Friday, June 21, 2013

ಡಿ.ಸಿ. ಐ. ಬಿ ಪೊಲೀಸರಿಂದ ಕಳ್ಳನ ಬಂಧನ
  • ದಿನಾಂಕ 20/06/2013 ರಂದು  ಡಿ.ಸಿ. ಐ. ಬಿ ಪೊಲೀಸ್ ನಿರೀಕ್ಷಕರಾದ ಪ್ರವೀಣ್ ಹೆಚ್ ನಾಯಕ್ ಹಾಗೂ ಸಿಬ್ಬಂದಿಯವರು ಕರ್ತವ್ಯದಲ್ಲಿರುವಾಗ ಉಡುಪಿ ಅಂಬಲ್ಪಾಡಿ ಜಂಕ್ಷನ್ ನಲ್ಲಿ ಅಬ್ದುಲ್ ರೆಹೆಮಾನ್ ಅಲಿಯಾಸ್ ರಹೀಮ್(38ವರ್ಷ) ತಂದೆ:ಪೊಕ್ರುದ್ದೀನ್ ವಾಸ: ಚಂದ್ರನಗರ, ದೇವರ ಹಾಡಿ,ಕಳತ್ತೂರು ಅಂಚೆ, ಉಡುಪಿ ತಾಲೂಕು ಎಂಬಾತನು ಕಟಪಾಡಿ ಕಡೆಯಿಂದ ಉಡುಪಿ ಕಡೆಗೆ ಕಳವು ಮಾಡಿದ ಮೊಬೈಲ್ ಪೋನ್ ಗಳನ್ನು ಹಾಗೂ ಲ್ಯಾಪ್ ಟಾಪ್ ನ್ನು ಭಟ್ಕಳಕ್ಕೆ ಮಾರಾಟ ಮಾಡಲು ಮೋಟಾರು ವಾಹನ ಮೋಟಾರು ಬೈಕ್ ನಲ್ಲಿ ಹೋಗುತ್ತಿದ್ದ  ವೇಳೆಯಲ್ಲಿ ಆತನನ್ನು ತಡೆದು ನಿಲ್ಲಿಸಿ ವಿಚಾರಿಸಲಾಗಿ ಆತನು ಕಾಪು ಮಲ್ಲಾರಿನ ನಜೀಮ್ ಸೇರಿಕೊಂಡು ಮೀನು ಮಾರ್ಕೆಟು ಬಳಿ ಮೋಬೈಲ್ ಅಂಗಡಿಯ ಬಾಗಿಲಿನ ಬೀಗವನ್ನು ಕಬ್ಬಿಣದ ರಾಡಿನಿಂದ ಮುರಿದು ಒಂದು ಲಾಪ್ ಟಾಪ್ ಹಾಗೂ ಮೊಬೈಲ್ ಸೆಟ್ ಮತ್ತು ನಗದು 6000/- ರೂ ಗಳನ್ನು ಕಳವು ಮಾಡಿದ್ದು ಹಾಗೂ ಕಳೆದ ಮೇ ತಿಂಗಳ 23 ರ ರಾತ್ರಿ ಸಮಯ ಸಂತೆಕಟ್ಟೆಯ ಸ್ಪಂದನ ಮೊಬೈಲ್ ಅಂಗಡಿಯ ಶೆಟರ್ ನ ಬೀಗವನ್ನು ರಾಡ್ ನಿಂದ ಮುರಿದು ಒಳ ಪ್ರವೇಶಿಸಿ ಮೋಬೈಲ್ ಹ್ಯಾಂಡ್ ಸೆಟ್ ಗಳನ್ನು ಕಳವು ಮಾಡಿದ್ದು ಈತನು ಕಾಪು ಮಲ್ಲಾರಿನ ನಾಜೀಮ್, ಸತ್ತಾರ್ ಹಾಗೂ ಇಲಿಯಾಸ್ ರವರು ಈ ಹಿಂದೆ ಪಣಿಯೂರು ಗೋದಾಮು ಒಂದರಲ್ಲಿ ತಾಮ್ರದ ಕೇಬಲ್ ಗಳನ್ನು ಕಳವು ಮಾಡಿರುವ ಆರೋಪಿಗಳಾಗಿರುತ್ತಾರೆ.ಪ್ರಕರಣದಲ್ಲಿ ಇನ್ನೊರ್ವ ಆರೋಪಿ ನಾಜೀಮ್ ತಲೆಮರೆಸಿಕೊಂಡಿರುವುದಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಬೋರಲಿಂಗಯ್ಯ ರವರ ನಿರ್ದೆಶನದಲ್ಲಿ, ಡಿ.ಎಸ್.ಪಿ. ಫ್ರಭುದೇವ ಮಾನೆ ಮಾರ್ಗದರ್ಶನದಲ್ಲಿ ಡಿ.ಸಿ. ಐ. ಬಿ ಪೊಲೀಸ್ ನಿರೀಕ್ಷಕರಾದ ಪ್ರವೀಣ್ ಹೆಚ್ ನಾಯಕ್ ಹಾಗೂ ಸಿಬ್ಬಂದಿಯವರಾದ ಎ.ಎಸ್.ಐ. ನಾರಾಯಣ, ಉದಯ್ ಕುಂದರ್, ರತ್ನಾಕರ, ಅಶೋಕ್ ಕುಮಾರ್ ,ದಿನೇಶ್ ಶೆಟ್ಟಿ, ರಾಜೇಶ್,ಸತೀಶ್ ಮತ್ತು ಚಾಲಕ ಚಂದ್ರಶೇಖರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.

No comments: