Saturday, February 15, 2014

Daily Crime Reports As On 15/02/2014 AT 07:00 Hrs

ಅಪಘಾತ ಪ್ರಕರಣ 
  • ಕಾರ್ಕಳ ನಗರ: ದಿನಾಂಕ; 13.02.2014 ರಂದು ರಾತ್ರಿ 9:30  ಗಂಟೆಗೆ ಕಾರ್ಕಳ ತಾಲೂಕು ಕಸಬಾ ಗ್ರಾಮದ ಗ್ಯಾಸ್ ಗೋಡಾನ್ ಬಳಿ ಪಿರ್ಯಾದಿ ಜಗದೀಶ ಪೂಜಾರಿ (24) ತಂದೆ: ವಿಠಲ ಪೂಜಾರಿ ವಾಸ: ಬೀಜದಡಿ ಮನೆ ಪಾಂಜಾಳ ನಲ್ಲೂರು ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಇವರು ಕೆಲಸ ಮುಗಿಸಿ ತನ್ನ  KA-20 EA 1831  ನೇ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಲ್ಲಿ ಕಾರ್ಕಳದಿಂದ ಬಜಗೋಳಿ ಕಡೆಗೆ ಹೋಗುತ್ತಿರುವಾಗ  ಹಿಂದಿನಿಂದ ಬಂದ  KA-20 N 2936 ನೇ ಮಾರುತಿ 800 ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಆಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರನ್ನು ಓವರ್ ಟೇಕ್ ಮಾಡಿ  ಮುಂದೆ ಹೋಗುವಾಗ ಎದುರಿನಿಂದ ಬಂದ ವಾಹನಕ್ಕೆ ಸೈಡ್ ಕೊಡುವರೇ ಒಮ್ಮೇಲೆ ಎಡಕ್ಕೆ ತಿರುಗಿಸಿದ ಪರಿಣಾಮ ಕಾರಿನ ಹಿಂಭಾಗ ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ತಾಗಿ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿ ಜಗದೀಶ ಪೂಜಾರಿ ರವರಿಗೆ ಬಲ ಕಾಲಿಗೆ ಮೂಳೆ ಮುರಿತದ ಹಾಗೂ ಎಡ ಕಾಲಿನ ಮೊಣ ಗಂಟಿಗೆ ರಕ್ತ ಬರುವ ಗಾಯವುಂಟಾಗಿರುತ್ತದೆ. ಈ ಬಗ್ಗೆ ಜಗದೀಶ ಪೂಜಾರಿ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 24/2014 ಕಲಂ 279,338 ಭಾ.ದ.ಸಂ  ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಉಡುಪಿ ಸಂಚಾರ: ಪಿರ್ಯಾದಿ ಸುದೀರ್ (27) ತಂದೆ: ದಿ: ಸುಂದರ ನಾಯ್ಕ್ ವಾಸ: ಗೋಪಾಲಪುರ 4 ನೇ ಕ್ರಾಸ್ ಸಂತೆಕಟ್ಟೆ, ಉಡುಪಿ ರವರು ದಿನಾಂಕ:13/02/2014 ರಂದು ಕೆಲಸ ಮುಗಿಸಿ ತನ್ನ ಬಾಬ್ತು ಬೈಕಿನಲ್ಲಿ ಸಂತೆಕಟ್ಟೆಯ ರಾ.ಹೆ. 66 ರಲ್ಲಿ ಮಧುವನ ಬಾರ್ ಮತ್ತು ರೆಸ್ಟೋರೆಂಟ್‌ ಬಳಿ ತಲುಪಿ ತನ್ನ ಪರಿಚಯದವರೊಂದಿಗೆ ಸುಮಾರು 08:00 ಗಂಟೆಯ ಸಮಯದಲ್ಲಿ ಮಾತನಾಡುತ್ತಿರುವಾಗ ಅಂಬಾಗಿಲು ಕಡೆಯಿಂದ ಸಂತೆಕಟ್ಟೆ ಕಡೆಗೆ ಬೈಕ್ ನಂಬ್ರ. ಕೆಎ-20-ಜೆ-9632 ನೇದರಲ್ಲಿ ಸುಕೇಶ್‌ ರವರು ಸಹ ಸವಾರನ್ನಾಗಿ ಸತೀಶ್‌ ರವರನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದು ಮಧುವನ ಬಾರ್ ಮತ್ತು ರೆಸ್ಟೋರೆಂಟ್‌ ಬಳಿ ರಸ್ತೆ ದಾಟಲು ನಿಂತಿದ್ದ ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು ಪಾದಾಚಾರಿಯ ಬಲಕಾಲಿಗೆ ಹಾಗೂ ಬಲಕೈ ತೋಳಿಗೆ ತೀವೃ ಗಾಯವಾಗಿದ್ದು, ಮುಖಕ್ಕೆ ತರಚಿದ ಗಾಯವಾಗಿರುತ್ತದೆ. ಪಾದಾಚಾರಿ ಮಾತನಾಡುತ್ತಿರಲಿಲ್ಲ. ಬೈಕಿನ ಸಹ ಸವಾರನಿಗೂ ಗಾಯಗಳಾಗಿರುತ್ತದೆ. ಕೂಡಲೇ ಒಂದು ಅಟೋ ರಿಕ್ಷಾದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುವುದಾಗಿದೆ. ಪಾದಾಚಾರಿಯ ಪರಿಚಯಯಿರುವುದಿಲ್ಲ. ದಿನಾಂಕ: 14/02/2014 ರಂದು ಗಾಯಾಳುವಿಗೆ ಚಿಕಿತ್ಸೆ ಫಲಕಾರಿಯಾಗದೇ ಪೂರ್ವಹ್ನ 11:10 ಗಂಟೆಗೆ ಮೃತಪಟ್ಟಿರುವುದಾಗಿರುತ್ತದೆ ಈ ಬಗ್ಗೆ ಸುಧೀರ್‌ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 17/2014  ಕಲಂ. 279,337,304( ಎ) ಭಾ.ದ.ಸಂ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ
  • ಬ್ರಹ್ಮಾವರ: ದಿನಾಂಕ: 08/02/2014 ರಂದು ಬೆಳಗ್ಗೆ 7:00 ಗಂಟೆಗೆ ಉಡುಪಿ ತಾಲೂಕು ಚೇರ್ಕಾಡಿ ಗ್ರಾಮದ ಕನ್ನಾರು ಎಂಬಲ್ಲಿ ಪಿರ್ಯಾದಿ ಯಶೋಧ (40) ಗಂಡ; ಗುಂಡು ನಾಯ್ಕ ವಾಸ: ಕನ್ನಾರು, ತೆಂಗಿನ ಜಡ್ಡು, ದರ್ಖಾಸು, ಚೇರ್ಕಾಡಿ ಗ್ರಾಮ ಇವರ ಗಂಡ ಗುಂಡು ನಾಯ್ಕ (48) ರವರು ಕೆಲಸಕ್ಕೆಂದು ಉಡುಪಿಗೆ ಹೋದವರು ಈ ವರೆಗೆ ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ಯಶೋಧರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ  30/14  ಕಲಂ: ಮನುಷ್ಯ ಕಾಣೆ  ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: