಥಾನದ ಬಳಿ ಬಂದಾಗ ಮಧ್ಯಾಹ್ನ 03-00 ಗಂಟೆಗೆ ಆರೋಪಿಯು ಮೋಟಾರ್ ಸೈಕಲ್ ನಂಬ್ರ ಕೆಎ20ಇಬಿ2157ರಲ್ಲಿ ಬಂದು ಫಿರ್ಯಾದಿದಾರರನ್ನು ಅಡ್ಡಗಟ್ಟಿ ನಿಲ್ಲಿಸಿ ತನ್ನ ಕೈಯಲ್ಲಿದ್ದ ಒಂದು ಮರದ ದೊಣ್ಣೆಯಿಂದ  ಹಲ್ಲೆ ನಡೆಸಿ ಅಂಗಿಯ ಕಾಲರನ್ನು ಹಿಡಿದು ದೂಡಿ ಹಾಕಿ ಜೀವ ಬೆದರಿಕೆ ಹಾಕಿದ್ದು, ಆ ಸಮಯ ಫಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಬಂಗಾರದ ಸರ ತುಂಡಾಗಿ ಬಿದ್ದು ಹೋಗಿದ್ದು ಹಾಗೂ ಫಿರ್ಯಾದಿದಾರರ ಕಿಸೆಯಲ್ಲಿದ್ದ ರೂಪಾಯಿ 13,000/- ನಗದು ಹಣ ಬಿದ್ದು ಹೋಗಿರುತ್ತದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದ್ದು ಠಾಣಾ ಮೊ.ನಂ 37/2014 ಕಲಂ: 324,504,506,324,427 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಅಪಘಾತ ಪ್ರಕರಣ
  • ಬ್ರಹ್ಮಾವರ: ದಿನಾಂಕ: 20/02/2014 ರಂದು ಸಂಜೆ 6:45 ಗಂಟೆಗೆ ಹಲುವಳ್ಳಿ ಗ್ರಾಮದ ಬೋಜ ಕರ್ಕೇರಾ ರವರ ಅಂಗಡಿ ಬಳಿ ಆರೋಪಿತ ರವಿ ಪೂಜಾರಿ ಯವರು ಮೊಟಾರು ಸೈಕಲ್ ನಂ ಕೆಎ-20-ಎಸ್ -941 ನ್ನು ಪೇತ್ರಿ ಕಡೆಯಿಂದ ಹೆಬ್ರಿಕಡೆಗೆ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿ ರಾಜೇಶ್ (27) ತಂದೆ: ಗಣಪ ನಾಯ್ಕ ವಾಸ; ಗೊದ್ದನಕಟ್ಟೆ ಪೇತ್ರಿ ಅಂಚೆ, ಚೇರ್ಕಾಡಿ ಗ್ರಾಮ  ಇವರ ದೊಡ್ಡಪ್ಪ ವಿಠ್ಠಲ ನಾಯ್ಕ ರವರಿಗೆ ಡಿಕ್ಕಿ ಹೊಡೆದು ತೀವ್ರ ಗಾಯ ಗೊಂಡ ಅವರು ಬ್ರಹ್ಮಾವರ ಮಹೇಶ್ ಆಸ್ಪತ್ರೆ , ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ರಾತ್ರಿ ಸುಮಾರು 12:45 ಗಂಟೆಗೆ ಮೃತ ಪಟ್ಟಿರುತ್ತಾರೆ. ಆರೋಪಿ ಅಪಘಾತದ ಬಳಿಕ ಸ್ಥಳದಿಂದ ಹೋಗಿರುತ್ತಾರೆ.ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/14 ಕಲಂ: 279,304(ಎ) ಐಪಿಸಿ 134 (ಎ)(ಬಿ) ಐ.ಎಂ.ವಿ ಆಕ್ಟ್  ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.  
ಇತರ ಪ್ರಕರಣ 
  • ಕಾರ್ಕಳ ನಗರ: ಆಪಾದಿತ ಸೈಯದ್ ಸಮ್‌ದಾನಿ ಬೆಂಗಳೂರು ಎಂಬವನು ಫಿರ್ಯಾದಿ ಅನಿಲ್ ಡಿ ಸ್ವಿಲ್ವ (42) ತಂದೆ: ಡಿನ್ನಿಸ್ ಡಿ ಸ್ವಿಲ್ವ ವಾಸ: ಹುಚ್ಚಾರು ಹೌಸ್  ಮಂಜಲ್ತಾರ್ ಅಂಚೆ  ಮಾಳ ಗ್ರಾಮ ಕಾರ್ಕಳ ತಾಲೂಕು ಇವರಿಗೆ ವಿದೇಶಕ್ಕೆ ಹೋಗಲು ವೀಸಾ ಕೊಡಿಸುವುದಾಗಿ ಹೇಳಿ ನಂಬಿಸಿ ಸುಮಾರು 3 ತಿಂಗಳ ಹಿಂದೆ, 50,000/- ರೂಪಾಯಿ ಹಣವನ್ನು ಜ್ಯೂಲಿಯಟ್ ಎಂಬವರ ಶಿವಮೊಗ್ಗ ವಿಜಯಾ ಬ್ಯಾಂಕ್ ಅಕೌಂಟ್ ನಂ. 11940101002331 ನೇಯದಕ್ಕೆ ಹಾಗೂ ದಿನಾಂಕ: 07/01/2014 ರಂದು 4 ಲಕ್ಷ ರೂಪಾಯಿ ಹಣವನ್ನು ಆಪಾದಿತ ಸೈಯದ್ ಬೆಂಗಳೂರು ಎಂಬವರ ಅಕೌಂಟ್ ನಂ.IDBI Bank Ghod Bunder Road, Thane West A/C No. IBKL 0000430/0430102000009942 ನೇಯದಕ್ಕೆ  ಕಾರ್ಕಳ ಕಾರ್ಪೋರೇಶನ್ ಬ್ಯಾಂಕ್ ಮುಖಾಂತರ ಕಳುಹಿಸಿದ್ದು, ನಂತರ ಫಿರ್ಯಾದಿದಾರರನ್ನು ಆಪಾದಿತ ಸೈಯದ್ ಮುಂಬಯಿಗೆ ದಿನಾಂಕ: 09/01/2014 ರಂದು ಕರೆಸಿ ಮೆಡಿಕಲ್ ಮಾಡಿಸಿ ನಂತರ ಆಪಾದಿತ ವೀಸಾ ನೀಡದೇ ಹಾಗೂ ಹಣವನ್ನು ವಾಪಾಸು ನೀಡದೇ ತಲೆ ಮರೆಸಿಕೊಂಡು ಮೋಸ ಮಾಡಿರುವುದಾಗಿದೆ.ಈ ಬಗ್ಗೆ ಕಾರ್ಕಳ ನಗರ ರಾಣೆಯಲ್ಲಿ ಅಪರಾಧ ಕ್ರಮಾಂಕ 25/2014 ಕಲಂ  420 ಐಪಿಸಿ ರಂತೆ   ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.  

No comments: