Wednesday, June 26, 2013

Daily Crime Reports As on 26/06/2013 At 19:30 Hrs

ಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ: 26.06.2013 ರಂದು ಅಭಿರಾಮ ಹೊಳ್ಳ, ತಂದೆ: ಅರವಿಂದ ಹೊಳ್ಳ, ಮನೆ ನಂಬ್ರ 1-175 ಇ, ವಿ.ಎಂ ಟೆಂಪಲ್‌ ರೋಡ್‌, ಅಪೂರ್ವ ಕಾಂಪ್ಲೆಕ್ಸ್‌‌ ಹಿಂಭಾಗ, ದೊಡ್ಡಣಗುಡ್ಡೆ, ಉಡುಪಿ ತಾಲೂಕು ಇವರು ತಮ್ಮ ಹೋಂಡಾ ಆಕ್ಟಿವಾ ನಂಬ್ರ ಕೆಎ 20 ಎಕ್ಸ್‌ 1915 ವಾಹನವನ್ನು ಪಿಜ್ಜಾ ಹಟ್‌ ಹೊರಗಡೆ ಪಾರ್ಕ್‌ ಮಾಡಿ ಊಟ ಮಾಡಲೆಂದು ಒಳಗಡೆ ಹೋಗಿದ್ದು, ಸುಮಾರು 13:45 ಗಂಟೆಗೆ ಹೊರಗಡೆಯಿಂದ ಶಬ್ದ ಬಂದಾಗ ಹೊರಗಡೆ ಹೋಗಿ ನೋಡಲಾಗಿ ಹೋಂಡಾ ಆಕ್ಟಿವಾಗೆ ಮಾರುತಿ ಸ್ವಿಫ್ಟ್‌ ಡಿಸೈರ್‌ ನಂಬ್ರ ಕೆಎ 15 ಎಮ್‌ 4231ನೇ ಕಾರು ಡಿಕ್ಕಿ ಹೊಡೆದು ಹೋಂಡಾ ಆಕ್ಟಿವಾ ಮೋಟಾರು ಸೈಕಲ್ ಜಖಂಗೊಂಡಿರುತ್ತದೆ. ಸದ್ರಿ ಅಪಘಾತಕ್ಕೆ ಮಾರುತಿ ಸ್ವಿಫ್ಟ್‌ ಡಿಸೈರ್‌ ಕಾರಿನ ಚಾಲಕನ ನಿರ್ಲಕ್ಷ್ಯವೆ ಕಾರಣವಾಗಿರುತ್ತದೆ. ಈ ಬಗ್ಗೆ ಅಭಿರಾಮ ಹೊಳ್ಳ ಇವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 118/13 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ದಿನಾಂಕ: 25/06/2013 ರಂದು ಸಂಜೆ 5:10 ಗಂಟೆ ಸಮಯಕ್ಕೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಎಂಬಲ್ಲಿ ಈಚರ್ ವಾಹನ ನಂಬ್ರ ಕೆಎ-19 ಸಿ- 584 ನೇ ದರ ಚಾಲಕನು ಮಣ್ಣು ರಸ್ತೆಯಿಂದ ಮುಖ್ಯ ರಸ್ತೆಗೆ ನಿರ್ಲಕ್ಷತನದಿಂದ ಕಾರ್ಕಳದ ಕಡೆಗೆ ಚಲಾಯಿಸಿ ಹೆಬ್ರಿ ಕಡೆಯಿಂದ ಕಾರ್ಕಳ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ ಅಮಿತ್ ಶೆಟ್ಟಿರವರ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ-20 ವಿ- 850ನೇ ದಕ್ಕೆ ಡಿಕ್ಕಿ ಹೊಡೆದು ಈ ಪರಿಣಾಮ ಬೈಕ್ ಸವಾರ ಅಮಿತ್ ಶೆಟ್ಟಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಕಾರ್ಕಳ ಸಿಟಿ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಹೈ ಟೆಕ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಶ್ರೀ ಜಯ ಪೂಜಾರಿ (37) ತಂದೆ: ದಿ. ರಾಘು ಪೂಜಾರಿ ವಾಸ: ರಾಘವೇಂದ್ರ ನಿವಾಸ, ಪಡಾಯಿಬೆಟ್ಟು ಸಾಣೂರು ಗ್ರಾಮ ಕಾರ್ಕಳ ತಾಲೂಕು ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 79/13 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ಶ್ರೀ ಸಂಶುದ್ದೀನ್  ಪ್ರಾಯ 16 ವರ್ಷ ತಂದೆ ಅಬ್ದುಲ್ ಮಜೀದ್,ವಾಸ ಜನತಾ ಹೌಸ್ ಸೂರ್ಯನಗರ ಪುಂಚಲಕಾಡು ಅಂಚೆ  , ಕಳತ್ತೂರು ಗ್ರಾಮ ಉಡುಪಿ ತಾಲೂಕು ಇವರು  ಶಿರ್ವ ಹಿಂದು ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ದಿನಾಂಕ 25-06-2013 ರಂದು ಮಧ್ಯಾಹ್ನ 12-30 ಗಂಟೆಗೆ ಕ್ಯಾಂಟೀನಿನಿಂದ ಕಾಲೇಜಿಗೆ ಹೋಗುತ್ತಿದ್ದಾಗ ಎದುರಿನಿಂದ ಅಂದರೆ ಪದವು ಕಡೆಯಿಂದ  ಶಿರ್ವ ಕಡೆಗೆ ಮಾರುತಿ ಓಮಿನಿ ಕೆಎ 20 ಎ 4161 ನ್ನು ಅದರ ಚಾಲಕ ವಿಶ್ವನಾಥ ಎಂಬಾತನು ಅತೀ ವೇಗ  ಮತ್ತು ಅಜಾಗರೂಕತೆಯಿಂದ ರಾಂಗ್ ಸೈಡಿಗೆ ಚಲಾಯಿಸಿ ರಸ್ತೆ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅವರಿಗೆ ಡಿಕ್ಕಿ ಹೊಡೆದು ನಂತರ ವಿದ್ಯುತ್ ಕಂಭಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ತುಂಡಾಗಿದ್ದು ಅವರ ದೇಹದ ಭಾಗಗಳಿಗೆ ಗುದ್ದಿದ ಜಖಂಗಳು ಮತ್ತು ರಕ್ತಗಾಯಗಳಾಗಿದ್ದು ಬಲಕೈ ಮಣಿಗಂಟಿನ ಮೂಳೆ ಮುರಿತದ ಗಾಯವಾಗಿರುತ್ತದೆ. ಈ ಬಗ್ಗೆ ಶ್ರೀ ಸಂಶುದ್ದೀನ್  ಇವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 59/2013, ಕಲಂ 279, 338 ಐಪಿಸಿಮತ್ತು 134 (ಬಿ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ. 
ಅಕ್ರಮ ಜಾನುವಾರು ಸಾಗಾಟ ಪ್ರಕರಣ
  • ಬೈಂದೂರು: ದಿನಾಂಕ: 26/06/2013 ರಂದು ಬೆಳಿಗ್ಗೆ 05:00 ಗಂಟೆಗೆ ಬೈಂದೂರು ಠಾಣಾ ಪಿ ಎಸ್ ಐ ರವರಿಗೆ, ಟೆಂಪೋ ಟ್ರಾವೆಲ್ಲರ್ ವಾಹನವೊಂದರಲ್ಲಿ ಜಾನುವಾರುಗಳನ್ನು ತುಂಬಿಸಿಕೊಂಡು ಶಿರೂರು ಕಡೆಯಿಂದ ಕುಂದಾಪುರ ಕಡೆಗೆ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಯವರೊಂದಿಗೆ ಕುಂದಾಪುರ ತಾಲೂಕು ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ಕಾದು ನಿಂತಿರುವಾಗ್ಗೆ, ಸಮಯ ಸುಮಾರು 05:20 ಗಂಟೆಗೆ ಶಿರೂರು ಕಡೆಯಿಂದ ಎನ್ ಹೆಚ್ 66 ನೇದರಲ್ಲಿ ಬೈಂದೂರು ಕಡೆಗೆ ಬರುತ್ತಿರುವ ಬಿಳಿ ಬಣ್ಣದ ಟೆಂಪೋ ಟ್ರಾವೆಲ್ಲರ್ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದು, ವಾಹನದಲ್ಲಿದ್ದ  ಚಾಲಕ ಹಾಗೂ ಹಿಂಬದಿ ಸೀಟಿನಲ್ಲಿದ್ದ ಇಬ್ಬರು ವ್ಯಕ್ತಿಗಳು  ಸ್ವಲ್ಪ ದೂರದಲ್ಲಿ ವಾಹನ ನಿಲ್ಲಿಸಿ ಅಲ್ಲಿಂದ ಪರಾರಿಯಾಗಿದ್ದು, ಟೆಂಪೋ ಟ್ರಾವೆಲ್ಲರ್  ನಂಬ್ರ ಕೆ ಎ 19 ಡಿ1546 ಆಗಿದ್ದು ಅದರ ಒಳಗೆ ಪರಿಶೀಲಿಸಲಾಗಿ ಚಾಲಕನ ಹಿಂಬದಿಯ ಸೀಟಿನ ಮಧ್ಯಭಾಗದಲ್ಲಿ ಒಂದು ಜಾನುವಾರನ್ನು ಕಾಲು ಹಾಗೂ ಕುತ್ತಿಗೆಯನ್ನು ಹಗ್ಗದಿಂದ ಕಟ್ಟಿ ಅಡ್ಡಾದಿಡ್ಡಿಯಾಗಿ ತುಂಬಿಸಿ ಯಾವುದೇ ಮೇವು ಬಾಯಾರಿಕೆ ನೀಡದೇ ಹಿಂಸಾತ್ಮಕ ರೀತಿಯಲ್ಲಿ ಆರೋಪಿತರು ಕಸಾಯಿಖಾನೆಗೆ ವಧೆ ಮಾಡುವುದಕ್ಕೆ ಸಾಗಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು  ಟೆಂಪೋ ಟ್ರಾವೆಲ್ಲರ್ ವಾಹನ ಹಾಗೂ ಒಂದು ಜಾನುವಾರನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಂಡದ್ದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 190/2013 ಕಲಂ:8,11 Karnataka Prevention of cow slaughter,& cattle Prevention Act-1964 ಮತ್ತು 11(1) (D) Prevention of Cruelty to Animals Act ನಂತೆ ಪ್ರಕರಣ ದಾಖಲಾಗಿರುತ್ತದೆ. 
ಕಳವು ಪ್ರಕರಣ
  • ಕಾರ್ಕಳ: ದಿನಾಂಕ: 25.06.2013 ರಂದು 19:20 ಗಂಟೆಯಿಂದ ದಿನಾಂಕ: 26.06.2013 ರಂದು 08:45 ಗಂಟೆಯ ನಡುವಿನ ಅವಧಿಯಲ್ಲಿ  ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಬಾಲಾಜಿ ಆರ್ಕೇಡ್ ಎಂಬ ಕಟ್ಟಡದಲ್ಲಿರುವ ಶ್ರೀ ಗಂಗಾ ಗೋಲ್ಡ್ & ಸಿಲ್ವರ್ ಜ್ಯುವೆಲ್ಲರಿ ಎಂಬ ಅಂಗಡಿಯ ಮೊದಲ ಅಂತಸ್ತಿನ ರೋಲಿಂಗ್ ಶಟರಿನ ತಗಡನ್ನು ಯಾರೋ ಕಳ್ಳರು ಗ್ಯಾಸ್ ಕಟ್ಟರಿನಿಂದ ತುಂಡರಿಸಿ ಅಂಗಡಿಯ ಒಳಪ್ರವೇಶಿಸಿ ಸುಮಾರು 80,000/- ರೂಪಾಯಿ ಮೌಲ್ಯದ 2 ಕೆ.ಜಿ 50 ಗ್ರಾಂ  ತೂಕದ  ವಿವಿಧ ಮಾದರಿಯ ಬೆಳ್ಳಿಯ ಆಭರಣಗಳನ್ನು ಮತ್ತು ಸುಮಾರು 10,000/- ರೂಪಾಯಿ  ಮೌಲ್ಯದ ಸಿ.ಸಿ ಟಿ.ವಿ ಯ ಸರ್ವರ್ ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಶ್ರೀ ಸುಭಾಶ್ ಇಂಗಳೆ (45), ತಂದೆ: ದಿ ಸುಖ್  ದೇವ್ ಇಂಗಳೆ, ವಾಸ: ಗಂಗ ನಿವಾಸ, ಹೆಗ್ಡೆ ಕಾಂಪೌಂಡ್, ಮುಖ್ಯ ರಸ್ತೆ ಕಾರ್ಕಳ ಕಸಬಾ ಗ್ರಾಮ ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 78/13 ಕಲಂ 457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
ವಂಚನೆ ಪ್ರಕರಣ
  • ಉಡುಪಿ: ಪ್ರಕರಣದಲ್ಲಿ 1)ರೇಶ್ಮಾ(31), ಗಂಡ: ಸುದರ್ಶನ್‌ ಕುಮಾರ್‌, ವಾಸ:ಶಿವಪ್ರಸಾದ್‌ ನಿಲಯ,, ಅಜ್ಜಿಬೆಟ್ಟು ಅಂಚೆ, ಜೋಡು ಮಾರ್ಗ, ಬಂಟ್ವಾಳ, ದ.ಕ 2)ರತ್ನಾ ಕೊರಗಪ್ಪ ಭಂಡಾರಿ, ಗಂಡ: ಕೆ.ವಿ ಭಂಡಾರಿ, ವಾಸ: ಮಹಾಲಿಂಗೇಶ್ವರ ಹೌಸ್‌, 50ನೇ ಕ್ರಾಸ್‌, ನಂದ ವಿಹಾರ್‌, ನಾಯರ್‌‌ಕೆರೆ,ಬ್ರಹ್ಮಗಿರಿ, ಉಡುಪಿ 3) ಸುದರ್ಶನ್‌ ಕುಮಾರ್‌, ವಾಸ:ಶಿವಪ್ರಸಾದ್‌ ನಿಲಯ,, ಅಜ್ಜಿಬೆಟ್ಟು ಅಂಚೆ, ಜೋಡು ಮಾರ್ಗ, ಬಂಟ್ವಾಳ, ದ.ಕ 4) ಸುಂದರ(63), ತಂದೆ: ವೆಂಕಪ್ಪ ಭಂಡಾರಿ, ವಾಸ:ಶಿವಪ್ರಸಾದ್‌ ನಿಲಯ, ಅಜ್ಜಿಬೆಟ್ಟು ಅಂಚೆ, ಜೋಡು ಮಾರ್ಗ, ಬಂಟ್ವಾಳ, ದ.ಕ ಇವರು ಆರೋಪಿಗಳಾಗಿದ್ದು ಪಿರ್ಯಾದಿ ಜೆರಾಲ್ಡ್‌ ಎಮ್‌.ಡಿಸಿಲ್ವಾ, ತಂದೆ: ವಿಲ್ಸನ್‌ ಡಿ’ಸಿಲ್ವಾ, ವಾಸ: ಮುತ್ತೂರು ಕ್ರಾಸ್‌, ಬೊಮ್ಮರಬೆಟ್ಟು ಗ್ರಾಮ, ಹಿರಿಯಡ್ಕ ಅಂಚೆ, ಉಡುಪಿ ತಮಗೆ ಸೇರಿದ ಬೊಮ್ಮರಬೆಟ್ಟು ಗ್ರಾಮದ ಸರ್ವೆ ನಂ. 319/2ಬಿ2ರಲ್ಲಿ 4.40 ಎಕ್ರೆ ಜಾಗವನ್ನು ಆಪಾದಿತ 1 ಮತ್ತು 2ನೇಯವರಿಗೆ 16,90,000/-ರವರಿಗೆ ಮಾರಾಟ ಮಾಡಿರುತ್ತಾರೆ. ಸದ್ರಿ ಜಾಗವನ್ನು ಉಡುಪಿ ಸಬ್‌ ರಿಜಿಸ್ಟರ್ ಕಚೇರಿಯಲ್ಲಿ ನಂ.2792/2008-09ರಂತೆ ನೋಂದಣಿ ಮಾಡಿಕೊಟ್ಟಿರುತ್ತಾರೆ. 4ನೇ ಆರೋಪಿತರು ಪಿರ್ಯಾದಿದಾರರ ಬಾಬ್ತು ಬೊಮ್ಮರಬೆಟ್ಟು ಗ್ರಾಮದ ಸರ್ವೆ 228/ಪಿ5ರಲ್ಲಿ 54 ಸೆಂಟ್ಸ್‌ ಜಾಗದಲ್ಲಿ ಮರಗಳನ್ನು ಕಡಿದು ಹೊಂಡಗಳನ್ನು ತೋಡಿದ್ದು, ಪಿರ್ಯಾದಿದಾರರು ಈ ಬಗ್ಗೆ ಆಕ್ಷೇಪಿಸಿದಾಗ ಆರೋಪಿ 4ನೇರವರು ಪಿರ್ಯಾದಿದಾರರ ವಿರುದ್ದ ಹಿರಿಯಡ್ಕ ಪೊಲೀಸ್‌ ಠಾಣೆಗೆ ದೂರು ನೀಡಿರುತ್ತಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ವಿಚಾರಣೆಯ ವೇಳೆ ಆರೋಪಿತರು ದಿ.21-08-08ರ 54 ಸೆಂಟ್ಸ್‌ ಜಾಗದ ಸೇಲ್‌ ಡೀಡ್‌ನ್ನು ಹಾಜರುಪಡಿಸಿದ್ದು, ಆದರೆ ಪಿರ್ಯಾದಿದಾರರು ಅದೇ ದಿನ 4.40 ಎಕ್ರೆ ಜಾಗವನ್ನು ಮಾತ್ರ ಮಾಡಿರುತ್ತಾರೆ. ಪಿರ್ಯಾದಿದಾರರು 54 ಸೆಂಟ್ಸ್‌ ಜಾಗವನ್ನು ಮಾರಾಟ ಮಾಡಿರುವುದಿಲ್ಲ. ಸದ್ರಿ ದಾಖಲಾತಿಯಲ್ಲಿರುವ ಪಿರ್ಯಾದಿದಾರರ ಸಹಿ ಪೋರ್ಜರಿಯಾಗಿರುತ್ತದೆ. ಪಿರ್ಯಾದಿದಾರರು ಯಾರಿಗೂ ಜಿಪಿಎ ಹಾಗೂ ವಿಲ್‌ ನೀಡಿರುವುದಿಲ್ಲ. ಆರೋಪಿತರು ನಕಲಿ ದಾಖಲೆ ಸೃಷ್ಟಿಸಿ ಪಿರ್ಯಾದಿದಾರರ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಂಡು ಮೋಸ ಮಾಡಿರುತ್ತಾರೆ. ಈ ಬಗ್ಗೆ ಜೆರಾಲ್ಡ್‌ ಎಮ್‌.ಡಿಸಿಲ್ವಾ ಇವರು ನೀಡಿದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 298/13 ಕಲಂ 406,420,468, 471 ಜೊತೆಗೆ 120ಬಿ ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಉಡುಪಿ: ಕೆ.ಜಿ.ಕೆ ಆಚಾರ್‌, ತಂದೆ: ವೈ.ಎನ್‌.ಕೆ ಆಚಾರ್‌, ವಾಸ: ಗೀತಾ ನಿಲಯ, ಸಂತೆಕಟ್ಟೆ ಅಂಚೆ, ಪುತ್ತೂರು, ಉಡುಪಿ ಇವರು COMFORT TOWER Condominium‌ ಕಟ್ಟಡದ ಜಿಪಿಎ ಹೊಲ್ಡರ್‌ ಆಗಿರುತ್ತಾರೆ. ಮೂಡನಿಡಂಬೂರು ಗ್ರಾಮದ ಸರ್ವೆ ನಂ 131/9 ಮತ್ತು 131/18ರಲ್ಲಿ ಒಟ್ಟು 35 ಸೆಂಟ್ಸ್‌ ಜಾಗದಲ್ಲಿ ಸದ್ರಿ ಅಪಾರ್ಟ್‌ಮೆಂಟ್‌ ನಿರ್ಮಿಸಲಾಗಿರುತ್ತದೆ. ಈ ಬಗ್ಗೆ ಉಪನೊಂದಾಣಾಧಿಕಾರಿಯವರ ಕಚೇರಿಯಲ್ಲಿ ದಿ.29-09-03ರಂದು COMFORT TOWER Condominium‌ ಎಂಬುವುದಾಗಿ ನೋಂದಾಯಿಸಲಾಗಿದೆ. ಈ ಕಟ್ಟಡವು 9 ಮಹಡಿಗಳನ್ನು ಹೊಂದಿದ್ದು, ನೆಲ ಅಂತಸ್ತಿನಲ್ಲಿ ವಾಣಿಜ್ಯ ಅಂಗಡಿ ಕೋಣೆಗಳನ್ನು ಹೊಂದಿರುತ್ತದೆ ಹಾಗೂ 61 ವಾಸ ಪ್ಲಾಟ್‌ಗಳಿರುತ್ತದೆ. ಈ ಸಂಸ್ಥೆಯು ಫ್ಲಾಟ್‌ ಮಾಲಕರಲ್ಲಿ ನಿರ್ವಾಹಣ ವೆಚ್ಚ ಹಾಗೂ ಇತರ ಖರ್ಚುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆರೋಪಿತರಾದ 1 ಅರ್‌.ಕೆ ಭಟ್‌, ತಂದೆ: ಕೆ.ಎ ಭಟ್‌, ವಾಸ: ಆಪಾರ್ಟ್‌ಮೆಂಟ್‌ ನಂ.507, ಕಂಪೋರ್ಟ್‌ ಟವರ್‌, ಕಲ್ಪನಾ ಥಿಯೇಟರ್‌ನ ಎದುರು, ಉಡುಪಿ 2. ಮೇಘರಾಮ್‌, ವಾಸ: ಆಪಾರ್ಟ್‌ಮೆಂಟ್‌ ನಂ.401, ಕಂಪೋರ್ಟ್‌ ಟವರ್‌, ಕಲ್ಪನಾ ಥಿಯೇಟರ್‌ನ ಎದುರು, ಉಡುಪಿ 3. ಉದಯ ಕುಮಾರ್‌, ವಾಸ: ಆಪಾರ್ಟ್‌ಮೆಂಟ್‌ ನಂ.208, ಕಂಪೋರ್ಟ್‌ ಟವರ್‌, ಕಲ್ಪನಾ ಥಿಯೇಟರ್‌ನ ಎದುರು, ಉಡುಪಿ 4.ಐವನ್‌ ರೋಶನ್‌ ಡಿ’ಸೋಜಾ, ವಾಸ: ಆಪಾರ್ಟ್‌ಮೆಂಟ್‌ ನಂ201, ಕಂಪೋರ್ಟ್‌ ಟವರ್‌, ಕಲ್ಪನಾ ಥಿಯೇಟರ್‌ನ ಎದುರು, ಉಡುಪಿ 5.ಪಿ. ವೆಂಕಟೇಶ್‌ ಪ್ರಭು, ವಾಸ: ಆಪಾರ್ಟ್‌ಮೆಂಟ್‌ ನಂ 402, ಕಂಪೋರ್ಟ್‌ ಟವರ್‌, ಕಲ್ಪನಾ ಥಿಯೇಟರ್‌ನ ಎದುರು, ಉಡುಪಿ 6.ವಾಸುದೇವಾ ರಾವ್‌, ವಾಸ: ವಾಸ: ಆಪಾರ್ಟ್‌ಮೆಂಟ್‌ ನಂ 205, ಕಂಪೋರ್ಟ್‌ ಟವರ್‌, ಕಲ್ಪನಾ ಥಿಯೇಟರ್‌ನ ಎದುರು, ಉಡುಪಿ 7. ಸುರೇಶ್‌ ಕುಮಾರ್‌, ವಾಸ: ಆಪಾರ್ಟ್‌ಮೆಂಟ್‌ ನಂ 309, ಕಂಪೋರ್ಟ್‌ ಟವರ್‌, ಕಲ್ಪನಾ ಥಿಯೇಟರ್‌ನ ಎದುರು, ಉಡುಪಿ 8.ಆನಂದ ಆಚಾರ್‌, ವಾಸ: ಆಪಾರ್ಟ್‌ಮೆಂಟ್‌ ನಂ 307, ಕಂಪೋರ್ಟ್‌ ಟವರ್‌, ಕಲ್ಪನಾ ಥಿಯೇಟರ್‌ನ ಎದುರು, ಉಡುಪಿ 9. ಪ್ರೆಸಿಲ್ಲಾ ಡಿ’ಸೋಜಾ, ವಾಸ: ಆಪಾರ್ಟ್‌ಮೆಂಟ್‌ ನಂ 209, ಕಂಪೋರ್ಟ್‌ ಟವರ್‌, ಕಲ್ಪನಾ ಥಿಯೇಟರ್‌ನ ಎದುರು, ಉಡುಪಿ. 10.ಉಷಾ ಶೆಣೈ, ವಾಸ: ಆಪಾರ್ಟ್‌ಮೆಂಟ್‌ ನಂ202, ಕಂಪೋರ್ಟ್‌ ಟವರ್‌, ಕಲ್ಪನಾ ಥಿಯೇಟರ್‌ನ ಎದುರು, ಉಡುಪಿ. 11.ಸುಶೀಲಾ ಪುಂಜ, ವಾಸ: ವಿಜಯ ಬ್ಯಾಂಕ್‌, ಮಣಿಪಾಲ, ಉಡುಪಿ 12. ಎಸ್‌.ಆರ್‌ ಪುರೋಹಿತ್‌, ವಾಸ: ಆಪಾರ್ಟ್‌ಮೆಂಟ್‌ ನಂ 504, ಕಂಪೋರ್ಟ್‌ ಟವರ್‌, ಕಲ್ಪನಾ ಥಿಯೇಟರ್‌ನ ಎದುರು, ಉಡುಪಿ. 13.ಗಣೇಶ್‌ ವಿ ರಾವ್‌‌, ತಂದೆ:ದಾಮೋದರ ರಾವ್‌, ವಾಸ: ಫ್ಲಾಟ್‌ ನಂ. 202, ಡೈಮಾಂಡ್‌ ಬ್ರಿಜ್ಡ್‌‌ ಅಪಾರ್ಟ್‌ಮೆಂಟ್‌, ಅಜ್ಜರಕಾಡು, ಉಡುಪಿ 14. ಲಿಗೋರಿ ನೊರೊನ್ಹಾ, ತಂದೆ: ಜೋನ್‌ ನೊರೊನ್ಹಾ, ವಾಸ: ತೋಕ್ಲಿ ಹೌಸ್‌, ಮಣಿಪುರ ಅಂಚೆ, ಉಡುಪಿ 15. ಜಯಶ್ರೀ ನಿರಂಜನ್ ರಾವ್‌, ಗಂಡ: ನಿರಂಜನ್‌ ಬೆಳ್ಳೆ, ಕಂಪೋರ್ಟ್‌ ಟವರ್‌, 602, ಕಲ್ಪನಾ ಥಿಯೇಟರ್‌ನ ಎದುರು, ಉಡುಪಿ ಇವರುಗಳು ಕಾನೂನಿಗೆ ವಿರುದ್ದವಾಗಿ ಬೇರೆ ಸಮಾನವಾಗಿ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಿಕೊಂಡಿರುತ್ತಾರೆ. ಆರೋಪಿ 1 ರಿಂದ 9 ನೇರವರು ಈ ಆಪಾರ್ಟ್‌ಮೆಂಟ್‌ನ ಮಾಲಕರಾಗಿರುವುದಿಲ್ಲ. ಅಲ್ಲದೆ ಆಪಾದಿತರು ದಿನಾಂಕ 27-12-12ರಂದು ಮಾಡಿದ ಅಫಿದಾವಿತ್ ‌‌ ಕಾನೂನು ಪ್ರಕಾರ ನೊಂದಾಯಿತವಾಗಿರುವುದಿಲ್ಲ. ಆರೋಪಿತರೆಲ್ಲರೂ ಸೇರಿಕೊಂಡು ಕಾನೂನು ಬಾಹಿರವಾಗಿ ಆಪಾರ್ಟ್‌ಮೆಂಟ್‌ನ ಸದಸ್ಯರಿಂದ ಹಣ ಸಂಗ್ರಹ ಮಾಡಿ ಪಿರ್ಯಾದಿದಾರರ ಸಂಸ್ಥೆಗೆ ವಂಚನೆ ಮಾಡಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಕೆ.ಜಿ.ಕೆ ಆಚಾರ್‌ ಇವರು ನೀಡಿದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 299/13 ಕಲಂ 420,463,464,465,468,469 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: