Monday, February 24, 2014

Daily Crime Reported As On 24/02/2014 At 17:00 Hrs



ಮಟ್ಕಾ ಜುಗಾರಿ ಪ್ರಕರಣ
  • ಹಿರಿಯಡ್ಕ: ದಿನಾಂಕ 24/02/2014ರಂದು 10:15 ಗಂಟೆಗೆ ಉಡುಪಿ ತಾಲೂಕು ಆಂಜಾರು ಗ್ರಾಮದ ಓಂತಿಬೆಟ್ಟು  ಸಾರ್ವಜನಿಕ ಬಸ್ ನಿಲ್ದಾಣದ ಬಳಿ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿದ್ದವನನ್ನು ಹಿರಿಯಡ್ಕ ಠಾಣಾ ಉಪನಿರೀಕ್ಷಕರಾದ ಮಂಜುಳ ಕೆ.ಎಂ ಇವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಆಪಾದಿತ ಕುಟ್ಟಿ, (28) ತಂದೆ ದಿ. ಚೀಂಕ್ರ, ವಾಸ ದೂಪದಕಟ್ಟೆ, ಭೈರಂಪಳ್ಳಿ ಅಂಚೆ & ಗ್ರಾಮ ಉಡುಪಿ ಜಿಲ್ಲೆ ಇವರನ್ನು ದಸ್ತಗಿರಿಗೊಳಿಸಿ, ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ್ದ ರೂಪಾಯಿ 710/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ ಹಾಗೂ ಬಾಲ್ ಪೆನ್ ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿರುತ್ತಾರೆ ಎಂಬುದಾಗಿದೆ ಈ ಬಗ್ಗೆ ಠಾಣಾ ಅಪರಾಧ ಕ್ರಮಾಂಕ 19/14 ಕಲಂ 78 (I) (III) K.P Act ನಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಜೀವ ಬೆದರಿಕೆ ಪ್ರಕರಣ
  • ಹಿರಿಯಡ್ಕ: ದಿನಾಂಕ 23/02/2014 ರಂದು 18:30 ಗಂಟೆಗೆ ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದ ಅಡಪಾಡಿ ರಾಮ ಮಂದಿರದ ಬಳಿ ವಾಸ್ತವ್ಯ ಇರುವ ಪಿರ್ಯಾದುದಾರರಾದ ಉದಯ ಕುಮಾರ್ ಶೆಟ್ಟಿ (48) ತಾಯಿ ಶ್ರೀಮತಿ ಕುಸುಮ ಶೆಡ್ತಿ, ವಾಸ ಅಡಪಾಡಿ, ಉಪ್ಪರಿಗೆ ಮನೆ, ಅಡಪಾಡಿ, ಪೆರ್ಡೂರು ಅಂಚೆ ಮತ್ತು ಗ್ರಾಮ ಉಡುಪಿ ಜಿಲ್ಲೆ ಇವರ ಮನೆಯ ಅಂಗಳಕ್ಕೆ ಆರೋಪಿಗಳಾದ ಯೋಗೀಶ್ ಪೂಜಾರಿ, ಶೋಭಾ ಪೂಜಾರಿ ಇವರುಗಳು ಸಮಾನ ಉದ್ದೇಶದಿಂದ ಅಕ್ರಮ ಪ್ರವೇಶ ಮಾಡಿ, ಜಾಗದ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಉದಯ ಕುಮಾರ್ ಶೆಟ್ಟಿರವರನ್ನು ಉದ್ದೇಶಿಸಿ ನಿನ್ನನ್ನು ಹಾಗೂ ನಿನ್ನ ಹೆಂಡತಿ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಸಿ ಜೀವಬೆದರಿಕೆ ಒಡ್ಡಿರುವುದಾಗಿದೆ ಎಂಬುದಾಗಿ ಉದಯ ಕುಮಾರ್ ಶೆಟ್ಟಿ ಇವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 18/14 ಕಲಂ 447, 504, 506 R/w 34  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ
  • ಬ್ರಹ್ಮಾವರ: ದಿನಾಂಕ 23/02/2014ರಂದು ಮಧ್ಯಾಹ್ನ 1:30 ಗಂಟೆಯ ಸಮಯಕ್ಕೆ ಮೃತ ಪ್ರಶಾಂತ (20) ತಂದೆ ರಂಗನಾಥ ಗಾಣಿಗ ವಾಸ ಮೂಡುಮಠ 11 ನೇ ಊಳ್ಳೂರು ಕುಂದಾಪುರ ತಾಲೂಕು ಇವರನ್ನು ಆತನ ಅಣ್ಣ ಪ್ರದೀಪ, ಹಾಗೂ ಸ್ನೇಹಿತರೊಂದಿಗೆ ಉಡುಪಿ ತಾಲೂಕು ನೀಲಾವರ ಗ್ರಾಮದ ಪಂಚಮಿ ಕಾನ ಎಂಬಲ್ಲಿ ಸೀತಾ ನದಿ ನೀರಿನಲ್ಲಿ ಸ್ನಾನಕ್ಕೆಂದು ಹೋಗಿದ್ದು ನೀರಿನ ಆಳಕ್ಕೆ ಹೋದಾಗ ನೀರಿನ ಸೆಳತಕ್ಕೆ ಸಿಕ್ಕಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದವನ್ನು ಜೊತೆಯಲ್ಲಿದ್ದವರು ಎತ್ತಿ ದಡಕ್ಕೆ ಹಾಕಿದಾಗ ಆಗಲೇ ಮೃತ ಪಟ್ಟಿದ್ದಾಗಿರುತ್ತದೆ ಎಂಬುದಾಗಿ ರಾಜೇಶ್ ದೇವಾಡಿಗ (36) ತಂದೆ ಬೂದ ಸೇರಿಗಾರ ವಾಸ ವೈಷ್ಣವಿ ನಿಲಯ ಆರೂರು ಕ್ರಾಸ್ ಆರೂರು ಗ್ರಾಮ ಉಡುಪಿ ತಾಲೂಕು ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 09/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಹಲ್ಲೆ ನಡೆಸಿ ಜೀವ ಬೆದರಿಕೆ ಪ್ರಕರಣ
  • ಕುಂದಾಪುರ: ಪಿರ್ಯಾದಿದಾರರಾದ ಸತೀಶ @ ಇಕ್ಬಾಲ್ (39) ತಂದೆ ಸೈಯದ್ ವಾಸ ಕರ್ಕಿ ಗುಡ್ಡೆ ಹಟ್ಟಿಯಂಗಡಿ ಗ್ರಾಮ ದಿನಾಂಕ 23/02/2014 ರಂದು ಸಂಜೆ ಸಮಯ ಸುಮಾರು 7:00 ಗಂಟೆಗೆ ಕರ್ಕಿ ಗುಡ್ಡೆಯಂಗಡಿ ಎಂಬಲ್ಲಿ  ಗೊವಿಂದ ಎಂಬುವರ ಅಂಗಡಿ ಬಳಿ ಇರುವಾಗ ಆಪಾದಿತರಾದ ಮಂಜ ಮತ್ತು ಸೋಮನಾಥ ಎಂಬುವರು ಸತೀಶ @ ಇಕ್ಬಾಲ್ ರವರೊಂದಿಗೆ ವಿನಾ ಕಾರಣ ಜಗಳ ತೆಗೆದು ಅವರು ಹಿಡಿದುಕೊಂಡು ಬಂದಿದ್ದ ಎರಡು ಮರದ ಕೊಲುಗಳಿಂದ ಸತೀಶ @ ಇಕ್ಬಾಲ್ ರವರ ಮೈಗೆ, ಕೈಗೆ, ಮನಬಂದಂತೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ. ಸತೀಶ @ ಇಕ್ಬಾಲ್ ರವರ ಪರಿಚಯದ ಗೊವಿಂದ ಎಂಬುವರಿಗೆ ಆಪಾದಿತರು ಈ ಹಿಂದೆ ಬೈದು ಬೆದರಿಕೆ ಹಾಕಿದ ಬಗ್ಗೆ ಸತೀಶ @ ಇಕ್ಬಾಲ್ ರವರು ಆಕ್ಷೇಪಿಸಿದ್ದೆ ಈ ಘಟನೆಗೆ ಕಾರಣ ವಾಗಿದೆ ಎಂಬುದಾಗಿ ಸತೀಶ @ ಇಕ್ಬಾಲ್ ಇವರು ನೀಡಿದ ದೂರಿನಂತೆ ಕುಂದಪುರ ಠಾಣಾ ಅಪರಾಧ ಕ್ರಮಾಂಕ 58/2014 ಕಲಂ 324, 504, 506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: