Wednesday, February 12, 2014

Daily Crime Reported on 12/02/2014 at 19:30 Hrs.



ಹಲ್ಲೆ ಪ್ರಕರಣ

  • ಗಂಗೊಳ್ಳಿ:  ಶೀನ ಮೊಗವೀರ, ತಂದೆ: ಮರ್ಲ ಮೊಗವೀರ, ದಾರು ಮನೆ, ಬಟ್ಟೆಕುದ್ರು, ಹಕ್ಲಾಡಿ ಗ್ರಾಮ ಇವರು ದಿನಾಂಕ 12/02/2014 ರಂದು ಹಕ್ಲಾಡಿ ಗ್ರಾಮದ ತೊಪ್ಲು ಪೇಟೆಗೆ ಹೋಗಿ ಬರುವಾಗ ಬೆಳಿಗ್ಗೆ 8.00 ಗಂಟೆಗೆ ಅವರ ದೂರದ ಸಂಬಂದಿ ನಾರಾಯಣ ಮೊಗವೀರ ರವರು ಅವರನ್ನು ತಡೆದು ಬಾರಿ ಮಾತನಾಡುತ್ತಿಯಾ ಎಂದು ಹೇಳಿ ಏಕಾಏಕಿ ದೊಣ್ಣೆಯಿಂದ ಕೈಗಳಿಗೆ ಹಾಗೂ ಹಣೆಗೆ ಹೊಡೆದು ರಕ್ತಗಾಯ ಮಾಡಿ ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ. ಈ ಬಗ್ಗೆ ಶೀನ ಮೊಗವೀರ ಇವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 15/14 ಕಲಂ: 341, 324, 506 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಜಗದೀಶ ಶೆಟ್ಟಿ ತಂದೆ: ರಾಮ ಶೆಟ್ಟಿ ಸುಜಾತ ನಿವಾಸ ಅಜೆಕಾರು ದೆಪ್ಪುತ್ತೆ ಮರ್ಣೆ  ಗ್ರಾಮ ಇವರ ಅಣ್ಣ  ರವೀಂದ್ರ ಶೆಟ್ಟಿ  ಎಂಬವರು ಮೊದಲಿನಿಂದಲೂ ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದು ವಿಪರೀತ ಶರಾಬು ಕುಡಿದು ಅನಾರೋಗ್ಯಕ್ಕೆ ತುತ್ತಾಗಿ ಮಾನಸಿಕ ಕಾಯಿಲೆಯಿಂದ ಕೂಡಾ ಬಳಲುತ್ತಿದ್ದು  ಅದೇ ಚಿಂತೆಯಿಂದ ದಿನಾಂಕ 12/02/2014 ರಂದು ಬೆಳಿಗ್ಗೆ 10:00 ಗಂಟೆಯಿಂದ 11:30 ಗಂಟೆಯ ಮಧ್ಯೆ ಮನೆ ಸಮೀಪದ  ಹಾಡಿಯಲ್ಲಿನ ಮರಕ್ಕೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಜಗದೀಶ ಶೆಟ್ಟಿ ಇವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 04/14 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ:11/02/2014 ರಂದು 17:30 ಗಂಟೆಗೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಕರಿಮಾರ್‌ಕಟ್ಟೆ ಎಂಬಲ್ಲಿ ಮುಖ್ಯರಸ್ತೆಯಲ್ಲಿ ಮಂಜುನಾಥ್ ಎಂಬವರು ಅವರ ಬಾಬ್ತು ವೋಕ್ಸ್ ವ್ಯಾಗನ್ ಕಾರು ನಂ. KA-20-P-6461 ನೇಯದನ್ನು ಬಜಗೋಳಿ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ  ಕರಿಮಾರ್‌ಕಟ್ಟೆ ಎಂಬಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಮಂಜುನಾಥರವರಿಗೆ ಎದೆಗೆ ಗುದ್ದಿದ ಗಾಯವಾಗಿದ್ದು ಕಾರಿನ ಬಲಬದಿ ಜಖಂಗೊಂಡಿರುತ್ತದೆ. ಈ ಬಗ್ಗೆ ಸುರೇಶ ತಂದೆ: ದಿ. ಜೋಗಪ್ಪ ವಾಸ: ಕರಿಯಕಲ್, ಕಾಳಿಕಾಂಬ ರಸ್ತೆ, ಕಾರ್ಕಳ ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 12/14 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅನುಮಾನಾಸ್ಪದ ವ್ಯಕ್ತಿಯ ಬಂಧನ
  • ಕಾಪು: ದಿನಾಂಕ 12/02/2014 ರಂದು 14:00 ಗಂಟೆಗೆ ರಾಜೇಂದ್ರ ನಾಯ್ಕ್ ಎಂ ಎನ್, ಪಿಎಸ್‌ಐ ಕಾಪು ಪೊಲೀಸ್ ಠಾಣೆ  ಇವರು ಮೂಡಬೆಟ್ಟು ಗ್ರಾಮದ ಕಲ್ಲಾಪು  ಎಂಬಲ್ಲಿ ಕರ್ತವ್ಯದಲ್ಲಿರುವಾಗ ವಿಶ್ವನಾಥ ಕ್ಷೇತ್ರದ ದ್ವಾರದ ಬಳಿ ತುಳಸೀದಾಸ್ (50) ತಂದೆ: ವಿಠಲ ಪಿ ಸುವರ್ಣ ವಾಸ: ಲಕ್ಷ್ಮೀಕಾಂತ ನಿವಾಸ, ಕಲ್ಯಾಣಪುರ  ಉಡುಪಿ  ಎಂಬಾತನು ಅನುಮಾನಸ್ಪದ ರೀತಿಯಲ್ಲಿ ನಿಂತುಕೊಂಡಿದ್ದವನನ್ನು ವಶಕ್ಕೆ ಪಡೆದು ಆತನ ವಿರುದ್ಧ  ಕಾಪು ಠಾಣಾ ಅಪರಾಧ ಕ್ರಮಾಂಕ 19/2014 ಕಲಂ: 109 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ.

No comments: