Thursday, February 20, 2014

Daily Crime Reported on 20/02/2014 at 07:00 Hrs.

ಅಪಘಾತ ಪ್ರಕರಣಗಳು 

  • ಕುಂದಾಪುರ: ದಿನಾಂಕ 19/02/2014 ಸಮಯ  ಸುಮಾರು  15:00  ಗಂಟೆಗೆ   ಕುಂದಾಪುರ ತಾಲೂಕು ವಡೇರಹೋಬಳಿ   ಗ್ರಾಮದ  ಬಸ್ರೂರು ಮೂರುಕೈ ಬಳಿ ಕಾರಂತರ ಮನೆಯ ಹತ್ತಿರ ರಾಜ್ಯ  ರಸ್ತೆಯಲ್ಲಿ, ಆಪಾದಿತ ಶಾಹಿದ್‌  ಎಂಬವರು, ಕೆಎ 20-ಸಿ-1724 ನೇ ಅಟೋರಿಕ್ಷಾವನ್ನು  ಕುಂದಾಪುರ  ಕಡೆಯಿಂದ  ಬಸ್ರೂರು  ಕಡೆಗೆ  ಅತೀವೇಗ ಹಾಗೂ ಅಜಾಗರುಕತೆಯಿಂದಚಲಾಯಿಸಿಕೊಂಡು ಬಂದು,ಅದೇ ದಾರಿಯಲ್ಲಿ  ಪಿರ್ಯಾದಿ ರಾಮಚಂದ್ರ ಶೇರಿಗಾರ(55)ತಂದೆ ದಿ ಮಂಜುನಾಥ ಶೇರಿಗಾರ  ವಾಸ: ಶ್ರೀ ಕಾರ್ತಿಕೇಯ ದೇವಸ್ಥಾನದ ಹತ್ತಿರ, ಉಳ್ಳೂರು  ಕಂದಾವರ ಗ್ರಾಮರವರು  ಸವಾರಿ ಮಾಡಿಕೊಂಡು ಹೋಗುತ್ತಿದ್ದ  ಕೆಎ20-ಇಡಿ-5728 ನೇ ಟಿ.ವಿ.ಎಸ್‌  ದ್ವಿ ಚಕ್ರ  ವಾಹನಕ್ಕೆ  ಹಿಂಬದಿಯಿಂದ  ಡಿಕ್ಕಿ  ಹೊಡೆದ ಪರಿಣಾಮ  ಪಿರ್ಯಾದಿದಾರರು  ವಾಹನ ಸಮೇತ  ರಸ್ತೆಗೆ ಬಿದ್ದು  ಗಾಯಗೊಂಡು  ಚಿಕಿತ್ಸೆ  ಬಗ್ಗೆ ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ರಾಮಚಂದ್ರ ಶೇರಿಗಾರರವರ ದೂರಿನಂತೆ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 31/2014 ಕಲಂ 279,337 ಐಪಿಸಿ ಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾಪು: ದಿನಾಂಕ 19-02-2014 ರಂದು ಮದ್ಯಾಹ್ನ ಸುಮಾರು 12:30 ಗಂಟೆಗೆ ಪಿರ್ಯಾದುದಾರರಾದ ಶ್ರೀಮತಿ ತೇರೆಸಾ ಡಿಸೋಜಾ (62) ಗಂಡ: ದಿ. ಜಾನ್ ಡಿಸೋಜಾ ವಾಸ: ಅಲೀಸಾ ವಿಲ್ಲಾ ಮಲ್ಲಾರು ಗ್ರಾಮರವರು  ಮಲ್ಲಾರು ಗ್ರಾಮದ ಕೊಪ್ಪಲಂಗಡಿಯ ಮೈಯ್ಯದಿ ಸಾಹೇಬರ ಅಂಗಡಿ ಹತ್ತಿರ ವಿರುವ  ರಾಹೇ 66 ರ ಡಾಮರು ರಸ್ತೆಯ ಪಶ್ಚಿಮ ಬದಿಯ ಮಣ್ಣು ರಸ್ತೆಯಲ್ಲಿ ನಿಂತುಕೊಂಡಿರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಆಲ್ಟೋ ಕಾರನ್ನು ಅದರ  ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಎಡಕ್ಕೆ ತಿರುಗಿಸಿ ಮಣ್ಣು  ರಸ್ತೆಯಲ್ಲಿ ನಿಂತಿದ ಪಿರ್ಯಾದುದಾರರಿಗೆ ಡಿಕ್ಕಿ ಹೊಡೆದು ಪರಿಣಾಮ ಅವರು ಎಸೆಯಲ್ಪಟ್ಟು  ನಂತರ ಮುಂದೆ ಬರುತ್ತಿದ್ದ ಮೋಟಾರು ಸೈಕಲ್ ಗೆ ಗೆ ಡಿಕ್ಕಿ ಹೊಡೆದು ಬಳಿಕ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು  ಅಪಘಾತ ಉಂಟುಮಾಡಿದ ಕಾರು ನಂಬ್ರ ಕೆ ಎ 19 ಎಮ್‌ಬಿ 6470 ಆಗಿದ್ದು ಹಾಗೂ ಮೋಟರ್ ಸೈಕಲ್ ನಂಬ್ರ ಕೆ ಎ 19 ಆರ್‌ 3031 ಆಗಿರುತ್ತದೆ. ಈ ಅಪಘಾತಕ್ಕೆ ಕಾರು  ಚಾಲಕನ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಸಿದ್ದೇ ಕಾರಣವಾಗಿರುತ್ತದೆ.  ಅಪಘಾತದಿಂದ ಪಿಯಾರ್ದುದಾರರು , ಮೋಟಾರ್ ಸೈಕಲ್ ಸವಾರ , ಹಾಗೂ ಕಾರಿನಲ್ಲಿದ್ದ ಇಬ್ಬರಿಗೆ ರಕ್ತ ಗಾಯ ಆಗಿರುತ್ತದೆ. ಈ ಬಗ್ಗೆ ಶ್ರೀಮತಿ ತೇರೆಸಾ ಡಿಸೋಜಾರವರ ದೂರಿನಂತೆ ಕಾಫು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 26 /2014 ಕಲಂ 279,337 ಐಪಿಸಿ ಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ
  • ಹೆಬ್ರಿ: ಪಿರ್ಯಾದಿ ಜೋನಿ ಮ್ಯಾಥ್ಯೂ(53), ತಂದೆ: ಓ.ಎಲ್‌ ಮ್ಯಾಥ್ಯೂ, ವಾಸ: ಓಲಿಕಲ್‌ ಹೌಸ್‌, ವರಂಗ ಅಂಚೆ ಮತ್ತು ಗ್ರಾಮರವರು ಅಡಿಕೆಯನ್ನು ಶೇಖರಿಸಿ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದು, ಅದರಂತೆ ದಿನಾಂಕ 10-02-14 ರಂದು  ಅಡಿಕೆಯನ್ನು ಸುಲಿಯುವ ಸಲುವಾಗಿ ಸುಮಾರು 350 ಗೋಣಿ ಚೀಲಗಳಲ್ಲಿ ಅಡಿಕೆಯನ್ನು ತುಂಬಿಸಿ ತೆರೆದ ಗೋಡಾನ್‌ ಇರಿಸಿ ಅದಕ್ಕೆ ಭದ್ರತೆಯನ್ನು ಮಾಡಿ, ಕೆಲಸಗಾರರಿಗೆ ರಜೆಯನ್ನು ನೀಡಿ, ಸಂಜೆ 5-00 ಗಂಟೆಗೆ ತನ್ನ ಸ್ವಂತ ಊರಾದ ಕೇರಳದ ಎರ್ನಾಕುಲಂಗೆ ಹಬ್ಬದ ಸಲುವಾಗಿ ಹೋಗಿದ್ದು, ದಿನಾಂಕ 18-02-2014 ರಂದು ಸಂಜೆ 6-00 ಗಂಟೆಗೆ ವಾಪಾಸು ಗೋಡಾನ್‌ಗೆ ಬಂದು ನೋಡುವಾಗ, ಗೋಡಾನ್‌ನಲ್ಲಿ ದಾಸ್ತಾನು ಮಾಡಿ ಇರಿಸಿದ್ದ ಸುಮಾರು 30 ಚೀಲ ಅಡಿಕೆಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸ್ವತ್ತಿನ ಮೌಲ್ಯ ಸುಮಾರು 46,000/- ಆಗಬಹುದು. ಕಳವಾದ ಬಗ್ಗೆ ಜೋನಿ ಮ್ಯಾಥ್ಯೂ ರವರು  ಹೆಬ್ರಿ  ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 16/2014 ಕಲಂ 379 ಐಪಿಸಿ ಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಗಂಡಸು ಕಾಣೆ ಪ್ರಕರಣ
  • ಉಡುಪಿ: ಪಿರ್ಯಾದಿ ಹರೀಶ್ (32) ತಂದೆ: ಅನಂತ ನಾಯ್ಕ ,ವಾಸ: ಅಂಗನ ವಾಡಿ ಶಾಲೆ ಹತ್ತಿರ ರಾಜೀವ ನಗರ ನಿಟ್ಟೂರು ,ಉಡುಪಿ ತಾಲೂಕು,ಉಡುಪಿರವರ ತಂದೆ ಅನಂತ ನಾಯ್ಕರವರು ದಿನಾಂಕ 17-02-14ರಂದು ಬೆಳಿಗ್ಗೆ 10:00ಗಂಟೆಗೆ ಅಂಬಾಗಿಲಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಈತನಕ ಮನೆಗೂ ಬಾರದೇ ಸಂಬಂಧಕರ ಮನೆಗೂ ಹೋಗದೆ ಕಾಣೆಯಾಗಿದ್ದಾಗಿದೆ. ಕಾಣೆಯಾದ ಅನಂತ ನಾಯ್ಕರವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಅವರಿಗೆ ಚಿಕಿತ್ಸೆ ಇರುತ್ತದೆ ಅದರಂತೆ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 46/2014 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜೀವ ಬೆದರಿಕೆ ಪ್ರಕರಣ
  • ಕುಂದಾಫುರ: ಪಿರ್ಯಾದಿದಾರರಾದ ಗಣೇಶ ಕುಮಾರ ತಂದೆ: ಅಚ್ಯುತ ಆಚಾರ್ಯ ವಾಸ: ಸಿದ್ದನಾಯಕ ರೋಡ್ ಕಸಬಾ ಎಂಬವರ ಪಕ್ಕದ ಮನೆಯಲ್ಲಿ ಸರೋಜರವರ ಮನೆ ಇದ್ದು  ಫಿರ್ಯಾದಿದಾರರ ಬಾವಿಯ ಪಕ್ಕದಲ್ಲಿ ಶೌಚಾಲಯ ಗುಂಡಿ ನಿರ್ಮಿಸುತ್ತಿದ್ದು ಫಿರ್ಯಾದಿದಾರರು ಇದನ್ನು ಆಕ್ಷೇಪಿಸಿ ಕುಂದಾಪುರ ಪುರಸಭೆಗೆ ದಿನಾಂಕ:14/02/2014 ರಂದು ದೂರು ಅರ್ಜಿ ನೀಡಿದ್ದು ಪುರಸಭೆಯವರು ಕೆಲಸವನ್ನು  ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿರುತ್ತಾರೆ. ಈ ಆದೇಶದಿಂದ ಸಿಟ್ಟುಗೊಂಡ ಸರೋಜರವರ ಮಗ ಸತೀಶ ಎಂಬವರು ದಿನಾಂಕ: 18/02/14 ರಂದು ಫಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಗಣೇಶ ಕುಮಾರ ರವರು ನೀಡಿದ ದೂರಿನಂತೆ ಕುಂದಾಫುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 51/2014 ಕಲಂ 447,506 ಜೊತೆಗೆ 34 ಐಪಿಸಿ ಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತರ ಪ್ರಕರಣ
  • ಮಣಿಪಾಲ: ಫಿರ್ಯಾದಿ ಅಬ್ದುಲ್ ರೆಹಮಾನ್ ಎಂ.ಇ (58) ತಂದೆ: ದಿ| ಇಬ್ರಾಹಿಂ ಕೆ, ವಾಸ: ಇಗ್ಲೋಡ್ಲು ಗ್ರಾಮ, ಮಾದಾಪುರ, ಸೋಮವಾರ ಪೇಟೆ ತಾಲೂಕು, ಕೊಡಗು ಜಿಲ್ಲೆ. ಎಂಬವರ ಮಗಳಾದ ತಾಹಿರಾ ಬಾನು ಈಕೆಯನ್ನು ಸುಮಾರು 13 ವರ್ಷಗಳ ಹಿಂದೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕರಂಬಳ್ಳಿ ಜನತಾ ಕಾಲೋನಿಯ ನಿವಾಸಿ ಮಹಮ್ಮದ್‌ ಹನೀಫ್‌ ತಂದೆ: ದಿ| ಆಲಿ ಅಬಾ, ವಾಸ: ಡೋರ್‌ ನಂ. 1-115, ಜನತಾ ಕಾಲೋನಿ, ಕರಂಬಳ್ಳಿ, ಉಡುಪಿ ತಾಲೂಕು ಎಂಬವರೊಂದಿಗೆ ಮಸೀದಿಯ ಮುಖಾಂತರ ವಿವಾಹ ಮಾಡಿಕೊಡಲಾಗಿತ್ತು. ಮದುವೆಯ ನಂತರ ಹನೀಫನು ವರದಕ್ಷಿಣೆಗಾಗಿ ನನ್ನ ಮಗಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಹಾಗೂ ಕಿರುಕುಳ ನೀಡುತ್ತಿದ್ದನು. ಕೆಲವು ಬಾರಿ ಅವನ ಹಣಕಾಸಿನ ಬೇಡಿಕೆಯನ್ನು ತಕ್ಕ ಮಟ್ಟಿಗೆ ಈಡೇರಿಸಿ ಗಂಡ ಹೆಂಡತಿಯನ್ನು ರಾಜಿ ಮಾಡಿಸಿ ಅವರ ಮನೆಯಲ್ಲಿ ಬಿಟ್ಟು ಬಂದಿದ್ದು, ಆ ಮೇಲೆ ಇದೆ ತರಹ ಜಗಳ ಪುನರ್ವರ್ತನೆ ಮಾಡಿರುತ್ತಾರೆ . ದಿನಾಂಕ 18.02.2014 ರಂದು ಸಮಯ ಸುಮಾರು 20:15 ಗಂಟೆಗೆ ಪಿರ್ಯಾದಿದಾರರಿಗೆ ಕರೆ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿಸಿರುತ್ತಾಳೆ. ನನ್ನ ಮಗಳ ಈ ಆತ್ಮಹತ್ಯೆಯ ಬಗ್ಗೆ ನಮಗೆ ಸಂಶಯವಿದ್ದು, ಮಹಮ್ಮದ್ ಹನೀಫನ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿ ಅಬ್ದುಲ್ ರೆಹಮಾನ್ ರವರು ನೀಡಿದ ದೂರಿನಂತೆ ಮಣಿಪಾಲ  ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 24/2014 ಕಲಂ 498(ಎ)306 ಐಪಿಸಿ ಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: