Saturday, February 22, 2014

Daily Crime Reports As On 22/02/2014 At 07:00 Hrsಮನುಷ್ಯ ಕಾಣೆ ಪ್ರಕರಣ

  • ಕಾರ್ಕಳ ನಗರ: ದಿನಾಂಕ;17/02/2014 ರಂದು ಮದ್ಯಾಹ್ನ 01;30 ಗಂಟೆಗೆ ಕಾರ್ಕಳ ತಾಲೂಕು ಕಸಬಾ ಗ್ರಾಮದ ಭಗವತಿ ನಿಲಯ ಎಂಬಲ್ಲಿ ಪಿರ್ಯಾಧಿ ಶ್ರೀಮತಿ ಶೈಲಜಾ ಹೆಗ್ಡೆ (30) ಗಂಡ; ವಿಶ್ರಿತ್ ವಾಸ; ಭಗವತಿ ನಿಲಯ ಕಸಬಾ ಗ್ರಾಮ ಕಾರ್ಕಳ ತಾಲೂಕು  ಇವರ ಗಂಡ ವಿಶ್ರಿತ್ (26) ಎಂಬವರು ಲ್ಯಾಂಡ್ ಲಿಂಕ್ಸ್ ಕೆಲಸ ಮಾಡಿಕೊಂಡಿದ್ದು ಅವರ ಜೊತೆಗಾರರಾಗಿದ್ದ ಸೂರಜ್ ಹಾಗೂ ಅಜಯ್ ಎಂಬವರಿಂದ ತೆಗೆದುಕೊಂಡ ಹಣವನ್ನು ಹಿಂದಿರುಗಿಸುತ್ತೇನೆ ಎಂಬುದಾಗಿ ಹೇಳಿ ಬೆಂಗಳೂರಿಗೆ ಹೋದವರು ದಿನಾಂಕ 20/02/02014 ರಂದು ಮದ್ಯಾಹ್ನ 12;00 ಗಂಟೆಗೆ ಪಿರ್ಯಾಧಿದಾರರಿಗೆ ಕರೆ ಮಾಡಿ ಹಣ ಕಳುಹಿಸಿಕೊಡುತ್ತೇನೆ ನಿನ್ನ ಅಕೌಂಟ್ ನಲ್ಲಿ ನೋಡು ಎಂದವರು ನಂತರ ಪೋನ್ ಸ್ವಿಚ್ ಆಫ್ ಮಾಡಿದ್ದು ತನಕವು ಮನೆಗೆ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ ಬಗ್ಗೆ ಕಾರ್ಕಳ: ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 26/2014 ಕಲಂ  ಗಂಡಸು ಕಾಣೆ   ಯಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಅಪಘಾತ ಪ್ರಕರಣ:  
  • ಶಿರ್ವಾ: ದಿನಾಂಕ 21.02.2014 ರಂದು 11.00 ಗಂಟೆ ಸಮಯ ಉಡುಪಿ ತಾಲೂಕು ಶಂಕರಪುರದ ಬರೋಡ ಬ್ಯಾಂಕಿನ ಬಳಿ ಪಿರ್ಯಾದಿ ರಘನಾಥ ಪ್ರಭು(73) ತಂದೆ: ಸುಬ್ಬಣ್ಣ ಪ್ರಭು  ಮುತ್ತೂರು ಪೆರ್ಣಂಕಿಲ ಅಂಜಾರು ಗ್ರಾಮ ಉಡುಪಿ ಇವರು ರಸ್ತೆಯ ಎಡ ಬದಿಯಿಂದ ಬಲ ಬದಿಗೆ ರಸ್ತೆ ದಾಟುತ್ತಿರುವಾಗ ಶಿರ್ವಾ ಕಡೆಯಿಂದ ಶಂಕರಪುರ ಕಡೆಗೆ ಅರೋಪಿ ಮೋಟಾರು ಸೈಕಲ್ ನಂಬ್ರ ಕೆಎ.20. ಕ್ಯೂ 3864 ನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಸವಾರಿ ಮಾಡಿ ಕೊಂಡು ಬಂದು ಪಿರ್ಯಾದಿ ದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿಯ ಕೋಲು ಕೈಗೆ, ಎಡ ಕಾಲಿಗೆ ಗಾಯ ನೋವುಗಳಾಗಿರುತ್ತದೆ. ಬಗ್ಗೆ ಶಿರ್ವಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 26/2014, ಕಲಂ:279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. 
  • ಕೊಲ್ಲೂರು: ದಿನಾಂಕ 21.02.2014 ರಂದು ಬೆಳಿಗ್ಗೆ ಸುಮಾರು 11.00ಗಂಟೆಗೆ ಕೆ. 20 -8319 ನೇ ಟಿಪ್ಪರ್  ಚಾಲಕನು ನಾಗೋಡಿಯಿಂದ ಕೊಲ್ಲೂರು-ಕುಂದಾಪುರ ಕಡೆಗೆ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಜಡ್ಕಲ್ ಗ್ರಾಮದ ಮೇಲುಬ್ಬಿ  ಎಂಬಲ್ಲಿ ತಲುಪುವಾಗ ಕುಂದಾಪುರ ಕಡೆಯಿಂದ ಕೊಲ್ಲೂರು ಕಡೆಗೆ ಸುಮೊ ಗ್ರಾಂಡ್ ಕಾರು ನಂ ಕೆ. 20.ಪಿ.6071 ನೇ  ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ತನ್ನ ಕಾರನ್ನು ಚಲಾಯಿಸಿಕೊಂಡು ಬಂದು ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಮ ಟಿಪ್ಪರ್ ಜಖಂ ಗೊಂಡಿದ್ದು ಸದ್ರಿ ಸುಮೊ ಗ್ರಾಂಡ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೂ ಪೆಟ್ಟಾಗಿದ್ದು ಸದ್ರಿ  ಕಾರು ಚಾಲಕನ ಹೆಸರು ವಿಚಾರಿಸಲಾಗಿ ವಿಷ್ಣು ಮೂರ್ತಿ ಭಟ್ ಎಂದು ತಿಳಿದು ಬಂತು ಅಪಘತಕ್ಕೆ ಸದ್ರಿ ಕೆ. 20ಪಿ.6071 ನೇ  ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನಯೇ ಕಾರಣವಾಗಿರುತ್ತದೆ ಎನ್ನುವುದಾಗಿ ಪಿರ್ಯಾದಿ ಚಂದ್ರ (38)ತಂದೆ ಬಸವ  ಮೊಗವೀರ ವಾಸ: ಅರಮನೆ ಕೊಡ್ಲೂ ಹಳ್ಳಿಹೊಳೆ ಶೆಟ್ಟಪಾಲು ಕುಂದಾಪುರ ತಾ ರವರು ದೂರು ನೀಡಿದ್ದು ಠಾಣೆಯಲ್ಲಿ ಅಪರಾಧ ಕ್ರಮಾಂಕ 09/2014 ಕಲಂ 279.337  .ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ 
  •  ಕಾರ್ಕಳ ನಗರ: ದಿನಾಂಕ; 21.02.2014 ರಂದು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಹಾರ್ ಜಡ್ಡು ಎಂಬಲ್ಲಿ  ಪಿರ್ಯಾದಿ ಶ್ರೀಮತಿ ಲಕ್ಷ್ಮೀ (45)  ಗಂಡ ಚಂದ್ರ ವಾಸ: ಹಾರ್ ಜಡ್ಡು ಕುಕ್ಕುಂದೂರು ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಇವರ ಗಂಡ ಚಂದ್ರ (48) ಎಂಬುವವರು ವಿಪರೀತ ಶರಾಬು ಸೇವಿಸುವ ಚಟದವರಾಗಿದ್ದು, ಶರಾಬು ಸೇವಿಸಲು ಹಣ ಇಲ್ಲದೇ ಇದ್ದು ಅದೇ ಕಾರಣದಿಂದ  ಜೀವನದಲ್ಲಿ ಜೀಗುಪ್ಸೆಗೊಂಡು ಸಂಜೆ 5:30 ಗಂಟೆಯಿಂದ 6:00 ಗಂಟೆಯ ಮದ್ಯೆ ಮನೆಯ ಜಗುಲಿಯ ಅಡ್ಡ  ಜಂತಿಗೆ ಲೂಂಗಿಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಬಗ್ಗೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 06/2014 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಹಲ್ಲೆ ಪ್ರಕರಣ 
  •  ಕೊಲ್ಲೂರು: ದಿನಾಂಕ 19.07.2014 ರಂದು 21.30 ಗಂಟೆಯ ಸಮಯಕ್ಕೆ ಪಿರ್ಯಾದಿ ನಾರಾಯಣ ಪೂಜಾರಿ (65) ತಂದೆ: ದಿ| ಗೋವಿಂದ ಪೂಜಾರಿ ವಾಸ: ಮೇಕರಿ ಜಡ್ಡು  ಕೆರಾಡಿ ಗ್ರಾಮ ಕುಂದಾಪುರ ಇವರು ರಾತ್ರಿ ಹಳ್ಳಿ ಕಾಯಲು ಗದ್ದೆಗೆ ಕುಸುಮಾವತಿ ಶೆಡ್ತಿ ಹೊಸ ಮನೆಯ ಬಳಿ ಕಾಲುದಾರಿಯಲ್ಲಿ   ಹೋಗುತ್ತಿದ್ದಾಗ ಅಲ್ಲಿಯೇ ನಿಂತಿದ್ದ ಸೀತಾರಾಮ ಶೆಟ್ಟಿ, ಕುಸುಮಾವತಿ ಶೆಡ್ತಿ ಹಾಗೂ ಚಂದ್ರಾವತಿ ಶೆಡ್ತಿ ಯವರು ಸಮಾನ ಉದ್ದೇಶದಿಂದ ಪಿರ್ಯದಿದಾರರನ್ನು ಅಡ್ಡಗಟ್ಟಿ  ಅಪಾದಿತರಿಗೂ ಹಾಗೂ ಪಿರ್ಯಾದಿಗೆ ಮಾತಿಗೆ ಮಾತಾಗಿ ಬೊಬ್ಬೆ ಕೇಳಿಸಿ ಪಿರ್ಯದಿಯ ಹೆಂಡತಿ ಮತ್ತು ಮಗಳು ಸ್ಥಳಕ್ಕೆ ಬಂದಾಗ, ಸೀತಾರಾಮ ಶೆಟ್ಟಿಯು ಪಿರ್ಯದಿದಾರರನ್ನು  ಬಲವಾಗಿ ನೆಲಕ್ಕೆ ದೂಡಿ, ಸಮಯದಲ್ಲಿ ಸೀತಾರಾಮ ಶೆಟ್ಟಿಯವರ ಕೈಯಲ್ಲಿದ್ದ ಕತ್ತಿಯು ಪಿರ್ಯದಿಯ ಎಡಕಾಲಿನ ಪಾದದದ ಗಂಟಿನ ಮೇಲ್ಗಡೆ ತಾಗಿ ರಕ್ತ ಗಾಯ ಉಂಟಾಗಿ, ಅದೇ ಸಮಯ ಅಲ್ಲಿದ್ದ ಕುಸುಮಾವತಿ ಶೆಡ್ತಿ , ಮತ್ತು  ಚಂದ್ರವತಿ ಶೆಡ್ತಿ ಯವರು  ಸೇರಿ ಪಿರ್ಯಾದಿದಾರರಿಗೆ ಇನ್ನು ಮುಂದಕ್ಕೆ ನಮ್ಮ ಜಾಗದಲ್ಲಿ  ನಡೆದಾಡಿದರೇ ನಿನ್ನ ಕೈ ಕಾಲು ಕಡಿದು ಹಾಕುತ್ತೇವೆ, ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 08/2014 ಕಲಂ 341.504.506  ಜೊತೆಗೆ 34 .ಪಿ.ಸಿ  ಯಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

No comments: