Monday, February 24, 2014

Daily Crimes Reported as On 24/02/2014 at 07:00 Hrs


ಅಪಘಾತ ಪ್ರಕರಣಗಳು
  • ಕೋಟ:ದಿನಾಂಕ 23/02/2014 ರಂದು ಮಧ್ಯಾಹ್ನ 1:30 ಗಂಟೆಗೆ ಉಡುಪಿ ತಾಲೂಕು ಮಣೂರು ಗ್ರಾಮದ  ಸಿ.ಎ ಬ್ಯಾಂಕ್ ಮಣೂರು ಶಾಖೆ ಬಳಿ ರಾಷ್ಟ್ರೀಯ ಹೆದ್ದಾರಿ 66 ರನ್ನು ರಿಪೇರಿ ಮಾಡುತ್ತಿದ್ದ  ಕೆ.ಎ 01 ಎಂ ಜಿ 7085 ನೇ ಕ್ಯಾಟರ್ ಪಿಲ್ಲರ್ ವಾಹನದ ಚಾಲಕ ಯಾವುದೆ ಮುನ್ಸೂಚನೆ ನೀಡದೆ ಒಮ್ಮಲೆ ತನ್ನ ಗಾಡಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಹಿಂದಕ್ಕೆ ಚಲಾಯಿಸಿದ ಪರಿಣಾಮ ತೆಕ್ಕಟ್ಟೆ ಕಡೆಯಿಂದ ಕೋಟ ಕಡೆಗೆ ಬರುತ್ತಿರುವ ಕೆ.ಎ 20 ಯು 7879 ನೇ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಾದ ದೇವರಾಜ ಶೆಟ್ಟಿ (39) ತಂದೆ:ದಿವಂಗತ ವೆಂಕಪ್ಪ ಶೆಟ್ಟಿ ವಾಸ:ದೊಡ್ಡಮನೆ "ದೇವಸ" ಮಣೂರು ಗ್ರಾಮ ಉಡುಪಿ ತಾಲೂಕುರವರ ಪರಿಚಯದ ಮೋಟಾರು ಸೈಕಲ್ ಸವಾರ ಚಂದ್ರ ದೇವಾಡಿಗ ಹಾಗೂ ಸಹಸವಾರ ಸಂತೋಷ ಪೂಜಾರಿ ಎಂಬುವವರು ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದವರನ್ನು ಕೊಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆ ಸಾಗಿಸಿ ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣೆಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು ಅದರಲ್ಲಿ ಸಂತೋಷ ಪೂಜಾರಿ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 3:00 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ದೇವರಾಜ ಶೆಟ್ಟಿರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 46/2014 ಕಲಂ 279, 338, 304 (ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಹಿರಿಯಡ್ಕ:ದಿನಾಂಕ 23/02/2014 ರಂದು 00:35 ಗಂಟೆಗೆ ಉಡುಪಿ ತಾಲೂಕಿನ ಬೊಮ್ಮರಬೆಟ್ಟು ಗ್ರಾಮದ ಹಿರಿಯಡ್ಕ ಸಮೀಪದ ಕೋಟ್ನಕಟ್ಟೆ-ಪಂಚನಬೆಟ್ಟು ನಡುವಿನ ಸಾರ್ವಜನಿಕ ಡಾಂಬಾರು ರಸ್ತೆಯಲ್ಲಿ ರೋಹಿತ್ ಎಂಬವರು ಮೋಟಾರು ಸೈಕಲ್ ನಂಬ್ರ ಕೆ.ಎ 20.ಇ.ಡಿ 0944 ನೇದರಲ್ಲಿ ವಿಜೇಶ ಶೆಟ್ಟಿ (20) ತಂದೆ:ಕರುಣಾಕರ ಶೆಟ್ಟಿ ವಾಸ:ಶ್ರೀ ವಿಷ್ಣು ಮೂರ್ತಿ ಕೃಪಾ ಹೌಸ್, ಬೆಳ್ಳರಪಾಡಿ ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕು  ಎಂಬವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಮೋಟಾರು ಸೈಕಲನ್ನು ಕೋಟ್ನಕಟ್ಟೆ ಕಡೆಯಿಂದ ಬಸ್ತಿ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಕೋಟ್ನಕಟ್ಟೆ ಸಮೀಪದ ಕೆ.ಇ.ಬಿ. ಸಬ್‌ಸ್ಟೇಷನ್ ಬಳಿ ರೋಹಿತನ ನಿಯಂತ್ರಣ ತಪ್ಪಿದ ಮೋಟಾರು ಸೈಕಲ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸಹ ಸವಾರ ವಿಜೇಶ ಶೆಟ್ಟಿಗೆ ಬಲಕಾಲಿನ ಮುಳೆಮುರಿತದ ಗಾಯವಾಗಿರುತ್ತದೆ. ಈ ಬಗ್ಗೆ ವಿಕ್ರಾಂತ್ ಶೆಟ್ಟಿ (22) ತಂದೆ:ಕರುಣಾಕರ ಶೆಟ್ಟಿ, ವಾಸ:ಶ್ರೀ ವಿಷ್ಣು ಮೂರ್ತಿ ಕೃಪಾ ಹೌಸ್, ಬೆಳ್ಳರಪಾಡಿ ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕುರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 17/2014 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹಲ್ಲೆ ಪ್ರಕರಣ
  • ಅಜೆಕಾರು:ದಿನಾಂಕ 23/02/14 ರಂದು ಬೆಳಿಗ್ಗೆ ಸುಮಾರು 11:00 ಗಂಟೆಗೆ ಮರ್ಣೆ ಗ್ರಾಮದ ಚೇಳಿಬೆಟ್ಟು ಎಂಬಲ್ಲಿ ಪಿರ್ಯಾದಿದಾರರಾದ ಅಶೋಕ ಶೆಟ್ಟಿ (35) ತಂದೆ:ಕೊರಗ ಶೆಟ್ಟಿ ವಾಸ:ಜಲಜಾ ನಿವಾಸ, ಚೇಳಿಬೆಟ್ಟು, ಮರ್ಣೆ ಗ್ರಾಮ, ಕಾರ್ಕಳ ತಾಲೂಕುರವರು ಕುಟುಂಬದ ಸ್ಥಿರಾಸ್ಥಿಯನ್ನು ಪಾಲುಮಾಡಿಕೊಳ್ಳುವ ಬಗ್ಗೆ ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ ದಿನಾಂಕ 23/02/2014 ರಂದು ತನ್ನ ಸೋದರರು ಹಾಗೂ ಸೋದರಮಾವನ ಸಮಕ್ಷಮ, ಮೋಜಣಿದಾರರು ಅಳತೆ ಮಾಡಿಕೊಳ್ಳುವ ಸಮಯ, ಆರೋಪಿತರಾದ ಸುರೇಶ ಶೆಟ್ಟಿ ಮತ್ತು ರಾಜೇಶ ಶೆಟ್ಟಿಯವರು ಸಮಾನ ಉದ್ದೇಶದಿಂದ ಒಟ್ಟು ಸೇರಿ, ಜಾಗವನ್ನು ಹಂಚಿಕೊಳ್ಳುವ ವಿಚಾರದಲ್ಲಿ ತಕರಾರು ತೆಗೆದು ಅಶೋಕ ಶೆಟ್ಟಿರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಅಕ್ರಮವಾಗಿ ತಡೆದು ಅಡ್ಡಗಟ್ಟಿ ಬಳಿಕ ಕೈಗಳಿಂದ ಹಾಗೂ ಕಲ್ಲನ್ನು ಹಿಡಿದು ಬೆನ್ನಿಗೆ ಗುದ್ದಿ, ಕಾಲಿನಿಂದ ತುಳಿದು ಹಲ್ಲೆ ಮಾಡಿ ಗಾಯಗೊಳಿಸಿದ್ದು ಗಾಯಾಳು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಅಶೋಕ ಶೆಟ್ಟಿರವರು ನೀಡಿದ ದೂರಿನಂತೆ ಅಜೆಕಾರು ಠಾಣಾ ಅಪರಾಧ ಕ್ರಮಾಂಕ 10/2014 ಕಲಂ 341,504,323,324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇಸ್ಪಿಟ್‌ ಜುಗಾರಿ ಪ್ರಕರಣ
  • ಕಾರ್ಕಳ ನಗರ:ದಿನಾಂಕ:23/02/2014 ರಂದು ಪಿರ್ಯಾದಿದಾರರಾದ ರವಿ ಎನ್.ಎನ್, ಪಿಎಸ್ಐ (ಅಪರಾಧ) ಕಾರ್ಕಳ ನಗರ ಠಾಣೆರವರಿಗೆ ಕಾರ್ಕಳ ಕೌಡೂರು ಗ್ರಾಮದ ರಂಗನಪಲ್ಕೆ ಎಂಬಲ್ಲಿ ಶೇಡಿಗುಡ್ಡೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಉಲಾಯಿ ಪಿದಾಯಿ ಇಸ್ಪಿಟ್ ಜುಗಾರಿ ಆಟ ನಡೆಯುತ್ತಿದೆ ಎಂಬುದಾಗಿ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ ಹೋಗಿ 17:45 ಗಂಟೆಗೆ ದಾಳಿ ನಡೆಸಿ ಉಲಾಯಿ ಪಿದಾಯಿ ಆಡುತ್ತಿದ್ದ (1) ನೊವೆಲ್ ಮಿರಾಂಡ (43), ತಂದೆ:ದಿವಂಗತ ಜಾನ್ ಮಿರಾಂಡ, ವಾಸ:ರಂಗನ ಪಲ್ಕೆ ಮನೆ, ರಂಗನಪಲ್ಕೆ, ಕೌಡೂರು ಗ್ರಾಮ ಕಾರ್ಕಳ ತಾಲೂಕು (2) ಯೋಗೀಶ್ ಆಚಾರ್ಯ (35), ತಂದೆ:ಉಪೇಂದ್ರ ಆಚಾರ್ಯ, ವಾಸ:ಪ್ರಶಾಂತನಗರ, ಕಾಬೆಟ್ಟು, ಕಸಬ ಗ್ರಾಮ, ಕಾರ್ಕಳ ತಾಲೂಕು 3)ಸುನೀಲ್ ಪೂಜಾರಿ (34) ತಂದೆ:ದಿವಂಗತ ಮುದ್ದು ಪೂಜಾರಿ, ವಾಸ:ಅನುಗ್ರಹ ನಿಲಯ, ಕಲ್ಲೊಟ್ಟು, ಶಿರ್ವಾ, ಉಡುಪಿ ಜಿಲ್ಲೆ 4) ಸುರೇಶ್ ಆಚಾರ್ಯ (42), ತಂದೆ:ಜೋಗಪ್ಪ ಆಚಾರ್ಯ, ವಾಸ:ದುರ್ಗಾ ಪರಮೇಶ್ವರಿ ನಿಲಯ, ಹೈವೇ ರೋಡ್, ಕಾಬೆಟ್ಟು ಕಸಬಾ ಗ್ರಾಮ ಕಾರ್ಕಳ ತಾಲೂಕು 5) ಸುರೇಶ್ ಆಚಾರ್ಯ (42) ತಂದೆ:ಹೂವಯ್ಯ ಆಚಾರ್ಯ, ವಾಸ:ಕೊಳ್ಳಜಾಲು, ಪಳ್ಳಿ ಗ್ರಾಮ, ಕಾರ್ಕಳ ತಾಲೂಕು 6) ಲಕ್ಷ್ಮಣ ಪೂಜಾರಿ, (46), ತಂದೆ:ದಿವಂಗತ ಮುದ್ದು ಪೂಜಾರಿ ವಾಸ:ಲಕ್ಷ್ಮೀ ನಿವಾಸ:ದಿಡಂಬೆಟ್ಟು, ಪಳ್ಳಿ ಗ್ರಾಮ ಕಾರ್ಕಳ ತಾಲೂಕು 7)ಗಣೇಶ್ ಆಚಾರ್ಯ (43), ತಂದೆ:ದಿವಂಗತ ನಾರಾಯಣ ಆಚಾರ್ಯ, ವಾಸ:ದೇವಿಕೃಪಾ, ಕೊಕಾಯಿಕಲ್ಲು, ಪಳ್ಳಿ ಗ್ರಾಮ, ಕಾರ್ಕಳ ತಾಲೂಕು ಇವರುಗಳನ್ನು ದಸ್ತಗಿರಿ ಮಾಡಿ ಅವರುಗಳ ವಶದಲ್ಲಿದ್ದ 52 ಇಸ್ಪಿಟ್ ಎಲೆ, ನಗದು ರೂಪಾಯಿ 10,715/-, ದಿನಪತ್ರಿಕೆಯನ್ನು ಸ್ವಾಧೀನಪಡಿಸಿ ಕ್ರಮಕೈಗೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 27/2014 ಕಲಂ 87 ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 


No comments: