Friday, February 21, 2014

Daily Crime Reports As On 21/02/2014 At 19:30 Hrs

ಅಪಘಾತ ಪ್ರಕರಣ

  • ಕುಂದಾಪುರ ಸಂಚಾರ : ದಿನಾಂಕ 21/02/2014 ರಂದು ಸಮಯ  ಸುಮಾರು ಬೆಳಿಗ್ಗೆ 08:00 ಗಂಟೆಗೆ  ಕುಂದಾಪುರ ತಾಲೂಕು  ಕೋಣಿ ಗ್ರಾಮದ ಸಟ್ವಾಡಿ ಬ್ರಿಡ್ಜ್ ಹತ್ತಿರ,  ರಾಜ್ಯ ರಸ್ತೆಯ ತಿರುವಿನ ರಸ್ತೆಯಲ್ಲಿ ಪಿರ್ಯಾದಿ ದೀಪಾ ಕೆ ಪೂಜಾರಿ (20) ತಂದೆ : ಕೃಷ್ಣ ಪೂಜಾರಿ ವಾಸ: ಸಟ್ವಾಡಿ ಬಸ್ ಸ್ಟಾಪ್ ಹತ್ತಿರ, ಕಂದಾವರ ಗ್ರಾಮ ಕುಂದಾಪುರ ತಾಲೂಕು ಇವರು ಮೋಟಾರ್ ಸೈಕಲ್ ನಂಬ್ರ KA20 - ED-3786 ರಲ್ಲಿ ಆಪಾದಿತ ರಾಘವೇಂದ್ರರೊಂದಿಗೆ ಸಹ ಸವಾರರಾಗಿ ಕುಳಿತುಕೊಂಡು ಸಟ್ವಾಡಿಯಿಂದ ಕುಂದಾಪುರ ಕಡೆಗೆ ಹೋಗುತ್ತಿರುವಾಗ ನಾಯಿಯೊಂದು ರಸ್ತೆಗೆ ಅಡ್ಡ ಬಂದ ಕಾರಣ, ಬೈಕ್  ಸವಾರ ನಿರ್ಲಕ್ಷತನದಿಂದ ಒಮ್ಮೆಲೇ ಮೋಟಾರ್ ಸೈಕಲ್ ಗೆ ಬ್ರೇಕ್ ಹಾಕಿದ್ದು ಮೋಟಾರ್ ಸೈಕಲ್ ಸ್ಕಿಡ್ ಆಗಿ ರಸ್ತೆಯಲ್ಲಿ ಅಡ್ಡ ಬಿದ್ದಿದ್ದು ಹಿಂಬದಿಯಲ್ಲಿ ಕುಳಿತಿರುವ ಫಿರ್ಯಾದಿದಾರರ ಬಲ ಕಾಲು ಮೋಟಾರ್ ಸೈಕಲ್ ನ ಅಡಿಗೆ ಸಿಲುಕಿ ರಕ್ತಗಾಯ ಹಾಗೂ ಒಳನೋವು ಉಂಟಾಗಿರುತ್ತದೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 33/2014 ಕಲಂ 279, 337 ಐಪಿಸಿ ರಂತೆ  ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.   
  • ಕಾಪು: ದಿನಾಂಕ 20-02-2014 ರಂದು ರಾತ್ರಿ 8:30 ಗಂಟೆಗೆ ಉಡುಪಿ ತಾಲೂಕು ಮಟ್ಟು ಗ್ರಾಮದ  ದುಗ್ಗುಪಾಡಿ ಎಂಬ್ಲಲಿ ಪಿರ್ಯಾದಿ ವಸಂತ ಕುಂದರ್ (35) ತಂದೆ: ಅನಂತ್ ಕಾಂಚನ್ ವಾಸ: ರಾಜೇಶ್ವರಿ ನಿವಾಸ ಕುದ್ರುಕೆರೆ ಕುತ್ಪಾಡಿ ಗ್ರಾಮ ಉಡುಪಿ ಇವರು ತನ್ನ ಸ್ಕೂಟರ್ ಕೆ ಎ 20ಇಎ 1246 ನೇದನ್ನು ಸವಾರಿ ಮಾಡಿಕೊಂಡು ಲಕ್ಷ್ಮಣ ಶೆಟ್ಟಿರವರ ಅಂಗಡಿ ಬಳಿ ಬರುವಾಗ ಕಟಪಾಡಿ  ಕಡೆಯಿಂದ  ಮಟ್ಟು ಕಡೆಗೆ ಆರೋಪಿತ ಸಂತೋಷರವರು ತನ್ನ ಮೋಟಾರ್  ಸೈಕಲ್ ನಂಬ್ರ ಕೆಎ-20-ಇಸಿ-5915 ನೇ ದನ್ನು ಆತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೇಲೆ  ಬಲ ಬದಿಗೆ  ಬಂದು  ಪಿರ್ಯಾದಿದಾರರ   ಸ್ಕೂಟರಿಗೆ  ಡಿಕ್ಕಿ ಹೊಡೆದ  ಪರಿಣಾಮ ಪಿರ್ಯಾದಿದಾರರ  ಬಲ ಕೈ, ಬಲ ತೋಳು ಹಾಗೂ ಬಲ ಕಾಲಿಗೆ  ಗುದ್ದಿದ  ಒಳ ನೋವು ಉಂಟಾಗಿರುತ್ತದೆ   ಹಾಗೂ  ಆರೋಪಿ ಮೋಟಾರ್  ಸೈಕಲ್  ಸವಾರನಿಗೂ ಗಾಯವಾಗಿರುತ್ತದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 28/14 ಕಲಂ 279, 337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. 
ಬೈಕ್‌ ಕಳವು ಪ್ರಕರಣ 

  • ಮಲ್ಪೆ: ಪಿರ್ಯಾದಿ ರಾಮಚಂದ್ರ ಕೆ (35) ತಂದೆ: ಸುಬ್ರಾಯ ಗಟ್ಟಿ ವಾಸ: ಮಾಂಡವಿ ಗೋಕುಲ್ ಪ್ಲಾಟ್ ಕಲ್ಸಂಕ ಇವರು ತನ್ನ ಹೆಂಡತಿಯೊಂದಿಗೆ ಕೊಡವೂರು ಗ್ರಾಮದ ಬೀಚ್ ಉತ್ಸವಕ್ಕೆ ದಿನಾಂಕ 16/02/2014 ರಂದು ಸಂಜೆ 5:30 ಗಂಟೆಗೆ  ತನ್ನ ಪಲ್ಸಾರ್ 150ಸಿಸಿ ಮೋಟಾರು ಬೈಕ್ ನಂಬ್ರ ಕೆಎ 20 ವಿ 2847 ನೇ ದರಲ್ಲಿ ಬಂದಿದ್ದು, ತನ್ನ ಮೋಟಾರು ಸೈಕಲನ್ನು ಬೀಚ್ ಬಳಿ ರುಧ್ರಭೂಮಿ ಪರಿಸರದಲ್ಲಿ ಪಾರ್ಕಿಂಗ್ ಮಾಡಿ ಬೀಚ್ ಕಡೆ ಹೋಗಿದ್ದು ವಾಪಾಸ್ಸು ರಾತ್ರಿ 9:00 ಗಂಟೆಗೆ ಬಂದು ನೋಡುವಾಗ ಸದ್ರಿ ಬೈಕ್ ಇಲ್ಲದೇ ಇದ್ದು ಯಾರೋ ಕಳ್ಳರು ಕಳವು ಮಾಡಿದ್ದಾಗಿ ಕಳವಾದ ಬೈಕ್ ನ ಅಂದಾಜು ಮೌಲ್ಯ 30000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 33/2014 ಕಲಂ: 379   ಐಪಿಸಿ ರಂತೆ   ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.   




No comments: