Monday, February 24, 2014

Daily Crime Reported As On 24/02/2014 At 19:30 Hrs




ಜೀವ ಬೆದರಿಕೆ ಪ್ರಕರಣ
  • ಕೊಲ್ಲೂರು: ದಿನಾಂಕ 19/02/2014ರಂದು ಪಿರ್ಯಾದಿದಾರರಾದ ಬೇಬಿ ಕೊರಗ ಇವರು ಮನೆಯಲ್ಲಿ ಇರುವ ಸಂದರ್ಭದಲ್ಲಿ ಆಪದಿತರುಗಳಾದ 1). ರಿತೇಶ ಅರಣ್ಯ ರಕ್ಷಕ, 2). ನವೀನ ಪಾರೇಸ್ಟರ್, 3). ಸಚಿದಾನಂದ ಶೆಟ್ಟಿ ಆಲೂರು, ಹಾಗೂ ಇತರ 10 ಕ್ಕು ಮಿಕ್ಕಿ ಜನರು. ಗೇರು ಅಭಿವೃದ್ದಿ ನಿಗಮದ ಸಿಬ್ಬಂದಿಗಳೆಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆಯಲು ಬಂದು ಕೊಲೆ ಬೆದರಿಕೆ ಹಾಕಿರುತ್ತಾರೆ. ಅಲ್ಲದೆ ಇದೇ ವಿಷಯಕ್ಕೆ ಸಂಬಂದಿಸಿ   ದಿನಾಂಕ 23/02/2014ರಂದು ಮಧ್ಯಾಹ್ನ 01.00 ಗಂಟೆಯ ಸಮಯಕ್ಕೆ ವಂಡ್ಸೆ ಗ್ರಾಮ ಬಳಗೇರಿ ಗುಡ್ಡೆಯ ಸರ್ವೆ ನಂ 132 ರಲ್ಲಿ ಡಿ.ಸಿ ಮನ್ನಾ ಭೂಮಿಯಲ್ಲಿ ಮನೆ ಕಟ್ಟಿಕೊಂಡು ಕುಳಿತುಕೊಂಡಿರುವ ಬೇಬಿ ಕೊರಗ ಹಾಗೂ ಇತರರ ಬಾಬ್ತು  ನಾಲ್ಕು ಮನೆಗಳನ್ನು  ಗೇರು ಅಭಿವೃದ್ದಿ ನಿಗಮದ, ಅರಣ್ಯ ರಕ್ಷಕ ರೀತೇಶ ಹಾಗೂ ಅರಣ್ಯ ಇಲಾಖೆಯ ಪಾರೇಸ್ಟರ್ ರಾದ ನವೀನ ಹಾಗೂ ಇತರರು ಹಾಗೂ ಗೇರು ಬೀಜ ಟೆಂಡರ್ ತೆಗೆದುಕೊಂಡಿರುವ ಸಚ್ಚಿದಾನಂದ ಶೆಟ್ಟಿ ಇವರ ಪ್ರೇರಣೆಯೊಂದಿಗೆ ಸುಮಾರು 10 ಮಿಕ್ಕಿ ಜನ ಎಕಾಎಕಿಯಾಗಿ ಬೇಬಿ ಕೊರಗ ರವರ ಸ್ಥಳಕ್ಕೆ ಬಂದು ಕುಂಟುಂಬವನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ನೀವು ಜಾಗ ಬಿಡದಿದ್ದರೇ ಕೊಲೆ ಮಾಡುತ್ತೇವೆ ಎಂದು ಹೆದರಿಸಿ  ಮನೆಗಳನ್ನು ನಾಶ ಮಾಡಿರುತ್ತಾರೆ ಎಂಬುದಾಗಿ ಬೇಬಿ ಕೊರಗ ಇವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 10/2014 ಕಲಂ 143, 147, 148, 504, 506, 427, 109 ಜೊತೆಗೆ 149 ಐ.ಪಿ.ಸಿ & 3 (1) (10) SC ST Act ನಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ
  • ಬ್ರಹ್ಮಾವರ: ಉಡುಪಿ ತಾಲೂಕು ಚೇರ್ಕಾಡಿ ಗ್ರಾಮದ ಮಡಿ ಎಂಬಲ್ಲಿ ಕೀರ್ತಿ ಟೈಲ್ಸ್ ಕಂಪೆನಿಯ ರೂಮಿನಲ್ಲಿ ದಿನಾಂಕ 23/02/2014 ರಂದು  ರಾತ್ರಿ 10:00 ಗಂಟೆಯಿಂದ ದಿನಾಂಕ 24/02/2014 ರಂದು ಬೆಳಿಗ್ಗೆ 05:00 ಗಂಟೆಯ ಮಧ್ಯದ ಅವಧಿಯಲ್ಲಿ ಪಿರ್ಯಾದಿದಾರರಾದ ಬೆನೆಡಿಕ್ಟ್ ಬೇಂಗ್ರ (30) ತಂದೆ ಸುಲೆಮಾನ್ ಬೇಂಗ್ರ ಉತರ್ ಕಿಶಾನ್ ಪಾಡ್ ಹಾಲಗಡ್ ಅಂಚೆ  ಉದಲ್ಗುರಿ ಜಿಲ್ಲೆ ಗುಹವಾಟಿ ಅಸ್ಸಾಂ ಜಿಲ್ಲೆ ಕೇರಾಫ್ ಕೀರ್ತಿ ಟೈಲ್ಸ್ ಮಡಿ ಚೇರ್ಕಾಡಿ ಗ್ರಾಮ ಇವರ ತಮ್ಮ ಸೀಮೆನ್ (25) ಎಂಬುವರು ಊಟ ಮಾಡಿ ಮಲಗಿದ ಬಳಿಕ ಮಲಗಿದಲ್ಲಿಯೇ ಹೃದಯಾಘಾತದಿಂದ ಮೃತ ಪಟ್ಟಿದ್ದಾಗಿರುತ್ತದೆ ಎಂಬುದಾಗಿ ಬೆನೆಡಿಕ್ಟ್ ಬೇಂಗ್ರ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 10/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಅನಂತ ಜಿ. ಪೂಜಾರಿ (73)  ತಂದೆ ದಿ. ಗುರುಸಿದ್ದಪ್ಪ ಪೂಜಾರಿ ವಾಸ ಹಯಗ್ರೀವ್ ಕೃಪಾ, ವಾದಿರಾಜ ರೋಡ್‌, ಶಿವಳ್ಳಿ ಗ್ರಾಮ, ಉಡುಪಿ ಇವರು ದಿನಾಂಕ 24/02/2014ರಂದು ಉಡುಪಿ ಕೋರ್ಟ್ ನಲ್ಲಿ ವಕೀಲರ ಬಳಿ ಮಾತನಾಡಿ ವಾಪಾಸು ಮನೆಗೆ ಹೋಗುವಾಗ ಕೋರ್ಟಿನಿಂದ ಹೊರಗೆ ರಸ್ತೆಯ ಬದಿಗೆ ಬಂದು ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ ಮದ್ಯಾಹ್ನ 12:45 ಗಂಟೆಗೆ ಕಿನ್ನಿಮುಲ್ಕಿ ಕಡೆಯಿಂದ ಡಯಾನ ವೃತ್ತದ ಕಡೆಗೆ ದ್ವಿಚಕ್ರ ವಾಹನ ನಂಬ್ರ ಕೆಎ 20ಎಕ್ಸ್ 5733ನೇದನ್ನು ಸುಮನ ಎಂಬವಳು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಪಿರ್ಯಾದಿದಾರರಾದ ಅನಂತ ಜಿ. ಪೂಜಾರಿ (73) ತಂದೆ  ದಿ. ಗುರು ಸಿದ್ದಪ್ಪ ಪೂಜಾರಿ, ವಾಸ  ಹಯಗ್ರೀವ್ ಕೃಪಾ, ವಾದಿರಾಜ ರೋಡ್‌, ಶಿವಳ್ಳಿ ಗ್ರಾಮ, ಉಡುಪಿ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಎಡಗಡೆ ಸೊಂಟಕ್ಕೆ ಗುದ್ದಿದ ಪೆಟ್ಟಾಗಿದ್ದು, ಎಡಕಾಲು ಕೋಲು ಕಾಲಿಗೆ ರಕ್ತಗಾಯವಾಗಿದ್ದು, ಎಡಕೈ ಅಂಗೈ ಹಿಂಬದಿಗೆ ಗುದ್ದಿದ ನೋವಾಗಿರುತ್ತದೆ. ಕೂಡಲೇ ಅಲ್ಲಿ ಸೇರಿದವರು ಒಂದು ಅಟೋ ರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಉಡುಪಿ ಮಿತ್ರ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಅಪಘಾತಕ್ಕೆ ದ್ವಿಚಕ್ರ ವಾಹನ ನಂಬ್ರ ಕೆಎ 20 ಎಕ್ಸ್ 5733ನೇದರ ಸವಾರಳಾದ ಸುಮನ ರವರ ಅತೀವೇಗ ಹಾಗೂ ಅಜಾಗರೂಕತೆಯ ಸವಾರಿಯೆ ಕಾರಣವಾಗಿರುತ್ತದೆ ಅನಂತ ಜಿ.ಪೂಜಾರಿ ಇವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 19/2014  ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಕಳವು ಪ್ರಕರಣಗಳು
  • ಉಡುಪಿ: ಪಿರ್ಯಾದಿದಾರರಾದ ಮಲ್ಲಿಕಾ (34), ಗಂಡ ಭಾಸ್ಕರ ಆಚಾರ್ಯ, ವಾಸ ಸತ್ಯಶ್ರೀ, ಅಂಬಾಗಿಲು, ಸಂತೆಕಟ್ಟೆ ಉಡುಪಿ ಇವರು ದಿನಾಂಕ 23/02/14ರಂದು ಮಧ್ಯಾಹ್ನ 12:00ಗಂಟೆಗೆ ಮನೆಗೆ ಬೀಗ ಹಾಕಿ ತಮ್ಮ ತವರು ಮನೆಗೆ ಹೋಗಿದ್ದು ದಿನಾಂಕ 24/02/14ರಂದು ಬೆಳಿಗ್ಗೆ 06:30ಗಂಟೆಗೆ ಸಮಯಕ್ಕೆ ಮಲ್ಲಿಕಾರವರು ಅತ್ತಿಗೆ ಜಯಲಕ್ಷ್ಮಿರವರು ಪೋನ್‌ ಮಾಡಿ ಮಲ್ಲಿಕಾರವರ ಮನೆ ಕಳವಾಗಿರುವ ವಿಚಾರ ತಿಳಿಸಿದಂತೆ ಮಲ್ಲಿಕಾರವರು ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಎದುರಿನ ದ್ವಾರ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ, ಬಾಗಿಲು ಒಡೆದು ಒಳ ಪ್ರವೇಶಿಸಿ ಒಳಗಡೆ ದೇವರ ಕೋಣೆಯಲ್ಲಿದ್ದ ಚಿನ್ನದ ಕನಕ ಮಾಲೆ ಸರ, ಚಿನ್ನದ ಕರಿಮಣಿ ಸರ, ಬೆಳ್ಳಿಯ ನಾಣ್ಯ-1, ಹಿತ್ತಾಳೆಯ ಹರಿವಾಣ-9 ಹಾಗೂ ತಾಮ್ರದ ಹರಿವಾಣ-7ನ್ನು ಕಳವು ಮಾಡಿಕೊಂಡು ಹೋಗಿದ್ದಾಗಿದೆ. ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ಸುಮಾರು 74000/-ರೂಪಾಯಿ ಆಗಿರುತ್ತದೆ ಎಂಬುದಾಗಿ ಮಲ್ಲಿಕಾ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 57/14 ಕಲಂ 454, 457, 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
  • ಕಾರ್ಕಳ: ದಿನಾಂಕ 23/02/2014ರಂದು 00:30 ಗಂಟೆಯಿಂದ 03:00 ಗಂಟೆಯ ಮಧ್ಯಾವಧಿಯಲ್ಲಿ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಕೆಂಚಬೆಟ್ಟು ಕಾಂಪೌಂಡ್ ಒಳಗೆ ಪಿರ್ಯಾದಿದಾರರಾದ ಶ್ರೀ ಶಿವನ್ (40), ತಂದೆ ವಿಶ್ವನಾಥ, ವಾಸ ಸಚಿನ್ ನಿವಾಸ, ಕೆಂಚಬೆಟ್ಟು, ಕಾಂಪೌಂಡ್, ಸಾಣೂರು ಗ್ರಾಮ, ಕಾರ್ಕಳ ತಾಲೂಕು ಇವರ ಮನೆಯಾದ ಸಚಿನ್ ನಿವಾಸ ಪಕ್ಕದಲ್ಲಿ ನಿಲ್ಲಿಸಿದ್ದ  ಶಿವನ್ ರವರ ಬಾಬ್ತು  ಕಪ್ಪು ನೀಲಿ ಬಣ್ಣದ  ಹಿರೋ ಹೋಂಡಾ ಸ್ಪ್ಲೆಂಡರ್ ಪ್ರೋ ನಂಬ್ರ ಕೆಎ 20 ಈಈ  0348 ನೇಯದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ  ಮೋಟಾರ್ ಸೈಕಲ್  ನ ಅಂದಾಜು ಮೌಲ್ಯ ರೂಪಾಯಿ 48,000 /- ಆಗಬಹುದು ಎಂಬುದಾಗಿ ಶಿವನ್ ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 28 /2014 ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಅಪಹರಣ ಪ್ರಕರಣ
  • ಶಿರ್ವಾ: ಪಿರ್ಯಾದಿದಾರರಾದ ಶ್ರೀಮತಿ ಆಶಾ ಗಂಡ ನಾಗರಾಜ, ವಾಸ ದರ್ಮಶ್ರೀ ಕಾಲೋನಿ ಪಾಂಬೂರು, ಪಡುಬೆಳ್ಳೆ ಬೆಳ್ಳೆ ಗ್ರಾಮ ಇವರ ಮಗ 5 ವರ್ಷ ಪ್ರಾಯದ ನವೀನ ಎಂಬಾತನು ಬಾಲವಾಡಿ ಶಾಲೆಗೆ ಹೋಗುತ್ತಿದ್ದು. ದಿನಾಂಕ 23/02/2014ರಂದು ಸಂಜೆ ಮನೆಯ ಪರಿಸರದಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದು ಸಂಜೆ ವೇಳೆಗೆ ಮನೆಗೆ ಬಂದವನಿಗೆ ಶ್ರೀಮತಿ ಆಶಾರವರು ಸ್ನಾನ ಮಾಡಿಸಿದ ಬಳಿಕ ಪುನ: ಆಡಲಿಕ್ಕೆ ಹೋದವನು ಮನೆಗೆ ಬಾರದೇ ಕಾಣೆಯಾಗಿದ್ದು ಈತನನ್ನು ಯಾರೋ ಅಪಹರಣ ಮಾಡಿರ ಬಹುದೆಂದು ಸಂಶಯವಿರುವುದಾಗಿದೆ ಎಂಬುದಾಗಿ ಶ್ರೀಮತಿ ಆಶಾ ಇವರು ನೀಡಿದ ದೂರಿನಂತೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 33/14, ಕಲಂ 363 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: