Saturday, February 22, 2014

Daily Crime Reported on 22/02/2014 at 17:00 Hrs.

 ಕಳವು ಪ್ರಕರಣ 
  • ಮಣಿಪಾಲ: ಪಿರ್ಯಾದಿದಾರರಾದ ಶ್ರೀ ಶ್ರಿನೇಲ್ ವತ್ಲೂರು (18), ತಂದೆ ಶೀನು ವತ್ಲೂರು, ವಾಸ 327 ಅಮಾತ್ಯೆ ಸೇನ್ ಕೆ.ಎಮ್.ಸಿ ಮಣಿಪಾಲ ಇವರು ಶಿವಳ್ಳಿ ಗ್ರಾಮ ಮಣಿಪಾಲದ ಅಮತ್ಯಸೇನ್‌ ಹಾಸ್ಟೆಲಿನ ರೂಮ್‌ ನಂಬ್ರ 327 ನೇದಕ್ಕೆ ದಿನಾಂಕ 20/02/2014ರಂದು ಬೆಳಿಗ್ಗೆ 08:30 ಗಂಟೆಗೆ ಹೊರಗೆ ಹೋಗಿದ್ದು, ನಂತರ ಪುನಃ ಮಧ್ಯಾಹ್ನ 3:30 ಗಂಟೆಗೆ ರೂಮ್‌ ಗೆ ಬಂದು ನೋಡಿದಲ್ಲಿ ಶ್ರಿನೇಲ್ ವತ್ಲೂರು ಇವರು ರೂಮ್‌ನಲ್ಲಿರಿಸಿದ ಐ ಪೋನ್ ಮೊಬೈಲ್ ಕಾಣೆಯಾಗಿದ್ದು ಸದ್ರಿ ಮೊಬೈಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂಪಾಯಿ 40,000/- ಆಗಬಹುದು ಎಂಬುದಾಗಿ ಶ್ರಿನೇಲ್ ವತ್ಲೂರು ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 25/2014, ಕಲಂ 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 
ಜುಗಾರಿ ಪ್ರಕರಣ  
  • ಕಾರ್ಕಳ: ಎಸ್.ವಿ ಗಿರೀಶ್ ಪೊಲೀಸ್ ನಿರೀಕ್ಷಕರು ಅಬಕಾರಿ ಮತ್ತು ಲಾಟರಿ ವಿಶೇಷ ದಳ, ಉಡುಪಿ ವಿಶೇಷ ಪೊಲೀಸ್ ಠಾಣೆ. ಇವರಿಗೆ ದೊರೆತ ಮಾಹಿತಿಯಂತೆ ಕಾರ್ಕಳ ತಾಲೂಕು ಕೆದಿಂಜೆ ಗ್ರಾಮದ ಮಂಜರಪಲ್ಕೆ  ಮಾರ್ಕೇಟ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ವಂತ ಲಾಭಕ್ಕೋಸ್ಕರ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಪಡೆದು ಸಾರ್ವಜನಿಕರಿಗೆ ಮಟ್ಕಾ ಚೀಟಿ ಬರೆದು ಕೊಡುತ್ತಿದ್ದ ಆರೋಪಿ ಶಾಜಿ @ ಶಹಜಾನ್‌ ನಾಯರ್‌ ಇವರನ್ನು ಮಟ್ಕಾ ದಾಳಿ ನಡೆಸಿ ದಸ್ತಗಿರಿ ಮಾಡಿ ಆರೋಪಿ ವಶದಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು ರೂ 160/- ಹಾಗೂ ಇತರೆ ಪರಿಕರಗಳನ್ನು ಸ್ವಾಧೀನಪಡಿಸಿ ಠಾಣಾ ಅಪರಾಧ ಕ್ರಮಾಂಕ  16/2014, ಕಲಂ 78(3) ಕೆಪಿ. ಕಾಯ್ದೆಯಂತೆ  ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 
  • ಕುಂದಾಪುರ: ದಿನಾಂಕ 22/02/2014  ರಂದು ಪ್ರಕರಣದ ಫಿರ್ಯಾದಿ  ಎಎಸ್ಐ ಶೀನ ನಾಯ್ಕ ಕುಂದಾಪುರ ಪೊಲೀಸ್ ಠಾಣೆ ರವರು  ಠಾಣೆಯಲ್ಲಿರುವಾಗ ಬಂದ ಮಾಹಿತಿಯಂತೆ ಕುಂದಾಪುರ ಕಸಬಾ ಗ್ರಾಮದ  ಕೋಡಿ ಬಾರ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಬಳಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಮಟ್ಕಾ ಚೀಟಿ ಬರೆದು ಕೊಡುತ್ತಿದ್ದ ಆರೋಪಿ ದಿನೇಶನನ್ನು ದಸ್ತಗಿರಿ ಮಾಡಿ ಆರೋಪಿ ವಶದಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು ರೂ 670/- ಹಾಗೂ ಇತರೆ ಪರಿಕರಗಳನ್ನು ಸ್ವಾಧೀನಪಡಿಸಿ ಠಾಣಾ ಅಪರಾಧ ಕ್ರಮಾಂಕ 57/2014, ಕಲಂ 78(3) ಕೆಪಿ. ಕಾಯ್ದೆಯಂತೆ  ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 
ಮೋಸ ಪ್ರಕರಣ 
  • ಶಿರ್ವಾ: ಪಿರ್ಯಾದಿ ಅರುಣ್ ರೋಕೀ ನೊರೋನ್ಹಾ (38ವರ್ಷ)ತಂದೆ: ಲಾರೆನ್ಸ್ ನೋರೋನ್ಹಾ ವಾಸ: ಪಾಂಬೂರು ಹೌಸ್ ಪಡುಬೆಳ್ಳೆ ಪೊಸ್ಟ್ ಬೆಳ್ಳೆ  ಗ್ರಾಮ ಉಡುಪಿರವರು ಶಿರ್ವಾ ಕಾಪೋರೇಶನ್ ಬ್ಯಾಂಕಿನ ಗ್ರಾಹಕರಾಗಿದ್ದು ಕ್ರೆಡಿಟ್ ಕಾರ್ಡ್‌ ಐಡಿ ನಂಬ್ರನ್ನು ಉಪಯೋಗಿಸಿ ದಿನಾಂಕ 07.04.2011 ರಂದು ಯಾರೋ ಅಪರಿಚಿತರು ಅಂತರ್ಜಾಲದ ಮೂಲಕ ಮೋಸ ಮಾಡಿ ಪಿರ್ಯಾದಿದಾರರ ಬ್ಯಾಂಕ್ ಖಾತೆಯಿಂದ ರೂ 76869 ರೂಪಾಯಿನ್ನು  ವಂಚನೆ  ಮಾಡಿರುತ್ತಾರೆ.ಈ ಬಗ್ಗೆ ಅರುಣ್ ರೋಕೀ ನೊರೋನ್ಹಾರವರು  ಶಿರ್ವ ಠಾಣೆಯಲ್ಲಿ  ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 27/2014, ಕಲಂ:66,ಸಿ,& 66ಡಿ Information Technology Act 2000  ಮತ್ತು ಕಲಂ 417, 420 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: