Sunday, February 09, 2014

Daily Crime Reported on 09/02/2014 at 07:00 Hrs.



ಹುಡುಗಿ ಕಾಣೆ ಪ್ರಕರಣ
  • ಹಿರಿಯಡ್ಕ: ಪಿರ್ಯಾದುದಾರರಾದ ರತ್ನಪ್ಪ (53) ತಂದೆ ದಿವಂಗತ ಐತಪ್ಪ ವಾಸ ದುಗ್ಗುಬೆಟ್ಟು ಮನೆ, ಭೈರಂಪಳ್ಳಿ ಗ್ರಾಮ, ಸಾಂತ್ಯಾರು ಅಂಚೆ, ಉಡುಪಿ ತಾಲೂಕು ಎಂಬವರ ಮಗಳು ಸುಮಾರು 22 ವರ್ಷ ಪ್ರಾಯದ ಸುನೀತಾ ಎಂಬವಳು ತನ್ನ ತಂಗಿ ಕವಿತಾ ಎಂಬವಳೊಂದಿಗೆ ಕಳೆದ 3 ವರ್ಷದಿಂದ ತಮಿಳುನಾಡು ರಾಜ್ಯದ ಕೊಯಂಬತ್ತೂರಿನಲ್ಲಿರುವ ಮುರುಗರ್ ಸ್ಪಿನ್ನಿಂಗ್ ಮಿಲ್ ನಲ್ಲಿ  ಕೆಲಸಕ್ಕಿದ್ದು ಆಗಾಗ ಮನೆಗೆ ಬಂದು ಹೋಗುತ್ತಿದ್ದು, ಅದರಂತೆ ದಿನಾಂಕ 14.01.2014 ರಂದು ಸುನೀತಾ ಮತ್ತು ಕವಿತಾ ಮನೆಗೆ ಬಂದಿದ್ದು, ದಿನಾಂಕ 08.02.2014 ರಂದು ಮಧ್ಯಾಹ್ನ 15.00 ಗಂಟೆಗೆ ಸುನೀತಾಳು ಮನೆಯಲ್ಲಿ ಯಾರಿಗೂ ಹೇಳದೇ ಮನೆಯಿಂದ ಹೋದವಳು ವಾಪಾಸ್ಸು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ ಎಂಬುದಾಗಿ ರತ್ನಪ್ಪರವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2014 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅನುಮಾನಾಸ್ಪದ ವ್ಯಕ್ತಿಯ ಬಂಧನ
  • ಪಡುಬಿದ್ರಿ: ದಿನಾಂಕ 08.02.2014 ರಂದು 13:45 ಗಂಟೆಗೆ ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಅಝಮತ್ ಆಲಿ ಜಿ, ರವರು ಸಿಬ್ಬಂದಿಗಳೊಂದಿಗೆ ನಂದಿಕೂರು ಗ್ರಾಮದಲ್ಲಿ ಗಸ್ತು ಕರ್ತವ್ಯದಲ್ಲಿರುವ ಸಮಯ ನಂದಿಕೂರು ಬಸ್ಸು ಪ್ರಯಾಣಿಕರ ತಂಗುದಾಣದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಕುಳಿತು ಕೊಂಡಿದ್ದು, ಜೀಪನ್ನು ಕಂಡು ಓಡಿ ಹೋಗಲು ಪ್ರಯತ್ನಿಸಿದವನನ್ನು ಹಿಡಿದು ವಿಚಾರಿಸಲಾಗಿ ಆತನ ಹೆಸರು ಉತ್ತಮ್ ಬಹುದ್ದೂರ್, 38 ವರ್ಷ ತಂದೆ ಬಾಕ್ತಾ ಬಹುದ್ದೂರ್, ವಾಸ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ, ಭವಾನಿ ರೈಸ್ ಮಿಲ್ ರೋಡ್, ಲಕ್ಕವಲ್ಲಿ ಹೋಬಳಿ, ತರಿಕೆರೆ ತಾಲೂಕು, ಚಿಕ್ಕಮಗಳೂರು ಜಿಲ್ಲೆ, ಪ್ರಸ್ತುತ ವಿಳಾಸ ದಾಮ ರೆಸಿಡೆನ್ಸಿ ಬೆಸ್ ಮೆಂಟ್, ಸೆಕ್ಯೂರಿಟಿ ರೋಮ್, ಮುಲ್ಕಿ, ಎಂಬುದಾಗಿ ತಿಳಿಸಿದ್ದು, ಆತನು ತನ್ನ ಇರುವಿಕೆಯ ಬಗ್ಗೆ ಸಮರ್ಪಕವಾದ ಉತ್ತರ ನೀಡದೇ ಇರುವುದರಿಂದ ಯಾವುದೋ ಬೇವಾರಂಟು ತಕ್ಷೀರು ಮಾಡುವ ಇರಾದೆ ಇರುವುದಾಗಿ ಸಂಶಯಗೊಂಡು ಆತನನ್ನು ದಸ್ತಗಿರಿ ಮಾಡಿ, ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 16/2014 ಕಲಂ 109 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣಗಳು

  • ಕುಂದಾಪುರ: ದಿನಾಂಕ 08/02/2014 ರಾತ್ರಿ 11:30 ಗಂಟೆಗೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ಹಳೆ ಬಸ್ ನಿಲ್ದಾಣದ ಶ್ರೀ ಮಂಜುನಾಥ ಆಸ್ಪತ್ರೆಯ ಬಳಿ, ಮಾಸ್ತಿಕಟ್ಟೆ ಕ್ರಾಸ್ ರಸ್ತೆಯಲ್ಲಿ ಆಪಾದಿತ ಈಶಾಮ್ ಎಂಬವರು ಕೆಎ-20-ಎಲ್- 6272 ನೇ ಬೈಕ್‌‌‌ನ್ನು ಸಂಗಂ ಚಿಕ್ಕಾನ್ ಸಾಲ್ ರಸ್ತೆ ಕಡೆಯಿಂದ ಹೊಸ ಬಸ್ನಿಲ್ದಾಣ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು, ನಿತೇಶ ಎಂಬವರು ಕುಂದಾಪುರ ಶಾಸ್ತ್ರಿ ಸರ್ಕಲ್ ಕಡೆಯಿಂದ ಹೊಸ ಬಸ್ ನಿಲ್ಧಾಣದ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕೆಎ 20-ಆರ್ -8974 ನೇ ಬೈಕಿಗೆ ಡಿಕ್ಕಿ  ಹೊಡೆದ ಪರಿಣಾಮ ಎರಡೂ ಬೈಕ್ ನವರು ವಾಹನ ಸಮೇತ ರಸ್ತೆಯಲ್ಲಿ ಬಿದ್ದು, ಈಶಾಮ್  ಹಾಗೂ ಕೆಎ-20-ಆರ್-8974 ನೇ  ಬೈಕಿನ ಸಹ ಸವಾರ ರಾಜೇಶ್ ಎಂಬವರಿಗೆ ತಲೆಗೆ, ಹಾಗೂ ಮೈ ಕೈಗೆ ಗಾಯ ನೋವು ಉಂಟಾಗಿ ಶ್ರೀ ಮಂಜುನಾಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ  ಕೆ.ಎಂ.ಸಿ  ಆಸ್ಪತ್ರೆಗೆ  ದಾಖಲಾಗಿದ್ದು, ನಿತೇಶ ಎಂಬವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ  ಎಂಬುದಾಗಿ ತನಿಯಪ್ಪ ನಾಯ್ಕ (32) ತಂದೆ ಕೂಸಪ್ಪ ನಾಯ್ಕ ವಾಸ ಕಟತೀಲ್ ಮನೆ, ಸಾಲೆತ್ತೂರು  ಅಂಚೆ, ಕೊಲ್ನಾಡು ಗ್ರಾಮ ಬಂಟ್ವಾಳ ತಾಲೂಕು ಎಂಬವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 28/2014 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: