Sunday, February 09, 2014

Daily Crimes Reported as On 09/02/2014 at 17:00 Hrs


ಅಸ್ವಾಭಾವಿಕ ಮರಣ ಪ್ರಕರಣಗಳು
  • ಪಡುಬಿದ್ರಿ:ಪಿರ್ಯಾದಿದಾರರಾದ ಮೋರೆಶ್ವರ ಗರಡೆ (24) ಗಂಡ:ಹರಿಲಾಲ್ ಗರಡೆ, ವಾಸ:ಮುರ್ದಡಾ ಪೋಸ್ಟ್, ಗಂಡಿಯಾ ಉಡುಪಿ ತಾಲೂಕುರವರು ಪಂಕಜ್ (32), ಸಂತೋಷ್‌ರವರೊಂದಿಗೆ ಪಡುಬಿದ್ರಿಯ ಎಫ್.ಕೆ ಆಟೋ ಸರ್ವೀಸ್ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿದ್ದು, ಈ ದಿನ ದಿನಾಂಕ:09/02/2014 ರಂದು 08:00 ಗಂಟೆಗೆ ಸರ್ವೀಸ್ ಸ್ಟೇಷನ್‌ನ ಬೋರ್‌ವೆಲ್ ಹಾಳಾದುದರಿಂದ ಪಕ್ಕದಲ್ಲಿರುವ ಯಖೀನುಲ್ಲಾ ಎಂಬವರ ಮನೆಯ ಬಾವಿಯಿಂದ ನೀರು ತೆಗೆಯುವರೇ ಮಾಲೀಕರ ಸೂಚನೆಯಂತೆ ಬಾವಿಗೆ ಪಂಪ್ ಅಳವಡಿಸಲು ಮೋರೆಶ್ವರ ಗರಡೆ ಹಾಗೂ ಅವರ ಗೆಳೆಯರಾದ ಪಂಕಜ್ ಹಾಗೂ ಸಂತೋಷ್ ಹೋಗಿದ್ದರು. ಪಂಕಜ್ ಬಾವಿ ಕಟ್ಟೆಯ ಮೇಲೆ ನಿಂತು ಪಂನ್ನು ಬಾವಿಯ ಒಳಗೆ ಇಳಿಸುತ್ತಿದ್ದು, ಸಂತೋಷ್ ಹಾಗೂ ಮೋರೆಶ್ವರ ಗರಡೆ ಅದರ ಹಗ್ಗ ಹಿಡಿದು ಬಾವಿ ಕಟ್ಟೆಯ ಕೆಳಗೆ ನಿಂತಿದ್ದು, ಪಂಕಜ್ ಬಾವಿಯೊಳಗೆ ಪಂಪ್ ಇಳಿಸುವ ಸಮಯ ಆಯತಪ್ಪಿ ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಮೋರೆಶ್ವರ ಗರಡೆರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 04/14 ಕಲಂ. 174 ಸಿಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾಪು:ಪಿರ್ಯಾದಿದಾರರಾದ ಮುಬಿನ್ (32) ತಂದೆ:ದಿವಂಗತ ಮಹಮ್ಮದ್ ಅಶ್ರಫ್ ವಾಸ:ಬಿಸ್ಮಿಲ್ಲಾ ಮಂಜಿಲ್ ಅಲೆವೂರು ರಸ್ತೆ ಮಣಿಪಾಲರವರ ಚಿಕ್ಕಪ್ಪನ ಮಗಳಾದ ಸಾನಾ ಎಂಬವಳು ದಿನಾಂಕ 08/02/2014 ರಂದು ಸಂಜೆ ಸುಮಾರು 4:30 ಗಂಟೆಗೆ ಉದ್ಯಾವರ ಗ್ರಾಮದ ಬೈಲಜಿಡ್ಡಿಯ ಅವರ ಮನೆಯ ಹಿಂಬದಿಯಲ್ಲಿರುವ ಬಾವಿಗೆ ಆಕಸ್ಮಿಕವಾಗಿ ಬಿದ್ದವರನ್ನು ಆ ಕೂಡಲೇ ಚಿಕಿತ್ಸೆ ಬಗ್ಗೆ  ಉಡುಪಿ  ಟಿ.ಎಮ್‌.ಎ ಪೈ ಆಸ್ಪತ್ರೆಗೆ ದಾಖಲಿಸಿ ನಂತರ ವೈದ್ಯರ ಸೂಚನೆಯಂತೆ ಮಣಿಪಾಲ ಕೆ.ಎಮ್‌.ಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಚಿಕಿತ್ಸೆ ಫಲಕಾರಿಯಾಗದೆ ಈ ದಿನ ದಿನಾಂಕ 09/02/2014 ರಂದು ಬೆಳಿಗ್ಗೆ 06:00ಗಂಟೆಗೆ ಸಾನಾರವರು ಮೃತಪಟ್ಟಿರುತ್ತಾರೆ. ಮೃತ ಸಾನಾರವರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮುಬಿನ್‌ರವರು ನೀಡಿದ ದೂರಿನಂತೆ ಕಾಪು ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 04/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: