Monday, February 10, 2014

Daily Crimes Reported as On 10/02/2014 at 07:00 Hrs


ಹಲ್ಲೆ ಪ್ರಕರಣ
  • ಅಜೆಕಾರು:ದಿನಾಂಕ 09/02/2014 ರಂದು ಎಳ್ಳಾರೆ ಗ್ರಾಮದ ಉಗ್ರಾಣಿಕಟ್ಟೆ ಎಂಬಲ್ಲಿ ಪಿರ್ಯಾದಿದಾರರಾದ ಬಾಬು ಪೂಜಾರಿ ತಂದೆ:ರುಕ್ಮಯ್ಯ ಪೂಜಾರಿ, ಎಳ್ಳಾರೆ ಗ್ರಾಮರವರ ಮನೆಯ ಅಂಗಳದಲ್ಲಿ ನೆರೆ ಮನೆಯ ಗೋಪಾಲ, ಉಗ್ರಾಣಿಕಟ್ಟೆ, ಎಳ್ಳಾರೆ ಗ್ರಾಮ ಎಂಬವರಿಗೆ ಅವರ ಮೊಮ್ಮಗ ಸುರೇಶ (23) ತಂದೆ:ಐತು, ಉಗ್ರಾಣಿಕಟ್ಟೆ, ಎಳ್ಳಾರೆ ಗ್ರಾಮ ಎಂಬವರು ಮರದ ದೊಣ್ಣೆಯಿಂದ ಎಡಕಣ್ಣಿಗೆ ಮತ್ತು ಎಡ ಕೈಗೆ ಹೊಡೆದು ಗಾಯಗೊಳಿಸಿದ್ದು, ಗೋಪಾಲ ಎಂಬವರು ಸಾಕಿದ ನಾಯಿ ಮರಿ ಬಾಬು ಪೂಜಾರಿರವರ ಮನೆಗೆ ಬರುತ್ತಿದ್ದು, ಅದನ್ನು ಗೋಪಾಲ ಎಂಬವರು ಬಾಬು ಪೂಜಾರಿರವರಿಗೆ ಕೊಟ್ಟಿರುವುದೆಂದು ತಿಳಿದು ಆರೋಪಿತ ಸುರೇಶನು ಈ ಕೃತ್ಯ ಮಾಡಿದ್ದಾಗಿದೆ. ಗಾಯಾಳು ಗೋಪಾಲ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಬಾಬು ಪೂಜಾರಿರವರು ನೀಡಿದ ದೂರಿನಂತೆ ಅಜೆಕಾರು ಠಾಣಾ ಅಪರಾಧ ಕ್ರಮಾಂಕ 05/14 ಕಲಂ 324 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಅಪಘಾತ ಪ್ರಕರಣಗಳು
  • ಹಿರಿಯಡ್ಕ:ದಿನಾಂಕ 09/02/2014 ರಂದು 10:15 ಗಂಟೆಗೆ ಉಡುಪಿ ತಾಲೂಕು ಪೆರ್ಡೂರು ಗ್ರಾಮದ ಪೆರ್ಡೂರು ಸಿಂಡಿಕೇಟ್ ಬ್ಯಾಂಕಿನ ಸಮೀಪ ಇರುವ “ಜಲಜಶ್ರೀ” ಮನೆಯ ಎದುರು ಹಾದು ಹೋಗಿರುವ ಹೆಬ್ರಿ-ಹಿರಿಯಡ್ಕ ನಡುವಿನ ಸಾರ್ವಜನಿಕ ರಾಜ್ಯ  ರಸ್ತೆಯಲ್ಲಿ ಮೋಟಾರು ಸೈಕಲ್ ನಂಬ್ರ ಕೆ.ಎ. 19.ಆರ್. 8614 ನೇದರ ಸವಾರನು ತನ್ನ ಮೋಟಾರು ಸೈಕಲನ್ನು ಹೆಬ್ರಿ ಕಡೆಯಿಂದ ಹಿರಿಯಡ್ಕ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ “ಜಲಜ ಶ್ರೀ” ಮನೆಯ ಎದುರು ಕಸ ಹೆಕ್ಕುತ್ತಿದ್ದ ಪಿರ್ಯಾದಿದಾರರಾದ ವಿದ್ಯಾ ಪಿ ಹೆಬ್ಬಾರ್, (32) ತಂದೆ:ಪಿ.ಎಂ. ಪ್ರಸನ್ನ ಹೆಬ್ಬಾರ್, ಅನಂತ ಕೃಪಾ, ಸೂರಾಲ್ ರೋಡ್, ಪೆರ್ಡೂರು, ಪೆರ್ಡೂರು ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕುರವರ ಮಾವ ಪಿ.ಎಂ. ಪದ್ಮನಾಭ ಹೆಬ್ಬಾರ್ (77) ಎಂಬವರಿಗೆ ಡಿಕ್ಕಿ ಹೊಡೆದು, ಬಳಿಕ "ಜಲಜಶ್ರೀ” ಮನೆಯ ಗೋಡೆಗೆ ಢಿಕ್ಕಿ ಹೊಡೆದು ಮೋಟಾರು ಸೈಕಲಿನೊಂದಿಗೆ ಬಿದ್ದ ಪರಿಣಾಮ ಪದ್ಮನಾಭ ಹೆಬ್ಬಾರ್ ಮತ್ತು ಮೋಟಾರು ಸೈಕಲ್ ಸವಾರ ಸಾಮಾನ್ಯ ಸ್ವರೂಪದ ಗಾಯಗೊಂಡಿರುವುದಾಗಿದೆ.ಈ ಬಗ್ಗೆ ವಿದ್ಯಾ ಪಿ ಹೆಬ್ಬಾರ್‌ರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 12/2014 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ ಸಂಚಾರ:ದಿನಾಂಕ 09/02/2014 ರಂದು ಸಂಜೆ ಸುಮಾರು 5:15 ಗಂಟೆಗೆ ಕುಂದಾಪುರ ತಾಲೂಕು ಬಳ್ಕೂರು ಗ್ರಾಮದ  ಬಳ್ಕೂರು ಸರಕಾರಿ ಶಾಲೆಯ ಬಳಿ ರಾಜ್ಯ ರಸ್ತೆಯಲ್ಲಿ ಆಪಾದಿತ ಸುಧಾಕರ ಎಂಬವರು ಕೆಎ 20 ಇ.ಡಿ 7477 ನೇ ಬೈಕ‌‌ನ್ನು ಬಿ.ಹೆಚ್‌  ಕ್ರಾಸ್‌ ಕಡೆಯಿಂದ ಕಂಡ್ಲೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಅದೇ ದಾರಿಯಲ್ಲಿ ಪಿರ್ಯಾದಿದಾರರಾದ ಶಿವರಾಜ್‌  ಉಡುಪ (13) ತಂದೆ:ಶ್ರೀಧರ ಉಡುಪ  ವಾಸ:ಕೂಡ್ಲಿ ಮನೆ, ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಹತ್ತಿರ, ಬಳ್ಕೂರು ಗ್ರಾಮರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ  ಸೈಕಲ್‌ಗೆ  ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಶಿವರಾಜ್‌  ಉಡುಪ ಹಾಗೂ ಸಹ ಸವಾರ ಸನತ್ ಮತ್ತು ಬೈಕ್‌ ಸವಾರ ಸುಧಾಕರ ಹಾಗೂ ಬೈಕ್‌ ಸಹಸವಾರ ದೀಪಕ್ ರಸ್ತೆಗೆ ಬಿದ್ದು ಗಾಯಗೊಂಡು, ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಶಿವರಾಜ್‌  ಉಡುಪರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 29/2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಜುಗಾರಿ ಪ್ರಕರಣ
  • ಗಂಗೊಳ್ಳಿ:ದಿನಾಂಕ 10/02/2013  ರಂದು 02:15 ಗಂಟೆಗೆ ಪಿರ್ಯಾದಿದಾರರಾದ ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಸಂಪತ್ ಕುಮಾರ್.ಎ ರವರು ಮಾನ್ಯ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಇವರ ಮಾರ್ಗದರ್ಶನದಂತೆ, ಕುಂದಾಪುರ ವೃತ್ತ ನಿರೀಕ್ಷಕರಾದ ದಿವಾಕರ ಪಿ. ಹಾಗೂ ಸಿಬ್ಬಂದಿಯವರೊಂದಿಗೆ ತ್ರಾಸಿ ಗ್ರಾಮದ ತ್ರಾಸಿ ಬೀಚ್‌‌ ಸಮೀಪ ಗರಗರ ಮಂಡಲ ಎಂಬ ಜುಗಾರಿ ಆಟ ನಡೆಯುತ್ತಿದೆ ಎಂಬ ಖಚಿತ ವರ್ತಮಾನದಂತೆ ಸದ್ರಿ ಸ್ಥಳಕ್ಕೆ ಹೋಗಿ ಸಿಬ್ಬಂದಿಗಳ ಸಹಾಯದಿಂದ ದಾಳಿ ಮಾಡಿದಾಗ ಜುಗಾರಿ ಆಟ ಆಡುತ್ತಿದ್ದವರು ಓಡಲು ಪ್ರಯತ್ನಿಸಿದ್ದು ಅವರಲ್ಲಿ 7 ಜನರನ್ನು ವಶಕ್ಕೆ ಪಡೆದುಕೊಂಡಿದ್ದು, ಮೂವರು ಓಡಿ ಹೋಗಿದ್ದು, ವಶಕ್ಕೆ ಪಡೆದುಕೊಂಡವರನ್ನು ವಿಚಾರಿಸಲಾಗಿ 1) ಮೇಘರಾಜ್‌ ಶೆಟ್ಟಿ, (53) ತಂದೆ:ಭುಜಂಗ ಶೆಟ್ಟಿ ಮೂಡುಮಠ, ಉಳ್ಳೂರು -11, 2) ಚೇತನ್‌ ಖಾರ್ವಿ (24) ತಂದೆ:ಶಂಕರ್‌‌ ಖಾರ್ವಿ, ಲೈಟ್‌ ಹೌಸ್‌‌, ಗಂಗೊಳ್ಳಿ ಗ್ರಾಮ, 3)ಗೋಪಾಲ (40) ತಂದೆ:ಕರಿಯ, ಸಣ್ಣಕುಂಬ್ರಿ, ಹೊಸಾಡು ಗ್ರಾಮ 4)ರಿಯಾಜ್‌‌ (29), ತಂದೆ:ಹಮೀದ್‌ ಮಹಮ್ಮದ್‌‌, ಗಾಂಧಿನಗರ, ಮರವಂತೆ ಗ್ರಾಮ, 5) ಗಣಪತಿ ಮೊಗವೀರ (25), ತಂದೆ:ಮಹೇಶ, ಕೆಳಹಿತ್ಲು, ನಾಗೂರು  6) ಪ್ರಶಾಂತ್‌ ಖಾರ್ವಿ (26) ತಂದೆ:ಮಾಚ ಖಾರ್ವಿ, ಯಕ್ಷೇಶ್ವರಿ ದೇವಸ್ಥಾನದ ಹಿಂದೆ, ಮರವಂತೆ ಗ್ರಾಮ 7) ದಿನೇಶ್‌ ದೇವಾಡಿಗ (24) ತಂದೆ:ಶಂಕರ, ರೈಲ್ವೆ ಬ್ರಿಡ್ಜ್‌ ಹತ್ತಿರ, ನಾಗೂರು ಮತ್ತು ಓಡಿ ಹೋದ ವ್ಯಕ್ತಿಗಳ ಬಗ್ಗೆ ವಶಕ್ಕೆ ಪಡೆದುಕೊಂಡವರನ್ನು ವಿಚಾರಿಸಲಾಗಿ 1) ಅಸ್ಲಾಂ, ಗಂಗೊಳ್ಳಿ ಗ್ರಾಮ 2)ಮೋಹನ, ಗಂಗೊಳ್ಳಿ ಗ್ರಾಮ, 3) ಯೂಸೂಫ್‌‌, ಎಂದು ತಿಳಿಸಿದ್ದು, ವಶಕ್ಕೆ ಪಡಕೊಂಡವರ ತಪ್ಪಿತತನವನ್ನು ತಿಳಿಯಪಡಿಸಿ ದಸ್ತಗಿರಿ ಮಾಡಿ, ಗರಗರ ಮಂಡಲ ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ಹಣ 2820/- ರೂಪಾಯಿ, ಹಳೇ ಪೇಪರ್‌ -2, ಕ್ಯಾಂಡಲ್‌4, ಚಾರ್ಟ್‌- 1, ಗರಗರ ಮಂಡಲ ಕಾಯಿ -3, ಕರಡಿಕೆ-1 ನ್ನು ಸ್ವಾಧೀನಪಡಿಸಿಕೊಂಡಿದ್ದು, ಆರೋಪಿಗಳು ತಮ್ಮ ಸ್ವಂತ ಲಾಭಕೋಸ್ಕರ ಸಾರ್ವಜನಿಕ ಸ್ಥಳದಲ್ಲಿ ಗರಗರ ಮಂಡಲ ಎಂಬ ಜುಗಾರಿ ಆಟ ಆಡಿರುವುದರಿಂದ ಕರ್ನಾಟಕ ಪೊಲೀಸ್‌‌ ಕಾಯ್ದೆ ಕಲಂ 87 ರಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 13/14 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: