ಅಸ್ವಾಭಾವಿಕ ಮರಣ ಪ್ರಕರಣ
- ಕಾರ್ಕಳ ಗ್ರಾಮಾಂತರ: ದಿನಾಂಕ; 21.06.2013 ರ ಬೆಳಗ್ಗೆ 11:0ಘಂಟೆಯಿಂದ ದಿನಾಂಕ; 22.06.2013 ಬೆಳಗಿನ ಜಾವ 10:00 ಘಂಟೆಯ ನಡುವಿನ ಅವದಿಯಲ್ಲಿ ಕಾರ್ಕಳ ತಾಲೂಕು, ಮುಂಡ್ಕೂರು ಗ್ರಾಮದ ಪೊಸ್ರಾಲು, ಶಾಂಭವಿ ಹೊಳೆಯ ಹತ್ತಿರ ಜಗನ್ನಾಥ ಶೆಟ್ಟಿ ಎಂಬುವರಿಗೆ ಸೇರಿದ ಹಾಡಿಯಲ್ಲಿ ಪಿರ್ಯಾಧಿ ರವೀಂದ್ರ ಪೂಜಾರಿ, ಪ್ರಾಯ: 44 ವರ್ಷ, ತಂದೆ: ಪೂವಯ್ಯ ಪೂಜಾರಿ, ವಾಸ: ಗಾಂದೋಟ್ಟು ಮನೆ, ಮುಂಡ್ಕೂರು ಗ್ರಾಮ,ಕಾರ್ಕಳ ತಾಲೂಕು. ಇವರ ತಮ್ಮ ಸುರೇಶ ಪೂಜಾರಿ, ( 36) ಎಂಬುವರು ವಿಪರೀತ ಶರಾಬು ಸೇವಿಸುವ ಚಟ ಹೊಂದಿದ್ದು ಹಾಗೂ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದು, ಅದೇ ಕಾರಣದಿಂದ ಅಥವಾ ಇನ್ನಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕಾಟು ಮರವೊಂದಕ್ಕೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 30/2013. ಕಲಂ. 174 ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಅಪಘಾತ ಪ್ರಕರಣಗಳು
- ಕಾರ್ಕಳ ಗ್ರಾಮಾಂತರ: ದಿನಾಂಕ: 20.06.2013 ರಂದು ಬೆಳಿಗ್ಗೆ 10:30 ಗಂಟೆಗೆ ಆರೋಪಿ ಪ್ರಸನ್ನ ಇವರು ಮೋಟಾರ್ ಸೈಕಲ್ ನಂಬ್ರ ಕೆ.ಎ.20.ಜೆ.6840 ನೇದನ್ನು ಮುಂಡ್ಕೂರು ಕಡೆಯಿಂದ ಇನ್ನಾ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಅರೆದಾಳ್ ಎಂಬಲ್ಲಿ ಎದುರಿನಿಂದ ಅಂದರೆ ಇನ್ನಾ ಕಡೆಯಿಂದ ಮುಂಡ್ಕೂರು ಕಡೆಗೆ ಆಕ್ಟಿವ್ ಹೋಂಡಾ ವಾಹನ ನಂಬ್ರ ಕೆ.ಎ.19.ಇ.ಸಿ.7453 ನೇದಕ್ಕೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ , ಆಕ್ಟಿವ್ ಹೋಂಡಾ ಸವಾರ ಅಬ್ದುಲ್ ಖಾದರ್ ಇವರಿಗೆ ಸಾದಾ ಸ್ವರೂಪದ ಹಾಗೂ ಸಹಸವಾರ ಹಸನಬ್ಬ ಇವರಿಗೆ ತೀವೃ ಸ್ವರೂಪದ ಗಾಯಗೊಂಡಿರುತ್ತದೆ. ಈ ಬಗ್ಗೆ ಶ್ರೀಮತಿ ವಿಧ್ಯಾ ಪ್ರಾಯ 26 ವರ್ಷ ಗಂಡ: ಅನಂತ್ ವಾಸ: ಚಾವಂಡಿಬೆಟ್ಟು ಹೌಸ್, ಸಚ್ಚೇರಿಪೇಟೆ ಪೋಸ್ಟ್, ಮುಂಡ್ಕೂರು ಗ್ರಾಮ, ಕಾರ್ಕಳ ತಾಲೂಕು ಇವರು ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2013 ಕಲಂ: 279,337,338 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
- ಬೈಂದೂರು: ಪಿರ್ಯಾದಿ ಎನ್.ಸುರೇಶ ಕುಮಾರ್ (36) ತಂದೆ:ನಟರಾಜನ್ ವಾಸ: 169, 1 ನೇ ಕ್ರಾಸ್, ಮರಿಯಪ್ಪನಪಾಳ್ಯ, ರಾಜಾಜಿನಗರ, 3 ನೇ ಬ್ಲಾಕ್ ಬೆಂಗಳೂರು-51 ಇವರು ತನ್ನ ಸ್ನೇಹಿತನ ಸ್ಕಾರ್ಪಿಯೋ ನಂಬ್ರ ಕೆ.ಎ.01.ಎಮ್.ಡಿ 4190 ನೇದರಲ್ಲಿ ಧರ್ಮಸ್ಥಳ ಮುರ್ಡೇಶ್ವರ ಕ್ಕೆ ಹೋಗಿ ದೇವರ ದರ್ಶನ ಮುಗಿಸಿ ವಾಪಾಸು ಮುರ್ಡೇಶ್ವರದಿಂದ ಕೊಲ್ಲೂರು ದೇವಸ್ಥಾನಕ್ಕೆ ಹೋಗುವರೇ ದಿನಾಂಕ:18/06/2013 ರಂದು ಬೈಂದೂರು-ಕೊಲ್ಲೂರು ರಸ್ತೆಯಲ್ಲಿ ಹೊರಟಿದ್ದು, ಸದ್ರಿ ವಾಹನವನ್ನು ಚಾಲಕ ಕಾರ್ತಿಕ್ ಎಂಬವರು ಚಲಾಯಿಸಿಕೊಂಡಿದ್ದು, ಬೆಳಿಗ್ಗೆ ಸಮಯ ಸುಮಾರು 3:45 ಗಂಟೆಗೆ ಕುಂದಾಪುರ ತಾಲೂಕು ಗೋಳಿಹೊಳೆ ಗ್ರಾಮದ ಎಲ್ಲೂರು ಸಮೀಪದ ಚಿಕ್ಕಯ್ಯ ಫಾರ್ಮ್ಸ್ ಸಮೀಪ ಬೈಂದೂರು-ಕೊಲ್ಲೂರು ರಸ್ತೆಯ ತಿರುವಿನಲ್ಲಿ ಸ್ಕಾರ್ಪಿಯೋ ವಾಹನವನ್ನು ಅದರ ಚಾಲಕ ಕಾರ್ತಿಕ್ ರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ, ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಮಗುಚಿ ಬಿದ್ದು ವಾಹನದ ಎಡಬದಿಯ ಬಾಡಿ ಹಾಗೂ ಚಾಸ್ಸಿಯು ಜಖಂಗೊಂಡಿದ್ದು ಕಾರಿನಲ್ಲಿದ್ದ ಯಾರಿಗೂ ಗಾಯ ನೋವು ಉಂಟಾಗಿರುವುದಿಲ್ಲ . ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಅಪರಾಧ ಸಂಖ್ಯೆ 186/2013 ಕಲಂ:279 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
No comments:
Post a Comment