Monday, February 17, 2014

Daily Crime Reported As On 17/02/2013 At 07:00 Hrs



ಅಪಘಾತ ಪ್ರಕರಣ
  • ಕೊಲ್ಲೂರು: ದಿನಾಂಕ 16/02/2014 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಬಾಬು ವಿ. ಎಮ್ (45) ತಂದೆ ಮಣಿ ವಾಸ ಕಾರ್ತಾಯಿನಿ ಪ್ರಗತಿ ನಗರ ಉಡುಪಿ ತಾಲೂಕು ಇವರು ತನ್ನ ಸಂಬಂದಿಕರೊಂದಿಗೆ ಉಡುಪಿಯಿಂದ ಕೊಲ್ಲೂರು ದೇವಸ್ಥಾನಕ್ಕೆ ಕೆಎ 20ಎನ್  2588ನೇ ಟೋಯೋಟಾ ಇನೋವಾ ಟ್ಯಾಕ್ಷೀಯಲ್ಲಿ ಬರುತ್ತಿರುವಾಗ ಜಡ್ಕಲ್ ಗ್ರಾಮದ ನಾಯಿಕೋಡಿ ಕ್ರಾಸ್ ನಿಂದ ಸ್ವಲ್ಪ ಮುಂದೆ ಬರುವಾಗ ಸಮಯ ಸುಮಾರು ಬೆಳಿಗ್ಗೆ 09:00 ಗಂಟೆಗೆ ಸದ್ರಿ ಕಾರಿನ ಚಾಲಕ ಮಹಮ್ಮದ್ ಬುರಾನ್ ರವರು ಸದ್ರಿ ಕಾರನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಚಾಲಕರ ಹತೋಟಿ ತಪ್ಪಿ ರಸ್ತೆಯ ಎಡ ಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ರಸ್ತೆಯ ಬಲಬದಿಯ ಬಂಡೆ ಕಲ್ಲಿಗೆ ಡಿಕ್ಕಿ ಹೊಡೆದುದರ ಪರಿಣಾಮ ಬಾಬು ವಿ. ಎಮ್  ರವರಿಗೆ ತೀವ್ರ ತರದ ಗಾಯ ಹಾಗೂ ಕಾರಿನಲ್ಲಿದ್ದ ಸಹ ಪ್ರಯಾಣಿಕರುಗಳಾದ 1) ಶ್ರೀಮತಿ ರುಕ್ಮೀಣಿ (60), 2) ಶ್ರೀಮತಿ ಲಕ್ಷ್ಮೀ(35), 3) ಶ್ರೀಮತಿ ದೀಪ (31), 4) ಶ್ರೀಮತಿ ಸಾವಿತ್ರಿ (54), 5) ನಂದಿನ್, (5 ತಿಂಗಳ ಮಗು) ಇವರುಗಳಿಗೆ ಸಾದಾ ಗಾಯಗಳಾಗಿರುತ್ತದೆ ಎಂಬುದಾಗಿ ಬಾಬು ವಿ. ಎಮ್   ಇವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 07/2014 ಕಲಂ 279, 337, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಅಕ್ರಮ ಮಧ್ಯೆ ಮಾರಾಟ ಮಾಡುತ್ತಿದ್ದವನ ಬಂಧನ
  • ಹೆಬ್ರಿ: ದಿನಾಂಕ 16/02/14ರಂದು ಹೆಬ್ರಿ ಠಾಣಾ ಉಪನಿರೀಕ್ಷಕರಾದ ಸೀತಾರಾಮ್. ಪಿ ಠಾಣೆಯಲ್ಲಿರುವಾಗ ನಾಡ್ಪಾಲು ಗ್ರಾಮದ ಕಾಸನ ಮಕ್ಕಿ ಶಾಲೆಯ ಬಳಿ ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಗಿರಾಕಿಗಳಿಗೆ ಮದ್ಯವನ್ನು ಸೇವಿಸಲು ಅನುವು ಮಾಡಿಕೊಡುತ್ತಿರುವುದಾಗಿ ಗುಪ್ತ ಮಾಹಿತಿ ಸಿಬ್ಬಂದಿಯವರು ನೀಡಿದ ಮಾಹಿತಿಯಂತೆ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ ಸದ್ರಿ ಸ್ಥಳಕ್ಕೆ ಹೋಗಿ ನೋಡಿದಾಗ ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ನೆಲದ ಮೇಲೆ ಪ್ಲಾಸ್ಟಿಕ್‌ ಚೀಲವನ್ನು ಬಿಡಿಸಿ, ಗಿರಾಕಿಗಳನ್ನು ಸೇರಿಸಿ ಗಾಜಿನ ಲೋಟದಲ್ಲಿ ಗಿರಾಕಿಗಳಿಗೆ ಮದ್ಯವನ್ನು ಸೇವಿಸಲು ಅನುವು ಮಾಡಿಕೊಡುವುದು ಕಂಡು ಬಂದಿದ್ದು, 17:45 ಗಂಟೆಗೆ ಸದ್ರಿಯವವನನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ವಿಚಾರಿಸಿದಲ್ಲಿ ಆತನು ತನ್ನ ಹೆಸರು ಆನಂದ ಹೆಗ್ಡೆ (63) ತಂದೆ ದಿ. ತಮ್ಮಣ್ಣ ಹೆಗ್ಡೆ  ವಾಸ ಕಾಸನ ಮಕ್ಕಿ ನಾಡ್ಪಾಲು ಗ್ರಾಮ ಎಂಬುದಾಗಿ ತಿಳಿಸಿದ್ದು, ತಾನು ಬೇರೆ ಬೇರೆ ಕಡೆಗಳ ವೈನ್ ಶಾಪ್ ಗಳಿಂದ ಚಿಲ್ಲರೆಯಾಗಿ ಮದ್ಯವನ್ನು ಖರೀದಿಸಿ ತಂದು ಅದನ್ನು ಗಿರಾಕಿಗಳಿಗೆ ಚಿಲ್ಲರೆಯಾಗಿ ಕುಡಿಯಲು ಕೊಡುತ್ತಿರುವುದಾಗಿಯೂ ಈ ಬಗ್ಗೆ  ತನ್ನಲ್ಲಿ ಯಾವುದೇ ಪರವಾನಿಗೆ ಇರುವುದಿಲ್ಲವಾಗಿ ತಿಳಿಸಿದ್ದು, ಅದರಂತೆ ಆರೋಪಿತನಿಗೆ ಆತನ ತಪ್ಪಿನ ಬಗ್ಗೆ ತಿಳಿಯಪಡಿಸಿ ಪಂಚರ ಸಮಕ್ಷಮ ಆರೋಪಿ ಆನಂದ ಹೆಗ್ಡೆಯನ್ನು ವಶಕ್ಕೆ ತೆಗೆದುಕೊಂಡು ಆತನಿಂದ 180 ಎಂ.ಎಲ್ ನ ಮೈಸೂರು ಲ್ಯಾನ್ಸರ್ ವಿಸ್ಕಿ ಕಂಪನಿಯ ಮದ್ಯ ತುಂಬಿದ 16 ಬಾಟಲಿ(ಇವುಗಳಲ್ಲಿ 2 ಅರ್ಧ ತುಂಬಿದ ಬಾಟಲಿ) ಗಳು, ಗಾಜಿನ ಲೋಟಗಳು-2, ಬಿಳಿ ಬಣ್ಣದ ಪ್ಲಾಸ್ಟಿಕ್‌ ಚೀಲ-1 ಹಾಗೂ ನಗದು ರೂಪಾಯಿ 150/- ನ್ನು ಸ್ವಾಧೀನ ಪಡಿಸಿಕೊಂಡು ಠಾಣೆಗೆ ಬಂದು ಆರೋಪಿತನ ವಿರುದ್ದ ಠಾಣಾ ಅಪರಾಧ ಕ್ರಮಾಂಕ 15/2014, ಕಲಂ 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆಯಂತೆ ಸ್ವಯಂ ಪ್ರಕರಣ ದಾಖಲಿಸಿರುವುದಾಗಿದೆ.

No comments: