Saturday, June 22, 2013

Daily Crme Reports As On 22/06/2013 At 17:00 Hrs



ಅಸ್ವಾಭಾವಿಕ ಮರಣ ಪ್ರಕರಣ:
  • ಬ್ರಹ್ಮಾವರ: ದಿನಾಂಕ: 21/06/2013 ರಂದು ಮಧ್ಯಾಹ್ನ  2:00 ಗಂಟೆಯಿಂದ ಸಂಜೆ 7;00 ಗಂಟೆಯ ಮಧ್ಯದ ಅವಧಿಯಲ್ಲಿ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಬಿರ್ತಿ ಎಂಬಲ್ಲಿರುವ ಶಂಕುತಲಾ ಎಂಬವರ ಮನೆಯಲ್ಲಿ  ಪಿರ್ಯಾದಿ ಸುನಿಲ್ (29) ತಂದೆ: ದಿ: ಸಂಜೀವ ಪೂಜರಿ, ವಾಸ: ಉಗ್ಗೆ ಕುದ್ರು , ಕಲ್ಯಾಣ ಪುರ , ಉಡುಪಿ ತಾಲೂಕು ಇವರ ಅಣ್ಣ ಶಂಕರ (38) ಎಂಬವರು ಯಾವುದೋ ವಿಷಯದಲ್ಲಿ  ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಕೋಣೆಯೊಳಗಿನ ಪಕಾಸಿಗೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ.  ಈ ಬಗ್ಗೆ  ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 33/2013 ಕಲಂ; 174 ಸಿಆರ್ ಪಿಸಿ  ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಅಪಘಾತ ಪ್ರಕರಣ:
  • ಮಣಿಪಾಲ;  .ದಿನಾಂಕ 22/06/2013 ರಂದು ಪಿರ್ಯಾದಿ ರಿಕೇಶ್‌ ಆರ್‌. ಶ್ರೀಯಾನ್‌ (27) ತಂದೆ: ರಮೇಶ್‌ ಕೆ. ಶ್ರೀಯಾನ್‌ ವಾಸ: ರೂಂ ನಂ. 8, ಸಿದ್ದಾಂತ ಅಪಾರ್ಟ್‌ಮೆಂಟ್‌, ಸಪ್ತಗಿರಿ ನಗರ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರು  ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಅವರ ಮೋಟಾರು ಸೈಕಲ್ ನಂ. ಕೆಎ 20 ವಿ 2492 ನೇದರಲ್ಲಿ ಬರುತ್ತಿದ್ದಾಗ, ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲದ ಹೋಟೇಲ್ ಕೆ.ಎಫ್.ಸಿ ಎದುರುಗಡೆ ಉಡುಪಿ -ಮಣಿಪಾಲ ಸಾರ್ವಜನಿಕ ರಸ್ತೆಯಲ್ಲಿ ಮಧ್ಯಾಹ್ನ 12:00 ಗಂಟೆಗೆ ತಲುಪಿದಾಗ ಓರ್ವ ಕೆಎ 20 ಬಿ 8270 ನೇ ಟೆಂಪೋ ಚಾಲಕನು ಟೆಂಪೋವನ್ನು ಎದುರುಗಡೆಯಿಂದ ಒಮ್ಮೆಲೇ  ಯೂ ಟರ್ನ್‌ನಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರ ಎಡಕಾಲಿನ ಮೊಣಗಂಟಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ  ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 33/2013 ಕಲಂ; 174 ಸಿಆರ್ ಪಿಸಿ  ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

No comments: