Friday, June 21, 2013

Daily Crimes Reported as On 21/07/2013 at 19:30 Hrs

ಗಂಡಸು  ಕಾಣೆ ಪ್ರಕರಣ
  • ಬ್ರಹ್ಮಾವರ: ದಿನಾಂಕ 19/06/2013 ರಂದು ಬೆಳಗ್ಗೆ 9:00 ಗಂಟೆಗೆ ಉಡುಪಿ ತಾಲೂಕು ಚೇರ್ಕಾಡಿ ಗ್ರಾಮದ ಇಂಬ್ರುಗೋಳಿ ಮನೆಯಿಂದ ಅನಿತ ಡಿ’ಅಲ್ಮೆಡಾ (37) ಗಂಡ; ರಿಚರ್ಡ್ ಡಿ’ಅಲ್ಮೆಡಾ, ವಾಸ: ಜಾನ್ ನಿಲಯ, ಇಂಬ್ರುಗೋಳಿ, ಚೇರ್ಕಾಡಿ ಗ್ರಾಮ ಎಂಬವರ  ಗಂಡ ರಿಚರ್ಡ್ ಡಿ ಅಲ್ಮೇಡಾ (39)ರವರು ಮಣಿಪಾಲ ಆರ್ ಟಿ ಒ ಕಚೇರಿಗೆ ಹೋಗಿಬರುವುದಾಗಿ ಹೇಳಿ ಈ ತನಕ ಮನೆಗೆ ಬಾರದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಅನಿತ ಡಿ’ಅಲ್ಮೆಡಾ ರವರು ತನ್ನ ದೂರಿನಲ್ಲಿ ತಿಳಿಸಿದ ಮೇರೆಗೆ ಬ್ರಹ್ಮಾವರ  ಠಾಣೆಯಲ್ಲಿ ಅಪರಾಧ ಕ್ರಮಾಂಕ 196/2013 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿ  ತನಿಖೆಯಲ್ಲಿರುತ್ತದೆ.
ಅಪಘಾತ ಪ್ರಕರಣಗಳು 
  • ಬೈಂದೂರು: ದಿನಾಂಕ:20/06/13 ರಂದು ಆನಂದ ಗಣಪತಿ ಹರಿಕಾಂತ (18) ತಂದೆ:ಗಣಪತಿ ಹರಿಕಾಂತ ವಾಸ: ಬುಡ್ಡುಮನೆ, ಹೊಲ್ನಗದ್ದೆ ಗ್ರಾಮ ಕುಮಟಾ ತಾಲೂಕು ಉತ್ತರ ಕನ್ನಡ ಜಿಲ್ಲೆ ಇವರು ತನ್ನ ಸಂಬಂಧಿಕರೊಡನೆ ಸಿಗಂದೂರಿಗೆ ಹೋಗಿ ಅಲ್ಲಿಂದ ಕೊಲ್ಲೂರು ಮಾರ್ಗವಾಗಿ ಇಡಗುಂಜಿಗೆ ಹೋಗುವರೇ ಕೆ ಎ 47.2928 ನೇ ಮಹೇಂದ್ರ ಪ್ಯಾಸೆಂಜರ್ ವಾಹನದಲ್ಲಿ  ಹೊರಟಿದ್ದು,  ವಾಹನವನ್ನು ಪ್ರಶಾಂತ ಶೆಟ್ಟಿ ಎಂಬವರು ಚಲಾಯಿಸುತ್ತಿದ್ದು, ದಿನಾಂಕ:21/06/2013 ರಂದು ವಾಹನವನ್ನು ಚಾಲಕ ಪ್ರಶಾಂತ ಶೆಟ್ಟಿ ರವರು ಕೊಲ್ಲೂರಿನಿಂದ ಬೈಂದೂರು ಮಾರ್ಗವಾಗಿ ರಾ ಹೆ 66 ನೇದರಲ್ಲಿ ಚಲಾಯಿಸಿಕೊಂಡು ಬಂದು ಸಮಯ ಸುಮಾರು 11:00 ಗಂಟೆಗೆ ಬೈಂದೂರಿನ ಪಡುವರಿ ಗ್ರಾಮದ ಸಳ್ಳೆಕುಳ್ಳಿ ಕ್ರಾಸ್ ಬಳಿ ತಲುಪುವಾಗ್ಗೆ ರಾ ಹೆ 66 ನೇದರಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಾ ಹೆ 66 ನೇದರ ತೀರಾ ಎಡಬದಿಗೆ ಮಣ್ಣು ರಸ್ತೆಗೆ ಚಲಾಯಿಸಿ ಒಮ್ಮೇಲೆ ವಾಹನವನ್ನು ಬಲಕ್ಕೆ ತಿರುಗಿಸಿದ ಪರಿಣಾಮ ವಾಹನ ರಾ ಹೆ 66 ನೇದರಲ್ಲಿ ಮಗುಚಿ ಬಿದ್ದು ರಸ್ತೆಯ ತೀರಾ ಬಲಭಾಗದವರೆಗೆ ಎಳೆದುಕೊಂಡು ಹೋದ ಪರಿಣಾಮ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಆನಂದ ಗಣಪತಿ ಹರಿಕಾಂತರವರ ಚಿಕ್ಕಪ್ಪ ಕೃಷ್ಣ ಹರಿಕಾಂತ, ಬಂಗಾರ, ಬಂಗಾರರವರ ಹೆಂಡತಿ ಸಾವಿತ್ರಿ ಹಾಗೂ ಅವರ ಮಗಳು ರಂಜಿತ, ಅಣ್ಣ ಮೋಹನ ಹರಿಕಾಂತ ಹಾಗೂ ಮಾವ ಗಂಗಾಧರರವರಿಗೆ ಕೈಕಾಲು ಮೈಗೆ ಸಾಮಾನ್ಯ ಸ್ವರೂಪದ ಗಾಯವಾಗಿದ್ದು, ಹಾಗೂ ದೂರದ ಸಂಬಂಧಿ ಗುಲಾಬಿರವರ ಮಗ ಚೇತನ ಎಂಬವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಕಡೆಗೆ ಕರೆದುಕೊಂಡು ಹೋಗುವಾಗ ದಾರಿಮಧ್ಯೆ ಮೃತಪಟ್ಟಿದ್ದು,ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವಾಹನದ ಕ್ಲೀನರ್ ಉಲ್ಲಾಸ್ ರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ ಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಆನಂದ ಗಣಪತಿ ಹರಿಕಾಂತರವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 185/2013 ಕಲಂ 279,337, 338, 304(ಎ) ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿ  ತನಿಖೆಯಲ್ಲಿರುತ್ತದೆ.
  • ಗಂಗೊಳ್ಳಿ; ಯಶಂತ್‌ ಡಿ ನಾಯ್ಕ್‌ (23) ತಂದೆ:ದೆವ ರು ಗೋವಿಂದ ನಾಯ್ಕ್‌ವಾಸ: ಕಿಬ್ಲೆ ಗ್ರಾಮ ಸಿದ್ದಾಪುರ ತಾಲೂಕು ಕಾರವಾರ ಜಿಲ್ಲೆ  ಎಂಬವರ ಅಣ್ಣನ ಬಾವನ ತಮ್ಮ  ಪ್ರಶಾಂತ ರಾಮ ನಾಯ್ಕ್‌‌ರವರು ಕಟಪಾಡಿಯಿಂದ ಭಟ್ಕಳಕ್ಕೆ ಮೋಟಾರ ಸೈಕಲ್‌‌ ನಂಬರ್‌‌ ಕೆಎ14ಎಕ್ಸ್‌‌ 7214 ರಲ್ಲಿ ಬರುತ್ತಿರುವಾಗ ರಾತ್ರಿ ಸುಮಾರು 8:45 ಗಂಟೆ ಸಮಯಕ್ಕೆ ಆರಾಟೆ ಬಳಿ ಅಣ್ಣನ ಬಾವನವರ ಬೈಕ್‌ ಆಯ ತಪ್ಪಿ ರಸ್ತೆಯಲ್ಲಿದ್ದ ಹೊಂಡಕ್ಕೆ ಬಿದ್ದು ಅವರು ಕೂಡಾ ರಸ್ತೆಗೆ ಬಿದ್ದು ಎಡ ಬದಿಯ ಹಣೆಗೆ ರಕ್ತಗಾಯವಾಗಿದ್ದು ಇವರನ್ನು  ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಯಶಂತ್‌ ಡಿ ನಾಯ್ಕ್‌ ರವರ ದೂರಿನಂತೆ ಗಂಗೊಳ್ಳಿ  ಠಾಣೆಯಲ್ಲಿ ಅಪರಾಧ ಕ್ರಮಾಂಕ 83/2013 ಕಲಂ 279,338 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿ  ತನಿಖೆಯಲ್ಲಿರುತ್ತದೆ.
ಕಳವು ಪ್ರಕರಣ
  • ಉಡುಪಿ: ದಿನಾಂಕ 20-06-13ರ ರಾತ್ರಿ 22:15ಗಂಟೆಯಿಂದ ದಿ.21-06-13ರ ಬೆಳಿಗ್ಗೆ 09:30ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಯು.ಶಂಕರ ಶೆಣೈ, ತಂದೆ: ಯು.ಭವಾನಿ ಶಂಕರ ಶೆಣೈ, ವಾಸ: ಒಮ್‌ ಗಣೇಶ್‌ ಎಂಪೋರಿಯಮ್‌, ಬೀಡಿನಗುಡ್ಡೆ, ಉಡುಪಿ    ಅಲಂಕಾರ್ ಟಾಕೀಸಿನ ಹಿಂಬದಿಯ ಮಂಗೇಶ್‌ ಮಹಾಲಕ್ಷ್ಮಿ ಜ್ಯೂಸ್‌ ಸೆಂಟರ್‌ ಅಂಗಡಿಯ ಹಿಂಬದಿಯ ಬಾಗಿಲನ್ನು ಮುರಿದು ಒಳ ಪ್ರವೇಶಿಸಿ ಅಂಗಡಿಯ ಒಳಗಿದ್ದ ಸುಮಾರು 5000/-ರೂ ಬೆಲೆಯ ಸಿಗರೇಟ್‌, ಬೀಡಿ, ಸೋಪು ಹಾಗೂ ಮಂಜುನಾಥ ದೇವರಿಗೆ ಇಟ್ಟ ಹಣದ ಡಬ್ಬಿ ಸೇರಿದಂತೆ ಸುಮಾರು 10000/- ಮೌಲ್ಯದ ವಸ್ತುಗಳನ್ನು ಹಾಗೂ ನಗದನ್ನು ಕಳವು ಮಾಡಿಕೊಂಡು ಹೋಗಿದ್ದಾಗಿದೆ  ಎಂಬುದಾಗಿ  ಯು.ಶಂಕರ ಶೆಣೈ ರವರು ನೀಡಿದ ದೂರಿನಂತೆ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 294/2013 ಕಲಂ 457,380  ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿ  ತನಿಖೆಯಲ್ಲಿರುತ್ತದೆ.

No comments: