Saturday, June 22, 2013

Daily Crimes Reported as On 22/07/2013 at 07:00 Hrs

ಅಪರಿಚಿತ ಗಂಡಸಿನ ಶವ ಪತ್ತೆ.

  • ದಿನಾಂಕ. 20.06.13 ರಂದು 06:20 ಗಂಟೆಗೆ ಚಂದ್ರ ಶೇಖರ್ ಕೋಟ್ಯಾನ್,  ಮಾಜಿ ಪಂಚಾಯತ್ ಅಧ್ಯಕ್ಷರು, ಬಡಾ   ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆರವರು ಠಾಣೆಗೆದೂರು ನೀಡಿದ್ದು ಇದರ ಸಾರಾಂಶವೇನೆಂದರೆ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಚ್ಚಿಲ ಬಸ್ಸು ನಿಲ್ದಾಣದಲ್ಲಿ ಸುಮಾರು 8 ವರ್ಷಗಳಿಂದ ಭಿಕ್ಷುಕನೊಬ್ಬ ಮಲಗುತ್ತಿದ್ದು , ಆತನು ದಿನಾಂಕ: 19.06.2013 ರಂದು ರಾತ್ರಿ 9.30 ಗಂಟೆ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟಿರುತ್ತಾನೆ. ಮೃತನ ವಯಸ್ಸು ಸುಮಾರು 65 ವರ್ಷವಾಗಿದ್ದು, ಹೆಸರು ವಿಳಾಸ ತಿಳಿದುಬಂದಿರುವುದಿಲ್ಲ. ಈ ಬಗ್ಗೆ ಪಡುಬಿದ್ರಿ ಠಾಣಾ ಯು.ಡಿ.ಆರ್. ನಂ. 10/2013 ಕಲಂ. ಕಲಂ:110 ಸಿ.ಆರ್.ಪಿ.ಸಿ. ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ನಿಮ್ಮ ಠಾಣಾ ಸರಹದ್ದಿನಲ್ಲಿ ಮೃತನ ಗುರುತು ಪತ್ತೆಯ ಬಗ್ಗೆ ಸಹಕರಿಸಿ ಪತ್ತೆಯಾದಲ್ಲಿ ಸಿ.ಪಿ.ಐ, ಕಾಪು (0820-2552133) /ಪಿ.ಎಸ್.ಐ, ಪಡುಬಿದ್ರಿ ಪೊಲೀಸ್ ಠಾಣೆ (0820-2555452) ಇವರಿಗೆ ಮಾಹಿತಿ ನೀಡುವರೇ ಕೋರಲಾಗಿದೆ.

No comments: