Monday, February 17, 2014

Dialy Crime Reported As On 17/02/2014 At 19:30 Hrsಅಪಘಾತ ಪ್ರಕರಣ
  • ಮಲ್ಪೆ : ದಿನಾಂಕ 16/02/2014 ರಂದು ಸಂಜೆ 6:10 ಗಂಟೆ ಸಮಯಕ್ಕೆ ಪಿರ್ಯಾದಿದಾರ ಯೋಗೀಂದ್ರ (36) ಇವರ ತಾಯಿ ಗಿರಿಜ (64) ಎಂಬವರು ತನ್ನ ಮನೆಯಿಂದ ಹಾಲಿನ ಹಣ ಕೊಡಲು ಕೊಡವೂರು ಗ್ರಾಮದ ಕಂಬಳಕಟ್ಟೆಂಬಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಆಪಾದಿತ ಕೆಎ 20ಇಬಿ 5145ನೇ ಮೋಟಾರು ಸೈಕಲ್ ಸವಾರರಾದ ಚಂದ್ರಶೇಖರ್ ಎಂಬವರು ತನ್ನ ಬಾಬ್ತ ಮೋಟಾರು ಸೈಕಲನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಪರಿಣಾಮ ಗಿರಿಜರವರಿಗೆ ತಲೆಗೆ ಪೆಟ್ಟಾಗಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಚಿಕಿತ್ಸೆ ಬಗ್ಗೆ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 11:45 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಅಫಘಾತಕ್ಕೆ ಮೋಟಾರು ಸೈಕಲ್  ಕೆಎ 20 ಇಬಿ 5145 ರ ಸವಾರ  ಚಂದ್ರಶೇಖರ್ ಅತೀವೇಗ ಹಾಗೂ ನಿರ್ಲಕ್ಷತನ ಕಾರಣವಾಗಿರುತ್ತದೆ ಎಂಬುದಾಗಿ ಯೋಗೀಂದ್ರ ಇವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 30/2014 ಕಲಂ 279, 304 (ಎ) ಐಪಿಸಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: