Monday, February 17, 2014

Daily Crime Reported As On 17/02/2014 At 17:00 Hrsಇತರ ಪ್ರಕರಣ
  •  ಬೈಂದೂರು: ದಿನಾಂಕ 15/02/2014 ರಂದು ರಾತ್ರಿ ಸಮಯ ಪಿರ್ಯಾದುದಾರರಾದ ಉದಯ (30) ತಂದೆ ಮುಡೂರ ವಾಸ ಕರಿಕನ್ನನ ಮನೆ, ಮರವಂತೆ ಗ್ರಾಮ,  ಕುಂದಾಪುರ ತಾಲೂಕು ಇವರು ಪಡುವರಿ ಗ್ರಾಮದ ಪಾಂಚಜನ್ಯ ಕ್ರೀಡಾ ಮತ್ತು ಯುವಕ ಸಂಘ(ರಿ) ಇವರು ಏರ್ಪಡಿಸಿದ ಹೊನಲು ಬೆಳಕಿನ ಹಗ್ಗ ಜಗ್ಗಾಟ ಸ್ಪರ್ಧೆಗೆ ತನ್ನ ಟೀಮ್ ನೊಂದಿಗೆ ಬಂದಿದ್ದು ದಿನಾಂಕ 16/02/2014 ರಂದು ಬೆಳಗಿನ ಜಾವ ಸಮಯ ಸುಮಾರು 02.00 ಗಂಟೆ ಸಮಯಕ್ಕೆ ಪಂದ್ಯಾಟದ ರೆಫ್ರಿಯಾದ ಪ್ರಭಾಕರ ಶೇರುಗಾರ್ ರವರು ನಮ್ಮ ಟೀಮ್‌ನ ಭರತ್ ಎಂಬವನಿಗೆ ಕೈಯಿಂದ ಹೊಡೆದಾಗ ಪಾಂಚಜನ್ಯ ಯುವಕರ ಕ್ರೀಡಾ ಸಂಘದವರರಾದ ಆರೋಪಿತರುಗಳಾದ 1). ಪ್ರಭಾಕರ ಶೇರುಗಾರ್ 2). ನಾಗೇಂದ್ರ 3). ಗುರುರಾಜ 4). ಮಹೇಶ 5). ರವಿ 6). ಹರೀಶ 7). ಪ್ರಭಾಕರ್ ಎಸ್ 8). ಮಂಜುನಾಥ ಶೇರುಗಾರ್ ಹಾಗೂ ಇತರರು ಕೈಯಿಂದ ಉದಯರವರಿಗೆ ಹೊಡೆದು ದೂಡಿ ಹಾಕಿ ಕುತ್ತಿಗೆಯಲ್ಲಿದ್ದ ಸುಮಾರು ಒಂದು ಮುಕ್ಕಾಲು ಪವನ್ ಚಿನ್ನದ ಸರವನ್ನು ಎಳೆದುಕೊಂಡು ಹೋಗಿರುತ್ತಾರೆ.  ನಂತರ ಈ ಗಲಾಟೆಯನ್ನು ಕಂಡ ಮಹೇಶ, ಭರತ, ಸುಬ್ರಮ್ಮಣ್ಯ ಸತೀಶ ರವರು ಜಗಳ ಬಿಡಿಸಲು ಬಂದಾಗ ಅವರಿಗೂ ಕೈಯಿಂದ ಹೊಡೆದಿರುವುದಾಗಿದೆ ಎಂಬುದಾಗಿ ಉದಯ ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 34/2014 ಕಲಂ 143, 147, 323, 392 ಜೊತೆಗೆ 149 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 

No comments: