Monday, February 10, 2014

Daily Crime Reported on 10/02/2014 at 17:00 Hrs.


 ಅಸ್ವಾಭಾವಿಕ ಮರಣ ಪ್ರಕರಣ
 
  • ಕಾರ್ಕಳ: ಫಿರ್ಯಾದಿದಾರರಾದ ವೃಷಭರಾಜ ಕಡಂಬ (42) ತಂದೆ ಜಿನರಾಜ ಅಜ್ರಿ. ವಾಸ: ಕೇರ್ತಾಡಿ, ಕುಕ್ಕುಂದೂರು  ಗ್ರಾಮ, ಕಾರ್ಕಳ ತಾಲೂಕು ಎಂಬವರು ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಗುಂಡ್ಯಡ್ಕ ಎಂಬಲ್ಲಿ ಕಪ್ಪು ಕಲ್ಲಿನ ಕೋರೆ ವ್ಯವಹಾರ ನಡೆಸುತ್ತಿದ್ದು ಅವರ ಕಲ್ಲಿನ ಕೋರೆಯಲ್ಲಿ ರಜಾಕ್ (ಪ್ರಾಯ 35 ರಿಂದ 40 ವರ್ಷ) ಎಂಬವರು ಕೆಲಸಕ್ಕಿದ್ದು ಕೋರೆ ಹತ್ತಿರದ ಶೆಡ್ಡಿನಲ್ಲಿ ಒಬ್ಬರೇ ವಾಸಮಾಡಿಕೊಂಡಿದ್ದು ಸದ್ರಿ ರಜಾಕನು ಒಂಟಿಯಾಗಿದ್ದು, ತಾನು ಒಂಟಿಯಾಗಿದ್ದ ಕಾರಣ ಅಥವಾ ಬೇರೆ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 10.02.2014 ರಂದು ರಾತ್ರಿ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಗುಂಡ್ಯಡ್ಕ ಎಂಬಲ್ಲಿ ತಾನು ವಾಸ ಮಾಡುತ್ತಿರುವ ಶೆಡ್ಡಿನ ಮರದ ಜಂತಿಗೆ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದ್ದು ಆತನ  ವಿಳಾಸ ಹಾಗು ವಾರಿಸುದಾರರ ಬಗ್ಗೆ ಮಾಹಿತಿ ಇರುವುದಿಲ್ಲ ಎಂಬುದಾಗಿ ವೃಷಭರಾಜ ಕಡಂಬರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 08/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  ಮೃತರ ಬಗ್ಗೆ ಸುಳಿವು ಸಿಕ್ಕಿದ್ದಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08258-232083, ವೃತ್ತ ಕಛೇರಿ ಕಾರ್ಕಳ ದೂರವಾಣಿ ಸಂಖ್ಯೆ 08258-231083 ರವರನ್ನು ಸಂಪರ್ಕಿಸಬೇಕಾಗಿ ಈ ಮೂಲಕ ಕೋರಲಾಗಿದೆ.


ಹಲ್ಲೆ ನಡೆಸಿ ಜೀವ ಬೆದರಿಕೆ ನೀಡಿದ ಪ್ರಕರಣ
  • ಮಲ್ಪೆ: ದಿನಾಂಕ 09/02/2014 ರಂದು 19:50 ಗಂಟೆಗೆ ಪಿರ್ಯಾದಿದಾರರಾದ ಮಹಮ್ಮದ್ ಯಾಶಿರ್ಣ (25) ತಂದೆ: ಸರ್ಫೂಲ್ಲಾ ಸಾಹೇಬ್ ವಾಸ: ಬೈಲ್ ಕೆರೆ, ಕೊಡವೂರು ಗ್ರಾಮ ಎಂಬವರ ಮನೆಗೆ ಅವರ ನೆರೆಕೆರೆಯ ಆರೋಪಿ ಸೈಪುಲ್ಲಾ ಎಂಬವರು ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರಿಗೆ ಹಾಗೂ ಪಿರ್ಯಾದಿದಾರರ ತಾಯಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರಿಗೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಅಲ್ಲೆ ಇದ್ದ ಕಬ್ಬಿಣದ ಕುರ್ಚಿಯಿಂದ ಪಿರ್ಯಾದಿದಾರರಿಗೆ ಹಾಗೂ ಪಿರ್ಯಾದಿದಾರರ ತಂದೆಗೆ ಹಲ್ಲೆ ನಡೆಸಿ ತಡೆಯಲು ಬಂದ ಪಿರ್ಯಾದಿದಾರರ ತಾಯಿಯನ್ನು ದೂಡಿ ಹಾಕಿ, ಕಿಟಕಿ ಗಾಜುಗಳನ್ನು ಒಡೆದು ಹಾಕಿ ರೂಪಾಯಿ 2000 ಗಳಷ್ಟು ನಷ್ಟವುಂಟು ಮಾಡಿರುವುದಾಗಿದೆ ಎಂಬುದಾಗಿ ಆರೋಪಿಸಿ ಮಹಮ್ಮದ್ ಯಾಶಿರ್ಣ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 26/2014 ಕಲಂ 448,504,506,323,324,427 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅನುಮಾನಾಸ್ಪದ ವ್ಯಕ್ತಿಯ ಬಂಧನ

  • ಕಾಪು: ದಿನಾಂಕ 10/02/2014 ರಂದು 04:00 ಗಂಟೆಗೆ ಕಾಪು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಬಿ. ಲಕ್ಷ್ಮಣ ರವರು ಠಾಣಾ ಸಿಬ್ಬಂದಿಯವರೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಲ್ಲಾರು ಗ್ರಾಮದ ಜನಾರ್ಧನ ದೇವಸ್ಥಾನದ ಬಳಿ ಆರೋಪಿ ಗೋಪಾಲ ತೇಜ (38) ತಂದೆ ಶಿವಪ್ಪ ತೇಜ ವಾಸ: ಸಜೆಡ್ರಾಮಕುಂಜಿ ಪೊಸ್ಟ್, ಬಾಗಲಕೋಟೆ ತಾಲೂಕು ಎಂಬಾತನು ಅನುಮನಾಸ್ಪದವಾಗಿ ದೇವಸ್ಥಾನದ ಗೋಡೆಯ ಬಳಿ ನಿಂತುಕೊಂಡಿದ್ದು, ಅಲ್ಲದೇ ಪೊಲೀಸ್ ಜೀಪನ್ನು ಕಂಡು ಓಡಲು ಪ್ರಯತ್ನಿಸಿದವನನ್ನು ಹಿಡಿದು ಅಪರಾತ್ರಿಯಲ್ಲಿ ಅಲ್ಲಿರುವ ಬಗ್ಗೆ ವಿಚಾರಿಸಲಾಗಿ ಸಮರ್ಪಕವಾಗಿ ಉತ್ತರಿಸದೇ ಇದ್ದು, ಈತನು ಯಾವುದೋ ಬೇವಾರೆಂಟು ತಕ್ಷೀರು ನಡೆಸುವ ಇರಾದೆ ಉಳ್ಳವನೆಂದು ಸಂಶಯಗೊಂಡು ಆತನನ್ನು ವಶಕ್ಕೆ ಪಡೆದು ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 18/2014 ಕಲಂ 109 ಸಿಆರ್‌ಪಿಸಿ  ಯಂತೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ  

  • ಹಿರಿಯಡ್ಕ: ಪಿರ್ಯಾದಿದಾರರಾದ ಸುಂದರ ಮೈಂದನ್ (47) ತಂದೆ ದಿ. ಮುದ್ದು ಪುತ್ರನ್, ವಾಸ: ಶ್ರೀಶೇಷ, ಅಂಜಾರು, ಹಿರಿಯಡಕ ಅಂಚೆ, ಅಂಜಾರು ಗ್ರಾಮ, ಉಡುಪಿ ತಾಲೂಕು ಎಂಬವರ ಅಣ್ಣ ಆನಂದ ಮೈಂದನ್ (56) ಎಂಬವರು ವಿಪರೀತ ಶರಾಬು ಕುಡಿತದ ಚಟವುಳ್ಳವರಾಗಿದ್ದು ದಿನಾಂಕ 09.02.2014 ರಂದು 21:00 ಗಂಟೆಯಿಂದ 10.02.2014 ರಂದು ಬೆಳಗ್ಗೆ 07:45 ಗಂಟೆಯ ಮಧ್ಯೆ ಸಂಸಾರ ನಿರ್ವಹಣೆ ಮಾಡುವ ವಿಚಾರದಲ್ಲಿ ಮನನೊಂದು  ಉಡುಪಿ ತಾಲೂಕಿನ ಅಂಜಾರು ಗ್ರಾಮದ ಅಂಜಾರು ಎಂಬಲ್ಲಿ ತಮ್ಮ ವಾಸ್ತವ್ಯದ ಮನೆ ಸಮೀಪ ಮರದ ಕೊಂಬೆಗೆ ನೈಲಾನ್ ಹಗ್ಗಕಟ್ಟಿ, ಅದರಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಸುಂದರ ಮೈಂದನ್ ರವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 03/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರ ಪ್ರಕರಣ 
  • ಕೋಟ: ದಿನಾಂಕ 09/02/2014 ರಂದು ಸಂಜೆ 5:30 ಗಂಟೆಗೆ ಉಡುಪಿ ತಾಲೂಕು ನಂಚಾರು ಗ್ರಾಮದ ಹೆಸ್ಕುಂದ ಎಂಬಲ್ಲಿ ಅಕ್ರಮವಾಗಿ ಅರಣ್ಯ ಸಂಪತ್ತನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಗೋಳಿಯಂಗಡಿ ಗಸ್ತಿ ಅರಣ್ಯ ರಕ್ಷಕರಾದ ರವಿ ಇವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸದ್ರಿ ಅರಣ್ಯ ರಕ್ಷಕರು ಹಾಗೂ ವಿಠಲ ದಿನಗೂಲಿ ಅರಣ್ಯ ವೀಕ್ಷಕ ಇವರುಗಳು ಸಮವಸ್ತ್ರದಲ್ಲಿ ಮೋಟಾರು ವಾಹನ ಸಂಖ್ಯೆ ಕೆ.ಎ.20 ಇಇ-7516 ನೇಯದರಲ್ಲಿ ಸದ್ರಿ ಸ್ಥಳಕ್ಕೆ ದಾವಿಸಿ ಬಂದು ಹೆಸ್ಕುಂದ ಅಂಗನವಾಡಿ ಶಾಲೆ ಸಮೀಪದಲ್ಲಿ ಬರುತ್ತಿದ್ದ ಕೆ.ಎ.20 ಎ 1049 ನೇ ಲಾರಿಯನ್ನು ತಡೆದು ನಿಲ್ಲಿಸಿ ಸದ್ರಿ ಲಾರಿಯಲ್ಲಿ ಕಟ್ಟಿಗೆ ಸಾಗಾಟ ಮಾಡುತ್ತಿದ್ದುದನ್ನು ಗಮನಿಸಿ ಲಾರಿಯಲ್ಲಿದ್ದವರಲ್ಲಿ ಈ ಬಗ್ಗೆ ರಹದಾರಿ ಕೇಳಿದಾಗ ರಹದಾರಿ ಇಲ್ಲವೆಂದು ತಿಳಿಸಿದ ಮೇರೆಗೆ ಸದ್ರಿ ಲಾರಿ ಹಾಗೂ ಲಾರಿಯಲ್ಲಿದ್ದ ಸೊತ್ತುಗಳನ್ನು ಅಮಾನತು ಪಡಿಸಲು ಮುಂದಾದ ಅರಣ್ಯ ಸಿಬ್ಬಂದಿಯವರ ಮೇಲೆ ಆರೋಪಿಗಳಾದ ಪ್ರಸಾದ್ ಶೆಟ್ಟಿ ಮತ್ತು ನಾರಾಯಣ ಎಂಬವರು ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ನಡೆಸಿ ಸಿಬ್ಬಂದಿಯವರ ಮೋಟಾರು ಸೈಕಲನ್ನು ಜಖಂಗೊಳಿಸಿ ಬಲತ್ಕಾರವಾಗಿ ಲಾರಿಯನ್ನು ತೆಗೆದುಕೊಂಡು ಹೋಗಿರುತ್ತಾರೆ ಎಂಬುದಾಗಿ ವಲಯ ಅರಣ್ಯಾಧಿಕಾರಿ, ಶಂಕರನಾರಾಯಣ ವಲಯ ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 27/2014 ಕಲಂ 353, 427 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: