Saturday, February 08, 2014

Daily Crime Reports As On 08/02/2014 At 19:30 Hrs


ಅಪಘಾತ ಪ್ರಕರಣಗಳು
  • ಕೋಟ:ದಿನಾಂಕ 07/02/2014 ರಂದು ರಾತ್ರಿ 9:00 ಗಂಟೆಗೆ ಪಿರ್ಯಾದಿದಾರರಾದ ಶಂಕರ (62) ತಂದೆ:ಗಣಪ ಪೂಜಾರಿ ವಾಸ: ಮಹಾದೇವಿ ದೇವಸ್ಥಾನದ ಹತ್ತಿರ, ಮಲ್ಯಾಡಿ ತೆಕ್ಕಟ್ಟೆ ಗ್ರಾಮ ಕುಂದಾಪುರ ತಾಲೂಕುರವರು ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಕೆನರಾ ಬ್ಯಾಂಕ್ ಬಳಿ ಸ್ಟಿಕ್ಕರ್ ಕಟ್ಟಿಂಗ್ ಅಂಗಡಿಯ ಬಳಿ ರಸ್ತೆಯನ್ನು ದಾಟುವರೇ ನಿಂತುಕೊಂಡಿರುವಾಗ ಆರೋಪಿ ಕೆಎ02 ಪಿ7018 ನೇ ಕಾರನ್ನು ರಾ.ಹೆ.66 ರಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುವರೇ ನಿಂತುಕೊಂಡಿದ್ದ ಶಂಕರರವರಿಗೆ ಢಿಕ್ಕಿ ಹೊಡೆದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯವಾಗಿದ್ದಾಗಿದೆ. ಈ ಬಗ್ಗೆ ಶಂಕರರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 26/2014 ಕಲಂ 279 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಪಡುಬಿದ್ರಿ:ದಿನಾಂಕ.08/02/2014 ರಂದು ಬೆಳಿಗ್ಗೆ 09:15 ಗಂಟೆಗೆ ಪಿರ್ಯಾದಿದಾರರಾದ ರಾಜೀವ ತೋನ್ಸೆ (63) ತಂದೆ:ದಿವಂಗತ ಬೂದ ಬೆಳ್ಚಾಡ, ವಾಸ:ಕೃಷ್ಣ ಕೃಪಾ, ಮಟ್ಟು ಪೋಸ್ಟ್, ವಯಾ ಕಟಪಾಡಿ, ಉಡುಪಿ ಜಿಲ್ಲೆ, ಉಡುಪಿರವರು ತನ್ನ ಎಂ 80 ಮೋಟಾರು ಸೈಕಲ್ ನಂಬ್ರ ಕೆಎ 20 ಜೆ-2932 ವನ್ನು ಕಟಪಾಡಿಯಿಂದ ಸುರತ್ಕಲ್ ಕಡೆಗೆ ಚಲಾಯಿಸುತ್ತಾ ಹೋಗುತ್ತಿದ್ದಾಗ ಹೆಜಮಾಡಿ ಗ್ರಾಮದ ಹೆಜಮಾಡಿ ಚೆಕ್ ಪೋಸ್ಟ್ ಬಳಿ ರಾ.ಹೆ 66 ರಲ್ಲಿ ಕೆಎ 19 ಸಿ 9151 ಬಸ್ಸನ್ನು ಬಸ್ ಸವಾರನು ಉಡುಪಿಯಿಂದ ಮಂಗಳೂರು ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಾಜೀವ ತೋನ್ಸೆರವರ ಮೋಟಾರು ಸೈಕಲ್‌ನ ಬಲ ಬದಿಗೆ ಬಸ್ಸಿನ ಹಿಂಬದಿ ತಾಗಿ ರಾಜೀವ ತೋನ್ಸೆರವರು ಕೆಳಗೆ ಬಿದ್ದು ಎಡಕಾಲಿನ ಮೊಣಗಂಟಿಗೆ ರಕ್ತಗಾಯವಾಗಿರುತ್ತದೆ ಹಾಗೂ ಎಡ ಸೊಂಟಕ್ಕೆ ಗುದ್ದಿದ ನೋವಾಗಿರುತ್ತದೆ. ಈ ಬಗ್ಗೆ ರಾಜೀವ ತೋನ್ಸೆರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 17/2014 ಕಲಂ:279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಬ್ರಹ್ಮಾವರ:ಪಿರ್ಯಾದಿದಾರರಾದ ಸದಾಶಿವ (30) ತಂದೆ:ಬೀಣ ವಾಸ:ಕಿಣಿಯರಬೆಟ್ಟು ವಾರಂಬಳ್ಳಿ ಗ್ರಾಮರವರ ಅಣ್ಣನಾದ ಚಂದ್ರ (39) ಎಂಬುವರು ಈ ದಿನ ದಿನಾಂಕ 08/02/2014 ರಂದು ಬೆಳಿಗ್ಗೆ ಸುಮಾರು 11:15 ಗಂಟೆ ಯಿಂದ 11:45 ಗಂಟೆಯ ಮದ್ಯದ  ಅವಧಿಯಲ್ಲಿ  ವಾರಂಬಳ್ಳಿ ಗ್ರಾಮದ ಸೀತಾನದಿ ಹೊಳೆಯಲ್ಲಿ ಮಳಿ ಮೀನು (ಕಪ್ಪೆ ಚಿಪ್ಪು) ತೆಗೆಯಲು ಹೋದಾಗ, ಆವರಿಗಿರುವ ಪಿಟ್ಸ್ ಕಾಯಿಲೆಯಿಂದ ಆಕಸ್ಮಿಕವಾಗಿ ನದಿಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಸದಾಶಿವರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 08/2014 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಟ್ಕಾ ಜುಗಾರಿ ಪ್ರಕರಣ
  • ಹಿರಿಯಡ್ಕ:ದಿನಾಂಕ 08/02/2014 ರಂದು 14:00 ಗಂಟೆಗೆ ಉಡುಪಿ ತಾಲೂಕು ಅತ್ರಾಡಿ ಗ್ರಾಮದ ಅತ್ರಾಡಿ ಸಾರ್ವಜನಿಕ ಬಸ್‌ ಸ್ಟ್ಯಾಂಡ್ ಬಳಿ, ಕಾರ್ಕಳ ಉಡುಪಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಬಾಲಾಜಿ ಕಾಂಪ್ಲೆಕ್ಸ್ ಮುಂದಿರುವ ಗೂಡಂಗಡಿಯಲ್ಲಿ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿದ್ದ, ಆರೋಪಿ ಚಂದ್ರಶೇಖರ ಶೇರಿಗಾರ (36) ತಂದೆ:ದಿವಂಗತ ಮಾಧವ, ವಾಸ:ಗಾಯತ್ರಿ ನಿಲಯ, ಮದಗ ಅತ್ರಾಡಿ ಅಂಚೆ & ಗ್ರಾಮ, ಉಡುಪಿ ಜಿಲ್ಲೆ ಹಾಗೂ ಇನ್ನೊಬ್ಬ ಅಪರಿಚಿತ ವ್ಯಕ್ತಿಯನ್ನು ಪಿರ್ಯಾದಿದಾರರಾದ ಎಸ್.ವಿ. ಗಿರೀಶ್, ಪೊಲೀಸ್ ನಿರೀಕ್ಷಕರು, ವಿಶೇಷ ಪೊಲೀಸ್ ಠಾಣೆ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ ಉಡುಪಿ ಜಿಲ್ಲೆರವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ದಸ್ತಗಿರಿಗೊಳಿಸಿ, ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ್ದ ರೂಪಾಯಿ 800/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ, ಓಸಿ ಫಲಿತಾಂಶ ಪ್ರಿಂಟ್ ಆಗಿರುವ ಚಾರ್ಟ್  ಹಾಗೂ ಬಾಲ್ ಪೆನ್ನನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿದ್ದು,ಈ ಬಗ್ಗೆ ಎಸ್.ವಿ. ಗಿರೀಶ್, ಪೊಲೀಸ್ ನಿರೀಕ್ಷಕರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 10/2014 ಕಲಂ 78 (I)(III) K.P.Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: