Thursday, February 20, 2014

Daily Crime Reported on 20/02/2014 at 17:00 Hrs.ಅಪಘಾತ ಪ್ರಕರಣ

  • ಕೋಟ: ದಿನಾಂಕ 19/02/2014 ರಂದು ಆರೋಪಿ ಕೆ.ಎ.20 ವೈ-3630 ನೇ ಮೋಟಾರು ಸೈಕಲ್ ಸವಾರ ದಿನೇಶ್ ಕೆ.ಎಸ್ ತನ್ನ ಬಾಬ್ತು ಕೆ.ಎ.20 ವೈ-3630 ನೇ ಮೋಟಾರು ಸೈಕಲನ್ನು ರಾ.ಹೆ.66 ರಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  16:30 ಗಂಟೆಗೆ ಉಡುಪಿ ತಾಲೂಕು ಗಿಳಿಯಾರು ಗ್ರಾಮದ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಎದುರು ರಸ್ತೆ ಬದಿಯಲ್ಲಿ ನಿಂತಿದ್ದ ಪಿರ್ಯಾದಿ ಸಂದೀಪ್ ನಾಯಕ್ ತಂದೆ: ರಘುರಾಮ ನಾಯ್ಕ ವಾಸ: ಲಕ್ಷ್ಮೀ ವೆಂಕಟರಮಣ ನಿಲಯ ಟಿ.ವಿ.ಸೈಬರ್ ಕೋಟ ಗಿಳಿಯಾರು ಗ್ರಾಮ ಉಡುಪಿ ತಾಲೂಕು ಇವರ ದೊಡ್ಡಪ್ಪ 79 ವರ್ಷ ಪ್ರಾಯದ ಉಪೇಂದ್ರ ನಾಯಕ್ ಎಂಬವರಿಗೆ ಡಿಕ್ಕಿ ಹೊಡೆದು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಮೋಟಾರು ಸೈಕಲ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಉಪೇಂದ್ರ ನಾಯ್ಕ ರವರನ್ನು ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಸಂದೀಪ್ ನಾಯಕ್ ಇವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 40/2014 ಕಲಂ: 279, 304(ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

  • ಕುಂದಾಪುರ: ದಿನಾಂಕ 19/02/2014 ರಂದು ಪಿರ್ಯಾದಿ ಶ್ರೀಮತಿ ಸರೋಜಾ ಗಂಡ: ಬಾಬು ರಾವ್ ವಾಸ: ರಾಮ ಮಂದಿರ ಹತ್ತಿರ ಸಿದ್ದನಾಯಕ ರೋಡ್ ಕಸಬಾ ಇವರು ಮನೆಯಲ್ಲಿರುವಾಗ  ಆಪಾದಿತ ಗಣೇಶ ಆಚಾರ್ಯ, ಶ್ರೀಮತಿ ರೇಖಾ ಮತ್ತು ಕುಮಾರಿ ದೀಕ್ಷಾ ಇವರು  ಪಿರ್ಯಾದಿ ಮನೆಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ನೀವು ನಿರ್ಮಿಸುತ್ತಿರುವ ಪಾಯಿಖಾನೆಯನ್ನು ಸಂಜೆ ಒಳಗೆ  ಮುಚ್ಚದಿದ್ದರೆ  ಕೊಂದು ಬಿಡುವುದಾಗಿ ಜೀವ ಬೆದರಿಕೆ ಹಾಕಿದ್ದಲ್ಲದೇ ಆಪಾದಿತ ರೇಖಾಳು ಫಿರ್ಯಾದಿದಾರರ ಕೆನ್ನೆಗೆ ಕೈಗಳಿಂದ ಹೊಡೆದಿರುವುದಾಗಿದೆ. ಈ ಬಗ್ಗೆ ಶ್ರೀಮತಿ ಸರೋಜಾ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 52/14 ಕಲಂ:447.504.506.323 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಬೈಂದೂರು: ಪಿರ್ಯಾದಿ ಎನ್ ಪ್ರಭಾಕರ್ ಶೆಟ್ಟಿ,ತಂದೆ: ಶಿನಪ್ಪ ಶೆಟ್ಟಿ  ವಾಸ-ಲಕ್ಷ್ಮೀ ಕೃಪಾ ನಿಲಯ, ನೆಲ್ಯಾಡಿ, ತಗ್ಗರ್ಸೆ   ಗ್ರಾಮ, ಕುಂದಾಪುರ ತಾಲ್ಲೂಕು ಇವರು  ದಿನಾಂಕ 17-02-2014ರಂದು ಸಂಜೆ 6.30 ರ ವೇಳೆಗೆ ತಗ್ಗರ್ಸೆ ಗ್ರಾಮದ ಸರ್ವೆ ನಂಬ್ರ 106/1 ರಲ್ಲಿ ತಮ್ಮ ಬಾಬ್ತು ಕೆಎ47 2778 ನೇ ಟಿಪ್ಪರ್ ನ್ನು ನಿಲ್ಲಿಸಿದ್ದು, ದಿನಾಂಕ 18-02-2014 ರಂದು ಬೆಳಗ್ಗೆ 10.00 ಗಂಟೆಗೆ ಫಿರ್ಯಾದುದಾರರು ನೋಡಿದಾಗ ಟಿಪ್ಪರ್ ಇಲ್ಲದ ಕಾರಣ ಸಂಜೆ ವರೆಗೂ ಹುಡುಕಿದರೂ ಸಿಕ್ಕಿರುವುದಿಲ್ಲ. ಸದ್ರಿ ಟಿಪ್ಪರ್ ನ ಮೌಲ್ಯ 9 ಲಕ್ಷ ರೂಪಾಯಿ ಆಗಿದ್ದು, ದಿನಾಂಕ 17-02-2014 ರ ಸಂಜೆ 6.30 ರಿಂದ ದಿನಾಂಕ 18-02-2014 ರ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿದ್ದಾಗಿದೆ. ಈ ಬಗ್ಗೆ ಎನ್ ಪ್ರಭಾಕರ್ ಶೆಟ್ಟಿ ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 35/14 ಕಲಂ: 447, 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರೇ ಪ್ರಕರಣ

  • ಅಜೆಕಾರು: ದಿನಾಂಕ 20/02/2014 ರಂದು ಫಿರ್ಯಾದಿ ಗಿಡ್ಡಿ ಪೂಜಾರ್ತಿ  ಗಂಡ: ಗೋಪ ಪೂಜಾರಿ  :ವಾಸ:ದುಗ್ಗನಬೆಟ್ಟುಮನೆ ಕುಕ್ಕುಜೆ ಗ್ರಾಮ ಇವರ ಮಗಳು  ಶ್ರೀಮತಿ ಮಾಲಿನಿ (26 ವರ್ಷ) ಎಂಬವರು  ರಂದು ಬೆಳಿಗ್ಗೆ ಸುಮಾರು 06:00 ರಿಂದ 7.00 ಗಂಟೆಯ ನಡುವಿನ ವೇಳೆಯಲ್ಲಿ  ಕಾರ್ಕಳ ತಾಲೂಕು ಶಿರ್ಲಾಲು ಗ್ರಾಮದ ಮಲ್ಲಿಗೆ ಮನೆ ಎಂಬಲ್ಲಿ ತನ್ನ ಗಂಡನ ಮನೆಯಲ್ಲಿ  ಯಾವುದೋ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡು  ಮೃತ ಪಟ್ಟಿದ್ದು  ಮೃತರ ಮರಣಕ್ಕೆ ಮೃತರ ಗಂಡ ಹಾಗೂ ಮಾವ ಯುವರಾಜ ಜೈನ್ ಹಾಗೂ ಅತ್ತೆ ಇಂದಿರಾ  ಎಂಬವರು ಚಿತ್ರ ಹಿಂಸೆ ನೀಡಿ ಆಕೆಯ ಮರಣಕ್ಕೆ ಕಾರಣರಾಗಿರುತ್ತಾರೆ  ಎಂಬಿತ್ಯಾದಿ. ಈ ಬಗ್ಗೆ ಗಿಡ್ಡಿ ಪೂಜಾರ್ತಿ  ಇವರು ನೀಡಿದ ದೂರಿನಂತೆ ಅಜೆಕಾರು ಠಾಣಾ ಅಪರಾಧ ಕ್ರಮಾಂಕ 08/2014  ಕಲಂ 498 (ಎ) 306, ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕೊಲೆ ಪ್ರಕರಣ

  • ಕೋಟ: ದಿನಾಂಕ 20/02/2014 ರಂದು ರಾತ್ರಿ 02:00 ಗಂಟೆ ಸುಮಾರಿಗೆ ಆರೋಪಿ ನರಸಿಂಹ 26 ವರ್ಷ ತಂದೆ: ನಾರಾಯಣ ನಾಯ್ಕ ವಾಸ: ಮನೆ ನಂಬ್ರ 2-6 ಜವಳಿಜಡ್ಡು ಹಾರ್ದಳ್ಳಿ ಮಂಡಳ್ಳಿ ಗ್ರಾಮ ಕುಂದಾಪುರ ತಾಲೂಕು   ಈತನು ಕುಂದಾಪುರ ತಾಲೂಕು ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಜವಳಿಜಡ್ಡು ಎಂಬಲ್ಲಿರುವ ತನ್ನ ಮನೆಯಲ್ಲಿ ತನ್ನ ತಂದೆಯು ಖರ್ಚಿಗೆ ಹಣ ಕೊಡಲಿಲ್ಲ, ಜಮೀನು ಪಾಲು ಮಾಡಲಿಲ್ಲ ಎಂಬ ಕಾರಣದಿಂದ ತನ್ನ ತಂದೆ ನಾರಾಯಣ ನಾಯ್ಕ ಎಂಬವರಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು, ದೊಣ್ಣೆಯಿಂದ ಹೊಡೆದು, ಕತ್ತಿಯಿಂದ ಕಡಿದು ತೀವ್ರ ಗಾಯಗೊಳಿಸಿ ಕೊಲೆ ಮಾಡಿದ್ದಾಗಿದೆ. ಈ ಬಗ್ಗೆ ಶ್ರೀಮತಿ ಸೀತಾ ಗಂಡ: ನಾರಾಯಣ ನಾಯ್ಕ ವಾಸ: ಮನೆ ನಂಬ್ರ 2-6 ಜವಳಿಜಡ್ಡು ಹಾರ್ದಳ್ಳಿ ಮಂಡಳ್ಳಿ ಗ್ರಾಮ ಕುಂದಾಪುರ ತಾಲೂಕು  ಇವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 41/14 ಕಲಂ: 302  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


No comments: