Sunday, February 09, 2014

Daily Crimes Reported as On 09/02/2014 at 19:30 Hrs

ಅಪಘಾತ ಪ್ರಕರಣ
  • ಬ್ರಹ್ಮಾವರ:ದಿನಾಂಕ: 09/02/2014 ರಂದು 12:40 ಗಂಟೆಗೆ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಅರ್ಜುನ್ ಇಂಡಸ್ಟ್ರೀಸ್ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಆರೋಪಿ ಮಹಮ್ಮದ್ ರಫೀಕ್ ತನ್ನ ಬಸ್‌ ನಂಬ್ರ ಕೆಎ-20-ಬಿ-7757 ನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ಪಿರ್ಯಾದಿದಾರರಾದ ಪ್ರಶಾಂತ್ ಆರ್.ಕಿಣಿ (35) ತಂದೆ:ಆರ್.ಜಿ ಕಿಣಿ ವಾಸ:ಪ್ರಶಾಂತ್, ಕಾಪು ಅಂಚೆ, ಉಡುಪಿ ತಾಲೂಕುರವರು ಕಾಪುವಿನಿಂದ ಚೇಂಪಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ನಂಬ್ರ ಕೆಎ-20-ಝಡ್-3827 ನೇದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಪ್ರಶಾಂತ್ ಆರ್.ಕಿಣಿರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 27/14 ಕಲಂ:279 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇಸ್ಪಿಟ್‌ ಜುಗಾರಿ ಪ್ರಕರಣ
  • ಶಿರ್ವಾ:ದಿನಾಂಕ 09/02/2014 ರಂದು ಪಿರ್ಯಾದಿದಾರರಾದ ಅಶೋಕ್ ಪಿ, ಪಿ.ಎಸ್.ಐ, ಶಿರ್ವಾ ಠಾಣೆರವರು ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಶಿರ್ವಾ ಗ್ರಾಮದ ಪದವು ಜಾರಂದಾಯ ಸ್ಥಾನದ ಹತ್ತಿರದ ಹಾಡಿಯಲ್ಲಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಜುಗಾರಿ ಆಟ ಆಡುತಿದ್ದಾರೆಂದು ದೊರೆತ ಖಚಿತ ಮಾಹಿತಿಯಂತೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ರೋಪಿಗಳಾದ 1)ರವಿ 2)ಗುತ್ತಪ್ಪ 3)ರಾಜು ಬಸಪ್ಪ ದೊಡ್ಡಮನಿ 4)ನಿಸ್ಸೀಮಪ್ಪ 5)ಕಣ್ಣಪ್ಪ 6)ಪಕ್ಕೀರಪ್ಪ ಗೌಡ 7)ಸುರೇಶ ಇವರುಗಳನ್ನು ದಸ್ತಗಿರಿ ಮಾಡಿ, ಆಟಕ್ಕೆ ಉಪಯೋಗಿಸಿದ ನಗದು 1560/- ರೂಪಾಯಿ, ಸ್ಪೀಟ್‌ ಎಲೆಗಳು-52 ಹಾಗೂ ಪೇಪರನ್ನು ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 23/2014 ಕಲಂ 87 ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಿರುಕುಳ ಪ್ರಕರಣ
  • ಉಡುಪಿ ನಗರ:ಪಿರ್ಯಾದಿದಾರರಾದ ಶಕುಂತಲಾ (45) ಗಂಡ:ಶಿವಾನಂದ, ವಾಸ:ಲಕ್ಷ್ಮೀ ನಿವಾಸ, ಬುಡ್ನರ್, 2ನೇ ಕ್ರಾಸ್,ಕುಂಜಿಬೆಟ್ಟು,ಉಡುಪಿ ತಾಲೂಕು, ಉಡುಪಿರವರ ಗಂಡನಾದ ಶಿವಾನಂದ ಎಂಬುವರು ದಿನ ನಿತ್ಯ ಶರಾಬು ಕುಡಿದು ಬಂದು ಶಕುಂತಲಾರವರಿಗೆ ಮಾನಸಿಕ ಮತ್ತು ದೈಹಿಕ  ಕಿರುಕುಳ ನೀಡುತ್ತಿದ್ದು, ದಿನಾಂಕ 09/02/2014 ರಂದು ಸಂಜೆ  4:00 ಗಂಟೆಗೆ ಶಿವಾನಂದರವರು ಮನೆಗೆ ಬಂದು ಕರೆಂಟಿನ ಪ್ಯೂಸ್‌ ತೆಗೆದು ಶಕುಂತಲಾರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಅಲ್ಲೇ ಇದ್ದ ಒಂದು ಕಬ್ಬಿಣದ ಸರಳಿನಿಂದ ತಲೆಗೆ ಹೊಡೆದ ಪರಿಣಾಮ ಶಕುಂತಲಾರವರ ತಲೆಗೆ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಶಕುಂತಲಾರವರ ಮಕ್ಕಳು ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆತಂದು ಪರೀಕ್ಷಿಸಿದ ವೈದ್ಯರು ಶಕುಂತಲಾರವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಶಕುಂತಲಾರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 40/2014 ಕಲಂ 498 (ಎ), 324, 504 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

No comments: