Thursday, February 13, 2014

Daily Crimes Reported as On 13/02/2014 at 17:00 Hrs


ವರದಕ್ಷಿಣೆ ಕಿರುಕುಳ ಪ್ರಕರಣ
  • ಹಿರಿಯಡ್ಕ: ಶ್ರೀಮತಿ ನಿಶ್ಮಿತಾ ಶೆಟ್ಟಿ (24) ಗಂಡ:ಸುನೀಲ್ ಶೆಟ್ಟಿ, ತಂದೆ:ಶಂಕರ ಶೆಟ್ಟಿ, ವಾಸ:ಅಚ್ಚಾರ್ಕರ್ ದರ್ಖಾಸು ಮನೆ, ಗುಡ್ಡೆಯಂಗಡಿ ಅಂಚೆ, ಕಣಜಾರು ಗ್ರಾಮ, ಕಾರ್ಕಳ ತಾಲೂಕುರವರು ದಿನಾಂಕ 06/05/2013 ರಂದು ಸುನೀಲ್ ಶೆಟ್ಟಿ (31) ತಂದೆ:ದಿವಂಗತ ಜಯರಾಮ ಶೆಟ್ಟಿರವರನ್ನು ವಿವಾಹವಾಗಿದ್ದು, ಮದುವೆಯ ಸಮಯ ವರನ ಕಡೆಯವರ ಬೇಡಿಕೆಯಂತೆ 3 ಲಕ್ಷ ರೂಪಾಯಿ ನಗದು ಹಾಗೂ 20 ಪವನ್ ಚಿನ್ನಾಭರಣ ನೀಡಿದ್ದರೂ ಮದುವೆಯ ಬಳಿಕ ಆರೋಪಿ ಸುನೀಲ್ ಶೆಟ್ಟಿ ನಿಶ್ಮಿತಾ ಶೆಟ್ಟಿರವರನ್ನು ಮುಂಬೈಗೆ ಕರೆದುಕೊಂಡು ಹೋದ ಬಳಿಕ ವರದಕ್ಷಿಣೆ ನೀಡಿದ್ದು ಕಡಿಮೆಯಾಯಿತು ಎಂದು ಹೇಳಿ, ಹೆಚ್ಚಿನ ವರದಕ್ಷಿಣೆ ತರಲು ತಾಕೀತು ಮಾಡಿ ನಿಶ್ಮಿತಾ ಶೆಟ್ಟಿರವರ ಗಂಡ ಸುನೀಲ್ ಶೆಟ್ಟಿ, ಅತ್ತೆ ಶ್ರೀಮತಿ ಲಕ್ಷ್ಮೀ ಶೆಡ್ತಿ(55) ಗಂಡ:ದಿವಂಗತ ಜಯರಾಮ ಶೆಟ್ಟಿ ವಾಸ:ರೂಮ್ ನಂಬ್ರ 1, ಬಿಲ್ಡಿಂಗ್ ನಂಬ್ರ 11ಎ, ಸಂಜೀವಿನಿ ಕೋ. ಅಪರೇಟಿವ್ ಹೌಸಿಂಗ್ ಸೊಸೈಟಿ, ನಗರಿ ನಿವ್ರಾ, ಪರಿಷದ್, ದಿಂಡೋಶಿ, ಗೋರೆಗಾಂವ್ ಈಸ್ಟ್, ಮುಂಬೈ ಮತ್ತು ನಾದಿನಿ ಸುಪ್ರಿತಾ ಶೆಟ್ಟಿ(29) ಗಂಡ:ಸುರೇಂದ್ರ ಶೆಟ್ಟಿ, ತಂದೆ:ದಿವಂಗತ ಜಯರಾಮ ಶೆಟ್ಟಿ, ವಾಸ:ಅಂದೇರಿ, ಮುಂಬೈ ಇವರುಗಳು ಒಟ್ಟಾಗಿ ಕಿರುಕುಳ ನೀಡಲು ಆರಂಭಿಸಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಲ್ಲೆ ನಡೆಸಿದ್ದು, ಬಳಿಕ 20/09/2013 ರಂದು ಸುನೀಲ್ ಶೆಟ್ಟಿ ನಿಶ್ಮಿತಾ ಶೆಟ್ಟಿರವರನ್ನು ಹೆಚ್ಚಿನ ವರದಕ್ಷಿಣೆ ತರಬೇಕೆಂದು ಹೇಳಿ ತವರು ಮನೆಯಲ್ಲಿ ಬಿಟ್ಟು ಹೋಗಿದ್ದು, ದಿನಾಂಕ 27/12/2013 ರಂದು ನಿಶ್ಮಿತಾ ಶೆಟ್ಟಿರವರ ಗಂಡ ಸುನೀಲ್ ಶೆಟ್ಟಿ, ಅತ್ತೆ ಮತ್ತು ನಾದಿನಿಯರು ಸಮಾನ ಉದ್ದೇಶದಿಂದ ನಿಶ್ಮಿತಾ ಶೆಟ್ಟಿರವರ ತವರು ಮನೆಗೆ ಬಂದು ನಿಶ್ಮಿತಾ ಶೆಟ್ಟಿ ಮತ್ತು ಅವರ ತಾಯಿಯನ್ನು ಉದ್ದೇಶಿಸಿ ಅವಾಚ್ಯಶಬ್ದಗಳಿಂದ ಬೈದು, ಹೆಚ್ಚಿನ ವರದಕ್ಷಿಣೆಗಾಗಿ ಬೇಡಿಕೆ ಸಲ್ಲಿಸಿ ನಿಶ್ಮಿತಾ ಶೆಟ್ಟಿ ಮತ್ತು ಅವರ ತಾಯಿ ವಸಂತಿ ಶೆಡ್ತಿ, ತಮ್ಮ ನಿತಿನ್‌ಗೆ ಕೈಯಿಂದ ಹೊಡೆದು ಕೊಲೆ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ನಿಶ್ಮಿತಾ ಶೆಟ್ಟಿರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 13/2014 ಕಲಂ 498 (ಎ), 504, 506, 323 ಜೊತೆಗೆ 34 ಐಪಿಸಿ & 3,4 ಡಿ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: