Wednesday, June 26, 2013

Daily Crimes Reported as On 26/06/2013 at 17:00 Hrs

ಬೆದರಿಕೆ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿ ಮಂಜುನಾಥ ಬಿ.ಪಿ (68) ತಂದೆ: ದಿ: ಭಟ್ ಪರಮೇಶ್ವರಯ್ಯ ವಾಸ: ಶ್ರೀ ದೇವಿ ಎನ್ ಎಚ್. 66 ವಾರಂಬಳ್ಳಿ ಗ್ರಾಮ. ಬ್ರಹ್ಮಾವರ ಇವರ ಪತ್ನಿ ಶ್ರೀಮತಿ ಬಿ ವಿಜಯ ಲಕ್ಷ್ಮಿ ರವರು ನಡೆಸುವ ಪ್ರಿಂಟಿಂಗ್ ಪ್ರೆಸ್ ವ್ಯವಹಾರಕ್ಕೆ ಆರೋಪಿ 1 ಸತೀಶ್ ಶೆಣೈ (54) ತಂದೆ: ಮೋಹನದಾಸ್ ಶೆಣೈ ವಾಸ: ಸಿದ್ದಾಪುರ ಶಂಕರನಾರಾಯಣ ರಸ್ತೆ ಕುಂದಾಪುರ ತಾಲೂಕು ಮತ್ತು 3 ನೇ ದೇವದಾಸ ಶೆಣೈ (65) ತಂದೆ: ಮೋಹನ್ ದಾಸ್ ಶೆಣೈ ವಾಸ: ಸಿದ್ದಾಪುರ ಶಂಕರನಾರಾಯಣ ರಸ್ತೆ ಕುಂದಾಪುರ ತಾಲೂಕು ಇವರು ನಡೆಸುವ ಸಿದ್ದಾಪುರ ಸಪ್ತಗಿರಿ ಫೈನಾನ್ಸ್ ಕಾರ್ಪೊರೇಷನ್ ರಿಜಿಸ್ಟರ್ಡ್ ರಿಂದ ಪಿರ್ಯಾದಿದಾರರ ಬೈಕಾಡಿ ಗ್ರಾಮದ ಸರ್ವೆ ನಂಬ್ರ: 85/1ಎ ರಲ್ಲಿ 2.52 ಎಕರೆ ಜಮೀನನ್ನು ಭದ್ರತೆಗಾಗಿ ಪಡೆದು ಸಾಲ ನೀಡಿದ್ದು ಆ ಸಾಲಕ್ಕೆ ಸದ್ರಿ ಆಸ್ತಿಯ 1.52ಎಕರೆ ಜಮೀನು ಮಾರಾಟ ಮಾಡಲು ಪಿರ್ಯಾದಿದಾರರು ಆರೋಪಿ 1 ನೇಯವರಿಗೆ ಅಧಿಕಾರ ಪತ್ರ ನೀಡಿ ಆಸ್ತಿ ಮಾರಿದ ಪ್ರತಿಫಲ 7.60.000/- ದ ಪೈಕಿ 3 ಲಕ್ಷ ಸಾಲಕ್ಕೆ ವಜಾ ಮಾಡಿ ಉಳಿದ ಹಣ ಕೊಡುವುದಾಗಿ ಹೇಳಿ ಕೊಡದೆ ನಂಬಿಕೆ ದ್ರೋಹ ಮಾಡಿ ಈ ಬಗ್ಗೆ ಸಿವಿಲ್ ನ್ಯಾಯಾಲಯದಲ್ಲಿ ಹಾಗೂ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ವಿಚಾರಣೆಯಲ್ಲಿದ್ದು ದಿನಾಂಕ: 17/06/2013 ರಂದು ಸಂಜೆ 5:30 ಗಂಟೆಗೆ ಆರೋಪಿತರಾದ 1. ಸತೀಶ್ ಶೆಣೈ (54) ತಂದೆ: ಮೋಹನದಾಸ್ ಶೆಣೈ ವಾಸ: ಸಿದ್ದಾಪುರ ಶಂಕರನಾರಾಯಣ ರಸ್ತೆ ಕುಂದಾಪುರ ತಾಲೂಕು. 2. ದೇವದಾಸ ಶೆಣೈ (65) ತಂದೆ: ಮೋಹನ್ ದಾಸ್ ಶೆಣೈ ವಾಸ: ಸಿದ್ದಾಪುರ ಶಂಕರನಾರಾಯಣ ರಸ್ತೆ ಕುಂದಾಪುರ ತಾಲೂಕು. 3. ಕಮಲಾಕ್ಷ ಪೈ (60) ಹಾರ್ದಳ್ಳಿ ಮಂಡಳ್ಳಿ ಬಿದ್ಕಲ್ಕಟ್ಟೆ ಕುಂದಾಪುರ ತಾಲೂಕು ಇವರು ಪಿರ್ಯಾದಿದಾರರ ವಾಸದ ಬ್ರಹ್ಮಾವರದ ಮನೆಗೆ ಅಕ್ರಮ ಪ್ರವೇಶ ಮಾಡಿ 3.00000/-ಲಕ್ಷ ತೆರೆದುಕೊಂಡು ಕೇಸು ವಾಪಾಸ್ಸು ತೆಗೆದುಕೊಳ್ಳಬೇಕು ಇಲ್ಲವಾಗಿ ಮುಗಿಸುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಮಂಜುನಾಥ ಬಿ.ಪಿ ಇವರು ನೀಡಿದ ಖಾಸಗಿ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 202/13 ಕಲಂ:447,406,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 26/06/2013 ರಂದು ಸಮಯ ಸುಮಾರು ಬೆಳಿಗ್ಗೆ 11:10 ಗಂಟೆಗೆ, ಕುಂದಾಪುರ ತಾಲೂಕಿನ ಹಂಗ್ಲೂರು ಗ್ರಾಮದ ದುರ್ಗಾಂಬ ಆಫೀಸ್‌ನ ಎದುರುಗಡೆ ರಾ.ಹೆ 66 ರಲ್ಲಿ ಆಪಾದಿತ ವಸಂತ ಕೆ ಎಂಬವರು KA 19 C 5099 ನೇ ಬಸ್‌ನ್ನು ಕೋಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ವೇಗದಿಂದ ದುಡುಕಿನಿಂದ ಚಲಾಯಿಸಿಕೊಂಡು ಬಂದು ಅಲ್ಲಿನ ರಸ್ತೆ ಡಿವೈಡರ್‌ ಹತ್ತಿರ ಸೂಚನೆ ನೀಡಿ ರಸ್ತೆಯಬಲಕ್ಕೆ ತಿರುಗಿಸಲು ನಿಲ್ಲಿಸಿಕೊಂಡಿದ್ದ KA20-C-4771ನೇ ಮಹೀಂದ್ರ ಗೂಡ್ಸ್‌ ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಸಮೇತ ಬಿದ್ದ ಪರಿಣಾಮ ಆನಂದ ಪೂಜಾರಿ ತಂದೆ: ಪಂಜು ಪೂಜಾರಿ, ವಾಸ: ಶ್ರೀ ಬ್ರಹ್ಮಲಿಂಗೇಶ್ವರ ಅನುಗ್ರಹ ನೂಜಾಡಿ ಗ್ರಾಮ, ಕುಂದಾಪುರ ಇವರ ಸೊಂಟಕ್ಕೆ ಒಳನೋವು, ಎಡಕೆನ್ನಗೆ, ಮೂಗಿಗೆ, ಕೈ ಗಳಿಗೆ ತರಚಿದ ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ.ಈ ಬಗ್ಗೆ ಆನಂದ ಪೂಜಾರಿ ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 51/13 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಮನುಷ್ಯ ಕಾಣೆ ಪ್ರಕರಣ
  • ಕೊಲ್ಲೂರು: ದಿನಾಂಕ 24.06.2013 ರಂದು ಮದ್ಯಾಹ್ನ 02.00 ಗಂಟೆಯ ಸಮಯ ಚಿತ್ತೂರು ಗ್ರಾಮದ ಮಾರಣಕಟ್ಟೆ ದೇವಸ್ಥಾನದ ಬಳಿ ಇರುವ ಹೊಳೆಯನ್ನು ಬಿಳಿಯ ಪೂಜಾರಿ (34)ತಂದೆ:ಬಚ್ಚ ಪೂಜಾರಿ ವಾಸ:ಮಾರಣಕಟ್ಟೆ ದೇವಸ್ಥಾನ ಬಳಿಗ್ರಾಮ ಚಿತ್ತೂರು ಗ್ರಾಮ ಕುಂದಾಪುರ ತಾಲೂಕು ಇವರ ಅಣ್ಣ ರಮೇಶ ಯಾನೆ ಚಿಕ್ಕ ಪೂಜಾರಿ (38) ಎಂಬವರು ಮಾರಣಕಟ್ಟೆ ದೇವಸ್ಥಾನದ ಬಳಿ ಇರುವ ಹೊಳೆಯನ್ನು ದಾಟುತ್ತಿರುವಾಗ ಆಕಸ್ಮಿಕವಾಗಿ ತುಂಬಿ ಹರಿಯುತ್ತಿರುವ ನೀರಿನ ಸೆಳೆತಕ್ಕೆ ಸಿಕ್ಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕಾಣೆಯಾಗಿರುವುದಾಗಿದೆ.ಈ ಬಗ್ಗೆ ಬಿಳಿಯ ಪೂಜಾರಿ ಇವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 54/13ಕಲಂ ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ 
  • ಕೊಲ್ಲೂರು:ದಿನಾಂಕ 24.06.2013ರಂದು 10.00ಗಂಟೆಯ ಸಮಯ ವಂಡ್ಸೆ ಗ್ರಾಮದ ವಂಡ್ಸೆ ಚಿಕ್ಕು ದೇವಸ್ಥಾನದಲ್ಲಿ ಪ್ರವೀಣ ದೇವಾಡಿಗ ತಂದೆ; ಶಂಕರ ದೇವಾಡಿಗ ವಾಸ:ತೋಟದ ಕೋಟೇಶ್ವರ ಬೀಜಾಡಿ ಗ್ರಾಮ ಕುಂದಾಪುರ ಇವರ ಮಾವನ ಮಗ ಸತೀಶ ದೇವಾಡಿಗ(28)ಎಂಬುವರು ಅಟ್ಟಣಿಗೆಯಲ್ಲಿ ನಿಂತು ಕೊಂಡು ಗಾರೆ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಆಯ ತಪ್ಪಿ ಮೇಲಿನಿಂದ ಕೆಳಗೆ ಬಿದ್ದ ಪರಿಣಾಮ ತಲೆಯ ಹಿಂಭಾಗಕ್ಕೆ ಗಂಭೀರ ಸ್ವರೂಪದ ಒಳಜಖಂ ಆಗಿದ್ದವರನ್ನು ಚಿಕಿತ್ಸೆಯ ಬಗ್ಗೆ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು ಸದ್ರಿಯವರು ಚಿಕಿತ್ಸೆಯ್ಲಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 26.06.2013ರಂದು ಮಧ್ಯಾಹ್ನ 12.55ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿರುತ್ತದೆ.ಈ ಬಗ್ಗೆ ಪ್ರವೀಣ ದೇವಾಡಿಗ ಇವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ:05/13ಕಲಂ:174ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: