Thursday, February 13, 2014

Daily Crime Reported on 13/02/2014 at 07:00 Hrs.ಜುಗಾರಿ ಪ್ರಕರಣ

  • ಬೈಂದೂರು: ದಿನಾಂಕ 12-02-2014 ರಂದು ರಂದು ಬೆಳಿಗ್ಗೆ 11-00 ಗಂಟೆಗೆ ಕುಂದಾಪುರ ತಾಲೂಕು ನಾವುಂದ ಗ್ರಾಮದ ಮಸ್ಕಿ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಹಿಂಬದಿ ಕಡಲ ಕಿನಾರೆಯಲ್ಲಿ ಆರೋಪಿತರಾದ 1.ರಾಮ ಖಾರ್ವಿ 2.ಶೇಖರ ಪೂಜಾರಿ 3.ಗೋಪಾಲ ಮೊಗೇರ 4.ಸಂಜೀವ ಮೊಗವೀರ 5.ಶೀನ @ ಶ್ರೀನಿವಾಸ ಖಾರ್ವಿ 6.ಮೊಹಮ್ಮದ್ ಹನೀಫ್ @ ಮಮ್ಮು ಇವರುಗಳು  ಇಸ್ಪೀಟ್‌ ಎಲೆಯ ಸಹಾಯದಿಂದ ನೆಲದ ಮೇಲೆ ಒಂದು ಪಾಲಿಥೀನ್ ಚೀಲವನ್ನು ಹಾಸಿ ತಮ್ಮ ಸ್ವಂತ ಲಾಭಕೋಸ್ಕರ ಅಕ್ರಮವಾಗಿ ಅಂದರ್‌ ಬಾಹರ್‌ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಸುನೀಲ್ ಕುಮಾರ್ ಎಮ್.ಎಸ್, ಪಿ.ಎಸ್.ಐ  ಬೈಂದೂರು ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಜುಗಾರಿ ಆಡುತ್ತಿದ್ದ  ಆರೋಪಿತರನ್ನು ಬಂಧಿಸಿ ತಕ್ಷೀರು ಸ್ಥಳದಲ್ಲಿ ಅಂದರ್‌ ಬಾಹರ್‌ ಜುಗಾರಿ ಆಟಕ್ಕೆ ಉಪಯೋಗಿಸಿದ 1) ಪಾಲಿಥೀನ್ ಚೀಲ-1  2) 52 ಇಸ್ಪೀಟ್‌ ಎಲೆಗಳು 3) ನಗದು ರೂ 1750/- ನ್ನು ಸ್ವಾಧೀನಪಡಿಸಿಕೊಂಡು ಠಾಣಾ ಅಪರಾಧ ಕ್ರಮಾಂಕ 30/14 ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.


ಅಪಘಾತ ಪ್ರಕರಣ

  • ಅಜೆಕಾರು: ದಿನಾಂಕ 11/02/2014 ರಂದು 16:00 ಗಂಟೆಗೆ ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಕಾಡುಹೊಳೆ ಎಂಬಲ್ಲಿ ಪಿರ್ಯಾದಿ ಅಣ್ಣಯ್ಯ ಕೋಟ್ಯಾನ್ ಪ್ರಾಯ 45 ವರ್ಷ ತಂದೆ ಬಚ್ಚ ಪೂಜಾರಿ ವಾಸ: ಗಾಂದೊಟ್ಟು ಮನೆ ಹಾಡಿಯಂಗಡಿ ಶಿರ್ಲಾಲು ಗ್ರಾಮ ಇವರು ಕೆ ಎ 20 ಈ 0815 ನೇ ಆಕ್ಟೀವ್ ಹೋಂಡಾ ಸ್ಕೂಟರಿನಲ್ಲಿ ಮುನಿಯಾಲಿನಿಂದ  ಕಾಡು ಹೊಳೆ ಮಾರ್ಗವಾಗಿ ಅಂಡಾರು ಕಡೆಗೆ ಶಂಕರ ನಾಯಕ್ ಎಂಬವರ ಜೊತೆ ಹಿಂಬದಿ ಸೀಟಿನಲ್ಲಿ ಕುಳಿತು ಹೋಗುತ್ತಿರುವಾಗ ಅವರ ಹಿಂದುಗಡೆಯಿಂದ ಆರೋಪಿ ಹರೀಶ್ ನಾಯರ್ ತನ್ನ ಬಾಬ್ತು ಕೆಎ 20 ಇಸಿ 5738 ನೇ ಮೋಟಾರು ಸೈಕಲನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಸ್ಕೂಟರ್ ರಸ್ತೆಯಲ್ಲಿ ಅಡ್ಢ  ಬಿದ್ದು  ಫಿರ್ಯಾದಿದಾರರ ಮೈ ಕೈಗಳಿಗೆ ರಕ್ತ ಗಾಯಗಳುಂಟಾಗಿ ಕಾರ್ಕಳ ನರ್ಸಿಂಗ್‌ ಹೋಂನಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಅಣ್ಣಯ್ಯ ಕೋಟ್ಯಾನ್ ಇವರು ನೀಡಿದ ದೂರಿನಂತೆ ಅಜೆಕಾರು ಠಾಣಾ ಅಪರಾಧ ಕ್ರಮಾಂಕ 06/14 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರೇ ಪ್ರಕರಣ

  • ಬ್ರಹ್ಮಾವರ: ದಿನಾಂಕ: 11/02/2014 ರಂದು ರಾತ್ರಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಬಸ್ಸು ನಿಲ್ದಾಣ ಹಾಗೂ ಇತರ ಕಡೆ ಕಾಂಗ್ರೆಸ್ ಪಕ್ಷದ ನಾಯಕರ ಭಾವಚಿತ್ರಗಳೊಂದಿಗೆ ಪಕ್ಷದ ಸಾಧನೆ ಬಗ್ಗೆ ಪ್ರಚಾರ ಪಡಿಸಲು ಹಾಕಿದ 8 ಬ್ಯಾನರ್ ಗಳನ್ನು ಯಾರೋ ದುಷ್ಕರ್ಮಿಗಳು ಹರಿದು ಹಾಕಿದ್ದು, ಇದರಿಂದ ಸುಮಾರು 12,000/- ರೂ ನಷ್ಟವಾಗಿದೆ ಎಂಬಿತ್ಯಾದಿ. ಈ ಬಗ್ಗೆ ರಾಜೇಶ್ ಶೆಟ್ಟಿ, ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಬ್ರಹ್ಮಾವರ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 29/14 ಕಲಂ: 427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: