Saturday, February 15, 2014

Daily Crime Reported on 15/02/2014 at 17:00 Hrs.

ಅಪಘಾತ ಪ್ರಕರಣ 
  • ಮಲ್ಪೆ: ದಿನಾಂಕ 11/02/2014ರಂದು ಗಣೇಶ್ ನಾಯ್ಕ (29) ತಂದೆ: ರಾಮ ನಾಯ್ಕ ವಾಸ: ಲಕ್ಷ್ಮೀನಗರ, ತೆಂಕನಿಡಿಯೂರು ಗ್ರಾಮ    ಇವರು ತನ್ನ ಬಾಬ್ತು ಮೊಟಾರ್ ಸೈಕಲ್ ನಂ. ಕೆ.ಎ. 20 ಇಡಿ 4630 ನೇಯದರಲ್ಲಿ ತನ್ನ ಮನೆಯಿಂದ ಮಲ್ಪೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವ ಸಮಯ ಸುಮಾರು ಮದ್ಯಾಹ್ನ 12.00 ಗಂಟೆ ಸಮಯಕ್ಕೆ ಕೊಡವೂರ ಕೆ,ಟಿ ಪೂಜಾರಿಯವರ ಮನೆಯ ಬಳಿ ಗರಡಿಮಜಲ್ ಕಡೆಯಿಂದ ಕೆಎ 20 ಪಿ 4530ನೇ ಕಾರನ್ನು ಅದರ ಚಾಲಕ ಕರುಣಾಕರ ಶೆಟ್ಟಿ ಎಂಬುವವರು ಚಾಲನೆ ಮಾಡಿಕೊಂಡು ಬಂದು ಗಣೇಶ್ ನಾಯ್ಕ ಅವರ ಮೊಟಾರ್ ಸೈಕಲ್‌ನ್ನು ಒವರ್ ಟೇಕ್ ಮಾಡಿ ಯಾವುದೇ ಸೂಚನೆಯನ್ನು ನೀಡದೆ ನಿರ್ಲಕ್ಷತನದಿಂದ ಕಾರನ್ನು ಎಡಕ್ಕೆ ತಿರುಗಿಸಿ ಎದುರಿನಿಂದ ಅಂದರೆ ಕೊಡವೂರ ಕಡೆಯಿಂದ ಬೇರೆ ವಾಹನ ಬಂದಾಗ ಒಮ್ಮೆಲೆ ಕಾರನ್ನು ಬಲಬದಿಗೆ ತಿರುಗಿಸಿದ ಪರಿಣಾಮ ಗಣೇಶ್ ನಾಯ್ಕರ ಮೊಟಾರ್ ಸೈಕಲ್, ಆರೋಪಿತ ಕಾರಿನ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಗಣೇಶ್ ನಾಯ್ಕರು ಮೊಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲ ಕೈ ಭುಜದ ಜಾಯಿಂಟ್ ತಪ್ಪಿದ್ದು ಅಲ್ಲದೆ ಎಡ ಕೈ ತೋಳಿನಲ್ಲಿ ತೆರಚಿದ ಗಾಯ ಹಾಗೂ ಬಲಕಾಲಿನ ಪಾದದ ಬಳಿ ತೆರಚಿದ ಗಾಯವಾಗಿರುತ್ತದೆ. ಈ ಅಪಘಾತಕ್ಕೆ ಕೆ.ಎ 20 ಪಿ 4530ನೇ ಕಾರಿನ ಚಾಲಕನ ಅಜಾಗೂರಕತೆ ಹಾಗೂ  ನಿರ್ಲಕ್ಷತನದ ಚಾಲನೆಯೇ ಕಾರಣವಾಗಿರುತ್ತದೆ ಎಂದು ಗಣೇಶ್ ನಾಯ್ಕರವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 28/2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 ಅಕ್ರಮ ಮದ್ಯ ಮಾರಾಟ ಪ್ರಕರಣ 
  • ಹೆಬ್ರಿ: ಸೀತಾರಾಮ್.ಪಿ, ಪಿಎಸ್‌‌‌ಐ, ಹೆಬ್ರಿ ಪೊಲೀಸ್ ಠಾಣೆ ಇವರು ದಿನಾಂಕ: 15-02-2014 ರಂದು ಠಾಣೆಯಲ್ಲಿರುವಾಗ ನಾಡ್ಪಾಲು ಗ್ರಾಮದ ಸೊಮೇಶ್ವರ ವೈಜಂಕ್ಷನ್ ನಿಂದ ಕಾಸನ ಮಕ್ಕಿಗೆ ಹೋಗುವ ರಸ್ತೆಯ ಬಲ ಬದಿಯಲ್ಲಿರುವ ಹೋಟೇಲ್ ಬದಿಯಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ದೊರೆತ ಗುಪ್ತ ಮಾಹಿತಿಯಂತೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ಆಪಾದಿತ ಅಶೋಕ್ ಶೆಟ್ಟಿ (34) ತಂದೆ:ಅಣ್ಣಪ್ಪ ಶೆಟ್ಟಿ ವಾಸ: ಕೂಡ್ಲು ನಾಡ್ಪಾಲು ಗ್ರಾಮ ಕಾರ್ಕಳ ತಾಲೂಕು ಈತನನ್ನು ವಶಕ್ಕೆ ತೆಗೆದುಕೊಂಡು ಆತನಿಂದ ಈಗಾಗಲೇ ಮದ್ಯ ಮಾರಾಟ ಮಾಡಿ ಸಂಗ್ರಹಿಸಿದ ನಗದು 240/- ರೂಪಾಯಿ, 180 ಎಂ.ಎಲ್ ನ ಕ್ರೌನ್ ಫೈನ್ ವಿಸ್ಕಿ ಶೀಲ್ಡ್ ಪ್ಯಾಕೆಟ್‌ -48 ಹಾಗೂ ಒಂದು ಹಳದಿ ಬಣ್ಣದ ಪ್ಲಾಸ್ಟಿಕ್‌ ಚೀಲವನ್ನು ಸ್ವಾಧೀನ ಪಡಿಸಿಕೊಂಡು ಠಾಣಾ ಅಪರಾಧ ಕ್ರಮಾಂಕ: 14/2014, ಕಲಂ: 32, 34 ಕೆ.ಇ.ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ. 
ಇತರೆ ಪ್ರಕರಣ  
  • ಮಲ್ಪೆ: ಶ್ರೀಮತಿ ಜಲಜ (48) ಗಂಡ: ಶಂಕರ ಮರಕಾಲ ವಾಸ: ಮಂಜುಳ ನಿಲಯ, ಹುಣದೆಬೆಟ್ಟು, ಚಿತ್ರಪಾಡಿ ಇವರ ಮಗಳು ಶ್ರೀಮತಿ ಅನಿತಾ (24)ಳನ್ನು 4 ವರ್ಷದ ಹಿಂದೆ ಪಡುತೋನ್ಸೆ ಗ್ರಾಮದ ಕೋಡಿಬೆಂಗ್ರೆ ನಿವಾಸಿ ಕೃಷ್ಣರಾಜ ಎಂಬುವವರಿಗೆ ಮದುವೆ ಮಾಡಿಕೊಟ್ಟಿದ್ದು ಅವರಿಗೆ ಎರಡೂವರೆ ವರ್ಷದ ಒಂದು ಹೆಣ್ಣು ಮಗಳಿದ್ದು ಈಗ 5 ತಿಂಗಳ ಗರ್ಭವತಿಯಾಗಿದ್ದು ಮೃತ ಅನಿತಾಳ ಗಂಡ ಕೃಷ್ಣರಾಜನು ಅನಿತಾಳಿಗೆ ಸರಿಯಾಗಿ ನೋಡಿಕೊಳ್ಳದೆ ಅವಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಆತನ ಹಿಂಸೆ ತಡೆಯಲಾರದೆ ಮನನೊಂದು ಈ ದಿನ ದಿ.14/02/2014 ರಂದು ಅಪರಾಹ್ನ 02:00 ಗಂಟೆಯಿಂದ 03:00 ಗಂಟೆಯೊಳಗೆ ಗಂಡನ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಶ್ರೀಮತಿ ಜಲಜರವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 29/2014 ಕಲಂ 498(ಎ), 306 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: